ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 23/10/2022 ರಂದು ಪಿರ್ಯಾದಿದಾರರಾದ ಸುರೇಶ್‌ (28), ತಂದೆ: ಶಂಕರ, ವಾಸ: ಸರಸ್ವತಿ ನಿಲಯ, ಮೈರ್‌ಕೋಮೆ, ಮಂದಾರ್ತಿ, ಹೆಗ್ಗುಂಜೆ ಗ್ರಾಮ, ಬ್ರಹ್ಮಾವರ ತಾಲೂಕು ಮತ್ತು ಮಧುರ ಆಚಾರ್ಯರವರು ಹೆಗ್ಗುಂಜೆ ಗ್ರಾಮದ ನಿರ್ಜೆಡ್ಡು, ಶಿರೂರು ಮೂರುಕೈ ಯಲ್ಲಿರುವ ತಮ್ಮ ಶ್ರೀದೇವಿ ಮೊಬೈಲ್‌ ಶಾಪ್‌ನ ಕೆಲಸ ಮುಗಿಸಿಕೊಂಡು ಅಲ್ಲಿಂದ ಮನೆಗೆ ಹೋಗುವರೇ ಮಧುರ ಆಚಾರ್ಯ ರವರು ಸವಾರಿ ಮಾಡುತ್ತಿದ್ದ KA-20-EV-5432 ನೇ ಸ್ಕೂಟರ್‌ ನಲ್ಲಿ ಸುರೇಸ್‌ ರವರು ಸಹಸವಾರನಾಗಿ ಕುಳಿತುಕೊಂಡು ಶಿರೂರು ಮೂರುಕೈ ಯಿಂದ ಮೈರ್‌ಕೋಮೆ ಹೋಗುವಾಗ ರಾತ್ರಿ 11:00 ಗಂಟೆ ಸಮಯಕ್ಕೆ ಹೆಗ್ಗುಂಜೆ ಗ್ರಾಮದ ನೀರ್ಜಡ್ಡು KPTCL ರಿಸಿವರ್‌ ಸ್ಟೇಶನ್‌ ನಿಂದ ಸ್ವಲ್ಪ ಹಿಂದಕ್ಕೆ ರಸ್ತೆಯಲ್ಲಿ ತಲುಪುವಾಗ ವಾರಾಹಿ ನೀರು ಸರಬರಾಜು ಬಗ್ಗೆ ಕಾಲುವೆ ನಿರ್ಮಾಣದ ಮೋರಿ ಸಿರ್ಮಿಸಿದ್ದು ರಸ್ತೆಯ ಮದ್ಯ ಮೋರಿ ಕುಸಿದು ಹೊಂಡ ಆಗಿದ್ದು ಆಗ ಮಧುರ ಆಚಾರ್ಯ ರವರು ಒಮ್ಮೆಲೇ ಸ್ಕೂಟರ್‌ನ ಬ್ರೇಕ್‌ ಹಾಕಿದಾಗ ಸ್ಕೂಟರ್‌ ಹತೋಟಿ ತಪ್ಪಿ ರಸ್ತೆಯ ಎಡ ಬದಿಯಲ್ಲಿ ಉಡುಪಿ ನಗರಕ್ಕೆ ಪೈಪ್‌ಲೈನ್‌ ಅಳವಡಿಸಲು ತೆಗೆದ ಹೊಂಡದ ಬಗ್ಗೆ ರಸ್ತೆ ಬದಿಯಲ್ಲಿ ರಿಪ್ಲೆಕ್ಟರ್‌ ಅಳವಡಿಸದೇ ನಿಲ್ಲಿಸಿದ್ದ ಕಬ್ಬಿಣದ ಬ್ಯಾರಿಗೇಟ್‌ಗೆ ಸ್ಕೂಟರ್‌ ತಾಗಿ ಇಬ್ಬರೂ ಡಾಮರು ರಸ್ತೆಯ ಮೇಲೆ ಬಿದ್ದಿರುವುದಾಗಿದೆ. ಪರಿಣಾಮ ಮಧುರ ಆಚಾರ್ಯ ರವರ ತಲೆಗೆ ಗಂಬೀರ ಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಹಾಗೂ ಸುರೇಶ ರವರ ಬಲಕೈ, ಎಡ ಕಾಲು, ಬೆನ್ನಿಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡವರನ್ನು ಬ್ರಹ್ಮಾವರ ಪ್ರಣವ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ಗಂಭೀರ ಗಾಯಗೊಂಡಿರುವ ಮಧುರ ಆಚಾರ್ಯ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಅಫಘಾತಕ್ಕೆ ರಸ್ತೆ ಮದ್ಯೆ ಕಾಲುವೆ ನಿರ್ಮಾಣ ಮಾಡಿ ಮೋರಿ ಹೊಂಡ ಸರಿಯಾಗಿ ಮುಚ್ಚದೇ ಇದ್ದ ಜಾಗದಲ್ಲಿ ಮಧೂರ ಆಚಾರ್ಯ ರವರು ಸ್ಕೂಟರ್‌ ಅನ್ನು ಅತೀವೇಗ ಹಾಗೂ ನಿರ್ಲಕ್ಷತನದ ಸವಾರಿ ಮಾಡಿ ಒಮ್ಮೆಲೇ ಬ್ರೇಕ್‌ ಹಾಕಿ ಹತೋಟಿ ತಪ್ಪಿ ರಸ್ತೆಯಲ್ಲಿ ನಿರ್ಲಕ್ಷತನದಿಂದ ನಿಲ್ಲಿಸಿದ್ದ ರಿಪ್ಲೆಕ್ಟರ್‌ ಅಳವಡಿಸದೇ ಇರುವ ಕಬ್ಬಿಣದ ಬ್ಯಾರಿಗೇಟ್‌ಗೆ ಢಿಕ್ಕಿಹೊಡೆದಿರವುದಾಗಿದೆ, ಸುರೇಶ ರವರು ಗಾಯಗೊಂಡು ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದು ಇದುವರೆಗು ಯಾರೂ ದೂರು ನೀಡದ ವಿಷಯ ತಿಳಿದು ಠಾಣಾಗೆ ಬಂದು ದೂರು ನೀಡುವಾಗಿ ವಿಳಂಭವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 178/2022 ಕಲಂ: 279, 283, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 24/10/2022 ರಂದು ಪಿರ್ಯಾದಿದಾರರಾದ ಶಿವರಾಮ ಪೂಜಾರಿ (56) ತಂದೆ:ದಿ.ಸಿದ್ದ ಪೂಜಾರಿ ವಾಸ:ಮತ್ತಿಬೇರು ಮನೆ ಸಿದ್ಧಾಪುರ ಗ್ರಾಮ ಕುಂದಾಪುರ ಇವರು ಅವರ ಭಾವ ಮಂಜುನಾಥ ಪೂಜಾರಿ ರವರ KA-20 EM-9809 ನೇ ಮೋಟಾರ್ ಸೈಕಲ್ ನಲ್ಲಿ ಸಹಸವಾರನಾಗಿ ಕುಳಿತುಕೊಂಡು ಸಿದ್ಧಾಪುರ ಗ್ರಾಮದ ಮತ್ತಿಬೇರು ಮನೆಯಿಂದ ಸಿದ್ಧಾಪುರ ಪೇಟೆ ಕಡೆಗೆ ಬರುತ್ತಿರುವಾಗ ರಾತ್ರಿ 07:30 ಗಂಟೆ ಸುಮಾರಿಗೆ ಕುಂದಾಪುರ ತಾಲೂಕು ಸಿದ್ಧಾಪುರ ಗ್ರಾಮದ ಕಮಲಶಿಲೆ ಮೂರ್ಕೈ ಬಳಿ ತಲುಪುವಾಗ ಮಂಜುನಾಥ ಪೂಜಾರಿ ರವರು ಮೋಟಾರ್ ಸೈಕಲನ್ನು ಅತೀವೇಗವಾಗಿ ಚಲಾಯಿಸಿದ್ದು ಮೋಟಾರ್ ಸೈಕಲಿನ ಎದುರು ನಾಯಿ ಅಡ್ಡ ಬಂದುದನ್ನು ಕಂಡು ತಪ್ಪಿಸಲು ಎಡಕ್ಕೆ ಚಲಾಯಿಸಿದಾಗ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ಮೋಟಾರ್ ಸೈಕಲ್ ಸಮೇತ ಶಿವರಾಮ ಪೂಜಾರಿ ರವರು ಹಾಗೂ ಮಂಜುನಾಥ ಪೂಜಾರಿ ರವರು ರಸ್ತೆಯ ಅಂಚಿನ ಮೇಲೆ ಬಿದ್ದು ಪರಿಣಾಮ ಶಿವರಾಮ ಪೂಜಾರಿ ರವರ ಬಲಕೈಗೆ ಮೂಳೆಮುರಿತದ ನೋವುಂಟಾಗಿದ್ದು, ಮಂಜುನಾಥ ಪೂಜಾರಿ ರವರಿಗೆ ಕೆನ್ನೆಯ ಎಡ ಭಾಗಕ್ಕೆ ತರಚಿದ ಗಾಯವಾಗಿರುತ್ತದೆ. ಶಿವರಾಮ ಪೂಜಾರಿ ರವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 112/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಮಣಿಪಾಲ: ದಿನಾಂಕ 22/10/2022 ರಂದು ರಾತ್ರಿ 09:00 ಗಂಟೆಗೆ ಪಿರ್ಯಾದಿದಾರರಾಧ ರಾಜೇಶ್ವರ (43) ತಂದೆ: ದಿ ಶ್ರೀ ನಿವಾಸ ಆಚಾರ್ಯ ವಿಳಾಸ: 2-145 (ಎ) ಬೈರಂಜೆ , 80 ಬಡಗಬೆಟ್ಟು ಗ್ರಾಮ, ಉಡುಪಿ ತಾಲೂಕು ಇವರು ತನ್ನ KA-20 V-6354 ನೇ ಮೋಟಾರ್ ಸೈಕಲ್ ನ್ನು ಕೆಲಸ ಮುಗಿಸಿಕೊಂಡು ತಮ್ಮ ಮನೆಯ ಕಂಪೌಂಡ್ ಒಳಗೆ ನಿಲ್ಲಿಸಿ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ್ದು, ದಿನಾಂಕ 23/10/2022 ರಂದು ಬೆಳಿಗ್ಗೆ 07:00 ಗಂಟೆಯ ಸಮಯಕ್ಕೆ ರಾಜೇಶ್ವರ ರವರು ಮನೆಯ ಹೊರಗಡೆ ಬಂದು ನೋಡಿದಾಗ ಕಂಪೌಂಡ್ ಬಳಗೆ ನಿಲ್ಲಿಸಿದ ಮೋಟಾರ್ ಸೈಕಲ್ ಅಲ್ಲಿ ಇಲ್ಲದೇ ಇದ್ದು ದಿನಾಂಕ 22/10/2022 ರ ರಾತ್ರಿ 09:00 ಗಂಟೆಗೆ ಯಿಂದ ದಿನಾಂಕ 23/10/2022 ರ ಬೆಳಿಗ್ಗೆ 07:00 ಗಂಟೆಯ ಮಧ್ಯಾವಧಿಯಲ್ಲಿ ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಮೋಟಾರ್‌ಸೈಕಲ್‌ನ ಅಂದಾಜು ಬೆಲೆ 20000/- ಆಗಬಹುದುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 196/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಮೋನಪ್ಪ ಶೆಟ್ಟಿ, (28) ತಂದೆ: ದಿ. ನಾಗಯ್ಯ ಶೆಟ್ಟಿ, ವಾಸ: ಹೊಳೆಬಾಗಿಲು ಮನೆ, ಬಳ್ಕೂರು ಗ್ರಾಮ, ಕುಂದಾಪುರ ಇವರ ದೊಡ್ಡಮ್ಮನ ಮಗಳು ಶ್ರೀಮತಿ ಪಾರ್ವತಿ ಶೆಡ್ತಿ ಎಂಬವರು ವಯೋಸಹಜ ವೃದ್ದಾಪ್ಯ ಬಳಲುತ್ತಿದ್ದು ದಿನಾಂಕ 24/10/2022 ರಂದು 18:00 ಗಂಟೆಯಿಂದ ದಿನಾಂಕ 25/10/2022 ರಂದು 08:00 ಗಂಟೆಯ ನಡುವಿನ ಅವದಿಯಲ್ಲಿ ಕುಂದಾಪುರ ತಾಲೂಕು ಬಳ್ಕೂರು ಗ್ರಾಮದ ಹೊಳೆಬಾಗಿಲು ಮನೆ ಎಂಬಲ್ಲಿ ಮೋನಪ್ಪ ಶೆಟ್ಟಿ ರವರ ಮನೆಯ ಕೆರೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಮೃತರ ಮರಣದಲ್ಲಿ ಬೇರಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 30/2022 ಕಲಂ: 174 ಸಿ.ಆರ್. ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಮಣಿಪಾಲ: ಪಿರ್ಯಾದಿದಾರರಾದ ರೋಬರ್ಟ ಡಿಸೋಜಾ (55) ತಂದೆ: ದಿ. ಅಂಬ್ರೋಸ್ ಡಿಸೋಜಾ ವಾಸ: 2-69 ಮೂಡುಪೆರಂಪಳ್ಳಿ, ಶಿವಳ್ಳಿ ಗ್ರಾಮ, ಕುಂಜಿಬೆಟ್ಟು , ಉಡುಪಿ ಇವರ ತಾಯಿಯಾದ ಲಿಲ್ಲಿ ಡಿಸೋಜಾ (70) ಅವರು ಸುಮಾರು 2 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿರುತ್ತಾರೆ, ಮೃತರು ಸುಮಾರು 6 ತಿಂಗಳ ಹಿಂದೆ ರೋಬರ್ಟ ಡಿಸೋಜಾ ರವರ ಮನೆಯ ಸಮೀಪದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದರು, ದಿನಾಂಕ 24/10/2022 ರಂದು ರಾತ್ರಿ 11:00 ಗಂಟೆಗೆ ರೋಬರ್ಟ ಡಿಸೋಜಾ ರವರು ಮನೆಯಲ್ಲಿ ಊಟ ಮಾಡಿ ಮಲುಗುವಾಗ ರೋಬರ್ಟ ಡಿಸೋಜಾ ರವರ ತಾಯಿ ತಾವು ಮಲಗುವ ರೂಮ್ ನಲ್ಲಿಯೇ ಮಲಗಿದ್ದವರು, ದಿನಾಂಕ 25/10/2022 ರಂದು ಬೆಳಿಗ್ಗೆ 05:00 ಗಂಟೆಗೆ ಎದ್ದು ನೋಡಿದಾಗ ರೂಮ್ ನಲ್ಲಿ ಕಾಣದೆ ಇದ್ದು ಸುತ್ತ ಮುತ್ತ ಹುಡುಕಾಡಿದ್ದು ನಂತರ ತಮ್ಮ ಮನೆಯ ಸಮೀಪ ಇರುವ ಬಾವಿಯಲ್ಲಿ ನೋಡಿದಾಗ ರೋಬರ್ಟ ಡಿಸೋಜಾ ರವರ ತಾಯಿ ಬಾವಿ ನೀರಿನಲ್ಲಿ ತೇಲುತ್ತಿದ್ದು, ಲಿಲ್ಲಿ ಡಿಸೋಜಾ ರವರು ದಿನಾಂಕ 24/10/2022 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 25/10/2022 ರ ಬೆಳಿಗ್ಗೆ 05:00 ಗಂಟೆಯ ಮಧ್ಯಾವಧಿಯಲ್ಲಿ ಅವರಿಗಿರುವ ಮಾನಸಿಕ ಖಾಯಿಲೆಯಿಂದಲೋ ಅಥವಾ ಇನ್ಯಾವುದೋ ಕಾರಣದಿಂದ ಪಿರ್ಯಾದಿದಾಋರ ಮನೆಯ ಸಮೀಪದಲ್ಲಿರುವ ಬಾವಿಗೆ ಹಾರಿ ನೀರಿನಲ್ಲಿ ಮುಳುಗಿ ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 39/2022 ಕಲಂ: 174 ಸಿ.ಆರ್. ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 25-10-2022 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080