ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ 

  • ಬೈಂದೂರು : ಪಿರ್ಯಾದಿದಾರರಾದ ಚಂದ್ರ ರಾಮ ಮೊಗವೀರ ಪ್ರಾಯ 33 ವರ್ಷ, ತಂದೆ; ರಾಮ ಮೊಗವೀರ, ವಾಸ; ಬೈರಿಮನೆ, ಸೂರ್ಕುಂದ , ಮಯ್ಯಾಡಿ ಅಂಚೆ, ಬೈಂದೂರು ತಾಲೂಕು ಇವರ ಅಣ್ಣ ರವಿ ರಾಮ ಮೋಗವೀರ ಪ್ರಾಯ 35 ವರ್ವದವರು ಹೋಟೇಲ್ ಕೆಲಸ ಮಾಡಿಕೊಂಡಿದ್ದು ಈ ಬಗ್ಗೆ ಬ್ಯಾಂಕಿನಿಂದ ಕೈಸಾಲ ಮಾಡಿಕೊಂಡಿದ್ದು, ಸಾಲವನ್ನು ಮರುಪಾವತಿಸಲಾಗದೇ ಚಿಂತೆಯಿಂದ ಮಂಕಾಗಿರುತ್ತಿದ್ದರು. ರವಿ ರಾಮ ಮೊಗವೀರರವರು ಪ್ರಸ್ತುತ ಶಿರೂರಿನ ಹೊಟೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 20/09/2021 ರಂದು ರಾತ್ರಿ ಹೊಟೇಲ್ ನಲ್ಲಿ ಕೆಲಸ ಮುಗಿಸಿ ಬೆಳಗಿನ ಜಾವಾ 03.30 ಗಂಟೆಗೆ ತನ್ನ ಅಣ್ಣನ ಮನೆಯ ಶೌಚಾಲಯಕ್ಕೆ ಹೋಗಿ ಬಂದು ವಾಂತಿ ಮಾಡುತ್ತಿದ್ದವರನ್ನು ಗಮನಿಸಿದ ಅಣ್ಣ ಮಂಜುನಾಥ ರಾಮ ಮೊಗವೀರ ಹಾಗೂ ಅವರ ಮಗ ವಿಕಾಶನು ಕೂಡಲೇ ಹೋಗಿ ನೋಡಲಾಗಿ ರವಿ ರಾಮ ಮೊಗವೀರವರ ಬಾಯಿಯಿಂದ ವಿಷದ ವಾಸನೆ ಬರುತ್ತಿದ್ದುದ್ದನ್ನು ನೋಡಿ ಕೂಡಲೇ ಒಂದು ವಾಹನದಲ್ಲಿ ಚಿಕತ್ಸೆಯ ಬಗ್ಗೆ ಕುಂದಾಪುರ ವಿನಯ ಆಸ್ಪತ್ರೆ ಕರೆದುಕೊಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೃದ್ಯರು ತಿಳಿಸಿದಂತೆ ಸುರತ್ಕಲ್ ಶ್ರೀನಿವಾಸ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ ದಿನಾಂಕ 24/09/2021 ರಂದು ಸಂಜೆ 05.15 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ರವಿ ರಾಮ ಮೊಗವೀರವರು ಹೊಟೇಲ್ ಉದ್ಯೋಗದ ಬಗ್ಗೆ ಮಾಡಿದ ಸಾಲವನ್ನು ಮರುಪಾವತಿಸಲಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 37/2021 ಕಲಂ: 174 ಸಿ.ಅರ್.‌ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ : ಪಿರ್ಯಾದಿದಾರರಾದ ಸಚಿನ್‌ ಕುಮಾರ್‌ (25) ತಂದೆ: ಬಾಬು ಮರಕಾಲ ವಾಸ: ಸೀತಾ ನಿಲಯ, ಮಣೂರು ಪಡುಕೆರೆ, ಕೋಟ, ಬ್ರಹ್ಮಾವರ ತಾಲೂಕು ಇವರ ಅಕ್ಕ ಶ್ರೀಮತಿ ಉಷಾ ಪ್ರಾಯ 29 ವರ್ಷ ಎಂಬುವವರಿಗೆ ದಿನಾಂಕ 19/04/2018 ರಂದು ಶ್ರೀಕಾಂತ ಶ್ರೀಯಾನ ಎಂಬುವವರೊಂದಿಗೆ ವಿವಾಹವಾಗಿದ್ದು, ಗರ್ಭಿಣಿಯಾಗಿರುತ್ತಾರೆ. ಅವರನ್ನು ಕಳೆದ ಮೂರು ತಿಂಗಳಿನಿಂದ ಉಡುಪಿಯ ಬಿ.ಆರ್‌ ಶೆಟ್ಟಿ ಆಸ್ಪತ್ರೆಯ ವೈದ್ಯಾಧಿಕಾರಿಯವರಲ್ಲಿ ತಪಾಸಣೆ ಮಾಡಿಸುತ್ತಿದ್ದು, ದಿನಾಂಕ 23/09/2021 ರಂದು ಪಿರ್ಯಾದಿದಾರರ ಅಕ್ಕ ಮತ್ತು ಭಾವ ತಪಾಸಣೆ ಬಗ್ಗೆ ಬಿ.ಆರ್‌ ಶೆಟ್ಟಿ ಆಸ್ಪತ್ರೆಗೆ ಬಂದಿದ್ದು, ಪರೀಕ್ಷಿಸಿದ ವೈದ್ಯರು, ಗರ್ಭದಲ್ಲಿ ನೀರಿನ ಅಂಶ ಕಡಿಮೆ ಇರುವುದಾಗಿ ತಿಳಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ದಿನಾಂಕ 25/09/2021 ರಂದು ಬೆಳಿಗ್ಗೆ 06:43 ಗಂಟೆಗೆ ಶ್ರೀಮತಿ ಉಷಾ ರವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಅದಾದ ಬಳಿಕ ಉಷಾ ರವರಿಗೆ ಪಿಡ್ಸ್‌ ಬಂದು ಸೀರಿಯಸ್‌ ಆಗಿದೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕೊಂಡು ಹೋಗುವಂತೆ ಬಿ.ಆರ್‌ ಶೆಟ್ಟಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ತಿಳಿಸಿದ ಮೇರೆಗೆ ಪಿರ್ಯಾದಿದಾರರ ಬಾವ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಯ ವೈದ್ಯರಲ್ಲಿ ಪರೀಕ್ಷಿಸಲಾಗಿ, ಉಷಾರವರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 40/2021ಕಲಂ 174 (3)(ii), (iv) ಸಿ.ಅರ್.‌ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 25-09-2021 06:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080