ಅಭಿಪ್ರಾಯ / ಸಲಹೆಗಳು


ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 25/07/2022 ರಂದು ಬೆಳಿಗ್ಗೆ  ಸುಮಾರು 11:45  ಗಂಟೆಗೆ ಕುಂದಾಪುರ ತಾಲೂಕು, ಕೊಟೇಶ್ವರ ಗ್ರಾಮದ ಅಂಕದಕಟ್ಟೆಯ “ಗಿರಿಜಾ” ಮನೆಯ ಬಳಿ, ಪಶ್ಚಿಮ ಬದಿಯ NH 66  ಸರ್ವಿಸ್‌ರಸ್ತೆಯಲ್ಲಿ, ಆಪಾದಿತ ಜಯಶೀಲ ಹೆಗ್ಡೆ  ಎಂಬವರು,  KA20-MB-6959ನೇ ಮಾರುತಿ ಸ್ವಿಪ್ಟ್‌‌ ಡಿಸೈರ್‌‌‌ಕಾರನ್ನು  ಕುಂದಾಪುರ ಕಡೆಯಿಂದ ಕೊಟೇಶ್ವರ  ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ  ಮಾಡಿಕೊಂಡು ಬಂದು, ಯಾವುದೇ  ಸೂಚನೆ ನೀಡದೇ ಕಾರನ್ನು ರಸ್ತೆಯ ಬಲಬದಿಗೆ ಅಂದರೆ ಪಶ್ಚಿಮ ಬದಿಗೆ ತಿರುಗಿಸಿ,  ಕೊಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಅಂದರೆ ಪಿರ್ಯಾದಿ ರಮೇಶ ಪ್ರಾಯ 28 ವರ್ಷ ತಂದೆ  ನರಸಿಂಹ  ಪೂಜಾರಿ ವಾಸ: ಚಿಟ್ಟಿಬೆಟ್ಟು,  ಬಡಾಕೆರೆ, ಅಂಕದಕಟ್ಟೆ, ಕೊಟೇಶ್ವರ ಗ್ರಾಮ ರವರು  ಸವಾರಿ ಮಾಡಿಕೊಂಡು  ಬರುತ್ತಿದ್ದ  KA20-ET-2648 ನೇ ಬಜಾಜ್‌ಪಲ್ಸರ್‌ ಬೈಕಿಗೆ ಅಪಘಾತಪಡಿಸಿದ ಪರಿಣಾಮ ರಮೇಶ ರವರ ಬಲಭುಜಕ್ಕೆ ಒಳಜಖಂ, ಬಲ ಕೈ ಹಾಗೂ ಬಲಕಾಲಿಗೆ ತರಚಿದ ಗಾಯವಾಗಿ ಕೊಟೇಶ್ವರ ಎನ್‌. ಆರ್‌ಆಚಾರ್ಯ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ  ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ 87/2022  ಕಲಂ 279, 338  IPC  ಯಂತೆ ಪ್ರಕರಣ ದಾಖಲಿಸಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣಗಳು

 • ಮಲ್ಪೆ: ಪಿರ್ಯಾದಿ ಸುರೇಶ ಕೆ ಪೂಜಾರಿ(54) ತಂದೆ: ಕಾಂತಪ್ಪ ಪೂಜಾರಿವಾಸ: 3-20 ಬ್ರಹ್ಮಶ್ರೀ  ಮೂಡುಕುದ್ರು ಕಲ್ಯಾಣಪುರ ರವರ ತಮ್ಮ ಜಗದೀಶ ಕೆ ಪೂಜಾರಿ ( 48 ವರ್ಷ)  ರವರು ಕೆಲಸವಿಲ್ಲದೆ  ಮನೆಯಲ್ಲಿಯೆ ಇದ್ದು , ಶರಾಬು ಸೇವನೆ ಮಾಡುವ ಹವ್ಯಾಸ ಹೊಂದಿದ್ದು  ದಿನಾಂಕ: 22-07-2022  ರಂದು   ಸಂಜೆ 5:30 ಗಂಟೆಗೆ ಪಿರ್ಯಾದಿದಾರರ ತಮ್ಮ ಮೂಡುಕುದ್ರುವಿನ ಮನೆಯಿಂದ ಕಲ್ಯಾಣಪುರಕ್ಕೆ  ಹೋದವನು   ವಾಪಸ್ಸು ಮನೆಗೆ ಬಾರದೆ ಇದ್ದು ,  ಈ ಹಿಂದೆ  ಅದೇ ರೀತಿ ಮನೆಯಿಂದ  ಹೋದವನು 2-3 ದಿನ ಮನೆಗೆ ಬಾರದೆ ಇದ್ದು ನಂತರ ಬಂದಿರುತ್ತಾನೆ.  ಈ ದಿನ ದಿನಾಂಕ: 25-07-2022 ರಂದು ಪಿರ್ಯಾದಿದಾರರ ಸಂಬಂಧಿಕರಾದ ಜಯಪೂಜಾರಿ  ಪಿರ್ಯಾದಿದಾರರ ಮನೆಗೆ ಬಂದು  ತೋಟದಲ್ಲಿರುವ ಕೆರೆಯಲ್ಲಿ ಪಿರ್ಯಾದಿದಾರರ ತಮ್ಮ  ಜಗದೀಶ್ ಕೆ ಪೂಜಾರಿ ರವರ  ಮೃತ ದೇಹ ತೇಲುತ್ತಿರುವುದಾಗಿ  ತಿಳಿಸಿದಂತೆ  ಹೋಗಿ ನೋಡಲಾಗಿ  ಮೃತದೇಹ ಕವಚಿ ಬಿದ್ದ  ಸ್ಥಿತಿಯಲ್ಲಿದ್ದು  ಬೀಗಿರುತ್ತದೆ.  ಪಿರ್ಯಾದಿದಾರರ  ತಮ್ಮ  ಪಾನಮತ್ತನಾಗಿ ಮನೆಗೆ  ಬರುವಾಗ  ದಾರಿಯಲ್ಲಿ  ಇದ್ದ ಕೆರೆಗೆ ಆಕಸ್ಮಿಕವಾಗಿ ಕಾಲುಜಾರಿ  ಬಿದ್ದು   ನೀರಿನಲ್ಲಿ  ಮುಳುಗಿ  ಮೃತಪಟ್ಟಿರಬಹುದು, ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯು.ಡಿ.ಆರ್ ನಂಬ್ರ   39 /2022  ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕಾರ್ಕಳ : ಫಿರ್ಯಾದಿ ಶ್ರೀ ಸುಂದರ ಸಾಲಿಯಾನ್, ಪ್ರಾಯ: 60 ವರ್ಷ, ತಂದೆ: ಅಣ್ಣು ಮಡಿವಾಳ, ವಾಸ:  ಹುಡ್ಕೋ ಕಾಲನಿ,  ಮನೆ ನಂಬ್ರ 6, ತಾಲೂಕು ಪಂಚಾಯತು ವಸತಿಗೃಹ, ಕುಕ್ಕುಂದೂರು ಎಂಬವರು ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ತಾಲೂಕು ಪಂಚಾಯತು ವಸತಿಗೃಹ, ಹುಡ್ಕೋ ಕಾಲನಿಯಲ್ಲಿ ವಾಸವಾಗಿದ್ದು 2 ನೇ ಮಗಳು ಕು. ಸುಶ್ಮಿತಾ ಪ್ರಾಯ: 26 ವರ್ಷ, ರವರು  6 ವರ್ಷಗಳಿಂದ ಕಾರ್ಕಳ ತಾಲೂಕು ಕಛೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸಮಾಡಿಕೊಂಡಿದ್ದು ಕೆಲವು ದಿನಗಳಿಂದ ಕರ್ತವ್ಯದ ಒತ್ತಡದಿಂದ ಇದ್ದು, ಈ ಬಗ್ಗೆ ವೈದ್ಯರಲ್ಲಿ ಚಿಕಿತ್ಸೆ ಪಡೆದಿದ್ದರು, ದಿನಾಂಕ 24-07-2022 ರಂದು  ರಾತ್ರಿ ಊಟ ಮಾಡಿ ಮಲಗಿದ್ದು ರಾತ್ರಿ 11-00 ಗಂಟೆಗೆ ಸುಶ್ಮಿತಾ ಕಾಣಿಸದೇ ಇದ್ದಾಗ ಕರೆ ಮಾಡಿದಾಗ ಸ್ವೀಕರಿಸದೇ ಇದ್ದು, ಹುಡುಕಾಡಿದಾಗ ತಾಲೂಕು ಪಂಚಾಯತು ವಸತಿಗೃಹದ ಬಾವಿ ಕಟ್ಟೆಯಲ್ಲಿ ಮೊಬೈಲ್ ಫೋನ್ ಸಿಕ್ಕಿದ್ದು ಅಗ್ನಿಶಾಮಕ ದಳದವರು ಹುಡುಕಾಡಿದಾಗ ಬಾವಿಯಲ್ಲಿ ಮೃತದೇಹ ಸಿಕ್ಕಿದ್ದು ಕೆಲಸದ ಒತ್ತಡದಿಂದ ವಸತಿಗೃಹದ ಬಾವಿಗೆ ಹಾರಿ ಆತ್ಮಹತ್ಯೆ  ಮಾಡಿಕೊಂಡಿದ್ದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌ 32/2022 ಕಲಂ 174 ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಬೈಂದೂರು: ಫಿರ್ಯಾದಿ ಸುನೀಲ್ ಪೂಜಾರಿ ಪ್ರಾಯ:30 ವರ್ಷ ತಂದೆ: ನಾರಾಯಣ ಪೂಜಾರಿ ವಾಸ: ಹಾವಳಿ ಮನೆ, ತಾರಾಪತಿ ಇವರ ತಂದೆ ನಾರಾಯಣ ಪೂಜಾರಿ ಪ್ರಾಯ: 60 ವರ್ಷ ರವರು ವಿಪರೀತ ಮದ್ಯಪಾನ ಮಾಡುವ ಸ್ವಭಾವದವರಾಗಿದ್ದು ದಿನಾಂಕ 24/07/2022 ರಂದು ಬೆಳಿಗ್ಗೆ  ಮನೆಯಿಂದ ಕೂಲಿ ಕೆಲಸಕ್ಕೆ ಹೋದವರು ಪಿರ್ಯಾದಿದಾರರು ಕೆಲಸ ಮುಗಿಸಿ ವಾಪಾಸು ಬರುವಾಗ  ರಾತ್ರಿ 10:00 ಗಂಟೆಗೆ ಬಿಜೂರು ದುರ್ಗಾಂಭಾ ಬಾರ್ ಬಳಿ ಸಿಕ್ಕಿದ್ದು ಮನೆಗೆ ಬರುವಂತೆ  ಕರೆದರೂ ಬಂದಿರುವುದಿಲ್ಲ. ದಿನಾಂಕ 25/07/2022 ರಂದು ಬೆಳಿಗ್ಗೆ  7:30 ಗಂಟೆಗೆ ಪಿರ್ಯಾದಾರರಿಗೆ ಸುರೇಶ್ ದೇವಾಡಿಗ ಎಂಬವರು ದೂರವಾಣಿ ಕರೆ ಮಾಡಿ ಅವರ ತಂದೆ ಉಪ್ಪುಂದ-ತಾರಾಪತಿ ರಸ್ತೆಯ ನದಿಕಂಠ ದ ಪಾಂಡುರಂಗ ರವರ ಕೋಳಿ ಅಂಗಡಿ ಬಳಿಯ ಮೋರಿಯಲ್ಲಿ ಕವುಚಿ ಬಿದ್ದಿರುವುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು  ಸದ್ರಿ ಸ್ಥಳಕ್ಕೆ ಹೋಗಿ  ಅಲ್ಲಿನ ಜನರ  ಸಹಾಯದಿಂದ ಮೇಲಕ್ಕೆ ಎತ್ತಿ ನೋಡಿದಲ್ಲಿ ತಂದೆ ನಾರಾಯಣ ರವರು ಮೃತ ಶರೀರವಾಗಿರುತ್ತದೆ. ಪಿರ್ಯಾದಿದಾರರ ತಂದೆ ನಾರಾಯಣ ಪೂಜಾರಿ ರವರು ದಿನಾಂಕ : 24/07/2022 ರಂದು ರಾತ್ರಿ 10:00 ಗಂಟೆಯಿಂದ  ದಿನಾಂಕ 25/07/2022 ರಂದು ಬೆಳಿಗ್ಗೆ 7:30 ಗಂಟೆಯ ಮದ್ಯಾವಧಿಯಲ್ಲಿ  ವಿಪರೀತ ಮಧ್ಯ ಸೇವನೆಮಾಡಿಕೊಂಡು ಪಡುವರಿ  ಗ್ರಾಮದ ಉಪ್ಪುಂದ-ತಾರಾಪತಿ ರಸ್ತೆಯ ನದಿಕಂಠ ದ ಬಳಿಯ ಪಾಂಡುರಂಗ ರವರ ಕೋಳಿ ಅಂಗಡಿ ಬಳಿ ಇರುವ ಮೋರಿಯ ಬಳಿ ನಡೆದುಕೊಂಡು ಬರುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ ಮೋರಿ ಕೆಳಗೆ ತಲೆ ಕೆಳಗಾಗಿ ಬಿದ್ದು  ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯುಡಿಆರ್  36/2022 ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕುಂದಾಪುರ: ಪಿರ್ಯಾದಿ ಸಂತೋಷ (30) ದೆ: ನಾಗಪ್ಪ ಪುರ್ಲಿವಾಸ:ಮೂಡಿ ದಡ್ಡಿಕೊಪ್ಪ ಮೂಡಿ ಗ್ರಾಮ ಸೊರಬ ತಾಲೂಕು ಇವರ ಅಣ್ಣನಾದ ಗಣೇಶನು ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ವಾಲ್ತೂರು ಕೊಕ್ಕೋಡು ಎಂಬಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು ಸದ್ರಿಯವರಿಗೆ ವಿಪರೀತ ಕುಡಿತದ ಚಟವನ್ನು ಹೊಂದಿದ್ದು ಇತ್ತೀಚೆಗೆ ಸದ್ರಿಯರಿಗೆ  ಜಾಂಡಿಸ್ ಖಾಯಿಲೆ ಕಾಣಿಸಿಕೊಂಡಿದ್ದು. ಈ ಬಗ್ಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ನಿನ್ನೆ  ದಿನ ದಿನಾಂಕ:24-07-2022 ರಂದು ಸಂಜೆ 06:00 ಗಂಟೆಗೆ ಸದ್ರಿಯವರಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಈ ಬಗ್ಗೆ ಮಾಲಿಕರಾದ ಅನಿಲ್ ಎಂಬವರು ಚಿಕಿತ್ಸೆಯ  ಬಗ್ಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಗಣೇಶನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ವಿಚಾರ ತಿಳಿದು ಪಿರ್ಯಾದಿದಾರರು ಹೊರಟು  ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಬಂದಿರುತ್ತಾರೆ.ಮೃತ ಗಣೇಶ ಎಂಬವರಿಗೆ ವಿಪರೀತ ಶರಾಬು ಕುಡಿಯುವ ಚಟವಿದ್ದು ಇದರಿಂದ ಜಾಂಡಿಸ್ ಕಾಯಿಲೆ  ಉಲ್ಬಣಗೊಂಡಿದ್ದು ಇದೇ ಕಾರಣದಿಂದ ಗಣೇಶ (38) ರವರು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್‌ನಂ:20/2022 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ಇತ್ತೀಚಿನ ನವೀಕರಣ​ : 25-07-2022 06:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080