ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಮಣಿಪಾಲ: ಪಿರ್ಯಾದಿ: ಜೋಯೆಲ್ ನಿತಿನ್‌ ಕ್ಯಾಸ್ಟಲಿನೋ ತಂದೆ: ಸ್ಟೀಫನ್‌ ದಿನೇಶ್‌ ಕ್ಯಾಸ್ಟಲಿನೋ ವಾಸ:ದೀಕ್ಷಾ, ಅಚ್ಚಡ 3-31(1), ಕಟಪಾಡಿ, ಅಚ್ಚಡ , ಏಣಗುಡ್ಡೆ ಗ್ರಾಮ ಇವರು ದಿನಾಂಕ: 24.09.2022 ರಂದು  ತನ್ನ ಕಾರನ್ನು ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 11:30 ಗಂಟೆಗೆ ಇಂದ್ರಾಳಿ ಜಂಕ್ಷನ್‌ನಲ್ಲಿ ಪೊಲೀಸರು ವಾಹನ ತಪಾಸಣೆ  ಮಾಡುತ್ತಿದ್ದು  ಆ ಸಮಯದಲ್ಲಿ  ಕಾರನ್ನು ನಿಲ್ಲಿಸಿದ್ದು ಅದೇ ಸಮಯದಲ್ಲಿ ಹಿಂದಿನಿಂದ ಅಂದರೆ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ KA 19 MK 9100 ನೇ ಕಾರು ಚಾಲಕ ಭರತೇಶ್‌ ಎಂಬಾತ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಎಡ ಬದಿಗೆ ಡಿಕ್ಕಿ ಹೊಡೆದಿದ್ದು ಪಿರ್ಯಾದಿದಾರರ ಕಾರಿನ ಎಡ ಬದಿಗೆ ಜಖಂಗೊಂಡಿದ್ದು, ಆಪಾದಿತ ಭರತೇಶ್‌ ಎಂಬುವವರ ಕಾರು ಸಹ ಜಖಂಗೊಂಡಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ,  ಅಪರಾಧ ಕ್ರಮಾಂಕ 129/2022  ಕಲಂ: 279 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಹೆಬ್ರಿ:  ದಿನಾಂಕ; 24/09/2022  ರಂದು ಸುಂದರ ಹೆಗ್ಡೆ ಇವರು ಮುದ್ರಾಡಿ  ಕಡೆಯಿಂದ ಬಲ್ಲಾಡಿಗೆ ಕಡೆಗೆ ರಸ್ತೆಯ ಬದಿಯಲ್ಲಿ ನಡೆದು ಕೊಂಡು ಅವರು ಸಮಯ ಸುಮಾರು ರಾತ್ರಿ 7-00 ಗಂಟೆಗೆ ಮುದ್ರಾಡಿ ಗ್ರಾಮದ ಬಲ್ಲಾಡಿಯ ಗುಳಿಬೆಟ್ಟು ಎಂಬಲ್ಲಿನ ತಿರುವಿನ ಬಳಿ ತಲುಪಿದಾಗ ಅವರ ಹಿಂದುಗಡೆಯಿಂದ ಅಂದರೆ ಮುದ್ರಾಡಿ ಕಡೆಯಿಂದ ಬಲ್ಲಾಡಿ ಕಡೆಗೆ ಅಪಾದಿತ ಹರೀಶ್ ಪೂಜಾರಿ ಇವರು ತನ್ನ  KA.20.H.9350 ನೇ ಮೋಟಾರ್ ಸೈಕಲ್ ನಲ್ಲಿ ಸುಕೇಶ್ ಪೂಜಾರಿ ಇವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ರಸ್ತೆಯ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಸುಂದರ ಹೆಗ್ಡೆ ಇವರಿಗೆ ಹಿಂದುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು. ಅವರ ತಲೆಯ ಹಿಂಬದಿಗೆ ತೀವ್ರ ಸ್ವರೂಪದ ಗಾಯವಾಗಿದ್ದು. ಕಾಲಿಗೆ ತರಚಿದ ಗಾಯವಾಗಿರುತ್ತದೆ. ಸಹ ಸವಾರರಾಗಿದ್ದ ಸುಕೇಶ್ ಪೂಜಾರಿ ಇವರಿಗೆ ಬಲಕಾಲಿನ ಬಳಿ, ಎರಡು ಕೈಯ ಮಣಿಗಂಟಿನ ಬಳಿ ಗಾಯವಾಗಿದ್ದು. ಎಡಭುಜದ ಬಳಿ ನೋವಾಗಿರುತ್ತದೆ ಅಪಾದಿತ ಮೋಟಾರ್ ಸೈಕಲ್ ಸವಾರ ಹರೀಶ್ ಪೂಜಾರಿ ಇವರಿಗೆ ಯಾವುದೇ ನೋವು ಅಗಿರುವುದಿಲ್ಲ ಈ ಬಗ್ಗೆ ಗುರುಪ್ರಸಾದ ಹೆಗ್ಡೆ (46 ವರ್ಷ) ತಂದೆ: ದಿ.ಬೋಜ ಹೆಗ್ಡೆ ವಾಸ: ಕೊಳಂಬೆ ಮನೆ ಹೆಮ್ಮಣ್ಣು ಬಲ್ಲಾಡಿ ಮುದ್ರಾಡಿ ಗ್ರಾಮ ಇವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 47/2022 ಕಲಂ:279,337,338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಉಡುಪಿ:  ಪಿರ್ಯಾದಿ ಶ್ರೀಮತಿ ಪವಿತ್ರಾ ಹೆಚ್ ಎಲ್(40), ಗಂಡ: ದಿ. ಸುರೇಶ್ ಜತ್ತನ್, ವಾಸ:  206, 2 ನೇ ಮಹಡಿ, ರೈನಾ ಅಪಾರ್ಟ್ ಮೆಂಟ್, ಗೋಪಾಲಪುರ ಸಂತೆಕಟ್ಟೆ, ಇವರು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿದ್ದು, ಸದರಿಯವರನ್ನು ವಿಚಾರಿಸಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿ,  ಸುರೇಶ್ ಜತ್ತನ್ ಇವರು ತನಗೆ ಡಿವೋರ್ಸ್ ಆಗಿರುವುದಾಗಿ ತಿಳಿಸಿ ತನ್ನನ್ನು 2005 ನೇ ಇಸವಿಯಲ್ಲಿ ಮದುವೆಯಾಗಿದ್ದು, ದಿನಾಂಕ:10/10/2020 ರಂದು ಸುರೇಶ್ ಜತ್ತನ್ ಇವರು ಮೃತಪಟ್ಟಿರುತ್ತಾರೆ. ಉಡುಪಿ ಓಕುಡೆ ಅಪಾರ್ಟ್ ಮೆಂಟಿನಲ್ಲಿರುವ 6 ಅಂಗಡಿ ಹಾಗೂ ಇತರೆ ಜಾಗ ತನ್ನ ಹೆಸರಿಗೆ ವಿಲ್  ಮಾಡಿದ್ದು,   ಉಳಿದ ಜಾಗವನ್ನು ಮೊದಲನೆಯ ಹೆಂಡತಿ ಶೈಲಜಾ ಇವರ ಮಕ್ಕಳ ಹೆಸರಿಗೆ ವಿಲ್  ಮಾಡಿರುತ್ತಾರೆ. ಆಸ್ತಿ ವಿಚಾರದಲ್ಲಿ ತಮಗೆ  ಹಾಗೂ ಶೈಲಜಾ ಇವರಿಗೆ ಮನಸ್ಥಾಪವಿದ್ದು, ಕೋರ್ಟ್ ನಲ್ಲಿ ಸಿವಿಲ್  ಕೇಸ್ ಇರುತ್ತದೆ. ಹೀಗಿರುತ್ತಾ ಈ ದಿನ ದಿನಾಂಕ: 24/09/2022 ರಂದು ಮದ್ಯಾಹ್ನಾ 2:00 ಗಂಟೆಗೆ ತನ್ನ ಮಗನೊಂದಿಗೆ ಉಡುಪಿ  ತಾಲೂಕು  ಶಿವಳ್ಳಿ  ಗ್ರಾಮದ  ಕಡಿಯಾಳಿ  ಎಂಬಲ್ಲಿರುವ ಓಕುಡೆ ಅಪಾರ್ಟ್ ಮೆಂಟಿನಲ್ಲಿರುವ ಅಂಗಡಿ ಓಪನ್ ಇದೆಯೇ ಎಂದು ನೋಡಲು ಹೋದಾಗ ಆರೋಪಿತರಾದ ಶೈಲಜಾ  ಮತ್ತು  ಶೈಲಜಾ ಇವರ ಮಗ ಸೌರಭ್  ಇವರು  ತನ್ನನ್ನು ಉದ್ದೇಶಿ ಅವಾಚ್ಯ ಶಬ್ದದಿಂದ ಬೈದು, ತನಗೆ ಹಲ್ಲೆ  ಮಾಡಿರುತ್ತಾರೆ. ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 61/2022  ಕಲಂ: 354(A),323,504,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ : ಪಿರ್ಯಾದಿ ಶ್ರೀಮತಿ ಶೈಲಜಾ ಪ್ರಾಯ: 58 ವರ್ಷ, ಗಂಡ: ದಿ. ಸುರೇಶ ಜತ್ತನ್, ವಾಸ: ರವಿಕಿರಣ ಅಂಬಾಗಿಲು ಇವರು ಉಡುಪಿ  ಲೋಂಬಾರ್ಡ್ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿದ್ದು, ಸದರಿಯವರನ್ನು ವಿಚಾರಿಸಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿ, ತನ್ನ ಗಂಡನ ಮಾಲಕತ್ವದ ಓಕಡೆ ಅಪಾರ್ಟಮೆಂಟಿನಲ್ಲಿ  ಅಂಗಡಿ ಕೋಣೆ ಇದ್ದು,  ಸದರಿ ಅಂಗಡಿ  ಕೋಣೆ  ತನ್ನದ್ದೆಂದು ತಮ್ಮ ಮನೆಯಲ್ಲಿ  ಮೊದಲು ಕೆಲಸಕ್ಕೆ ಇದ್ದ  ಪವಿತ್ರ ಈಗ 3-4 ದಿನದಿಂದ ಬೀಗ ಹಾಕುವುದು, ಅಂಗಡಿ ಕೋಣೆಯ ಬಾಡಿಗೆ ಇರುವ ಬಾಡಿಗೆ ದಾರರಿಗೆ  ಬೈದು ಕಿರಿಕಿರಿ ಮಾಡುತ್ತಿದ್ದು, ದಿನಾಂಕ: 24/09/2022 ರಂದು ಮದ್ಯಾಹ್ನಾ 2:00 ಗಂಟೆಗೆ ಪವಿತ್ರ ಮತ್ತು ಸಮರ್ಥ ಇವರು  ಉಡುಪಿ  ತಾಲೂಕು  ಶಿವಳ್ಳಿ  ಗ್ರಾಮದ  ಕಡಿಯಾಳಿ ಎಂಬಲ್ಲಿರುವ ಓಕುಡೆ ಅಪಾರ್ಟ್ ಮೆಂಟಿನಲ್ಲಿರುವ ಅಂಗಡಿ ಕೋಣೆಯ ಬೀಗ ಬದಲಿಸುತ್ತಿದ್ದಾಗ ನೋಡಿದ ತಾನು ಹಾಗೂ ತನ್ನ ಮಗ ಬೀಗ ಯಾಕೆ ಹಾಕುತ್ತಿದ್ದಿಯಾ ಎಂದು ಕೇಳಿದ್ದಕ್ಕೆ ಪವಿತ್ರಳು ತನ್ನ ಹಾಗೂ ತನ್ನ ಮಗ ಸೌರಭ್ ನನ್ನು ಉದ್ದೇಶಿಸಿ  ನಿಮ್ಮನ್ನು ಬದುಕಲು ಬಿಡುವುದಿಲ್ಲ ಎಂದು ಹೇಳಿ ಪವಿತ್ರಳು  ತನ್ನ ಎಡ ಕೈಯನ್ನು ಹಿಂದಕ್ಕೆ ತಿರುಗಿಸಿ ಎಡ ಬದಿಯ  ಪಕ್ಕೆಲುಬುಗೆ  ಗುದ್ದಿ, ನಂತರ ಸಮರ್ಥ ಮತ್ತು ಪವಿತ್ರ ಇವರು ತನ್ನನ್ನು ಗೋಡೆಗೆ ಬದಿಗೆ ದೂಡಿದ್ದು, ತನ್ನ ತಲೆಗೆ ಗೋಡೆ ತಾಗಿರುತ್ತದೆ. ಅಲ್ಲದೇ ತನ್ನ ಮಗನಿಗೆ ಕೂಡ ಸಮರ್ಥ ಮತ್ತು ಪವಿತ್ರ ಇವರು ಬೆನ್ನಿಗೆ ಹಲ್ಲೆ ಮಾಡಿರುತ್ತಾರೆ . ಈ ಬಗ್ಗೆ ಮಹಿಳಾ ಪೊಲೀಸ್‌  ಠಾಣಾ ಅಪರಾಧ ಕ್ರಮಾಂಕ  62/2022  ಕಲಂ: 354(A), 323,504, 506 R/W 34 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣಗಳು

  • ಗಂಗೊಳ್ಳಿ: ಪಿರ್ಯಾದಿ ಪ್ರಕಾಶ ಪೂಜಾರಿ ಪ್ರಾಯ 42   ವರ್ಷ, ತಂದೆ: ಬಚ್ಚು ಪೂಜಾರಿ  ವಾಸ: ಅಜ್ಜಿಮನೆ ಕಂಚುಗೋಡು ಗುಜ್ಜಾಡಿ ಗ್ರಾಮ, ಇವರ ಹೆಂಡತಿ ಶ್ರೀಮತಿ ಜಯಂತಿ ರವರು  ಹೈನುಗಾರಿಕೆ ಕೆಲಸ ಮಾಡಿಕೊಂಡಿದ್ದು ದಿನಾಂಕ 20.09.2022 ರಂದು ಬೆಳಿಗ್ಗೆ 10:00 ಗಂಟೆಗೆ 3 ವರ್ಷ ಪ್ರಾಯದ ಕೆಂಪು ಬಿಳಿ ಬಣ್ಣದ ಗುಡ್ಡ ಕರುವನ್ನು ಗುಜ್ಜಾಡಿ ಗ್ರಾಮದ ಕಂಚುಗೋಡು ಸಾಯಿಬರ ಹಿತ್ಲು ಜಾಗದಲ್ಲಿ ಮೇಯಲು ಕಟ್ಟಿ ಬಂದಿದ್ದು ಸಾಯಂಕಾಲ 6:00 ಗಂಟೆಗೆ ಮನೆಗೆ ತರುವರೇ ಸದ್ರಿ ಸ್ಥಳಕ್ಕೆ ಹೋಗಿ ನೋಡಲಾಗಿ ಕಟ್ಟಿದ ಗುಡ್ಡ ಕರು ಇಲ್ಲದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡಿದ್ದು ಹೋಗಿದ್ದು ಹುಡುಕಾಡಿದಲ್ಲಿ ಈವರೆಗೂ ಪತ್ತೆಯಾಗಿರುವುದಿಲ್ಲ. ಗುಡ್ಡಕರುವಿನ ಅಂದಾಜು ಮೌಲ್ಯ 3000 ರೂ ಆಗಬಹುದು. ಗುಡ್ಡ ಕರುವನ್ನು ಮಾಂಸ ಮಾಡುವ ಉದ್ದೇಶದಿಂದ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ರೋಷನ್ ಎಂಬವರ ಮೇಲೆ ಅನುಮಾನ ಇರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಶ್‌ ಠಾಣಾ ಅಪರಾಧ ಕ್ರಮಾಂಕ 92/2022 ಕಲಂ: 379 ಐಪಿಸಿ & ಕಲಂ: 8, 12 The Karnataka Prevention of Slaughter and Prevention of cattle Ordiance 2020 ರಂತೆ  ಪ್ರಕರಣ ದಾಖಲಿಸಲಾಗಿದೆ.
  • ಮಲ್ಪೆ: ಪಿರ್ಯಾದಿ ಚೇತನ್ ಕುಮಾರ್(36 ) ತಂದೆ:ಕೆಂಚಪ್ಪ ದೇವಾಡಿಗ ವಾಸ:  ಗಂಗಾ ನಿಲಯ  ಕಡಿಯಾಳಿ ಇವರು  ಸುಮಾರು 4 ವರ್ಷಗಳಿಂದ ಮಲ್ಪೆ ಬಸ್ ನಿಲ್ದಾಣದ  ಹತ್ತಿರ ಇರುವ  ರಾಜ್ ಮಹಲ್ ಬಿಲ್ಡಿಂಗ್ ನಲ್ಲಿ  ಕರಾವಳಿ ಮೊಬೈಲ್ಸ್ ಎಂಬ  ಅಂಗಡಿಯನ್ನು ನಡೆಸಿಕೊಂಡಿದ್ದು , ನಿನ್ನೆ  ದಿನ ದಿನಾಂಕ  24-09-2022  ರಂದು ರಾತ್ರಿ 9:00 ಗಂಟೆ  ಅಂಗಡಿ ಬಾಗಿಲು ಹಾಕಿ ಹೋಗಿದ್ದು,  ದಿನಾಂಕ: 25-09-2022 ರಂದು ಅಂಗಡಿಯಲ್ಲಿ ಕೆಲಸ ಮಾಡುವ ನಿಶಾಂತ  ಬಂದು ನೋಡಲಾಗಿ  ಅಂಗಡಿಯ ಶೆಟರ್ ನ  ಎಡಬದಿಯ ಲಾಕ್ ನ್ನು  ಯಾರೋ ಕಳ್ಳರು   ಹರಿತವಾದ ವಸ್ತುವಿನಿಂದ  ಕೊಯ್ದು  ಒಳಗೆ ಪ್ರವೇಶಿಸಿ  6 ಒಪ್ಪೋ ಮೋಬೈಲ್ , 1 ವಿವೋ ಮೊಬೈಲ್  ಹಾಗೂ ಹೆಡ್ ಪೋನ್, ಬ್ಲೂಟ್ರೂತ್  ನೆಕ್ ಬ್ಯಾಂಡ್, ಹಾಗೂ 10000 ರೂ ನಗದು ತೆಗೆದುಕೊಂಡು ಹೋಗಿರುತ್ತಾರೆ , ಕಳವಾದ ವಸ್ತುವಿನ ಅಂದಾಜು ಮೌಲ್ಯ ಸುಮಾರು 1,00,000 ರೂ ಆಗಿರುತ್ತದೆ.   ಯಾರೋ ಕಳ್ಳರು ಅಂಗಡಿ ಬಾಗಿಲನ್ನು ಮುರಿದು ಕಳ್ಳತನ ಮಾಡಿಕೊಂಡುಹೋಗಿರುತ್ತಾರೆ . ಈ ಬಗ್ಗೆ ಮಲ್ಪೆ  ಠಾಣಾ ಅಪರಾಧ ಕ್ರಮಾಂಕ 82/2022 . ಕಲಂ- 457, 380  IPC ಯಂತೆ ಪ್ರಕರಣ ದಾಖಲಿಸಲಾಗಿದೆ.

  ಅಸ್ವಾಭಾವಿಕ ಮರಣ ಪ್ರಕರಣ

  • ಕೊಲ್ಲೂರು:  ಪಿರ್ಯಾದಿ: ಅಂಬಿಕಾ .ಕೆ ( ಪ್ರಾಯ 33ವರ್ಷ )ಗಂಡ: ವಿಜಯಕುಮಾರ್  ವಾಸ: ಕೆನರಾ ಬ್ಯಾಂಕ್ ಹತ್ತೀರ ಕೊಲ್ಲೂರು ಅಂಚೆ ಮತ್ತು ಗ್ರಾಮ ಬೈಂದೂರು ಇವರ ತಾಯಿ  ಶ್ರೀಮತಿ ಚಂದು  ರವರು ಮಾರಿಕಟ್ಟೆಯ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಕೊಲ್ಲೂರಿನ ಶ್ರೀರತ್ನ ಗೆಸ್ಟ್ ಹೌಸ್‌ನಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡು ಒಬ್ಬಂಟಿಯಾಗಿ ವಾಸವಾಗಿದ್ದರು. ಪ್ರತಿ ದಿನ ಕೆಲಸ ಮುಗಿದ ಬಳಿಕ ಪಿರ್ಯಾಧಿದಾರರ ಮನೆಗೆ ಬಂದು ಹೋಗುತ್ತಿದ್ದರು, ಪಿರ್ಯಾದಿದಾರರು ದಿನಾಂಕ: 24/09/2022 ರಂದು ಸಮಯ ಸುಮಾರು ಸಂಜೆ 07:00 ಗಂಟೆಗೆ ಕರೆ ಮಾಡಿದರು ಕರೆಯನ್ನು ಸ್ವೀಕರಿಸಿರುವುದಿಲ್ಲ. ಪಿರ್ಯಾದಿದಾರರು ತಕ್ಷಣ ಗಂಡನೊಂದಿಗೆ ಸಮಯ ಸುಮಾರು ರಾತ್ರಿ 10:00 ಗಂಟೆಗೆ ತಾಯಿ ವಾಸವಾಗಿರುವ ಬಾಡಿಗೆ ಮನೆಗೆ ಹೋಗಿ ನೋಡಲಾಗಿ ಅಸ್ವಸ್ತಗೊಂಡು ಮಲಗಿರುವ ತಾಯಿಯನ್ನು  ತಕ್ಷಣ ಅಂಬ್ಯುಲೇನ್ಸ್ ನಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌  ಠಾಣೆ  ಯುಡಿಆರ್‌ ನಂ 12/2022 ಕಲಂ:  174 ಸಿಆರ್‌ಪಿಸಿ  ರಂತೆ  ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 25-09-2022 06:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080