ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ 

  • ಬ್ರಹ್ಮಾವರ: ಪಿರ್ಯಾದಿದಾರರಾದ ಮಂಜುನಾಥ ಡಿ (45), ತಂದೆ: ದಿ. ದೊಡ್ಡಯ್ಯ, ವಾಸ: ಮುಕನಹಳ್ಳಿ ಪಟ್ಟಣ, ಗುಬ್ಬಿ ತಾಲೂಕು, ತುಮಕೂರು ಜಿಲ್ಲೆ ಇವರು ಚಂದು ಎಂಬುವವರ ಮಾಲಿಕತ್ವದ KA-01-AL-9745 ನೇ BHARATH BENZ ಗೂಡ್ಸ್‌ ಲಾರಿಯಲ್ಲಿ ಚಾಲಕರಾಗಿ ಮಂಗಳೂರಿನ ಹಾರ್ಬರ್‌ನಲ್ಲಿ ಕಲ್ಲಿದ್ದಲು ಲೋಡ್‌ ಮಾಡಿಕೊಂಡು ಲಾರಿ ಕ್ಲಿನರ್‌ ಆಗಿರುವ ಶಂಕರನಂದಾ ರವರ ಜೊತೆ ಮಂಗಳೂರಿನಿಂದ ಕೊಪ್ಪಳಕ್ಕೆ ಹೋಗಲು ಲಾರಿಯನ್ನು ಚಲಾಯಿಸಿಕೊಂಡು ಮಂಗಳೂರು ಕಡೆಯಿಂದ ಕುಂದಾಪುರ ಕಡೆಗೆ ಉಡುಪಿ-ಕುಂದಾಪುರ ರಾಹೆ 66 ರಲ್ಲಿ ಹೋಗುತ್ತಾ ಸಂಜೆ 7:30 ಗಂಟೆಗೆ ಬ್ರಹ್ಮಾವರ ತಾಲೂಕು ಕುಮ್ರಗೋಡು ಗ್ರಾಮದ, ಬಸ್ಸ್‌ ನಿಲ್ದಾಣದಿಂದ ಸ್ವಲ್ಪ ಮುಂದೆ, ಮಾಬುಕಳ ಸೇತುವೆಯಿಂದ ಸ್ವಲ್ಪ ಹಿಂದೆ ತಲುಪುವಾಗ ಕುಂದಾಪುರ – ಉಡುಪಿ ರಾಹೆ 66 ರಲ್ಲಿ ಕುಂದಾಪುರ ಕಡೆಯಿಂದ ಆರೋಪಿ ಕೀರಿತ್‌ ಶೆಟ್ಟಿ ಅವರ KA-20-MB-9918 ನೇ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅವರ ಹತೋಟಿ ತಪ್ಪಿ ಕಾರು ಡಿವೈಡರ್‌ ಮೇಲೆ ಹತ್ತಿ ಅಲ್ಲಿಂದ ಹಾರಿ ಪಿರ್ಯಾದಿದಾರರ ಲಾರಿಯ ಎದುರು ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಹತೋಟಿ ತಪ್ಪಿ ಲಾರಿಯು ರಸ್ತೆಯ ಎಡಬದಿಯ ಇಳಿಜಾರು ಜಾಗದಲ್ಲಿ ಮಣ್ಣಲ್ಲಿ ಹೂತು ನಿಂತಿರುತ್ತದೆ. ಇದರಿಂದ ಪಿರ್ಯಾದಿದಾರರಿಗೆ ಹಾಗೂ ಶಂಕರನಂದಾ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಹಾಗೂ ಅಪಘಾತವೇಸಗಿದ ಕಾರಿನ ಎದುರು ಭಾಗ ಸಂಪೂರ್ಣ ಜಖಂಗೊಂಡು ಅದರೊಳಗೆ ಆರೋಪಿ ಕೀರಿತ್‌ ಶೆಟ್ಟಿ ರವರು ಸಿಲುಕಿ ಹಾಕಿಕೊಂಡಿದ್ದು ಅವರನ್ನು ಕಾರಿನಿಂದ ಹೊರಗೆ ತೆಗೆದಾಗ ಅವರ ಬಲಕೈ ಮತ್ತು ಬಲಕಾಲಿಗೆ ಮೂಳೆ ಮುರಿತದ ಗಾಯ ಹಾಗೂ ಮೈ, ಕೈಗೆ ಅಲ್ಲಲ್ಲಿ ತರಚಿದ ಗಾಯವಾಗಿರುತ್ತದೆ. ನಂತರ ಗಾಯಗೊಂಡ ಕೀರಿತ್‌ ಶೆಟ್ಟಿ ರವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಅಲ್ಲಿಂದ ವೈಧ್ಯರ ಸಲಹೆ ಮೇರೆಗೆ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 109/2022 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಳವು ಪ್ರಕರಣ 

  • ಅಜೆಕಾರು: ಪಿರ್ಯಾದಿದಾರರಾದ ಚೆನ್ನಪ್ಪ (45) ,ತಂದೆ: ಕೆ. ರಾಮಪ್ಪ ಮೂಲ್ಯ ,ವಾಸ: ಮಾತೃಶ್ರೀ, ಸೂರ್ಯಂತೊಕ್ಲು ಶಾಲೆ ಬಳಿ, ಹಾಡಿಯಂಗಡಿ ಶಿರ್ಲಾಲು ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 24/06/2022 ರಂದು ಸಂಜೆ 4:30 ಗಂಟೆಗೆ ನಾನು ವಾಸವಿರುವ ಮನೆಗೆ ಬೀಗ ಹಾಕಿ ತನ್ನ ಹೆಂಡತಿಯೊಂದಿಗೆ ಮಾಳದಲ್ಲಿರುವ ಹೆಂಡತಿಯ ಮನೆಗೆ ಹೋಗಿದ್ದು ದಿನಾಂಕ: 25/06/2022 ರಂದು ಬೆಳಿಗ್ಗೆ 7:00 ಗಂಟೆಗೆ ತಾನು ವಾಸವಿರುವ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿದ್ದು ಯಾರೋ ಕಳ್ಳರು ಮನೆ ಎದುರಿನ ಬಾಗಿಲಿನ ಚಿಲಕದ ಕೊಂಡಿಯನ್ನು ತುಂಡು ಮಾಡಿ ಮನೆಯ ಒಳಗೆ ಪ್ರವೇಶಿಸಿ ಮನೆಯ ಒಳಗಿನ ಕೋಣೆಯ ಬಾಗಿಲಿನ ಬೀಗವನ್ನು ಮುರಿದು ಒಳಗೆ ಹೋಗಿ ಕೋಣೆಯಲ್ಲಿದ್ದ ಕವಾಟಿನ ಬಾಗಿಲು ಮುರಿದು ವಸ್ತುಗಳನ್ನು ಜಾಲಾಡಿ, ಪಕ್ಕದಲ್ಲಿದ್ದ ಇನ್ನೊಂದು ಕಪಾಟಿನ ಬಾಗಿಲನ್ನು ಪಕ್ಕದಲ್ಲಿದ್ದ ಬೀಗದ ಕೀಯಿಂದ ತೆರೆದು ಒಳಗೆ ಲಾಕರ್ ನಿಂದ ಸುಮಾರು 1) 6 ಪವನ್ ತೂಕದ ಕರಿಮಣಿ ಸರ - 1, 2.) 5 ಪವನ್ ತೂಕದ ಹವಳದ ಚೈನ್ - 1, 3.) ಸುಮಾರು 2 ಪವನ್ ತೂಕದ 2 ಜೊತೆ ಉಂಗುರ, 4.) 4 ಪವನ್ ತೂಕದ ಬ್ರಾಸ್ ಲೆಟ್ - 1, 5.) 4 ಪವನ್ ತೂಕದ ಚೈನ್ -1, 6.) 1 ಪವನ್ ತೂಕದ ಲೇಡಿಸ್ ಉಂಗುರ - 1 ಜೊತೆ, 7.) 2 ಪವನ್ ತೂಕದ ಕಿವಿಯೋಲೆ 2 ಜೊತೆ ಹಾಗೂ 8) ಪಕ್ಕದ ಸೂಟ್ ಕೇಸಿನ ಒಳಗೆ ಪ್ಲಾಸ್ಟಿಕ್ ಡಬ್ಬದಲ್ಲಿ ಇಟ್ಟಿದ್ದ 1 ಪವನ್ ತೂಕದ ಜಂಟ್ಸ್ ಉಂಗುರ -1 ಜೊತೆಯನ್ನು ಕಳವು ಮಾಡಿದ್ದು, ಕಳವಾಗಿರುವ ಸುಮಾರು 200 ಗ್ರಾಂ ಚಿನ್ನದ ಮೌಲ್ಯ 8,00,000/- ರೂಪಾಯಿ ಹಾಗೂ ನಗದು 75,000/- ಹಣ ಸೇರಿ ಒಟ್ಟು ಮೌಲ್ಯ 8,75,000/- ರೂಪಾಯಿ ಕಳ್ಳತನವಾಗಿರುತ್ತದೆ. ಸೊತ್ತುಗಳನ್ನು ಯಾರೋ ಕಳ್ಳರು ದಿನಾಂಕ 24/06/2022 ರಂದು ಸಂಜೆ 4:30 ಗಂಟೆಯಿಂದ ದಿನಾಂಕ: 25/06/2022 ರ ಬೆಳಿಗ್ಗೆ 07:30 ಗಂಟೆಯ ಮಧ್ಯ ಅವಧಿಯಲ್ಲಿ ಪಿರ್ಯಾದಿಯವರ ಮನೆಯ ಎದುರಿನ ಬಾಗಿಲಿನ ಚಿಲಕದ ಕೊಂಡಿಯನ್ನು ತುಂಡು ಮಾಡಿ ಮನೆಯ ಒಳಗೆ ಪ್ರವೇಶಿಸಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2022 ಕಲಂ. 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಉಡುಪಿ: ಪಿರ್ಯಾದಿದಾರರಾದ ಶಿವರಾಮಶೆಟ್ಟಿ (60), ತಂದೆ: ವಿಠಲ ಶೆಟ್ಟಿ, ವಾಸ: ಹೊಸಮನೆ, ಅಂಬಾಗಿಲು, ಪುತ್ತೂರು ಗ್ರಾಮ, ಉಡುಪಿ ಜಿಲ್ಲೆ ಇವರ ಪಕ್ಕದ ಮನೆಯಲ್ಲಿ ವಾಸವಾಗಿರುವ ಪಿರ್ಯಾದಿದಾರರ ಅಕ್ಕ ಲೀಲಾ ಎಸ್‌ ಶೆಟ್ಟಿ (62) ರವರು ತನ್ನ ಗಂಡನ ಕ್ಯಾನ್ಸರ್‌ ಖಾಯಿಲೆಯಿಂದ ಬೇಸತ್ತು ದಿನಾಂಕ 24/06/2022 ರಂದು ರಾತ್ರಿ 8:00 ಗಂಟೆಯಿಂದ ದಿನಾಂಕ: 25/06/2022 ರಂದು ಬೆಳಿಗ್ಗೆ 06:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಪಕ್ಕದಲ್ಲಿರುವ ಕಾರ್‌ ಶೆಡ್‌ನಲ್ಲಿ ಬಾವಿಯ ಹಗ್ಗವನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 34/2022 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಕುಂದಾಪುರ:ಪಿರ್ಯಾದಿದಾರರಾದ ಭೋಜು ಕೊಠಾರಿ(57),ತಂದೆ:ಸಂಕು ಕೊಠಾರಿ,ವಾಸ: ಕೈಲ್‌ಕೆರೆ, ಜಪ್ತಿ ಗ್ರಾಮ ಕುಂದಾಪುರ ತಾಲೂಕು ಇವರ ಬಾವ ಶಂಕರ ಪ್ರತಿ ದಿನ ಮದ್ಯ ಸೇವಿಸಿಕೊಂಡು ಗಲಾಟೆ ಮಾಡುವವರಾಗಿದ್ದು ದಿನಾಂಕ:24/06/2022 ರಂದು ರಾತ್ರಿ 09:00 ಗಂಟೆಗೆ ಮದ್ಯವನ್ನು ಸೇವಿಸಿಕೊಂಡು ಪಿರ್ಯಾದಿದಾರರ ಮನೆಯ ಬಳಿ ಬಂದು ಕೂಗಾಡುತ್ತಿದ್ದು ಆಗ ಪಿರ್ಯಾದಿದಾರರು ಮನೆಯಿಂದ ಹೊರಗೆ ಬಂದು ಏಕೆ ಸುಮ್ಮನೆ ಗಲಾಟೆ ಮಾಡುತ್ತೀಯಾ ಮನೆಗೆ ಹೋಗು ಎಂದು ಸಮಾದಾನ ಮಾಡಿದ್ದಕ್ಕೆ ಆರೋಪಿಯು ಕೈಯಲ್ಲಿ ಕತ್ತಿಯನ್ನು ಹಿಡಿದು ಪಿರ್ಯಾದಿದಾರರಿಗೆ ಜೀವ ಸಹಿತ ಬಿಡುವುದಿಲ್ಲ ಹೇಳಿ ಕುತ್ತಿಗೆ ಬದಿಗೆ ಬೀಸಿದ್ದು ಆ ಸಮಯ ಪಿರ್ಯಾದಿದಾರರು ತಪ್ಪಿಸಿಕೊಳ್ಳುವಾಗ ಮುಖದ ಎಡ ಬದಿಯ ಗಲ್ಲಕ್ಕೆ ತಾಗಿ ಗಾಯವಾಗಿ ರಕ್ತ ಬಂದಿದ್ದು. ಆಗ ಪಿರ್ಯಾಧಿದಾರರು ಬೊಬ್ಬೆ ಹಾಕಿದನ್ನು ಕೇಳಿ ಪಿರ್ಯಾದಿದಾರರ ತಂಗಿ ಸುಶೀಲ ಹಾಗೂ ನೆರೆಕರೆಯ ರಮೇಶರವರು ಸ್ಥಳಕ್ಕೆ ಬರುವುದನ್ನು ಆರೋಪಿಯು ನೋಡಿ ಪಿರ್ಯಾದಿದಾರರನ್ನು ಉದ್ದೇಶಿಸಿ ಜೀವ ಬೆದರಿಕೆ ಹಾಕಿ ಕೈಯಲ್ಲಿದ್ದ ಕತ್ತಿಯನ್ನು ಅಂಗಳದ ಬದಿಗೆ ಬಿಸಾಡಿ ಹೋಗಿದ್ದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮ‍ಾಂಕ 31/2021 ಕಲಂ: 447,323,324,504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಶ್ರೀನಿವಾಸ ಯಾನೆ ಕೆ. ಶೀನ (50) ,ತಂದೆ: ಬಡಿಯ, ವಾಸ: ಎಂ ಜಿ ಕಾಲೊನಿ ವಡ್ಡರ್ಸೆ ಗ್ರಾಮ ಬ್ರಹ್ಮಾವರ ತಾಲೂಕು ಇವರ ಮನೆಯ ಎದುರುಗಡೆ ದಕ್ಷಿಣ ದಿಕ್ಕಿನಲ್ಲಿ ಚರಂಡಿ ಕೆಲಸ ನಡೆಯುತ್ತಿರುವುದರಿಂದ ಪಿರ್ಯಾದಿದಾರರರು ತನ್ನ ಬೈಕನ್ನು ತನ್ನ ಜಾಗದ ಒಳಗಡೆ ಇಡುವುದಕ್ಕೋಸ್ಕರ ಜಾಗದ ಪೂರ್ವ ದಿಕ್ಕಿನಲ್ಲಿ ರಸ್ತೆಯ ಬದಿಗೆ ಸ್ವಲ್ಪ ಮಣ್ಣನ್ನು ಹಾಕಿರುತ್ತಾರೆ. ದಿನಾಂಕ 24/06/2022 ರಂದು ಸಂಜೆ 6:45 ಗಂಟೆಗೆ ಅಪ್ತಾಜ್ ಯಾನೆ ಅಪ್ಪು ,ಆತನ ತಾಯಿ ಮೈಮುನ ತಂಗಿ ಅಪ್ರಿದಾ ಯಾನೆ ಅಪ್ಪಿ ಇವರುಗಳು ಏಕಾಏಕಿ ಪಿರ್ಯಾದಿದಾರರ ಜಾಗದೊಳಗೆ ಅಕ್ರಮ ಪ್ರವೇಶ ಮಾಡಿ ಹಾರೆಯಿಂದ ಪಿರ್ಯಾದಿದಾರರು ಹಾಕಿದ ಮಣ್ಣನ್ನು ತೆಗೆದಿರುತ್ತಾರೆ.ಮಣ್ಣು ತೆಗೆಯುವಾಗ ಮಣ್ಣನ್ನು ತೆಗೆಯಬೇಡಿ ಇನ್ನೆರಡು ದಿನದಲ್ಲಿ ಮೋರಿಗೆ ಚಪ್ಪಡಿ ಹಾಕುತ್ತಾರೆ ಮಣ್ಣನ್ನು ಮುಚ್ಚಿ ದಾರಿ ಮಾಡಿಕೊಡಿ ಎಂದಾಗ ಅಪ್ತಾಬ್ ಯಾನೆ ಅಪ್ಪು ಪಿರ್ಯಾದಿದಾರರ ಮೇಲೆ ಎರಗಿ ಕೈಯಿಂದ ದೂಡಿ ಹೊಡೆದು ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಇನ್ನೊಂದು ಸಲ ಇಲ್ಲಿ ಮಣ್ಣು ಹಾಕಲು ಬಂದರೆ ನಿನ್ನನ್ನು ಕಡಿದು ಕೊಂದು ತೋಡಿಗೆ ಹಾಕುತ್ತೇನೆ . ಎಂದು ಬೆದರಿಕೆ ಹಾಕಿದ್ದು, ಅಪ್ತಾಬ್ ನ ತಾಯಿ ಮೈಮುನ ಮತ್ತು ತಂಗಿ ಅಪ್ರಿದಾ ನಿಂದಿಸಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 96/2022 ಕಲಂ:447.323.504.506 RW 34 IPC & 3(1)( r) 3 (1)(s) ,3 (2) (v-a) SC ST ACT ರಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 25-06-2022 06:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080