ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ

  • ಶಂಕರನಾರಾಯಣ:    ಫಿರ್ಯಾದಿ : ಪ್ರಥ್ವೀಶ್ ಆಚಾರ್ಯ  (25) ತಂದೆ: ಸುಬ್ರಾಯ ಆಚಾರ್ಯ ವಾಸ: ಅಲ್ಬಾಡಿ ಗ್ರಾಮ ಬೆಳ್ವೆಅಂಚೆ  ಹೆಬ್ರಿ  ತಾಲೂಕು ಉಡುಪಿ ಜಿಲ್ಲೆ ಇವರ  ತಂದೆ ಸುಬ್ರಾಯ ಆಚಾರ್ಯ  (52) ಇವರು ಸಿದ್ದಾಪುರದಲ್ಲಿ ಪ್ರಸನ್ನ ಬಾಡಿ ಬಿಲ್ಡರ್‌ ವೆನ್ನವ ವಾಹನದ ಬಾಡಿ ಕಟ್ಟುವ ಗ್ಯಾರೇಜ್‌  ನಡೆಸಿಕೊಂಡಿದ್ದು  ಇವರು  ದಿನಾಂಕ  24.08.2022 ರಂದು  10:00 ಗಂಟೆಗೆ  ಕುಂದಾಪುರ   ತಾಲೂಕಿನ ಯಡಮೊಗ್ಗೆ  ಗ್ರಾಮದ ತೆಂಕಬೈಲು ಎಂಬಲ್ಲಿ    ಆತನ ಸಹೋದರ ಗಣಪತಿ ಆಚಾರ್ಯ ರವರ   ವಾಸದ ಮನೆಯಿಂದ ಸಿದ್ದಾಪುರಕ್ಕೆ ಹೋಗುತ್ತೇನೆ ಎಂದು  ಹೇಳಿ  ಹೋದವನು  ಸಿದ್ದಾಪುರಕ್ಕೆ ಹೋಗದೆ  ವಾಪಾಸು   ಮನೆಗೆ  ಬಾರದೇ   ಕಾಣೆಯಾಗಿದ್ದು  ಇವರಿಗೆ  ದೂರವಾಣಿ ಕರೆ ಮಾಡಿದರೆ  ಮೊಬೈಲ್ ಪೋನ್ ನಾಟ್ ರೀಚ್ ಆಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ :83/2022    ಕಲಂ:ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾರ್ಕಳ:  ಪಿರ್ಯಾದಿ ಪವನ್, ಪ್ರಾಯ: 23 ವರ್ಷ, ತಂದೆ: ವಿಠ್ಠಲ ಭಂಡಾರಿ, ವಾಸ: ಸುಪ್ರಿಯ ನಿಲಯ, ಗಡ್ದಲ್ಕೆ, ಕೌಡೂರು ಗ್ರಾಮ,ಇವರ ತಂದೆ: ವಿಠ್ಠಲ ಭಂಡಾರಿ ಪ್ರಾಯ: 61 ವರ್ಷ, ಹಾಗೂ ತಾಯಿ ಪ್ರಪುಲ್ಲರವರೊಂದಿಗೆ ಕಾರ್ಕಳ ತಾಲೂಕು ಕೌಡೂರು ಗ್ರಾಮದ ಗಡ್ದಲ್ಕೆ, ಸುಪ್ರಿಯಾ ನಿಲಯ ಎಂಬಲ್ಲಿ ವಾಸವಾಗಿದ್ದು ಪಿರ್ಯಾದಿದಾರರ ತಂದೆ ವಿಠ್ಠಲ ಭಂಡಾರಿರವರಿಗೆ ಕೆಲವು ಸಂದರ್ಭದಲ್ಲಿ ತಲೆ ಸುತ್ತುವಿಕೆ ಬರುತ್ತಿದ್ದು, ಮದ್ಯರಾತ್ರಿ ವೇಳೆ ಎದ್ದು ನೀರು ಕುಡಿಯುವ ಹಾಗೂ ಸಕ್ಕರೆ ತಿನ್ನುವ ಅಭ್ಯಾಸವಿರುತ್ತದೆ. ಪಿರ್ಯಾದಿದಾರರ ತಂದೆ ವಿಠ್ಠಲ ಭಂಡಾರಿರವರು ದಿನಾಂಕ: 24.08.2022 ರ ರಾತ್ರಿ 10:45 ಗಂಟೆಯಿಂದ ದಿನಾಂಕ: 25.08.2022 ರ ಬೆಳಗ್ಗೆ 04:50 ಗಂಟೆಯ ಮಧ್ಯಾವದಿಯಲ್ಲಿ ಮನೆಯ ಒಳಗೆ ಇರುವ ಶೌಚಾಲಯಕ್ಕೆ ಮೂತ್ರ ವಿಸರ್ಜನೆ ಮಾಡಲು ಹೋಗಿದ್ದಾಗ ಆಯತಪ್ಪಿ ಅಡುಗೆ ಕೋಣೆಯಲ್ಲಿ ಬಿದ್ದು, ತಲೆಗೆ ಮೆಟ್ಟಿಲಿನ ಬದಿ ತಾಗಿ ರಕ್ತಸ್ರಾವ ಉಂಟಾಗಿ ಆಕಸ್ಮಿಕವಾಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌ ನಂ 39/2022 ಕಲಂ 174CRPC ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಶಂಕರನಾರಾಯಣ:  ಪಿರ್ಯಾದಿ ಶ್ರೀಮತಿ ಪಾರ್ವತಿ ಪ್ರಾಯ 65 ವರ್ಷ ಗಂಡ: ದಿ. ನಾರಾಯಣ ದೇವಾಡಿಗ ವಾಸ: ದೇವಸ್ಥಾನಬೆಟ್ಟು ಇವರ ಮಗಳು ಶ್ರೀಮತಿ ಉಷಾ ಪ್ರಾಯ 36 ವರ್ಷ ಇವರು ನಿದ್ರಾ ಹೀನತೆಯಿಂದ ಹೀನತೆಯಿಂದ ಬಳಲುತ್ತಿದ್ದು ಈ ಬಗ್ಗೆ ಹಿರಿಯಡ್ಕ ಹಾಗೂ ಟಿ ಎಂ ಎ ಪೈ ಉಡುಪಿಯ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದುಕೊಂಡಿದ್ದು  ಆದರೂ ಅವರ ಆರೋಗ್ಯ ಸುಧಾರಿಸಿರುವುದಿಲ್ಲ.ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಗೊಂಡು ದಿನಾಂಕ  24/08/2022  ರಂದು  22:00  ಗಂಟೆಯಿಂದ ದಿನಾಂಕ  25/08/2022  ರಂದು  ಬೆಳಗಿನ ಜಾವ 03:00 ಘಂಟೆಯ  ಮದ್ಯದ  ಅವಧಿಯಲ್ಲಿ ತನ್ನ  ಮನೆಯ ಹತ್ತಿರದ ಕೆರೆಹಾರಿ ಆತ್ಮಹತ್ಯೆಮಾಡಿಕೊಂಡಿರುತ್ತಾರೆ.  ಈ ಬಗ್ಗೆ      ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್‌ ನಂಬ್ರ  28/2022  ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಲ್ಪೆ: ಪಿರ್ಯಾದಿ ಸುಶೀಲ್ ಕುಮಾರ(52) ತಂದೆ: ದಿವಂಗತ  ನಾರಾಯಣ ಎನ್ ಕರ್ಕೆರಾ ವಾಸ:  ಪಂಚಾಯತ್ ಆಫೀಸ್  ಹತ್ತಿರ ಮಲ್ಪೆ ಇವರ  ತಮ್ಮ ಸುದೇಶ್ ಎನ್ .ಕರ್ಕೇರಾ(51 ವರ್ಷ)  ಮಲ್ಪೆ ಬಂದರಿನಲ್ಲಿರುವ  ಆಳ ಸಮುದ್ರ ಸಹಕಾರಿ ಸಂಘದ  ಮಂಜುಗಡ್ಡೆ ಸ್ಥಾವರವನ್ನು ಈ ವರ್ಷ ಲೀಸಿಗೆ  ಪಡೆದು ಕೊಂಡಿರುತ್ತಾರೆ. ದಿನಾಂಕ 9/7/2022  ರಂದು ಬೆಳಿಗ್ಗೆ ಸುಮಾರು 10:30 ಗಂಟೆಗೆ   ಸದ್ರಿ ಸಹಕಾರಿ ಸಂಘದ  ಮಂಜುಗಡ್ಡೆ ಸ್ಥಾವರವದಲ್ಲಿ ಇರುವ   ಮಿಶನರಿಗಳನ್ನು   ರಪೇರಿ ಮಾಡುತ್ತಿರುವಾಗ ಆಕಸ್ಮಿಕವಾಗಿ   ಮಿಶನರಿಯಲ್ಲಿ ಹೈ ವೋಲ್ಟೇಜ್  ವಿದ್ಯುತ್ ಪ್ರವಾಹಿಸಿದ್ದು,  ಪರಿಣಾಮ  ಸುದೇಶ್ ರವರ  ಎಡ ಕೈ  ಸುಟ್ಟು ಬಲಕೈ ಬಲ ಕಾಲಿನ ತೊಡೆ , ಹೊಟ್ಟೆಗೆ ತೀವೃತರದ ಸುಟ್ಟ  ಗಾಯ ಗೊಂಡಿದ್ದು ಆತನನ್ನು ಚಿಕತ್ಸೆ ಬಗ್ಗೆ ಆದರ್ಶ ಆಸ್ವತ್ರೆಗೆ  ಒಳ ರೋಗಿಯಾಗಿ ಅಲ್ಲಿ ಸೇರಿದವರು  ದಾಖಲಿಸಿದ್ದು ,ವೈದ್ಯಾಧಿಕಾರಿಯವರು ಹೈ ವೋಲ್ಟೇಜ್  ವಿದ್ಯುತ್ ಪ್ರವಹಿಸಿರುವುದರಿಂದ   ಬೆನ್ನು ಮೂಳೆಮುರಿತ ಉಂಟಾಗಿರುವುದಾಗಿ  ತಿಳಿಸಿರುತ್ತಾರೆ . ಸುದೇಶ .ಎನ್ ಕರ್ಕೆರಾ ರವರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ  ಈ ದಿನ ದಿನಾಂಕ: 25-08-2022  ರಂದು ಬೆಳಿಗ್ಗೆ  3:00  ಗಂಟೆಗೆ  ಚಿಕಿತ್ಸೆ  ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣಾ ಯುಡಿಆರ್‌ ನಂ 45/2022 ಕಲಂ 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬೈಂದೂರು: ಪಿರ್ಯಾದಿ ತಿಮ್ಮಪ್ಪ ವಿ ಪೂಜಾರಿ, ಪ್ರಾಯ; 42 ವರ್ಷ, ತಂದೆ; ವೀರಪ್ಪ ಪೂಜಾರಿ, ವಾಸ; ಮಹಾಸತಿ ನಿಲಯ, ಆಲಂದೂರು, ಯಡ್ತರೆ ಗ್ರಾಮ, ಬೈಂದೂರು ಇವರು ದಿನಾಂಕ 25-08-2022 ರಂದು ಬೆಳಿಗ್ಗೆ ಸಮಯ ಸುಮಾರು 11:10 ಗಂಟೆಗೆ ಶಿರೂರು ಗ್ರಾಮದ ಮುದ್ರಮಕ್ಕಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ಮರದ ಗೆಲ್ಲುಗಳನ್ನು ಕಡಿಯುತ್ತಿರುವಾಗ ಪಿರ್ಯಾಧಿದಾರರ ಮಾವನ ಮಗನಾದ ಸಂಪತ್ ಪ್ರಾಯ 17 ವರ್ಷ ದವನು ತನ್ನ ತಾಯಿಯ ಮನೆಯಾದ ನಿರೊಡಿಗೆ ಹೋಗಲು ಕೊಂಕಣ ರೈಲ್ವೆ ಹಳಿಗಳ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವದನ್ನು ಪಿರ್ಯಾದಿದಾರರು ನೋಡಿದ್ದು, ನಂತರ 11:30 ಗಂಟೆಯ ಸುಮಾರಿಗೆ ನಿರೋಡಿ ಬಳಿ ಎಕ್ಸಪ್ರೆಸ್ ರೈಲು ಒಬ್ಬನಿಗೆ ತಾಗಿ ಸ್ಥಳದಲ್ಲಿ ಮೃತಪಟ್ಟಿರುವದಾಗಿ ವಿಚಾರ ತಿಳಿದು ಪಿರ್ಯಾಧಿದಾರರು ಸ್ಥಳಕ್ಕೆ ಹೋಗಿ ನೋಡಿದಾಗ ಮೃತಪಟ್ಟ ವ್ಯಕ್ತಿಯು ಪಿರ್ಯಾದಿದಾರರ ಮಾವನ ಮಗ ಸಂಪತ್ ಪ್ರಾಯ 17 ವರ್ಷದವನಾಗಿದ್ದು, ಈ ದಿನ ದಿನಾಂಕ; 25-08-2022 ರಂದು  11:20 ಗಂಟೆಯ ಸುಮಾರಿಗೆ ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಪೂರ್ಣ ಎಕ್ಸಪ್ರೆಸ್ ರೈಲು ಸಂಖ್ಯೆ 22150 ನೇಯದು ಕೊಂಕಣ ರೈಲ್ವೆ ಹಳಿಗಳ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂಪತನಿಗೆ ಆಕಸ್ಮಿಕವಾಗಿ ತಾಗಿದ ಪರಿಣಾಮ ರೈಲು ಹಳಿಗಳ ಮಧ್ಯ ಬಿದ್ದು ತಲೆ ಚಿದ್ರಗೊಂಡು, ಕಾಲುಗಳು ಮುಳೆ ಮುರಿತವಾಗಿ ಹಳಿಗಳ ಮಧ್ಯ ಸುಮಾರು 20 ಅಡಿಗಳಷ್ಟು ಆತನ ದೇಹವನ್ನು ಎಳೆದುಕೊಂಡು ಹೋಗಿದ್ದರಿಂದ ಸಂಪತನು ಸ್ಥಳದಲ್ಲಿಯೇ ಮೃತಪಟ್ಟಿರುವದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯುಡಿಅರ್‌ ನಂಬ್ರ 47/2022 ಕಲಂ 174 ಸಿಅರ್‌ಪಿಸಿ.  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 25-08-2022 06:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080