ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  •  ಬ್ರಹ್ಮಾವರ: ದಿನಾಂಕ 25/06/2021 ರಂದು ಪಿರ್ಯಾದಿದಾರರಾದ ಡಾ|| ಭರತ್ ಕುಮಾರ್ ಭಟ್ (36), ತಂದೆ: ಭಾಸ್ಕರ್ ಭಟ್, ವಾಸ:  ಅನಂತಪದ್ಮನಾಭ, 2/121, ತ್ರಾಸಿ ಅಂಚೆ, ತ್ರಾಸಿ, ಕುಂದಾಪುರ ತಾಲೂಕು ಇವರು ತ್ರಾಸಿಯಲ್ಲಿರುವ ಅವರ ಮನೆಗೆ ಹೋಗಲು  ಅವರ KA-20-MD-1291 ನೇ ನಂಬ್ರದ ಮಾರುತಿ ಸ್ವಿಪ್ಟ್  ಡಿಸೈರ್ ಕಾರಿನಲ್ಲಿ ಹೆಂಡತಿ ಡಾ|| ಕವಿತಾ ಭಟ್ ರವರನ್ನು ಸಹಪ್ರಯಾಣಿಕರಾಗಿ ಕುರಿಸಿಕೊಂಡು ಉಡುಪಿಯಿಂದ ಕುಂದಾಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಿರುವಾಗ ಮಧ್ಯಾಹ್ನ 04:20 ಗಂಟೆಗೆ ಹೇರೂರು ಗ್ರಾಮದ, ಸುಪ್ರೀಂ ಡಿಸ್ಟ್ರಿಬ್ಯುಟರ್ ಎದುರು ತಲುಪುವಾಗ ಅವರ ಹಿಂಬದಿಯಿಂದ ಆರೋಪಿ  KA-20-Z-1250 ನೊಂದಣಿ ನಂಬ್ರದ ಬಿಳಿ ಬಣ್ಣದ Ritz ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿಗೆ ಹಿಂದಿನಿಂದ ರಭಸವಾಗಿ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೇ  ರಭಸವಾಗಿ ಹೋಗಿರುತ್ತಾನೆ. ಆರೋಪಿಯ ಕಾರು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರು ಬಲಕಡೆಗೆ ತಿರುಗಿ ರಸ್ತೆ ಮಧ್ಯೆ ಇರುವ ಡಿವೈಡರ್‌ಗೆ ಡಿಕ್ಕಿ ಹೊಡೆದು ನಿಂತಿದ್ದು, ಅಲ್ಲದೇ ಕಾರಿನ ಮುಂಭಾಗ ಮತ್ತು ಹಿಂಭಾಗ ಜಖಂಗೊಂಡಿರುತ್ತದೆ. ಕಾರಿನಲ್ಲಿದ್ದ ಇಬ್ಬರಿಗೂ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 125/2021 ಕಲಂ:279 ಐಪಿಸಿ  & ಕಲಂ: 134(A&B), 187 IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾದ ಚಂದ್ರು (19), ತಂದೆ: ದಿ ನಾಣಪ್ಪ, ವಾಸ: ಬೀಡಿನ ಗುಡ್ಡೆ, ಚಿಟ್ಪಾಡಿ, ಉಡುಪಿ ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 22/03/2021 ರಂದು ಹಿರಿಯಡ್ಕದ ಪುತ್ತಿಗೆಯಲ್ಲಿ ಕೆಲಸವನ್ನು ಮುಗಿಸಿ ಉಡುಪಿಗೆ ಬರಲು ಬಸ್ಸಿಗಾಗಿ ಕಾಯುತ್ತಿದ್ದು, ಆಗ ಸಮಯ ಸಂಜೆ 6:20 ಗಂಟೆಗೆ ಒಂದು ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲ್ ನಂಬ್ರ KA-17-HD-5620 ನೇದನ್ನು ಮಣಿಪಾಲ ಕಡೆಯಿಂದ ಪೆರ್ಡೂರು ಕಡೆಗೆ ನಿಧಾನವಾಗಿ ಹಾಗೂ ಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಕೆಳಭಾಗದಿಂದ ಮೇಲುಗಡೆಗೆ ಪೆರ್ಡೂರು ಕಡೆಗೆ ಹೋಗುತ್ತಿದ್ದು, ಅದೇ ಸಮಯಕ್ಕೆ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಒಂದು ಬಸ್ಸಿನ ಚಾಲಕನು ತನ್ನ ವಾಹನವನ್ನು ಅತಿಯಾದ ವೇಗ, ಅಜಾಗರೂಕತೆ ಹಾಗೂ ರ್ನಿಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಉಂಟಾಗಿದ್ದು, ಈ ಬೈಕಿನ ಸವಾರ ಮತ್ತು ಹಿಂಬದಿ ಕುಳಿತ ಮಹಿಳೆಗೆ ತೀವ್ರ ತರಹದ ಗಾಯಗಳಾಗಿರುತ್ತದೆ. ಆ ಕೂಡಲೇ ಪಿರ್ಯಾದಿದಾರರು ಮತ್ತು ಅಲ್ಲಿ ಸೇರಿದ ಜನರು ಒಂದು ಅಂಬುಲೆನ್ಸ್ ನಲ್ಲಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿರುತ್ತಾರೆ. ಆ ದಿನ ಅಪಘಾತಕ್ಕೊಳಪಟ್ಟ ಮೋಟಾರು ಸೈಕಲ್ ಸವಾರನು ದಾರಿ ಮಧ್ಯದಲ್ಲಿ ಮೃತಪಟ್ಟ ಬಗ್ಗೆ ತಿಳಿದಿರುತ್ತದೆ. ಹಾಗೆಯೇ ಮೋಟಾರು ಸೈಕಲ್ ಸವಾರನ ಹೆಸರು ಶರಣಪ್ಪ ಟಿ. ರಾಠೋಡ ಎಂದು, ಹಿಂಬದಿ ಕುಳಿತಿದ್ದ ಹೆಂಗಸು ಉಷಾ ಎಂದು ತಿಳಿಯಿತು. ಆ ಸಮಯದಲ್ಲಿ ಪಿರ್ಯಾದಿದಾರರ  ಜೊತೆ ಬೀರಪ್ಪ ಡೊಳ್ಳಿನ ಎಂಬುವವರು ಇದ್ದು ಅವರೂ ಸಹ ಈ ಅಪಘಾತವನ್ನು ನೋಡಿರುತ್ತಾರೆ. ನಂತರ ಪಿರ್ಯಾದಿದಾರರಿಗೆ ಮೃತ ಶರಣಪ್ಪ ಟಿ ರಾಠೋಡ ಅವರ ಊರಿನ ಕಡೆಯವರು ಎಂದು ತಿಳಿಯಿತು. ನಂತರ ಆತನ ತಮ್ಮ ಫಿರ್ಯಾದಿದಾರರನ್ನು ಅಪಘಾತದ ಬಗ್ಗೆ ವಿಚಾರಿಸಿದರು. ಆಗ ಪಿರ್ಯಾದಿದಾರರು ಬಸ್ಸಿನ ತಪ್ಪಿನಿಂದ ಅಪಘಾತವಾಗಿರುತ್ತದೆ ಎಂದು ಹೇಳಿರುತ್ತಾರೆ. ನಂತರ ಅವರು ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ಬಸ್ಸಿನ ಚಾಲಕನ ಹೇಳಿಕೆ ಪ್ರಕಾರ ಮೋಟಾರು ಸೈಕಲ್ ಸವರನನ್ನು ಆರೋಪಿಯನ್ನಾಗಿ ಮಾಡಿರುತ್ತಾರೆ ಎಂದು ಮೃತರ ತಮ್ಮನು ಪಿರ್ಯಾದಿದಾರರಿಗೆ ತಿಳಿಸಿರುತ್ತಾರೆ. ಆಗ ಮೃತನ ತಮ್ಮನು ಅಪಘಾತದ ಬಗ್ಗೆ ಪೊಲೀಸರಿಗೆ ಹೇಳಿಕೆ ಕೊಡಲು ಪಿರ್ಯಾದಿದಾರರಿಗೆ ಕೇಳಿಕೊಂಡಿರುತ್ತಾನೆ. ಅಪಘಾತದ ಸಮಯದಲ್ಲಿ ಮೋಟಾರು ಸೈಕಲ್ ಸವಾರನು ಮೃತಪಟ್ಟಿರುವ ಕಾರಣದಿಂದ ಬಸ್ಸಿನ ಚಾಲಕನ ಹೇಳಿಕೆಯ ಪ್ರಕಾರ ತಪ್ಪಾಗಿ ಪೊಲೀಸರು ಬೈಕ್ ಸವಾರನನ್ನು ಆರೋಪಿಯನ್ನಾಗಿ ಮಾಡಿರುತ್ತಾರೆ. ಬಳಿಕ ಪಿರ್ಯಾದಿದಾರರು ಈ ಕೇಸಿನ ಬೈಕ್ ಸವಾರನ ತಪ್ಪಿಲ್ಲದಿದ್ದರೂ ಬಸ್ ಚಾಲಕನ ಹೇಳಿಕೆಯಂತೆ ಸುಳ್ಳು ಪ್ರಥಮ ವರ್ತಮಾನ ವರದಿ ಸಲ್ಲಿಸಿರುವುದು ಸರಿಯಲ್ಲದ ಕಾರಣ ಈ ಪ್ರಕರಣದಲ್ಲಿ ಈ ಪಿರ್ಯಾದಿಯನ್ನು ಮಾನ್ಯ ನ್ಯಾಯಾಲಯದ ಮುಂದೆ ದಾಖಲಿಸಿರುತ್ತಾರೆ. ಆದುದರಿಂದ ಮಾನ್ಯ ನ್ಯಾಯಾಲಯವು ಈ ಅಪಘಾತಕ್ಕೆ ಬಸ್ ನಂಬ್ರ KA-20-A-7729 ಎಸ್.ವಿ.ಟಿ. ಬಸ್ ಚಾಲಕ ಉಮೇಶ್ ಪೂಜಾರಿಯ ಅತಿಯಾದ ವೇಗ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ತನ್ನ ವಾಹನವನ್ನು ಚಲಾಯಿಸಿದ ಕಾರಣದಿಂದ ಈ ಅಪಘಾತ  ಉಂಟಾಗಿದ್ದು, ಈ ಬಸ್ ಚಾಲಕನ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 38/2021 ಕಲಂ: 279 , 338, 304 (ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾಪು: ದಿನಾಂಕ 22/06/2021 ರಂದು ಪಿರ್ಯಾದಿದಾರರಾದ ಶರತ್ ದೇವಾಡಿಗ (31), ತಂದೆ : ವಾಸು ದೇವಾಡಿಗ, ವಾಸ : ಅಮ್ಮ ನಿವಾಸ ಚಿಕ್ಕಿ ಫ್ಯಾಕ್ಟರಿ ಹತ್ತಿರ ಕೋಟೆ ಗ್ರಾಮ ಕಟಪಾಡಿ ಅಂಚೆ ಉಡುಪಿ ಜಿಲ್ಲೆ ಇವರು ಗೆಳೆಯ ಸುಕೇಶ್ ಮೆಂಡನ್‌ ಇವರ ಜನುಮ ದಿನ ಇದ್ದ ಕಾರಣ ಸ್ನೇಹಿತರಾದ ಪ್ರೀತಮ್, ಅಭಿರಾಜ್ ಕರ್ಕೇರಾ, ರಂಜನ್, ವಿವೇಕ್ ಅಮೀನ್,  ಕವಿರಾಜ್, ಪ್ರಜ್ವಲ್, ಸಚಿನ್, ಮತ್ತು ಹರೀಶ್ ರವರೊಂದಿಗೆ ಕೋಟೆ ಗ್ರಾಮದ ಕಜಕೋಡ್ ಹೊಳೆಯ ಬದಿಗೆ ರಾತ್ರಿ  7:30 ಗಂಟೆಗೆ ಸುಕೇಶ್‌ ಮೆಂಡನ್ ರವರ ಜನುಮ ದಿನದ ಅಂಗವಾಗಿ ಕೇಕ್ ಕಟ್‌ ಮಾಡಿ, ಪಿರ್ಯಾದಿದಾರರು ಮತ್ತು ಸ್ನೇಹಿತರು ಮಾತಾಡುತ್ತಿರುವಾಗ ರಾತ್ರಿ 10:40 ಗಂಟೆಗೆ ಸುಕೇಶ್‌ನ ಮೊಬೈಲ್‌ಗೆ ಅಭಿಷೇಕ್ ಎಂಬುವವನು ಕರೆ ಮಾಡಿದ್ದು, ಸುಕೇಶ್‌ನು ಆ ಕರೆಯನ್ನು ಸ್ವಿಕರಿಸಲಿಲ್ಲವಾಗಿ ತಿಳಿಸಿದ್ದು  ರಾತ್ರಿ  11:00 ಗಂಟೆಗೆ KA-20-ES-9941 ನೇ ನಂಬ್ರದ  ಮೋಟಾರು ಸೈಕಲ್‌ನಲ್ಲಿ ಅಭಿಷೇಕ್‌ನು  ಪಿರ್ಯಾದಿದಾರರು ಸ್ನೇಹಿತರೊಂದಿಗೆ  ಕುಳಿತ್ತಿದ್ದ ಜಾಗಕ್ಕೆ ಬಂದು ಮೋಟಾರು ಸೈಕಲ್‌ ನಿಲ್ಲಿಸಿ ಪಿರ್ಯಾದಿದಾರರ ಬಳಿ ಕಿರಣ ಯಾರು ಅವ ಎಲ್ಲಿದ್ದಾನೆ ಎಂದು ಕೇಳಿದ್ದು,  ಆಗ ಪಿರ್ಯಾದಿದಾರರು ಅವನು ಇಲ್ಲಿ ನಮಗೆ ಯಾರಿಗೂ ಕಿರಣ ಯಾರೆಂದು ತಿಳಿದಿಲ್ಲ, ನಮ್ಮಲ್ಲಿ ಯಾಕೆ ಕೇಳುತ್ತಿ ಎಂದು  ಹೇಳಿದಾಗ ಅಭಿಷೇಕನು ಪಿರ್ಯಾದಿದಾರರನ್ನು ಉದ್ದೇಶಿಸಿ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಚೂರಿಯಿಂದ ಪಿರ್ಯಾದಿದಾರರ ಎಡ ಬದಿಯ ಕಿಬ್ಬೊಟ್ಟೆಗೆ, ಎಡಬದಿಯ ಪಕ್ಕೆಲುಬಿಗೆ, ಎಡಕೈ ತೊಳಿಗೆ, ಎಡಕೈಯ ಮಣಿಗಂಟಿಗೆ, ಕೆಳಭಾಗಕ್ಕೆ ಇರಿದಿದ್ದು, ಆಗ ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹೊಡೆದು ಕೆಳಗೆ ಬಿದ್ದಿದ್ದು, ಕೂಡಲೇ ಪಿರ್ಯಾದಿದಾರರ ಜೊತೆಯಲ್ಲಿದ್ದ ಗೆಳೆಯರು ಅಭಿಷೇಕ್‌ನಿಂದ ಪಿರ್ಯಾದಿದಾರರನ್ನು ಬಿಡಿಸಿದ್ದು, ಅಭಿಷೇಕ್‌ನು ಅಲ್ಲಿಂದ ಓಡಿ ಹೋಗುವಾಗ ಚೂರಿಯನ್ನು ಅಲ್ಲಿಯ ಬಿಸಾಡಿ  ಕೊಲ್ಲದೆ ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ತನ್ನ ಮೋಟಾರು ಸೈಕಲ್‌ನ್ನು ಚಲಾಯಿಸಿಕೊಂಡು ಹೋಗಿರುತ್ತಾನೆ. ಕೂಡಲೇ ಗಾಯಗೊಂಡು ರಕ್ತ ಸ್ರಾವದಿಂದ ನರಳಾಡುತ್ತಿದ್ದ ಪಿರ್ಯಾದಿದಾರರನ್ನು ಪಿರ್ಯಾದಿದಾರರ ಗೆಳೆಯರು ಚಿಕಿತ್ಸೆಯ ಬಗ್ಗೆ ಒಂದು ವಾಹನದಲ್ಲಿ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರೀಕ್ಷಿಸಿದ ಅಲ್ಲಿನ ವೈದ್ಯರು ಪಿರ್ಯಾದಿದಾರರನ್ನು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 107/2021  ಕಲಂ: 324, 326, 307, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 25-06-2021 11:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ