Feedback / Suggestions

ಅಪಘಾತ ಪ್ರಕರಣ

 • ಬ್ರಹ್ಮಾವರ: ದಿನಾಂಕ 23/08/2022 ರಂದು ಪಿರ್ಯಾದಿದಾರಾದ ರಮೇಶ್ ನಾಯಿರಿ (45), ತಂದೆ: ಕೊರಗ ನಾಯರಿ, ವಾಸ: ಕೊಳಂಬೆ, 52ನೇ ಹೇರೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು KA-20-EE-8538 ಮೋಟಾರ್ ಸೈಕಲ್ ನಲ್ಲಿ ಸವಾರಿ ಮಾಡಿಕೊಂಡು ಕುಂದಾಪುರ ದಿಂದ ಬ್ರಹ್ಮಾವರ ಕಡೆಗೆ ರಾಹೆ 66 ರಲ್ಲಿ ಬರುತ್ತಾ ಬೆಳಿಗ್ಗೆ 10:45 ಗಂಟೆಗೆ ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಬಸ್ಸ್‌ ನಿಲ್ದಾಣದ ಜಂಕ್ಷನ್‌  ತಲುಪಿದಾಗ ಬ್ರಹ್ಮಾವರ ಬಸ್ಸ್‌ ನಿಲ್ದಾಣದ ಕಡೆಯಿಂದ ಆರೋಪಿ ಸಾಧು ರವರು ಅವರ KA-21-S-4207ನೇ TVS Vego ಸ್ಕೂಟರ್‌ ನಲ್ಲಿ ಸುಜಾತ ರವರನ್ನು ಸಹಸವಾರಿಣಿಯಾಗಿ ಕುಳ್ಳಿರಿಸಿಕೊಂಡು ನಿರ್ಲಕ್ಷತನದಿಂದ ಸರ್ವೀಸ್‌ ರಸ್ತೆಯಿಂದ ಒಮ್ಮೇಲೆ ರಾಷ್ಟ್ರೀಯ ಹೆದ್ದಾರಿಗೆ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದ ಪರಿಣಾಮ ಪಿರ್ಯಾದಿದಾರರು, ಆರೋಪಿ ಹಾಗೂ ಸಹಸವಾರಿಣಿ ರವರು ತಮ್ಮ ವಾಹನಗಳ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡಕೈ ಮೊಣಗಂಟಿನ ಬಳಿ ಹಾಗೂ ಎಡಕಾಲಿನ ಹಿಮ್ಮಡಿಗೆ ರಕ್ತಗಾಯ  ಹಾಗೂ ಸಹಸವಾರಿಣಿ ಸುಜಾತ ರವರ ಎಡಕೈಯ ಮೊಣಗಂಟಿನ ಬಳಿ ಮೂಳೆ ಮುರಿತದ ಒಳ ಜಖಂ ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 143/2022 ಕಲಂ : 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 •  ಕಾಪು: ಪಿಯಾ೯ದಿದಾರರಾದ ಮಂಜುನಾಥ ಆಚಾರ್ಯ ( 41),  ತಂದೆ : ಜನಾರ್ಧನ ಆಚಾರ್ಯ,  ವಾಸ : ಬಿಜಂಟ್ಲ ಮನೆ,  ಕುಂಜಾರುಗಿರಿ ಅಂಚೆ, ಕುರ್ಕಾಲು ಗ್ರಾಮ ಕಾಪು ತಾಲ್ಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 21/08/2022 ರಂದು ತನ್ನ ಅಣ್ಣ ಸದಾಶಿವ ಆಚಾರ್ಯ ರವರ KA-20-EG-5867 ನೇ ಸ್ಕೂಟರ್‌ನಲ್ಲಿ  ಸಹಸವಾರನಾಗಿ ಕುಳಿತುಕೊಂಡು ಸುಭಾಷನಗರ, ಶಂಕರಪುರ ಮಾರ್ಗವಾಗಿ ಪಾಂಗಾಳ ಕಡೆಗೆ ಹೋಗುತ್ತಿರುವಾಗ ಬೆಳಗ್ಗೆ 11:40 ಗಂಟೆಗೆ ಪಾಂಗಾಳದ ವಿಶ್ವಾಸದ ಮನೆ ದಾಟಿ ಸ್ವಲ್ಪ ದೂರ ಮುಂದಕ್ಕೆ ಹೋಗುತ್ತಿದ್ದಂತೆ, ಪಿರ್ಯಾದಿದಾರರ ಅಣ್ಣ ತನ್ನ ಸ್ಕೂಟರ್‌ನ್ನು ಅತೀ ವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಸ್ಕೂಟರ್‌ನ ನಿಯಂತ್ರಣ ತಪ್ಪಿ, ಸ್ಕೂಟರ್‌ ಸಮೇತ ಪಿರ್ಯಾದಿದಾರರು ಹಾಗೂ ಅದರ ಸವಾರ ರಸ್ತೆಯ ಬದಿಯಲ್ಲಿ  ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಗಾಲಿನ ಮೊಣಗಂಟಿನ ಕೆಳಗೆ ತೀವೃವಾಗಿ ಬಾವು ಬಂದಿದ್ದು, ಸ್ಕೂಟರ್ ಸವಾರಿಗೆ ಯಾವುದೇ ಗಾಯಗಳಾಗಿರುವುದಿಲ್ಲ, ಕೂಡಲೇ ಸ್ಕೂಟರ್ ಸವಾರ ಒಂದು ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಪಿರ್ಯಾದಿದಾರರು ಆಸ್ಪತ್ರೆಗೆ ದಾಖಲಾದ ವೇಳೆ ವೈದ್ಯರು ತನ್ನ ಕಾಲಿನ ಎಕ್ಸ್-ರೇ ಯನ್ನು ತೆಗೆದಿದ್ದು,  ವರದಿಯಲ್ಲಿ ಕಾಲಿನ ಮೂಳೆ ಮುರಿತವಾದ ಬಗ್ಗೆ ವರದಿಯಲ್ಲಿರುತ್ತದೆ. ಪಿರ್ಯಾದಿದಾರರು ಜಾಸ್ತಿ ಗಾಯವಾಗಿರುವುದಿಲ್ಲವೆಂದು ತಿಳಿದು ದೂರು ನೀಡಲು ನೀರಾಕರಿಸಿದ್ದು, ಕಾಲಿನ ಮೂಳೆ ಮುರಿತವಾಗಿ  ಜಾಸ್ತಿ ಗಾಯವಾದ ಬಗ್ಗೆ ಎಕ್ಸ್-ರೇ ವರದಿಯಲ್ಲಿ ಬಂದ ನಂತರ ದೂರು ನೀಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 90/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದಿದಾರರಾದ ಸುಧಾಕರ ಶೆಟ್ಟಿ (41), ತಂದೆ; ಶಿವಪ್ಪ ಶೆಟ್ಟಿ, ವಾಸ; ಶ್ರೀ ಲಕ್ಷ್ಮೀ ಕೃಪಾ ನಿಲಯ, ನೆಲ್ಯಾಡಿ, ತಗ್ಗರ್ಸೆ ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 23/08/2022 ರಂದು 17:30 ಗಂಟೆಗೆ  ಅವರ ಮೋಟಾರು ಸೈಕಲನ್ನು ಉಪ್ಪುಂದ ಶಾಲೆಬಾಗಿಲಿನಲ್ಲಿ ಇರುವ ಸರ್ವೀಸ್ ಸ್ಟೇಷನ್ ನಲ್ಲಿ ವಾಷ್ ಮಾಡಲು ಕೊಟ್ಟು ರಸ್ತೆ ಬದಿಯಲ್ಲಿ ಸ್ನೇಹಿತ ಶಿವಾನಂದನೊಂದಿಗೆ ಮಾತನಾಡುತ್ತಿರುವಾಗ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಓರ್ವ KA-20-AB-3159  ನೇ TATA 510  ನೇ ವಾಹನದ ಚಾಲಕನು ಆತನ ವಾಹನವನ್ನು ರಾಷ್ಟ್ರೀಯ ಹೆದ್ದಾರಿ 66 ರ ಪೂರ್ವ ಬದಿಯ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿರುವಾಗ ಸರ್ವೀಸ್ ಸ್ಟೇಷನ್ ಎದುರು ಒಂದು ದನವು ರಸ್ತೆಗೆ ಓಡಿ ಬಂದ ಕಾರಣ ವಾಹನದ ಚಾಲಕನ ನಿಯಂತ್ರಣ ತಪ್ಪಿ ವಾಹನವು ಪಲ್ಟಿಯಾಗಿ ರಸ್ತೆಯ ಪಕ್ಕದಲ್ಲಿರುವ ಚರಂಡಿಗೆ ಹೋಗಿ ಬಿದ್ದಿದ್ದು, ಪಿರ್ಯಾದಿದಾರರು ಹಾಗೂ ಸ್ನೇಹಿತ ಶಿವಾನಂದರವರು ಅಲ್ಲಿಗೆ ಹೋಗಿ ನೋಡಲಾಗಿ ವಾಹನದಲ್ಲಿ 3 ಜನರು ಇದ್ದು, ಅವರನ್ನು ಉಪಚರಿಸಿ ವಾಹನದ ಚಾಲಕ ಹರ್ಷ ನಿಗೆ ಎಡಕಾಲಿಗೆ ಒಳಜಖಂ ಆಗಿದ್ದು, ಹರೀಶ ರವರಿಗೆ ಎಡಗಾಲು ಹಾಗೂ ಬೆನ್ನಿಗೆ ಒಳಜಖಂ ಹಾಗೂ ತರಚಿದ ಗಾಯ ಆಗಿರುತ್ತದೆ. ಶ್ರೀಧರ ರವರಿಗೆ ಭುಜಕ್ಕೆ ಹಾಗೂ ಬೆನ್ನಿಗೆ ಒಳಜಖಂ ಆಗಿರುತ್ತದೆ. ಗಾಯಗೊಂಡ  ಮೂವರನ್ನು ಅಂಜಲಿ ಆಸ್ಪತ್ರೆ  ಬೈಂದೂರಿಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗಿದ್ದು, ನಂತರ ವಾಹನದ ಮಾಲಕರು ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 170/2022 ಕಲಂ: 279 , 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಶಂಕರನಾರಾಯಣ: ದಿನಾಂಕ 24/08/2022 ರಂದು  16:45  ಗಂಟೆಗೆ  ಆರೋಪಿ  KA-14-EH-. 7625 ನೇ ನಂಬ್ರದ ಮೋಟಾರ್  ಸೈಕಲ್‌ನ್ನು ಬ್ರಹ್ಮಾವರ  ತಾಲೂಕಿನ ಹಿಲಿಯಾಣ  ಗ್ರಾಮದ   ಜಡ್ಡು ಎಂಬಲ್ಲಿ ಹರೀಶ ಎನ್ .ಹೆಚ್ ರವರ ಮನೆ ಎದುರುಗಡೆ  ಗೋಳಿಯಂಗಡಿ  ಕಡೆಯಿಂದ ಅತೀ ವೇಗ ಹಾಗೂ  ಅಜಾರೂಕತೆಯಿಂದ  ಚಲಾಯಿಸಿಕೊಂಡು ಬಂದು   ರಸ್ತೆ  ದಾಡುತ್ತಿದ್ದ  ಪಿರ್ಯಾದಿದಾರರಾದ ಸುರೇಶ ಎನ್. ಹೆಚ್ (40), ತಂದೆ:ಆನಂದ ನಾಯಕ, ವಾಸ: ಹಿಲಿಯಾಣ ಗ್ರಾಮ  ಬ್ರಹ್ಮಾವರ  ತಾಲೂಕು ಇವರ ಸಹೋದರನ ಮಗ ಅಮೋಘ  ನಾಯಕ್ (6 ) ಇವರಿಗೆ  ಡಿಕ್ಕಿ  ಹೊಡೆದ ಪರಿಣಾಮ ಅಮೋಘ  ನಾಯಕ್‌‌  ರವರು ರಸ್ತೆಯ ಮೇಲೆ ಬಿದ್ದ ಪರಿಣಾಮ  ಕೈ ಕಾಲುಗಳಿಗೆ ಹಾಗೂ ತಲೆಗೆ ರಕ್ತ ಗಾಯವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಕೊಟೇಶ್ವರ  ಡಾ. ಎನ್  ಆರ್ ಆಚಾರ್ಯ  ಅಸ್ಪತ್ರೆಯಲ್ಲಿ   ದಾಖಲಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 82/2022
   ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ನರಸಿಂಹ ದೇವಾಡಿಗ (58), ತಂದೆ: ಗಣಪ ದೇವಾಡಿಗ, ವಾಸ: ನಂದಾದೀಪ ನಾವುಂದ ಗ್ರಾಮ ಬೈಂದೂರು ತಾಲೂಕು ಇವರು ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ರಾಗಿದ್ದು ಪಿರ್ಯಾದಿದಾರರಿಗೆ ದಿನಾಂಕ 24/08/2022 ರಂದು ಸಂಜೆ 5;00 ಗಂಟೆಗೆ ನಾವುಂದ ಗ್ರಾಮದ ಹೆರೂರು ಅರೆಹೊಳೆ ಸೇತುವೆಯ ಅಡಿಯಲ್ಲಿನ ಖಾಲಿ ಜಾಗದಲ್ಲಿ ಅರೆಹೊಳೆ ನಾವುಂದ ಪರಿಸರದಲ್ಲಿ ತಿರುಗಾಡುತ್ತಿದ್ದ ಸುಮಾರು  50 ರಿಂದ 60 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ  ಮಲಗಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವುದಾಗಿ ವಿಚಾರ ತಿಳಿದು ಬಂದ ಮೇರೆಗೆ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಲಾಗಿ ಸುಮಾರು 50 ರಿಂದ 60 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಅನ್ನ ಆಹಾರವಿಲ್ಲದೇ  ಅಥವಾ ಯಾವುದೋ ಖಾಯಿಲೆಯಿಂದ  ಮಲಗಿದ್ದಲ್ಲಿಯೇ 2 ದಿನಗಳ ಹಿಂದೆ ಮೃತಪಟ್ಟಿರುವಂತೆ ಕಂಡು ಬಂದಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 46/2022 ಕಲಂ:  174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  

ಇತರ ಪ್ರಕರಣ

 • ಮಲ್ಪೆ: ದಿನಾಂಕ 19/08/2022 ರಂದು ಸಕ್ತಿವೇಲು.ಈ,  ಪೊಲೀಸ್ ಉಪನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ ಇವರು  ರೌಂಡ್ಸ ಕರ್ತವ್ಯದಲ್ಲಿರುವಾಗ ಕೊಡವೂರು  ಗ್ರಾಮದ ಕಲ್ಮಾಡಿ ಜಂಕ್ಷನ್ ಬಳಿ ಒಬ್ಬ ವ್ಯಕ್ತಿ ನಿಂತಿದ್ದು ಆತನನ್ನು  ವಿಚಾರಿಸಲಾಗಿ ಆತನ ತನ್ನ ಹೆಸರು   ನಿಯಾಜ್ ಅಹಮ್ಮದ್  ಎಂದು ತಿಳಿಸಿದ್ದು,  ಆತನ  ಬಾಯಿಯಿಂದ ಗಾಂಜಾದಂತಹ ವಾಸನೆ ಬಂದಿರುತ್ತದೆ. ಆತನು ಗಾಂಜಾದಂತಹ ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಅನುಮಾನ ಇದ್ದು ಆತನನ್ನು  ವೈದ್ಯಕೀಯ ತಪಾಸಣೆ ಬಗ್ಗೆ  ಪ್ರೊಫೆಸರ್ ಅಂಡ್ ಹೆಡ್  ಕೆಎಂಸಿ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದ್ದು ಪರೀಕ್ಷಿಸಿದ ವೈದ್ಯರು ನಿಯಾಜ್ ಅಹಮ್ಮದ್  ಗಾಂಜಾ ಸೇವಿಸಿರುವ ಬಗ್ಗೆ ದಿನಾಂಕ 24/8/2022 ರಂದು ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 70/2022 ಕಲಂ: 27(B) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ದಿನಾಂಕ 22/08/2022 ರಂದು ಪುರುಷೋತ್ತಮ ಎ, ಪೊಲೀಸ್ ಉಪನಿರೀಕ್ಷಕರು,  ಪಡುಬಿದ್ರಿ ಪೊಲೀಸ್ ಠಾಣೆ ಇವರು ರೌಂಡ್ಸ್‌ ನಲ್ಲಿರುವಾಗ ಕಾಪು ತಾಲೂಕು ನಡ್ಸಾಲು  ಗ್ರಾಮದ  ಕಂಚಿನಡ್ಕ ಸುಬ್ಬಪ್ಪನ ಕಾಡು ಎಂಬಲ್ಲಿ ಮೊಹಮ್ಮದ್ ತೌಫೀಕ್ @ ತೌಸೀಫ್ ಎಂಬಾತ ಯಾವುದೋ ಅಮಲಿನಲ್ಲಿದ್ದವನಂತೆ ತೂರಾಡುತ್ತಿದ್ದು,  ಯಾವುದೋ   ಮಾದಕ ಪದಾರ್ಥ ಸೇವಿಸಿರುವ ಬಗ್ಗೆ   ಅನುಮಾನಗೊಂಡು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು,  ಮೊಹಮ್ಮದ್ ತೌಫೀಕ್ @  ತೌಸೀಫ್ ಮಾದಕ ವಸ್ತು ಗಾಂಜಾ ಸೇವಿಸಿರುವುದಾಗಿ ದಿನಾಂಕ 24/08/2022 ರಂದು ವೈದ್ಯರು ದೃಢ ಪತ್ರ ನೀಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 104/2022 ಕಲಂ: 27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಿರ್ವಾ: ದಿನಾಂಕ 23/08/2022 ರಂದು ರಾಘವೇಂದ್ರ  .ಸಿ,  ಪೊಲೀಸ್‌ ಉಪನಿರೀಕ್ಷಕರು,  ಶಿರ್ವಾ ಪೊಲೀಸ್‌ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುತ್ತಾ 92ನೇ ಹೇರೂರು ಬಳಿ ಓರ್ವ ವ್ಯಕ್ತಿ  ನಿಂತಿದ್ದು, ಆತನು ಮೇಲ್ನೋಟಕ್ಕೆ ಯಾವುದೋ ಅಮಲು ಪದಾರ್ಥ ಸೇವನೆ ಮಾಡಿರುವುದು ಕಂಡು ಬಂದಿದ್ದು ಅತನ ಹೆಸರು  ಕೇಳಲಾಗಿ ಸಚ್ಚಿನ್ (27) ಎಂದು ತಿಳಿಸಿದ್ದು, ಆತನನ್ನು ವಶಕ್ಕೆ  ಪಡೆದು  ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಪಾದಿತನು ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿ ದಿನಾಂಕ 24/08/2022 ರಂದು ಬಂದಿರುತ್ತದೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 62/2022, ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಿರ್ವಾ: ದಿನಾಂಕ 23/08/2022 ರಂದು ರಾಘವೇಂದ್ರ  .ಸಿ,  ಪೊಲೀಸ್‌ ಉಪನಿರೀಕ್ಷಕರು,  ಶಿರ್ವಾ ಪೊಲೀಸ್‌ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುತ್ತಾ 92ನೇ ಹೇರೂರು ಬಳಿ ಓರ್ವ ವ್ಯಕ್ತಿ ನಿಂತಿದ್ದು, ಆತನು ಮೇಲ್ನೋಟಕ್ಕೆ ಯಾವುದೋ ಅಮಲು ಪದಾರ್ಥ ಸೇವನೆ ಮಾಡಿರುವುದು ಕಂಡು ಬಂದಿದ್ದು,  ಅತನ ಹೆಸರು  ಕೇಳಲಾಗಿ ಅಲ್ವಿನ್ ಅಲ್ಮೇಡಾ (27)  ಎಂದು ತಿಳಿಸಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಪಾದಿತನು ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿ 24/08/2022 ರಂದು ಬಂದಿರುತ್ತದೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63/2022, ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.  
 • ಶಿರ್ವಾ: ದಿನಾಂಕ 23/08/2022 ರಂದು ರಾಘವೇಂದ್ರ .ಸಿ,  ಪೊಲೀಸ್‌ ಉಪನಿರೀಕ್ಷಕರು,  ಶಿರ್ವಾ ಪೊಲೀಸ್‌ ಠಾಣೆ ಇವರು  ರೌಂಡ್ಸ್‌ ಕರ್ತವ್ಯದಲ್ಲಿರುತ್ತಾ 92ನೇ ಹೇರೂರು ಬಳಿ ಓರ್ವ ವ್ಯಕ್ತಿ ನಿಂತಿದ್ದು, ಆತನು ಮೇಲ್ನೋಟಕ್ಕೆ ಯಾವುದೋ ಅಮಲು ಪದಾರ್ಥ ಸೇವನೆ ಮಾಡಿರುವುದು ಕಂಡು ಬಂದಿದ್ದು,  ಅತನ ಹೆಸರು ಕೇಳಲಾಗಿ ಶಿವಪ್ರಸಾದ (26) ಎಂದು ತಿಳಿಸಿದ್ದು, ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಪಾದಿತನು ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿ ದಿನಾಂಕ 24/08/2022 ರಂದು ಬಂದಿರುತ್ತದೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 60/2022, ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಿರ್ವಾ: ದಿನಾಂಕ 23/08/2022 ರಂದು ರಾಘವೇಂದ್ರ .ಸಿ,  ಪೊಲೀಸ್‌ ಉಪನಿರೀಕ್ಷಕರು,  ಶಿರ್ವಾ ಪೊಲೀಸ್‌ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುತ್ತಾ 92ನೇ ಹೇರೂರು ಬಳಿ ಓರ್ವ ವ್ಯಕ್ತಿ  ನಿಂತಿದ್ದು, ಆತನು ಮೇಲ್ನೋಟಕ್ಕೆ ಯಾವುದೋ ಅಮಲು ಪದಾರ್ಥ ಸೇವನೆ ಮಾಡಿರುವುದು ಕಂಡು ಬಂದಿದ್ದು,  ಅತನ ಹೆಸರು  ಕೇಳಲಾಗಿ ನಬಿಲ್ ಸಾಮ್ಯ (26) ಎಂದು ತಿಳಿಸಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಪಾದಿತನು ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿ ದಿನಾಂಕ 24/08/2022 ರಂದು ಬಂದಿರುತ್ತದೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾದ ಕ್ರಮಾಂಕ 61/2022, ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ದಿನಾಂಕ 22/08/2022 ರಂದು ಮಧು ಬಿ.ಇ, ಪೊಲೀಸ್‌ ಉಪ ನಿರೀಕ್ಷಕರು, ಕೋಟ ಪೊಲೀಸ್‌ ಠಾಣೆ ಇವರು  ಸಿಬ್ಬಂದಿಯವರೊಂದಿಗೆ ಮಣೂರು ಗ್ರಾಮದಲ್ಲಿ ಹಗಲು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಬ್ರಹ್ಮಾವರ ತಾಲೂಕು ಮಣೂರು ಗ್ರಾಮದ ಬಾಳೆಬೆಟ್ಟು ಬಸ್‌ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕನು ಗಾಂಜಾ ಮಾದಕ ದ್ರವ್ಯವನ್ನು ಸೇವನೆ ಮಾಡಿ ಅಮಲಿನಲ್ಲಿರುವುದಾಗಿ ಮಾಹಿತಿ ದೊರೆತಂತೆ ಮಣೂರು ಗ್ರಾಮದ ಬಾಳೆಬೆಟ್ಟು ಬಸ್‌ನಿಲ್ದಾಣದ ಬಳಿ ಹೋಗಿ ಆಪಾದಿತ ನಿತಿನ್‌ ಆಚಾರಿ (31) ಎಂಬಾತನನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆ ಬಗ್ಗೆ ಫೊರೆನ್ಸಿಕ್‌ ಮೆಡಿಸಿನ್‌ ವಿಭಾಗ, ಕೆ.ಎಂ.ಸಿ. ಆಸ್ಪತ್ರೆ ಮಣಿಪಾಲ ಇಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು,  ಆಪಾದಿತ ನಿತಿನ್‌ ಆಚಾರಿ ನಿಷೇಧಿತ ಗಾಂಜಾ (Marijuana) ಎಂಬ ಮಾದಕ ವಸ್ತುವನ್ನು ಸೇವಿಸಿರುವುದು ಧೃಡಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 135/2022 ಕಲಂ: 27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿದಾರರಾದ ಸುರೇಶ್ (39), ತಂದೆ: ಸುಬ್ಬ, ವಾಸ: ಶ್ರೀ ದುರ್ಗಾ ನಾಯಕ್ ಕಂಪೌಂಡ್, ಅಚ್ಚಡ, ಕುರ್ಕಾಲು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 05/10/2020 ರಿಂದ ಕಾಪು ತಾಲೂಕು ಮುದರಂಗಡಿ ಗ್ರಾಮದ ಮುದರಂಗಡಿ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದು, ಆಪಾದಿತರಾದ ಶರತ್ ಶೆಟ್ಟಿ, ಶ್ರೀಮತಿ ಯೋಗಿನಿ ಶೆಟ್ಟಿ ಮತ್ತು ಶಿವರಾಮ ಭಂಡಾರಿಯವರು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಪಿರ್ಯಾದಿದಾರರ ಮೇಲೆ ಒತ್ತಡ ಹೇರಿ, ಕಾನೂನುಬಾಹಿರ ಕೃತ್ಯವೆಸಗಲು ಪ್ರೇರೇಪಿಸಿರುವುದನ್ನು ಒಪ್ಪದಿರುವಾಗ ದಿನಾಂಕ 03/12/2021, 21/03/2022 ರಂದು ಪಿರ್ಯಾದಿದಾರರ ಮೇಲೆ ಸುಳ್ಳುದೂರುಗಳನ್ನು ನೀಡಿ ಕಾರ್ಯ ಚಟುವಟಿಕೆಗಳ ಮೇಲೆ ಇಲಾಖಾಧಿಕಾರಿಗಳು ತನಿಖೆ ನಡೆಸುವಂತೆ ಮಾಡಿದ್ದು, ಈ ಸಂಬಂಧ ದಿನಾಂಕ 30/04/2022 ರಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ, ಸಹಾಯಕ ಕಾರ್ಯದರ್ಶಿ , ಅಧೀಕ್ಷಕರು, ಅಭಿವೃದ್ಧಿ ಶಾಖೆ ರವರು ಮುದರಂಗಡಿ ಗ್ರಾಮ ಪಂಚಾಯತಿಗೆ ಆಗಮಿಸಿ ನಡೆಸಿದ ತನಿಖೆಯಲ್ಲಿ ಪಿರ್ಯಾದಿದಾರರ ಮೇಲಿನ ಆರೋಪ ಸುಳ್ಳೆಂದು ಸಾಬೀತಾಗಿರುತ್ತದೆ. ನಂತರದ ದಿನಗಳಲ್ಲಿ 1 ನೇ ಆಪಾದಿತ ಶರತ್ ಶೆಟ್ಟಿ, ಉಪಾಧ್ಯಕ್ಷರು, ಮುದರಂಗಡಿ  ಗ್ರಾಮ ಪಂಚಾಯತಿ ಇವರು ಪಿರ್ಯಾದಿದಾರರಿಗೆ ನಿನ್ನ ಮಾತನ್ನು ನಾವು ಯಾಕೆ ಕೇಳಬೇಕು?, ನೀನು ನಾನು ಮತ್ತು 2 ನೇ ಆಪಾದಿತ ಶ್ರೀಮತಿ ಯೋಗಿನಿ ಶೆಟ್ಟಿ, ಅಧ್ಯಕ್ಷರು, ಮುದರಂಗಡಿ  ಗ್ರಾಮ ಪಂಚಾಯತಿ ಇವರು ಹೇಳಿದ ಹಾಗೆ ಕೇಳಬೇಕು?, ನಮ್ಮ ಮಾತಿಗೆ ಬೆಲೆ ಕೊಡದಿದ್ದರೆ, ಸಿಬ್ಬಂದಿಗಳ ವೇತನ, ಸಾದಿಲ್ವಾರು ಬಿಲ್ಲುಗಳಿಗೆ ಸಹಿ ಹಾಕಲುಬಿಡುವುದಿಲ್ಲ. ಇಷ್ಟಇದ್ದರೆ ಕೆಲಸ ಮಾಡು,ಬೇರೆ ಅಧಿಕಾರಿಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಮತ್ತು ಗ್ರಾಮ ಪಂಚಾಯತಿಗೆ ನಾಳೆಯಿಂದ ಬೀಗಹಾಕುತ್ತೇವೆ ಎಂದು ಬೆದರಿಸಿರುತ್ತಾರೆ. ನಂತರ ದಿನಾಂಕ 28/06/2022 ರಂದು 1ನೇ ಆಪಾದಿತನು ಗ್ರಾಮ ಪಂಚಾಯತಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾನಗರ ಇಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಕೂಡಾ ಪಿರ್ಯಾದಿದಾರರನ್ನು ಉದ್ದೇಶಿಸಿ, ಈತನೊಂದಿಗೆ ನನಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅವಮಾನ ಮಾಡಿರುತ್ತಾರೆ. ನಂತರ 1ನೇ ಆಪಾದಿತರು ತನ್ನ ರಾಜೀನಾಮೆ ಪತ್ರದಲ್ಲಿ ಆಕ್ಷೇಪಾರ್ಹ ಸಂಗತಿಗಳನ್ನು ಉಲ್ಲೇಖಿಸಿ ತಾನೊಬ್ಬ ಅಧಿಕಾರಿಯಾಗಿದ್ದರೂ ಹೀಯಾಳಿಸಿ ಏಕವಚನದಲ್ಲಿ ನಿಂದಿಸಿ 2 ನೇ ಆಪಾದಿತರಿಗೆ ಸಲ್ಲಿಸಿರುತ್ತಾರೆ. ತದನಂತರ ಆಪಾದಿತರೆಲ್ಲರೂ ಪಿರ್ಯಾದಿದಾರರನ್ನು ಗ್ರಾಮ ಪಂಚಾಯತಿಯಿಂದ ಓಡಿಸುವುದಾಗಿ ಸಾರ್ವಜನಿಕವಾಗಿ ಹೇಳಿಕೊಂಡು ಎರಡೆರಡು ಬಾರಿ ವರ್ಗಾವಣೆ ಆದೇಶವನ್ನು ಮಾಡಿಸಿರುತ್ತಾರೆ. ಅಲ್ಲದೇ ಪಿರ್ಯಾದಿದಾರರನ್ನು ಗ್ರಾಮ ಪಂಚಾಯತಿಯಲ್ಲಿ ಸೇವೆ ಮಾಡಲು ಬಿಡುವುದಿಲ್ಲ ಎನ್ನುವ ದುರುದ್ದೇಶದಿಂದ ಇತರೆ 7 ಜನ ಸದಸ್ಯರನ್ನು ಒಟ್ಟುಗೂಡಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಎದುರು ಪ್ರತಿಭಟನೆ ನಡೆಸಿ ಮೌಖಿಕ ದೂರು ನೀಡಿದಂತೆ ದಿನಾಂಕ 22/08/2022 ರಂದು ಕಾಪು ತಾಲೂಕು ಪಂಚಾಯತಿಗೆ ನಿಯೋಜನೆ ಆದೇಶ ಮಾಡಿಸಿರುತ್ತಾರೆ. ಆರೋಪಿತರ ಈ ಕೃತ್ಯದಿಂದ ಪಿರ್ಯಾದಿದಾರರು ಸಾಕಷ್ಟು ನೋವು ಅನುಭವಿಸಿ, ಪಿರ್ಯಾದಿದಾರರ ಮೇಲೆ ಮೇಲಾಧಿಕಾರಿಗಳಿಗೆ ದ್ವೇಷಪೂರಿತ ಹಗೆತನ ಸಾಧಿಸುವ ಮತ್ತು ವರ್ಗಾವಣೆ ಮಾಡಬೇಕೆನ್ನುವ ಉದ್ದೇಶದಿಂದ ದಿನಾಂಕ 05/10/2020 ರಿಂದ 23/08/2022 ರವರೆಗೆ ಪದೇ ಪದೇ ಸುಳ್ಳು ದೂರುಗಳನ್ನು ನೀಡುತ್ತಾ ತೊಂದರೆ ನೀಡಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 105/ 2022 ಕಲಂ: 3(1)(p), 3(1)(q),3(1)(r), 3(1)(u) SC/ST (POA) ACT and 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಮಣಿಪಾಲ: ದಿನಾಂಕ 23/08/2022 ರಂದು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ್‌ ವಂದಲಿ‌ ಇವರು  ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ ಅಲೆವೂರು ಗ್ರಾಮದ ಶೀಂಬ್ರಾ ಪ್ರಗತಿ ನಗರದ ಬಳಿ ಸಾರ್ವಜನಿಕ ಸ್ಥಳದಲ್ಲಿ ನಾಗೇಶ ಮಡಿವಾಳ (29) ಎಂಬಾತ ಅಮಲಿನಲ್ಲಿರುವುದು ಕಂಡು ಬಂದಿದ್ದು, ಆತನು ಗಾಂಜಾವನ್ನು ಸೇವಿಸಿರುವ ಬಗ್ಗೆ ಅನುಮಾನ ಬಂದ ಮೇರೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿ  ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಗಳು ದಿನಾಂಕ 24/08/2022 ರಂದು ದೃಢಪತ್ರ ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 112/2022 ಕಲಂ: 27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ದಿನಾಂಕ 23/08/2022 ರಂದು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ್‌ ವಂದಲಿ‌ ಇವರು ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ ರೌಂಡ್ಸ್‌ ಕರ್ತವ್ಯದಲ್ಲಿದ್ದಾಗ ಅಲೆವೂರು ಗ್ರಾಮದ ಶೀಂಬ್ರಾ ಪ್ರಗತಿ ನಗರದ ಬಳಿ ಸಾರ್ವಜನಿಕ ಸ್ಥಳದಲ್ಲಿ ತನ್ಸಿಲ್‌ (26) ಎಂಬಾತ ಅಮಲಿನಲ್ಲಿರುವುದು ಕಂಡು ಬಂದಿದ್ದು, ಆತನು ಗಾಂಜಾವನ್ನು ಸೇವಿಸಿರುವ ಬಗ್ಗೆ ಅನುಮಾನ ಬಂದ ಮೇರೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿ  ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಗಳು ದಿನಾಂಕ 24/08/2022 ರಂದು ದೃಢಪತ್ರ ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 113/2022 ಕಲಂ: 27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

           


Last Updated: 25-08-2022 10:26 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080