ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು:

 • ಉಡುಪಿ: ಪಿರ್ಯಾದಿ  ಸುರೇಶ.ಯು ಕೆ(61) ತಂದೆ: ದಿ.ಕೃಷ್ಣ ಉಪಾಧ್ಯ ವಾಸ: ಮನೆ ನಂಬ್ರ 2-14 AB “ಸೀತಾಕೃಷ್ಣ” ಮಜ್ಜಿಗೆಪಾದೆ ಕಿದಿಯೂರು ಅಂಬಲಪಾಡಿ ಗ್ರಾಮ ಇವರ ಅಣ್ಣ ಶ್ರೀಪತಿ ಯು ಕೆ(63) ರವರು   ದಿನಾಂಕ: 22-08-2021 ರಂದು ತನ್ನ  ಬಾಬ್ತು ಮೋಟಾರ್ ಸೈಕಲ್ ನಂಬ್ರ KA 20 EP 2579 ನೇದನ್ನು ಅಂಬಲಪಾಡಿ ಜಂಕ್ಷನ್ ಕಡೆಯಿಂದ ಕಿದಿಯೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ, ಸಮಯ ಸುಮಾರು ರಾತ್ರಿ 8:00 ಗಂಟೆಗೆ ಅಂಬಲಪಾಡಿ ಗ್ರಾಮದ ಮಜ್ಜಿಗೆಪಾದೆ ಜಂಕ್ಷನ್ ಬಳಿ ಮನೆಕಡೆಗೆ ಹೋಗುವರೇ ಇಂಡಿಕೇಟರ್ ಹಾಕಿ ಬಲಕಡೆಗೆ ತಿರುಗಿಸುತ್ತಿದ್ದ ಸಮಯ  ಎದುರುಗಡೆಯಿಂದ ಅಂದರೆ ಕಿದಿಯೂರು ಕಡೆಯಿಂದ ಅಂಬಲಪಾಡಿ ಕಡೆಗೆ KA 20 EH 4595 ನೇ ಮೋಟಾರ್ ಸೈಕಲ್ ಸವಾರ ಕಿರಣ  ಎಂಬಾತ ತನ್ನ ಮೋಟಾರ್ ಸೈಕಲ್ ನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಪಿರ್ಯಾದಿದಾರರ ಅಣ್ಣ ಶ್ರೀಪತಿ ಯು ಕೆ ರವರ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಶ್ರೀಪತಿ ಯು ಕೆ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಎಡಕಾಲಿನ ಮೂಳೆ ಮುರಿತ ಉಂಟಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 50/2021 ಕಲಂ: 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ:

 • ಗಂಗೊಳ್ಳಿ: ದಿನಾಂಕ 24.08.2021 ರಂದು ತ್ರಾಸಿ ಗ್ರಾಮದ ತ್ರಾಸಿ ಬೀಚ್‌ ಬಳಿ ಪಾರ್ಕ್‌ ನಲ್ಲಿ ರವಿರಾಜ ಪ್ರಾಯ 46 ವರ್ಷ ಎಂಬವರು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಗಂಗೊಳ್ಳಿ ಪೊಲೀಸ್ ಠಾಣಾ ಪಿ.ಎಸ್‌.ಐ ರವರು ಠಾಣಾ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ ಮಾನ್ಯ ಪೊಲೀಸ್‌ ಉಪಾಧೀಕ್ಷಕರು ಕುಂದಾಪುರ ಉಪವಿಭಾಗ ಹಾಗೂ ಕುಂದಾಪುರ ತಾಲೂಕು ದಂಡಾಧಿಕಾರಿಯವರು ತ್ರಾಸಿ ಗ್ರಾಮ ಪಂಚಾಯತ್‌ ಗ್ರಾಮ ಲೆಕ್ಕಿಗರು ಹಾಗೂ  ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಪಂಚರನ್ನಾಗಿ ಕಳುಹಿಸಿದ ಮೇರೆಗೆ ಪಂಚರ ಸಮಕ್ಷಮದಲ್ಲಿ ಹೋಗಿ 17:45 ಗಂಟೆಗೆ ಧಾಳಿ ನಡೆಸಿ ಆಪಾದಿತನನ್ನು ವಶಕ್ಕೆ ಪಡೆದು ಆಪಾದಿತನಿಂದ ಅಂದಾಜು 3000/-ರೂ ಮೌಲ್ಯದ ಒಟ್ಟು 100 ಗ್ರಾಂ ತೂಕದ ಗಾಂಜಾ, ಚಿಕ್ಕಚಿಕ್ಕ ಪ್ಲಾಸ್ಟಿಕ್‌ ಜಿಪ್‌ ಕವರ್‌-10, ಹಾಗೂ ನಗದು 380/-ರೂ ನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ  78/2021 ಕಲಂ 8(ಸಿ), 20(ಬಿ),(ii)(ಎ) ಎನ್‌.ಡಿ.ಪಿ.ಎಸ್ ಕಾಯ್ದೆ-1985 ಯಂತೆ ಪ್ರಕರಣ ದಾಖಲಿಸಲಾಗಿದೆ. 

 ಅಸ್ವಾಭಾವಿಕ ಮರಣ ಪ್ರಕರಣಗಳು

 • ಕಾಪು: ಪಿರ್ಯಾದಿದಾರರ ಅಣ್ಣ ಸದಾನಂದ ಪ್ರಾಯ 74 ವರ್ಷ ರವರಿಗೆ ಮದುವೆ ಆಗದೇ ಇದ್ದು ಸುಮಾರು 20 ವರ್ಷಗಳಿಂದ ವಿಪರೀತ ಶರಾಬು ಕುಡಿಯುವ ಅಭ್ಯಾಸ ಹೊಂದಿದ್ದು, ಪಿರ್ಯಾದಿದಾರರು ದಿನಾಂಕ 24.08.2021 ಬೆಳಗ್ಗೆ 07.00 ಗಂಟೆಗೆ ಅಣ್ಣ ಸದಾನಂದ ರವರಿಗೆ ಟೀ ತಿಂಡಿ ಕೊಟ್ಟು ಕೆಲಸಕ್ಕೆ ಹೋಗಿದ್ದು ಎಂದಿನಂತೆ ಕೆಲಸ ಮುಗಿಸಿ ಸಂಜೆ 5.00 ಗಂಟೆಗೆ ಮನೆಗೆ ಬಂದು ನೋಡುವಾಗ ಮನೆಯ ಬಾಗಿಲು ತೆರೆದಿದ್ದು, ಚಾವಡಿಯ ಪೂರ್ವ ಬದಿಯಲ್ಲಿ ನೋಡುವಾಗ ಪಿರ್ಯಾದಿದಾರರ ಅಣ್ಣ ಸದಾನಂದ ರವರು ನೈಲನ್ ಹಗ್ಗವನ್ನು ಕುತ್ತಿಗೆಗೆ ಕಟ್ಟಿಕೊಂಡು ಇನ್ನೊಂದು ತುದಿಯನ್ನು  ಮಾಡಿನ ಪಕ್ಕಾಸಿಗೆ ಕಟ್ಟಿ ನೇಣು ಬಿಗಿದುಕೊಂಡು ನೇತಾಡುತ್ತಿದ್ದು ಪಿರ್ಯಾದಿದಾರರು ಕೂಡಲೇ ಗಾಬರಿಗೊಂಡು ನೆರೆಮನೆಯವರನ್ನು ಕರೆದು ನೈಲಾನ್ ಹಗ್ಗವನ್ನು ಬಿಚ್ಚಿ ಅಣ್ಣನನ್ನು ಕೆಳಗಿಳಿಸಿ ನೋಡುವಾಗ ಅಣ್ಣ ಮಾತನಾಡದೇ ಇದ್ದು ಕೂಡಲೇ ಪಿರ್ಯಾದಿದಾರರು ಒಂದು ವಾಹನದಲ್ಲಿ ಸ್ಥಳೀಯರ ಸಹಾಯದಿಂದ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು  ಹೋಗಿದ್ದು, ಪರೀಕ್ಷಿಸಿದ ಅಲ್ಲಿನ ವೈದ್ಯರು ರಾತ್ರಿ 8.00 ಗಂಟೆಗೆ ಪಿರ್ಯಾದಿದಾರರಿಗೆ ಅಣ್ಣ ಸದಾನಂದ ರವರು ಈಗಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಪಿರ್ಯಾದಿದಾರರ ಅಣ್ಣನಿಗೆ ವಿಪರೀತ ಶರಾಬು ಕುಡಿಯುವ ಅಭ್ಯಾಸ ಇದ್ದು, ಅಲ್ಲದೇ ಇತ್ತೀಚೆಗೆ ಹೊಟ್ಟೆನೋವು ಕೂಡ ಇದ್ದು, ಇದೆ ವಿಷಯದಲ್ಲಿ ಖಿನ್ನತೆಗೆ ಒಳಗಾಗಿ  ದಿನಾಂಕ 24.08.2021 ರಂದು ಬೆಳಗ್ಗೆ 07.00 ಗಂಟೆಯಿಂದ ಸಂಜೆ 5.30 ಗಂಟೆಯ ನಡುವಿನ ವೇಳೆಯಲ್ಲಿ ಮನೆಯ ಮಾಡಿನ ಪಕ್ಕಾಸಿಗೆ ನೈಲಾನ್ ಹಗ್ಗವನ್ನು ಕಟ್ಟಿಕೊಂಡು ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತ ಪಟ್ಟಿರುವುದಾಗಿದೆ . ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಬಗ್ಗೆ ಕಾಪು ಠಾಣಾ ಯು.ಡಿ.ಆರ್‌.ಸಂಖ್ಯೆ: 29/2021 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಬ್ರಹ್ಮಾವರ: ಪಿರ್ಯಾದಿ ಸಂತೋಷ, ತಂದೆ: ಗಣಪತಿ ಆಚಾರ್ಯ, ವಾಸ: ಮುಗ್ಗೇರಿ, ಹಾವಂಜೆ  ಇವರ ತಂದೆ ಗಣಪತಿ ನಾಯಕ್‌ರವರಿಗೆ ಸುಮಾರು 4 ತಿಂಗಳ ಹಿಂದೆ ಕಟ್ಟಿಗೆ ಒಡೆಯುವ ಸಮಯ ಕಬ್ಬಿಣದ ಚೇಣು ಎಡಕಾಲಿನ ಮೊಣಗಂಟಿಗೆ ಬಡಿದು ಮೊಣಗಂಟಿನ ಮೂಳೆ ಮುರಿತ ಉಂಟಾದವರಿಗೆ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗದೇ  ನಡೆದಾಡಲು ಕೂಡ ಆಗದೇ ಇದ್ದು, ಇದರಿಂದ ಮನನೊಂದ ಗಣಪತಿ ನಾಯಕ್‌ರವರು ಈ ದಿನ ದಿನಾಂಕ:24.08.2021ರಂದು ಮಧ್ಯಾಹ್ನ 12:00 ಗಂಟೆಯಿಂದ ಸಂಜೆ 5:15 ಗಂಟೆಯ ಮಧ್ಯಾವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯ ಅಡುಗೆ ಕೋಣೆಯಲ್ಲಿ ಅಡುಗೆ ಕೋಣೆಯ ಮರದ ಜಂತಿಗೆ ನೈಲಾನ್‌ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದವರನ್ನು ಮನೆಗೆ ಬಂದ ಅವರ ಮಗ ರಾಮಕೃಷ್ಣನು ಕಂಡು ಅವರನ್ನು ನೇಣಿನಿಂದ ಬಿಡಿಸಿ ಕೆಳಗೆ ಇಳಿಸಿದ್ದು, ಬಳಿಕ ಪಿರ್ಯಾದಿದಾರರು ಹಾಗೂ ಸತೀಶರವರು ಚಿಕಿತ್ಸೆಯ ಬಗ್ಗೆ 108 ಅಂಬುಲೆನ್ಸ್‌ನ್ನಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರೀಕ್ಷಿಸಿದ ವೈದ್ಯಾಧಿಕಾರಿಯವರು ಗಣಪತಿ ನಾಯಕ್‌‌ರವರು ಮೃತಪಟ್ಟಿರುವುದಾಗಿ ತಿಳಿಸಿದ್ದಾಗಿದೆ ಎಂಬಿತ್ಯಾದಿ. ಈ ಬಗ್ಗೆ ಬ್ರಹ್ಮಾವರ ಠಾಣಾ ಯು.ಡಿ.ಆರ್‌.ಸಂಖ್ಯೆ: 51/2021 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 25-08-2021 10:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080