ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಗಣೇಶ್ ದೇವಾಡಿಗ (32), ತಂದೆ; ಈರ ದೇವಾಡಿಗ, ವಾಸ; ಸಿಂಡಿಕೇಟ್ ಬ್ಯಾಂಕ್ ಹತ್ತಿರ, ಬೈಂದೂರು ಇವರು ದಿನಾಂಕ 24/09/2021 ರಂದು ಅವರ ಟಿಪ್ಪರ್ ನಲ್ಲಿ ಶಿರೂರು ಕಡೆಗೆ ಬಾಡಿಗೆಗೆ ಹೋಗಿ ಬೈಂದೂರು ಕಡೆಗೆ ವಾಪಸ್ಸು ಬೆಳಿಗ್ಗೆ  ಸುಮಾರು 07:30 ಗಂಟೆಗೆ ಬರುತ್ತಿರುವಾಗ ಒತ್ತಿನೆಣೆ ತಿರುವಿನಲ್ಲಿ ಪಿರ್ಯಾದಿದಾರರ ಎದುರಿನಲ್ಲಿ KA-52-B-1197 ನೇ ಲಾರಿಯನ್ನು ಅದರ ಚಾಲಕನು ಸಾಮಾನು ತುಂಬಿಕೊಂಡು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ತಿರುವಿನಲ್ಲಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯು ಬಲಬದಿಯ ರಸ್ತೆಗೆ ಕೆಳಗೆ ಬಿದ್ದಿದ್ದು ಪರಿಣಾಮ ಲಾರಿಯ ಚಾಲಕನಿಗೆ ತಲೆಗೆ ರಕ್ತಗಾಯವಾಗಿದ್ದು ಹಾಗೂ ಲಾರಿ ಕ್ಲೀನರ್ ಗೆ ಬಲಕೈಗೆ ರಕ್ತಗಾಯವಾಗಿರುತ್ತದೆ, ಗಾಯಗೊಂಡವರನ್ನು ಪಿರ್ಯಾದಿದಾರರು ಹಾಗೂ ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣಾ ಸಿಬ್ಬಂದಿಯವರು ಉಪಚರಿಸಿ ಬೈಂದೂರು ಸರಕಾರಿ ಆಸ್ಪತ್ರೆಗೆ 108 ವಾಹನದಲ್ಲಿ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು,  ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 158/2021 ಕಲಂ:.279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

 • ಹೆಬ್ರಿ: ಪಿರ್ಯಾದಿದಾರರಾದ ಗಿರೀಶ ಪೂಜಾರಿ (45), ತಂದೆ: ವಾಸು ಪೂಜಾರಿ, ವಾಸ: ತಾಯಿ ಕೃಪಾ ಕುಂಟೆಬೆಟ್ಟು ಶಿವಪುರ ಗ್ರಾಮ ಹೆಬ್ರಿ ತಾಲೂಕು ಇವರ ಬಾವ ಕೃಷ್ಣ ಪೂಜಾರಿ (32) ಇವರ ಪತ್ನಿ 10 ತಿಂಗಳ ಹಿಂದೆ ಅತ್ಮಹತ್ಯೆ ಮಾಡಿ ಕೊಂಡಿದ್ದು. ಪತ್ನಿ ಮೃತ ಪಟ್ಟ ವಿಚಾರದಲ್ಲಿ ಕೃಷ್ಣ ಪೂಜಾರಿ ರವರು ನೊಂದು ವಿಪರೀತ ಮದ್ಯಪಾನ ಮಾಡಿ ಮಾನಸಿಕ ಖಿನ್ನತೆಗೆ ಒಳಗಾಗಿ ದಿನಾಂಕ 24/09/2021  ರಂದು ರಾತ್ರಿ 9:00 ಗಂಟೆ ಯಿಂದ 9:30 ಗಂಟೆಯ ಮದ್ಯಾವಧಿಯಲ್ಲಿ ಶಿವಪುರ ಗ್ರಾಮದ ಕುಂಟೆಬೆಟ್ಟು ಎಂಬಲ್ಲಿ ಮನೆಯ ಬಳಿ ವಿರುವ ಹಲಸಿನ ಮರದ ಕೊಂಬೆಗೆ ಬೈರಾಸ್ ನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ನೇಣು ಹಾಕಿ ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 33/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾದ ಸರ್ಫರಾಜ್ ಮುನಾಫ್ (40), ತಂದೆ: ಅಬ್ದುಲ್ ಮುನಾಫ್, ವಾಸ: ವಿ ಬಿ ರಸ್ತೆ, ವಡಭಾಂಡೇಶ್ವರ, ಮಲ್ಪೆ, ಕೊಡವೂರು,ಉಡುಪಿ ತಾಲೂಕು ಇವರು ತನ್ನ ಸ್ವಂತ ಹಕ್ಕಿನ ಸ್ಥಿರಾಸ್ತಿ  ಸರ್ವೇ  ನಂಬ್ರ 323/ಪಿ  17ಪಿ 2 , ವಿರ್ಸ್ತಿಣ 1.86 ರಲ್ಲಿ  ಆರೋಪಿ  1)ನಕ್ವ ಯಹಿಯಾ ಸಾಹೇಬ್ ಇವರಿಗೆ ರೆಸ್ಟೋರೆಂಟ್ ಮತ್ತು ವಸತಿ ವಿಹಾರ ನಡೆಸುವ ಬಗ್ಗೆ 5 ವರ್ಷ ಅವಧಿಗೆ ಕರಾರು ಪತ್ರ ಮಾಡಿಕೊಂಡಿದ್ದು, ಆರೋಪಿಯು ರೆಸ್ಟೋರೆಂಟ್ ಗೆ  ಹೊಂದಿಕೊಂಡಿದ್ದ ಖಾಲಿ ಸ್ಥಿರಾಸ್ತಿಯಲ್ಲಿ ವಾಟರ್ ಪಾರ್ಕ್ ನಡೆಸುವ ಉದ್ದೇಶದಿಂದ ಪಿರ್ಯಾದಿದಾರರಿಗೆ 12,25,000/- ರೂಪಾಯಿ ಹಣ ನೀಡಲು ಒಪ್ಪಿಕೊಂಡಿದ್ದು  ಸ್ಥಳದಲ್ಲಿದ್ದ 40 ತೆಂಗಿನ ಮರಗಳು ಮತ್ತು  ವಸತಿ ಯೋಗ್ಯ ಹಂಚು ಚಾವಣಿ ಮನೆ ಯನ್ನು ಕೆಡವಿ ವಾಟರ್ ಪಾರ್ಕ್ ನಿರ್ಮಾಣ ಮಾಡಿರುವುದಾಗಿ ತಿಳಿಸಿ ಮಾಡಿರುವುದಿಲ್ಲ, 1 ನೇ ಆರೋಪಿಯು 6 ತಿಂಗಳಿಂದ ಪಿರ್ಯಾದಿದಾರರಿಗೆ ಬಾಡಿಗೆ ಯನ್ನು ನೀಡದೆ ಇದ್ದುದ್ದರಿಂದ ಪಿರ್ಯಾದಿದಾರರು ದಿನಾಂಕ 01/10/2020 ರಿಂದ  ಹೊಟೇಲ್ ನ್ನು ಸ್ವತ: ತಾನೆ ನಡೆಸಿಕೊಂಡು  ಬಂದಿದ್ದು, ಆರೋಪಿಯು ಹೊಟೇಲ್ ಉದ್ಯಮದಲ್ಲಿ ಯಾವುದೇ ರೀತಿಯ ತೊಂದರೆ ನೀಡದಂತೆ ಓ ಎಸ್  ನಂಬ್ರ 13/20 ರಂತೆ ಮಾನ್ಯ ನ್ಯಾಯಾಲಯ ದಿಂದ ಆರೋಪಿಯ ವಿರುಧ್ದ  ತಡೆಯಾಜ್ಞೆ ತಂದಿರುತ್ತಾರೆ.  ದಿನಾಂಕ 07/09/2021 ರಂದು 7:00 ಗಂಟೆಯ ಸಮಯಕ್ಕೆ 1 ನೇ ಆರೋಪಿ ನಕ್ವಾ ಯಾಹಿಯಾ ಸಾಹೇಬ ಮತ್ತು ಆಪ್ರೋಜ್, ಸುಲೇಮಾನ,  ಪುರ್ಕಾನ್, ಪೌಜಾನ್  ವಾಸ: ಉದ್ದಿನ ಹಿತ್ಲು, ಕೊಡವೂರು , ಉಡುಪಿ ತಾಲೂಕು ಹಾಗೂ 30 ಜನ ಆರೋಪಿತರು ಸಂಚು ರೂಪಿಸಿ  ಪಿರ್ಯಾದಿದಾರರ ಹೊಟೇಲ್ ಗೆ ಅಕ್ರಮ ಪ್ರವೇಶ ಮಾಡಿ , ಪಿರ್ಯಾದಿದಾರರಿಗೆ  ಬೆದರಿಕೆ  ಹಾಕಿ ಹೊಟೇಲ್ ಪರಿಕರಗಳನ್ನು  ಧ್ವಂಸ ಮಾಡಿ , ಹೊಟೇಲ್ ನಲ್ಲಿದ್ದ  38 ಲಕ್ಷ  ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿಕೊಂಡು ಹೋಗಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 107/2021  ಕಲಂ: 147, 448, 506, 427, 395, 120ಬಿ, 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    
 • ಉಡುಪಿ: ಪಿರ್ಯಾದಿದಾರರಾದ ಜಾಫರ್‌ ಸಾಧಿಕ್‌(57), ತಂದೆ:ಖಾದರ್‌ಸಾಹೇಬ್‌,  ವಾಸ:8 ನೇ ಅಡ್ಡ ರಸ್ತೆ, ಮಸೀದಿ ಹತ್ತಿರ, 76 ಬಡಗುಬೆಟ್ಟು,ಇಂದಿರಾನಗರ, ಕುಕ್ಕಿಕಟ್ಟೆ, ಉಡುಪಿ ತಾಲೂಕು ಇವರಿಗೆ ಅರೋಪಿ ತಯ್ಯಬ್‌ ಎಂಬುವವರ ಪರಿಚಯವಿದ್ದು ಆರೋಪಿತನು ಪಿರ್ಯಾದಿದಾರರಿಗೆ ಮೀನು ವ್ಯವಹಾರದಲ್ಲಿ ಪಾಲುದಾರನಾಗಿ ಮಾಡುವುದಾಗಿ 2,50,000/- ರೂಪಾಯಿ ಪಿರ್ಯಾದಿದಾರರ ಮನೆಯಿಂದ ಪಡೆದುಕೊಂಡು ಹೋಗಿದ್ದು, ನಂತರ ಆರೋಪಿತನು ಪಿರ್ಯಾದಿದಾರರಿಗೆ ಯವುದೇ ವ್ಯವಹಾರಕ್ಕೆ ನೇಮಿಸಿಕೊಳ್ಳದೇ ಇದ್ದು, ಪಿರ್ಯಾದಿದಾರರು ಈ ಬಗ್ಗೆ ವಿಚಾರಿಸಿದಾಗ ಆರೋಪಿತನು 2,00,000/- ರೂಪಾಯಿ ವಾಪಾಸು ಕೊಟ್ಟಿದ್ದು ಉಳಿದ ಹಣ ರೂಪಾಯಿ 80,600/- ರೂಪಾಯಿಯನ್ನು ಕೊಡುವುದಾಗಿ ಹೇಳಿ ಈವರೆಗೂ ವಾಪಾಸು ನೀಡದೇ ಪಿರ್ಯಾದಿದಾರರು ಉಳಿದ ಹಣದ ಬಗ್ಗೆ ಅರೋಪಿತನಲ್ಲಿ  ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಆರೋಪಿಯು ಮೋಸ ವಂಚನೆ ಮಾಡುವ ಉದ್ದೇಶದಿಂದ ನಷ್ಟ ಉಂಟು ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 139/2021 ಕಲಂ: 420,406,
  504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-09-2021 09:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080