ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬ್ರಹ್ಮಾವರ: ದಿನಾಂಕ 23/10/2022 ರಂದು ಪಿರ್ಯಾದಿದಾರರಾದ ಲತಾ (36), ಗಂಡ: ಸುಧಾಕರ ನಾಯ್ಕ, ವಾಸ: ಮೇಲಡ್ಪು, ಆರೂರು ಗ್ರಾಮ, ಕುಂಜಾಲು ಅಂಚೆ, ಬ್ರಹ್ಮಾವರ ತಾಲೂಕು ಇವರ ಗಂಡ ಸುಧಾಕರ ನಾಯ್ಕ ರವರು ಸವಾರಿ ಮಾಡುತ್ತಿದ್ದ KA-20-X-6944 ನೇ ಮೋಟಾರ್‌ ಸೈಕಲ್‌ನಲ್ಲಿ ಸಹಸವಾರಿಣಿಯಾಗಿ ಕುಳಿತು ಕುಂಜಾಲು ಪೇಟೆಯಿಂದ ಮನೆಗೆ ಬ್ರಹ್ಮಾವರ –ಹೆಬ್ರಿ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಾ ನೀಲಾವರ ಜಂಕ್ಷನ್‌ ನಲ್ಲಿ ಕುಂಜಾಲು ಕಡೆಗೆ ತಿರುಗುವಾಗ ಮಧ್ಯಾಹ್ನ 4:45 ಗಂಟೆಯ ಸಮಯಕ್ಕೆ ಬ್ರಹ್ಮಾವರ ಕುಂಜಾಲು ಕಡೆಯಿಂದ ಹೆಬ್ರಿ ಕಡೆಗೆ ಆರೋಪಿ ರಮೀಜಾ ಎಂಬುವವರು ಅವರ KA-19-AB-9566 ನೇ ಮಿನಿ ಬಸ್ಸ್ ನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಕುಳಿತಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಗಂಡ ಸುಧಾಕರ ನಾಯ್ಕರವರ  ಬಲ ಕಾಲು ತುಂಡಾಗಿರುತ್ತದೆ. ಕೂಡಲೇ ಅಂಬುಲೆನ್ಸ್ ನಲ್ಲಿ ಸುಧಾಕರ  ನಾಯ್ಕ ರವರನ್ನು ಹಾಗೂ ಅವರ ತುಂಡಾದ ಕಾಲನ್ನು ಪ್ಲಾಸ್ಟಿಕ್‌ ನಲ್ಲಿ ಕಟ್ಟಿ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 177/2022 ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಮಾಸೆಬೈಲು: ದಿನಾಂಕ 24/10/2022 ರಂದು ಪಿರ್ಯಾದಿದಾರರಾದ ಮಹಾಬಲ ಆಚಾರಿ (62),  ತಂದೆ: ದಿ.ಮಂಜು ಆಚಾರಿ, ವಾಸ:ತೊಪ್ಲುಮನೆ, ರಟ್ಟಾಡಿ ಗ್ರಾಮ, ಕುಂದಾಪುರ ತಾಲೂಕು ಇವರು ಹಾಲನ್ನು ಡೈರಿಗೆ ಕೊಡಲು ತನ್ನ ಸೈಕಲ್ ನ್ನು ಸವಾರಿ ಮಾಡಿಕೊಂಡು ನಿಲ್ಸ್ ಕಲ್ ಡೈರಿಗೆ ಹಾಲನ್ನು ಕೊಟ್ಟು ವಾಪಾಸು ಮನೆ ಕಡೆಗೆ ಬರುತ್ತಾ ಬೆಳಿಗ್ಗೆ  06:30 ಗಂಟೆಗೆ ನಿಲ್ಸ್ ಕಲ್ ಬಸ್ ನಿಲ್ದಾಣದ ಬಳಿ ತಲುಪುವಾಗ ಎದುರಿನಿಂದ ಅಮಾಸೆಬೈಲು ಕಡೆಯಿಂದ ಮಾಂಡಿ ಮೂರು ಕೈ ಕಡೆಗೆ ಕಾರು ನಂಬ್ರ KA-20-MD-7730 ನೇದನ್ನು ಅದರ ಚಾಲಕ ಅತೀವೇಗ  ಹಾಗೂ ಅಜಾಗೂರೂಕತೆಯಿಂದ ರಸ್ತೆಯ ಬಲ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸೈಕಲ್ಲಿಗೆ ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿದ್ದು,ಕುತ್ತಿಗೆ ಹಾಗೂ ಭುಜಕ್ಕೆ ನೋವಾಗಿರುವುದಾಗಿದೆ.ಕಾರು ಚಾಲಕ ಪಿರ್ಯಾದಿದಾರರ ಆರೈಕೆ ಮಾಡದೇ ಅಲ್ಲಿಂದ ಹೋಗಿರುತ್ತಾನೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 26/2022 ಕಲಂ: 279, 337 ಐಪಿಸಿ  & 134(a)(b) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿದಾರರಾದ ಸಂಪತ್ (28), ತಂದೆ: ಅಚ್ಚುತ  ಆಚಾರ್ಯ, ವಾಸ: ವಿಶ್ವ ನಿಲಯ, ದುರ್ಗಾ ನಗರ, ಕುಕ್ಕುಂದೂರು, ಕಾರ್ಕಳ, ಕಾರ್ಕಳ ತಾಲೂಕು ಇವರ ತಾಯಿ ಶಾಂತ   ಮತ್ತು ತಮ್ಮ ಶಶಾಂತ್  ರವರು ದಿನಾಂಕ 24/10/2022 ರಂದು ಮಧ್ಯಾಹ್ನ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಬಂದಿದ್ದು, ಬಳಿಕ ವಾಪಾಸ್ಸು ಹೊರಟು  ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ-ಮಂಗಳೂರು ಏಕಮುಖ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ  ಮಧ್ಯಾಹ್ನ 14:15 ಗಂಟೆಯ ಸಮಯಕ್ಕೆ ರಸ್ತೆಯಲ್ಲಿ  KA-20-EB-4286 ನೇ ನಂಬ್ರದ  ಮೋಟಾರು ಸೈಕಲನ್ನು ಅದರ ಸವಾರ ಶೇಖ್ ಮೊಹಮ್ಮದ್ ಮುದಾಸಿರ್ ರವರು ಸೈಯ್ಯದ್  ಗುಲಾಂ ಮೊಹಮ್ಮದ್  ಸಿಪ್ತೇನ್ ಎಂಬುವವರನ್ನು ಸಹಸವಾರರನ್ನಾಗಿ  ಕುಳ್ಳಿರಿಸಿಕೊಂಡು  ಉಡುಪಿ ಕಡೆಯಿಂದ ಮಂಗಳೂರು ಕಡೆಗೆ  ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಾಯಿ ಮತ್ತು  ತಮ್ಮನಿಗೆ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದುದಾರರ ತಾಯಿ  ಮತ್ತು  ತಮ್ಮ ರಸ್ತೆಗೆ ಬಿದ್ದು ಸಾಮಾನ್ಯ  ಸ್ವರೂಪದ  ಗಾಯಗೊಂಡಿದ್ದು, ಅಪಘಾತ ಮಾಡಿದ ಮೋಟಾರು ಸೈಕಲ್  ಸವಾರ  ಮತ್ತು   ಸಹಸವಾರರೂ  ಮೋಟಾರು  ಸೈಕಲ್   ಸಮೇತ ರಸ್ತೆಗೆ  ಬಿದ್ದು  ಸಾಮಾನ್ಯ ಸ್ವರೂಪದ  ಗಾಯಗೊಂಡಿದ್ದು, ಪಿರ್ಯಾದಿದಾರರ ತಾಯಿ ಮತ್ತು ತಮ್ಮನನ್ನು  ಚಿಕಿತ್ಸೆ ಬಗ್ಗೆ  ಪಡುಬಿದ್ರಿ  ಸಿದ್ದಿ ವಿನಾಯಕ ಆಸ್ಪತ್ರೆಗೆ  ಕರೆದುಕೊಂಡು ಬಂದು  ಪ್ರಥಮ ಚಿಕಿತ್ಸೆ ಕೊಡಿಸಿ  ಬಳಿಕ ಹೆಚ್ಚಿನ ಚಿಕಿತ್ಸೆ   ಬಗ್ಗೆ ಉಡುಪಿ  ಆದರ್ಶ  ಆಸ್ಪತ್ರೆಗೆ  ಕರೆದುಕೊಂಡು  ಹೋಗಿ   ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 134/2022 ಕಲಂ: 279,  337, ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾದ ಭಾರತಿ(42), ಗಂಡ: ರಾಜು ಗಜಾನಂ ನಾಯ್ಕ, ವಾಸ: ಬಾಡಿಗೆ ಮನೆ ಕಡೇಕಾರು ಗ್ರಾಮ  ಇವರ ಗಂಡ  ರಾಜು ಗಜಾನಂ ನಾಯ್ಕ (52) ಇವರು ಮಕ್ಕಳೊಂದಿಗೆ  ಕಡೇಕಾರಿನಲ್ಲಿ  ವೇಣುಗೋಪಾಲ  ಶೇಣೈ  ರವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು,  ಒಂದು ವಾರದ ಹಿಂದೆ  ಪಿರ್ಯಾದಿದಾರರ ಗಂಡ  ತನ್ನ ಸ್ವಂತ ಊರಾದ ಗೋಕಾಕ್ ಗೆ  ಹೋಗಿ ಮಗಳ ಜಾತಿ ಪ್ರಮಾಣ ಪತ್ರ ಮಾಡುವ ಬಗ್ಗೆ  ಹೋಗಿದ್ದು, ಅಲ್ಲಿ ಜಾತಿ ಪ್ರಮಾಣ ಸಿಗದೇ ಇರುವುರಿಂದ ವಾಪಸ್ಸು ಮನೆಗೆ ಬಂದಿದ್ದು , ಈ ಬಗ್ಗೆ  ಬೇಸರಗೊಂಡಿದ್ದರು.ಪಿರ್ಯಾದಿದಾರರ   ಗಂಡನಿಗೆ ವಿಪರೀತ ಕುಡಿಯುವ  ಅಭ್ಯಾಸವಿದ್ದು , ಒಂದು ವಾರದಿಂದ ಕೆಲಸಕ್ಕೆ  ಹೋಗದೆ ಮನೆಯಲ್ಲಿಯೆ ಇದ್ದು , ದಿನಾಂಕ 23/10/2022 ರಂದು ರಾತ್ರಿ 08:30  ಗಂಟೆಗೆ ಹಬ್ಬಕ್ಕೆ ಸಾಮಾನುಗಳನ್ನು ತರಲಿಕ್ಕೆ   ಹೋದವರು ಮರಳಿ ಮನೆಗೆ  ಬಂದಿರುವುದಿಲ್ಲ,  ದಿನಾಂಕ 24/10/2022  ರಂದು ಬೆಳಿಗ್ಗೆ 7:30 ಗಂಟೆಗೆ  ಮಾಲಕರ ಜಾಗದಲ್ಲಿರುವ ಬಾವಿ ಕಟ್ಟೆಯ ಬಳಿ ಪಿರ್ಯಾದಿದಾರರ  ಗಂಡನ ಚಪ್ಪಲಿ  ಮತ್ತು ಪರ್ಸವಿರುವುದನ್ನು ನೋಡಿ  ಅಗ್ನಿಶಾಮಕದವರನ್ನು ಸ್ಥಳಕ್ಕೆ  ಕರೆಸಿ ಬಾವಿಯಲ್ಲಿ ಹುಡುಕಾಡಲಾಗಿ  ಬೆಳಿಗ್ಗೆ 11:40  ಗಂಟೆಗೆ ಪಿರ್ಯಾದಿದಾರರು ಗಂಡನ ಮೃತದೇಹವನ್ನು ಬಾವಿಯಿಂದ  ತೆಗೆದಿದ್ದು , ಪಿರ್ಯಾದಿದಾರರ  ಗಂಡನಿಗೆ  ವಿಪರೀತ  ಶರಾಬು ಕುಡಿಯುವ ಹವ್ಯಾಸವಿದ್ದು ,ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 61/2022 ಕಲಂ: 174  ಸಿ.ಆರ್. ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .       


ಇತ್ತೀಚಿನ ನವೀಕರಣ​ : 25-10-2022 09:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080