ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಬ್ರಹ್ಮಾವರ:  ದಿನಾಂಕ 22.09.2022 ರಂದು ಪಿರ್ಯಾದಿ ರಾಘವೇಂದ್ರ ಕುಲಾಲ್ (27), ತಂದೆ: ಸಾಧು ಕುಲಾಲ್, ವಾಸ: ಬಜ್ಜಾಲು ಅನಂತ ಪದ್ಮನಾಭ ನಿಲಯ, ಪೆರ್ಡೂರು ರವರು ಆರೋಪಿತ ಸತೀಶ್ ಕುಲಾಲ್ ಸವಾರಿ ಮಾಡುತ್ತಿದ್ದ  KA.30.H.7829 ನೇ ಹೀರೊ ಹೊಂಡ ಸ್ಪ್ಲೆಂಡರ್ ಮೋಟಾರ್ ಸೈಕಲ್ನಲ್ಲಿ ಸಹಸವಾರರಾಗಿ ಕುಳಿತು ಸಂತೆಕಟ್ಟೆಯಿಂದ ಹೆಬ್ರಿ- ಬ್ರಹ್ಮಾವರ ರಾಜ್ಯ ಹೆದ್ದಾರಿಯಲ್ಲಿ ಮನೆ ಕಡೆಗೆ ಬರುತ್ತಾ ರಾತ್ರಿ 7:00 ಗಂಟೆ ಸುಮಾರಿಗೆ ಹೊಸೂರು ಗ್ರಾಮದ, ಮೇಲ್ಕರ್ಜೆ ಪಿ. ರಾಮಕೃಷ್ಣ ಅಡಿಗ ರವರ ಮನೆಯ ಎದುರುಗಡೆ  ತಲುಪುವಾಗ ಆರೋಪಿಯು ಮೋಟಾರ್ ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿ ರಸ್ತೆಯಲ್ಲಿದ್ದ ಹೊಂಡ ತಪ್ಪಿಸಲು ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ಹತೋಟಿ ತಪ್ಪಿ ರಸ್ತೆಯ ಎಡಗಡೆ ದಕ್ಷಿಣ ಬದಿಯ ಚರಂಡಿಗೆ ಉರುಳಿ ಬಿದ್ದು, ಬೇಲಿಯ ಶಿಲೆಯ ಕಂಬ ಆರೋಪಿ ಸತೀಶ ಕುಲಾಲ್ರಿಗೆ ತಾಗಿ ಆತನ ತಲೆಗೆ ಹಾಗೂ ಮುಖಕ್ಕೆ ತೀವ್ರ ತರಹದ ಗಾಯವಾಗಿರುತ್ತದೆ. ಅಲ್ಲದೇ ಸದ್ರಿ ಅಪಘಾತದಿಂದ ಪಿರ್ಯಾದಿದಾರರ ಎಡದವಡೆ, ಕುತ್ತಿಗೆ, ಎಡ ಪಕ್ಕೆಲುಬು ಭಜಕ್ಕೆ ಗಾಯವಾಗಿರುತ್ತದೆ. ಗಾಯಗೊಂಡ ಇಬ್ಬರನ್ನೂ ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಪ್ರಥಮ ಚಿಕತ್ಸೆ ಕೊಡಿಸಿ ನಂತ್ರ ಹೆಚ್ಚಿನ   ಚಿಕಿತ್ಸೆ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 158/2022 ಕಲಂ : 279, 337, 338 IPC ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ : ಪಿರ್ಯಾದಿ : ಶಶಿಪಾಲ್ ಶೆಟ್ಟಿಯಾನ್, ಪ್ರಾಯ: 60 ವರ್ಷ, ತಂದೆ: ಡಿ.ಪಿ ಶೆಟ್ಟಿಯಾನ್, ವಾಸ: ವೈ.ಎಂ.ಸಿ.ಎ. ಫಳ್ನೀರ್, ಮಂಗಳೂರು ಇವರು ದಿನಾಂಕ  24-09-2022 ರಂದು ಶಿವಮೊಗ್ಗದಲ್ಲಿ  ಮೀಟಿಂಗ್  ಮುಗಿಸಿ ಬೊಲೇರೋ ಜೀಪ್  ನಂಬ್ರ  KA19P9623 ರಲ್ಲಿ ಆಶಾ  ಶೆಟ್ಟಿಯಾನ್, ರವಿರಾಜ್ ಎಸ್ ಶೆಟ್ಟಿಯಾನ್ , ಬೆನೆಟ್ ಸೋನ್ಸ್ , ಶೀಲಾ ಸೋನ್ಸ್ , ಶರ್ಮಿಳಾ ಶೆಟ್ಟಿಯಾನ್, ರೆಜಿನಾಲ್ಡ್  ಸೋನ್ಸ್ ಇವರನ್ನು ಪ್ರಯಾಣಿಕರಾಗಿ  ಕುಳ್ಳಿರಿಸಿಕೊಂಡು ಮಂಗಳೂರು  ಕಡೆಗೆ  ಜೀಪನ್ನು ಚಲಾಯಿಸಿಕೊಂಡು ಬರುತ್ತಾ 18-10  ಗಂಟೆಗೆ  ಕಾರ್ಕಳ ಹೆಬ್ರಿ ರಸ್ತೆಯಲ್ಲಿ  ಹಿರ್ಗಾನ ಗ್ರಾಮದ ಚಿಕ್ಕಲಬೆಟ್ಟು ಕ್ರಾಸ್ ಹರಿಯಪ್ಪನ  ಕೆರೆ ಎಂಬಲ್ಲಿ ತಲುಪುವಾಗ ರಸ್ತೆಯ ಎಡಬದಿಯಲ್ಲಿ ಸುಮಾರು 50 ಅಡಿ ಉದ್ದ ಕಾಮಗಾರಿ ನಡೆಯುತ್ತಿದ್ದು, ಫಿರ್ಯಾದುದಾರರು ತನ್ನ ವಾಹನವನ್ನು40 ಅಡಿವರೆಗೆ ಚಲಾಯಿಸಿಕೊಂಡು ಹೋಗಿದ್ದು ಆ ಸಮಯ   ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ   KA20D9587 ನೋಂದಣಿ ಸಂಖ್ಯೆಯ ಬಸ್‌ನ್ನು  ಅದರ  ಚಾಲಕ  ರಾಜೇಂದ್ರ  ಎಂಬಾತನು  ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೊಲೆರೋ ಜೀಪಿಗೆ  ಡಿಕ್ಕಿ ಹೊಡೆದ ಪರಿಣಾಮ  ಜೀಪು ಪ್ರಯಾಣಿಕರಾದ  ಆಶಾ ಶೆಟ್ಟಿಯಾನ್ ಪ್ರಾಯ 61 ವರ್ಷ ಎಂಬವರಿಗೆ ಮೂಗಿಗೆ  ಗುದ್ದಿದ ಹೊಡೆತ ಬಿದ್ದು ರಕ್ತಗಾಯವಾಗಿರುತ್ತದೆ . ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಪೊಲೀಸ್‌  ಠಾಣಾ ಅಪರಾಧ ಕ್ರಮಾಂಕ 123/2022, ಕಲಂ: 279,337 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ:  ಪಿರ್ಯಾದಿ ದೀಪಾ ಎಮ್‌ (33) ಗಂಡ: ವಿಜೇಂದ್ರ ವಾಸ: ಪ್ಲಾಟ್‌ ನಂ -201 ಸನ್‌ ಶೈನ್‌ ರೆಸಿಡೆನ್ಸಿ ಬಿಲ್ಡಿಂಗ್‌ ಮೂಡುಬೆಳ್ಳೆ ಅಂಚೆ ಮತ್ತು ಕಟ್ಟಿಂಗೇರಿ ಗ್ರಾಮ, ಇವರ ಗಂಡ ವಿಜೇಂದ್ರ (42) ರವರು ಕುಡಿತದ ಚಟವನ್ನು ಹೊಂದಿದ್ದು ಮನೆಯಲ್ಲಿ ಯಾವಾಗಲೂ ಜಗಳವಾಡುತ್ತಿರುತ್ತಾರೆ, ಆಗಾಗ ಕುಡಿದು ಬಂದು ನಿಮಗೆ ಕಲಿಸುತ್ತೆನೆ ಎಂದು ಹೇಳಿ ಯಾರಿಗೂ ಹೇಳದೆ ಮನೆ ಬಿಟ್ಟು ಹೋಗುತ್ತಿರುತ್ತಾರೆ.  ದಿನಾಂಕ 23.09.2022 ರಂದು ರಾತ್ರಿ 11:00 ಗಂಟೆಗೆ ಪಿರ್ಯಾದುದಾರರ ಗಂಡ ಹಾಗೂ ದೊಡ್ಡಮ್ಮ ಶಾಂತಾ ರವರೊಂದಿಗೆ ಜಗಳವಾಗಿದ್ದು ಪಿರ್ಯಾದುದಾರರ ಅತ್ತೆ ವನಜ ರವರೊಂದಿಗೆ ಮನೆಬಿಟ್ಟು ಹೋಗಿರುತ್ತಾರೆ. ನಂತರ ಪಿರ್ಯಾದುದಾರರು ವಿಜೇಂದ್ರರವರಿಗೆ  ಕರೆ ಮಾಡಿ ಮಾತನಾಡಿದ್ದು ಸ್ವಲ್ಪ ದಿನ ತಡಿ ನಾನು ನನ್ನ ತಾಯಿ ಒಟ್ಟಿಗೆ ಹೋಗುತ್ತೇನೆ ಎಂದು ಹೇಳಿ ಕರೆಯನ್ನು ಕಟ್‌‌ ಮಾಡಿರುತ್ತಾರೆ.  ದಿನಾಂಕ 24.09.2022 ರಂದು ಮಧ್ಯಾಹ್ನ 02:30 ಗಂಟೆಗೆ ಮನೆಗೆ ಬಂದವರಲ್ಲಿ ಊಟ ಮಾಡಲು ಹೇಳಿದಾಗ ಪಿರ್ಯಾದುದಾರರ ಗಂಡ ಊಟ ಮಾಡದೇ ಮನೆಯ ಒಳಗಿನ ಕೋಣೆಗೆ ಹೋಗಿ ಮಲಗಿರುತ್ತಾರೆ. ಪಿರ್ಯಾದುದಾರರು ಸಂಜೆ ಸಮಯ ಸುಮಾರು  04:00 ಗಂಟೆಗೆ ಅವರನ್ನು ಕರೆಯಲು ಹೋದಾಗ ಪಿರ್ಯಾದುದಾರರನ್ನು ಹೊರಗೆ ಹೋಗುವಂತೆ ತಿಳಿಸಿ ನಿಮಗೆ ಬುದ್ದಿ ಕೆಲಿಸುತ್ತೇನೆ ಎಂದು ಹೇಳಿ ರೂಮ್‌ನ ಬಾಗಿಲನ್ನು ಲಾಕ್‌ ಮಾಡಿಕೊಂಡಿರುತ್ತಾರೆ. ಬಾಗಿಲು ತೆರೆಯಲು ಎಷ್ಟು ಸಾರಿ ಹೇಳಿದರು ತೆಗೆದಿರುವುದಿಲ್ಲ. ಸಂಜೆ ಸುಮಾರು 04:20 ಗಂಟೆಗೆ ಹಿಂಬದಿ ಬಾಗಿಲಿನಿಂದ ಒಳಗಡೆ ಹೋಗಿ ನೋಡಿದ್ದು ಪ್ಯಾನಿಗೆ ನೈಲಾನ್‌ ಶಾಲ್‌ ಬಿಗಿದುಕೊಂಡಿದ್ದು ವಿಜೇಂದ್ರರವರನ್ನು ಕೆಳಗೆ ಇಳಿಸಿ ಚಿಕಿತ್ಸೆಕೊಡಿಸಲು ಒಂದು ಅಂಬೂಲೆನ್ಸ್‌ನಲ್ಲಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಾಧಿಕಾರಿಯವರಲ್ಲಿ ತೊರಿಸಿದ್ದಲ್ಲಿ ಸಂಜೆ 05:00 ಗಂಟೆಗೆ ವೇಳೆಗೆ ಪಿರ್ಯಾದುದಾರರ ಗಂಡ ವಿಜೇಂದ್ರ  ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಯುಡಿಆರ್‌ 24/2022  ಕಲಂ 174  ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 25-09-2022 10:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080