ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ:  ದಿನಾಂಕ 24/07/2022 ರಂದು ಪಿರ್ಯಾದಿದಾರರಾದ ರಾಘವೇಂದ್ರ (33), ತಂದೆ:  ಸೋಮ ನಾಯ್ಕ, ವಾಸ: ನಿಸರ್ಗ ನಿಲಯ, ವಿವೇಕ ನಗರ, ಚಾಂತಾರು, ಚಾಂತಾರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ತನ್ನ KA-20-EF-0899 ನೇ ಹೊಂಡಾ ಫ್ಯಾಷನ್ ಪ್ರೋ ಮೋಟಾರ್ ಸೈಕಲ್‌ನಲ್ಲಿ ಪೇತ್ರಿಯ ಸುಜಿತ್ ಡಿಸೋಜಾ (30) ಎಂಬುವವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಚಾಂತಾರ್ ನಿಂದ ಬ್ರಹ್ಮಾವರದ ಕಡೆಗೆ ಮುಖ್ಯ ರಸ್ತೆಯಲ್ಲಿ ಹೋಗುತ್ತಿರುವಾಗ ಮಧ್ಯಾಹ್ನ 12:30 ಗಂಟೆಗೆ 52 ನೇ ಹೇರೂರು ಗ್ರಾಮದ ಬ್ರಹ್ಮಾವರ ಕೃಷಿಕೇಂದ್ರದ ಎದುರು ತಲುಪುವಾಗ ರುಡ್‌ಸೆಟ್ ಕ್ರಾಸ್ – ಕೃಷಿಕೇಂದ್ರ ರಸ್ತೆಯಲ್ಲಿ ರುಡ್‌ಸೆಟ್‌ಕ್ರಾಸ್ ಕಡೆಯಿಂದ ಆರೋಪಿಯು  KA-03-NC-4220 ನೇ ಹುಂಡೈ ಕ್ರೇಟಾ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಏಕಾ ಏಕಿ ಮುಖ್ಯ ರಸ್ತೆಗೆ ಚಲಾಯಿಸಿ ಪಿರ್ಯಾದಿದಾರರ ಮೋಟಾರ್ ಸೈಕಲ್‌ನ ಎಡ ಭಾಗಕ್ಕೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೇ ಪೇತ್ರಿ ಕಡೆಗೆ ಹೋಗಿರುವುದಾಗಿದೆ. ಈ ಅಪಘಾತದ ಪರಿಣಾಮ ಪಿರ್ಯಾದಿದಾರರು ಹಾಗೂ ಸುಜಿತ್ ಡಿಸೋಜಾ ರವರು ಮೋಟಾರ್ ಸೈಕಲ್ ಸಮೇತ ಠಾರ್ ರಸ್ತೆಯ ಮೇಲೆ ಬಿದ್ದು ಪಿರ್ಯಾದಿದಾರರ ಕೈಕಾಲು ಗಳಿಗೆ ಹಾಗೂ ಹಣೆಗೆ ತರಚಿದ ಗಾಯವಾಗಿದ್ದು ಹಾಗೂ ಸುಜಿತ್ ಡಿಸೋಜಾ ರವರ ಎಡಕಾಲಿನ ಮಣಿ ಗಂಟಿಗೆ ತೀವ್ರ ತರದ ರಕ್ತಗಾಯ ಹಾಗೂ ಮೈ ಕೈಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ಇಬ್ಬರನ್ನೂ ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 123/2022 ಕಲಂ: 279,  337, 338 ಐಪಿಸಿ & 134 (A&B) R/W 187 IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 22/07/2022 ರಂದು ಪಿರ್ಯಾದಿದಾರರಾದ ತೇಜಪ್ಪ ಶೆಟ್ಟಿ (72) ,ತಂದೆ: ದಿ. ಬಡಿಯಶೆಟ್ಟಿ, ವಾಸ: ಮುಂಡಕೋಡು ಜೆಡ್ಡು ತೊಂಬತ್ತು, ಹೆಂಗವಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರು  ಮಗ ಸಂತೋಷ ಶೆಟ್ಟಿ ಚಲಾಯಿಸುತ್ತಿದ್ದ  ದ್ಚಿಚಕ್ರ ವಾಹನ ನಂಬ್ರ KA-20-EW-5037 ರಲ್ಲಿ  ಸಹ ಸವಾರನಾಗಿ ಕುಳಿತು ಹೆಂಗವಳ್ಳಿಯಿಂದ ಮುಂಡಕೋಡು ಜೆಡ್ಡು ಮನೆ ಕಡೆಗೆ ಹೋಗುತ್ತಾ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ದ್ವಿಚಕ್ರ ವಾಹನ ಸವಾರ ಸಂತೋಷ 17:30 ಗಂಟೆಗೆ ಕುಂದಾಪುರ ತಾಲೂಕು,ಹೆಂಗವಳ್ಳಿ ಗ್ರಾಮದ,  ಕೆಪ್ಪೆ ಹೊಂಡ ನಾರಾಯಣ ಪೂಜಾರಿ ಮನೆ ಬಳಿ ತಲುಪಿದಾಗ ನಾಯಿಯೊಂದು ಬೆಕ್ಕನ್ನು ಅಟ್ಟಾಡಿಸಿ ರಸ್ತೆಗೆ ಅಡ್ಡ ಬಂದಾಗ  ಸಡನ್ ಆಗಿ ಬ್ರೇಕ್ ಹಾಕಿದಾಗ ದ್ಚಿಚಕ್ರ ವಾಹನ ಸಂತೋಷನ ಹತೋಟಿ ತಪ್ಪಿ ಬಲ ಬದಿಗೆ ಮಗುಚಿ ಬಿದ್ದಾಗ ಪಿರ್ಯಾದಿದಾರರು ನೆಲಕ್ಕೆ ಬಿದ್ದು , ಆಗ  ಪಿರ್ಯಾದಿದಾರರ ಎದೆಗೆ, ಬಲ ಕಣ್ಣಿಗೆ ಗುದ್ದಿದ ನೋವಾಗಿ ಊದಿಕೊಂಡಿದ್ದು,ಬಲಕೈ ಬೆರಳು ಹಾಗೂ ಬಲ ಕಾಲು  ಮೊಣಗಂಟಿಗೆ  ತರಚಿದ ಗಾಯವಾಗಿರುವುದಾಗಿದೆ.  ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 72/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  •  ಕಾರ್ಕಳ : ಪಿರ್ಯಾದಿದಾರರಾದ ಪ್ಲೇಸನ್ ಡಿಸೋಜಾ (22), ತಂದೆ: ಫೆಲಿಕ್ಸ್ ಡಿಸೋಜಾ, ವಾಸ:  ಮೇಗಿನಬೈಲು ಹೌಸ್, ಪಳ್ಳಿ ಗ್ರಾಮ, ಕಾರ್ಕಳ ತಾಲೂಕು ಇವರ ತಂದೆ ಫೆಲಿಕ್ಸ್ ಡಿಸೋಜ (58) ರವರು  ದಿನಾಂಕ 24/07/2022 ರಂದು  ಮಧ್ಯಾಹ್ನ 2:30 ಗಂಟೆಗೆ ಮನೆಯ ಎದುರುಗಡೆ ಇರುವ ತೆಂಗಿನ ಮರಕ್ಕೆ ಕಾಯಿ ಕೀಳಲು ಹೋಗಿದ್ದವರು ಆಕಸ್ಮಿಕವಾಗಿ ಕಾಲುಜಾರಿ ಕೆಳಗೆ ಬಿದ್ದು ಗಾಯಗೊಂಡವರನ್ನು ಪಕ್ಕದ ಮನೆಯ ಅಶೋಕ ಪೂಜಾರಿ ರವರು ಚಿಕಿತ್ಸೆ ಬಗ್ಗೆ ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡುಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಕಾರ್ಕಳ ತಾಲೂಕು ಆಸ್ಪತ್ರೆಗೆ  ಮಧ್ಯಾಹ್ನ3:30 ಗಂಟೆಗೆ  ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಫೆಲಿಕ್ಸ್ ಡಿಸೋಜರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 31/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.      

ಕಳವು ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ವಾಣಿ ಭಂಡಾರಿ, ಗಂಡ:ದಿ ಪ್ರಸನ್ನ ಭಂಡಾರಿ, ವಾಸ: ದಾಲಾಡಿ, ಯಡ್ತಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ದಿನಾಂಕ 24/07/2022 ಬೆಳಗ್ಗೆ 8:45 ಗಂಟೆಗೆ ಅವರ ತಾಯಿ ಹಾಗೂ ಮಗನೊಂದಿಗೆ ಮಂಗಳೂರಿನಲ್ಲಿರುವ ತಾಯಿ ಮನೆಗೆ ಹಾಗೂ ಪೊಳಲಿ ಮತ್ತು ಕಟಿಲು ದೇವಸ್ಥಾನಕ್ಕೆ ಹೋಗಿ ರಾತ್ರಿ 11:15 ಗಂಟೆಗೆ ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಎದುರಿನ ಬಾಗಿಲನ್ನು ಒಡೆದಿರುವುದು ಕಂಡು ಬಂದಿರುತ್ತದೆ ಮನೆಯನ್ನು ಪರಿಶೀಲಿಸಿದಾಗ ಮನೆಯ ಹಿಂಭಾಗಿಲನ್ನು ಹೊಡೆದು ಒಳ ಹೊಕ್ಕಿ ಎರಡು ಬೆಡ್‌ ರೂಮ್‌ ಬಾಗಿಲನ್ನು ಒಡೆದು ಗೋದ್ರೇಜ್ ಕವಾಟನ್ನು ಒಡೆದು 4 ಬಳೆ 56 ಗ್ರಾಂ ಮೌಲ್ಯ 2,24,000/-, 1ಚೈನು 24 ಗ್ರಾಂ ಮೌಲ್ಯ 96,000/-, 1 ಸರ 12 ಗ್ರಾಂ ಮೌಲ್ಯ 48,000/-, 1 ಸರ 18 ಗ್ರಾಂ ಮೌಲ್ಯ 72,000/-. 2 ಜೋತೆ ಕಿವಿಓಲೆ 16 ಗ್ರಾಂ ಮೌಲ್ಯ 64000/- ಹಾಗೂ ನಗದು 15000 ರೂಪಾಯಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಚಿನ್ನಭಾರಣ ಮತ್ತು ನಗದು ಒಟ್ಟು ಮೌಲ್ಯ  5,19,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 124/2022 ಕಲಂ:  454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ವೊಜಿ ಜೆ ಲೂವಿಸ್‌ (63),ತಂದೆ: ಮಾರ್ಕ್‌ಎ ಲೂವಿಸ್‌, ವಾಸ: ಮನೆ ನಂಬ್ರ: 6-4, ಫಿಶರೀಸ್‌ ಶಾಲೆಯ ಬಳಿ, ಉಪ್ಪೂರು ಹಿರೇಬೆಟ್ಟು, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇವರು ಉಡುಪಿ ತಾಲೂಕು ಪುತ್ತೂರು ಗ್ರಾಮದ ಸಂತೆಕಟ್ಟೆಯ ಕೆಮ್ಮಣ್ಣು ಕ್ರಾಸ್‌ನಲ್ಲಿ ಎಕ್ತ ಹೈಟ್ಸ್ ಎಂಬ ಕಟ್ಟಡದಲ್ಲಿ ಲೂವಿಸ್‌ ಚಿಕನ್‌ ಸೆಂಟರ್‌ ಅಂಗಡಿಯನ್ನು ನಡೆಸಿಕೊಂಡಿದ್ದು, ದಿನಾಂಕ 24/07/2022 ರಂದು 17:45 ಗಂಟೆಯಿಂದ 17:50 ಗಂಟೆ ನಡುವಿನ ಸಮಯದಲ್ಲಿ ನೋಡಲು ವಿದೇಶದ ವ್ಯಕ್ತಿಯಂತೆ ಕಾಣುವ ಓರ್ವ ಅಪರಿಚಿತ ವ್ಯಕ್ತಿ ಗ್ರಾಹಕರಂತೆ ಬಂದು ಮೊಟ್ಟೆಗಳನ್ನು ಕೇಳಿದ್ದು, ಪಿರ್ಯಾದಿದಾರರು ಮೊಟ್ಟೆಗಳನ್ನು ಕಟ್ಟುತ್ತಿರುವಾಗ ಆಪಾದಿತನು ಕ್ಯಾಸ್‌ ಡ್ರಾವರ್‌ನಲ್ಲಿ ಇಟ್ಟಿದ್ದ ರೂಪಾಯಿ. 35,000/- ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 118/2022 ಕಲಂ:  380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಮುಸ್ತಫ ಹಸನಬ್ಬ (65) , ತಂದೆ: ದಿ. ಹಸನಬ್ಬ, ,ವಾಸ; ಮದರ್  ಕೇರ್ ಹೌಸ್ ಬೈಲೂರು ಅಂಚೆ, ಕೌಡೂರು ಗ್ರಾಮ, ಕಾರ್ಕಳ ತಾಲೂಕು ಇವರ ಮಗಳು ಖತೀಜಮ್ಮ ತೌಸಿಯಾ ಎಂಬುವವರನ್ನು 2009 ನೇ ವರ್ಷದಲ್ಲಿ ಮಂಗಳೂರು ಕುತ್ತಾರಪದವು ನಿವಾಸಿ ಮಹಮ್ಮದ್ ಮುಸ್ತಾಕ್ ರವರಿಗೆ ಮದುವೆ ಮಾಡಿಕೊಟ್ಟಿದ್ದು  5 ವರ್ಷಗಳ ಹಿಂದೆ ಮಗಳು ಖತೀಜಮ್ಮ ತೌಸಿಯ ಮತ್ತು ಅಳಿಯ ಮಹಮ್ಮದ್ ಮುಸ್ತಾಕ್  ಇವರ ಮಧ್ಯೆ  ಕೌಟುಂಬಿಕ  ಭಿನ್ನಾಭಿಪ್ರಾಯ ಉಂಟಾಗಿ  ಮೂಡಬಿದ್ರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ಅಳಿಯ ಮಹಮ್ಮದ್ ಮುಸ್ತಾಕನು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯನ್ನು ವಾಪಾಸು ತೆಗೆದು ಕೊಳ್ಳಲು ಒತ್ತಡ  ಹಾಕುತ್ತಿದ್ದನು. ಇದೇ ವಿಚಾರದಲ್ಲಿ ಪಿರ್ಯಾದಿದಾರರು ದಿನಾಂಕ 23/07/2022 ರಂದು ರಾತ್ರಿ 9:10 ಗಂಟೆಗೆ  ಕೌಡೂರು ಗ್ರಾಮದ ಬೈಲೂರು ಅರ್ಚನಾ ಬಾರ್‌ನ ಎದುರುಗಡೆ  ರಸ್ತೆ ಬದಿಯಲ್ಲಿ ಸ್ಕೂಟರ್‌ನಲ್ಲಿ ಕುಳಿತುಕೊಂಡಿರುವಾಗ  ಕಾರು ನಂಬ್ರ KA-04-MS-4578 ನೇಯದರಲ್ಲಿ ಮಗಳ ಗಂಡ ಮಹಮ್ಮದ್ ಮುಸ್ತಾಕ್ ಹಾಗೂ ಇತರ 4 ಜನರು ಅಕ್ರಮ ಕೂಟ ಸೇರಿಕೊಂಡು ಬಂದು, ಮಹಮ್ಮದ್ ಮುಸ್ತಾಕ್‌ನು ಪಿರ್ಯಾದಿದಾರರನ್ನು ಸ್ಕೂಟರಿನಿಂದ ಎಳೆದು ಹಾಕಿ ಮರದ ಕೋಲಿನಿಂದ ಬೆನ್ನಿಗೆ ಹೊಡೆದಿದ್ದು ಉಳಿದ 4 ಜನರು ಕೈಯಿಂದ ಹೊಡೆದಿದ್ದು,  ನಂತರ ಅವರೆಲ್ಲರು  ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಮಹಮ್ಮದ್ ಮುಸ್ತಾಕ್‌ನು ಬೆದರಿಕೆ ಹಾಕಿ ಕೋಲನ್ನು ಅಲ್ಲಿಯೇ ಬಿಸಾಡಿ ಬಳಿಕ ಅವರೆಲ್ಲರೂ ಬಂದ ಕಾರಿನಲ್ಲಿ ಓಡಿ ಹೋಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 102/2022 ಕಲಂ:143, 147, 323, 324, 504 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 25-07-2022 10:12 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080