ಅಭಿಪ್ರಾಯ / ಸಲಹೆಗಳು

ಅಘಘಾತ ಪ್ರಕರಣ

 • ಬ್ರಹ್ಮಾವರ: ದಿನಾಂಕ: 22.06.2021 ರಂದು ಪಿರ್ಯಾದಿದಾರರಾದ ಕೃಷ್ಣ ರವರು ತನ್ನ ಸ್ನೇಹಿತನಾದ ಪದ್ಮನಾಭ ರವರು ಸವಾರಿ ಮಾಡುತ್ತಿದ್ದ KA20ET0681 ನೇ ಹೊಂಡಾ ಆ್ಯಕ್ಟಿವಾ ಸ್ಕೂಟರ್‌ನಲ್ಲಿ ಸಹಸವಾರನಾಗಿ ಕುಳಿತುಕೊಂಡು  ಸಂತೆಕಟ್ಟೆಕಡೆಯಿಂದ ರಾಹೆ 66 ರಲ್ಲಿ ಬ್ರಹ್ಮಾವರ ಕಡೆಗೆ ಬಂದು ಮಧ್ಯಾಹ್ನ 2:30 ಗಂಟೆಗೆ ಉಪ್ಪೂರು ಗ್ರಾಮದ,  ಕೆ.ಜಿ ರೋಡ್ ಕ್ರಾಸ್‌ನಲ್ಲಿ  ‘U’ Turn ಮಾಡಿ ಕೆ.ಜಿ ರೋಡ್ ಕಡೆಗೆ ಹೋಗಲು ಬ್ರಹ್ಮಾವರ – ಉಡುಪಿ, ರಾಹೆ 66 ರ ಟಾರು ರಸ್ತೆಗೆ ಸವಾರಿ ಮಾಡಿ ಕೆ.ಜಿ ರೋಡ್ ರಸ್ತೆಗೆ ಹೋಗುವಾಗ  ಅದೇ ವೇಳೆಗೆ ಆರೋಪಿ ಹರೀಶ್ ಆರ್. ಚಂದನ್ ಎಂಬವರು ಅವರ ಬಾಬ್ತು KA03NG3794 ನೊಂದಣಿ ನಂಬ್ರದ Breeza ಕಾರನ್ನು ಬ್ರಹ್ಮಾವರ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಹೋಗುತ್ತಿದ್ದ ಸ್ಕೂಟರ್‌ನ ಎಡಭಾಗಕ್ಕೆ ಡಿಕ್ಕಿ ಹೊಡೆದಿರುವುದಾಗಿದೆ. ಈ ಅಪಘಾತದ ಪರಿಣಾಮ ಸ್ಕೂಟರ್ ಸಮೇತ ಪಿರ್ಯಾದಿದಾರರು ಹಾಗೂ ಸವಾರ ಪದ್ಮನಾಭ ರವರು ಟಾರು ರಸ್ತೆಯ ಮೇಲೆ ಬಿದ್ದು, ಪಿರ್ಯಾದಿದಾರರ ಬಲ ಹಣೆಯ ಕಣ್ಣಿನ ಬಳಿ, ಬಲ ಕಾಲಿನ ಹತ್ತಿರ ಬೆರಳುಗಳಿಗೆ ತರಚಿದಗಾಯ, ಎಡಕಾಲಿಗೆ ಗುದ್ದಿದ ಒಳನೋವು ಆಗಿರುತ್ತದೆ ಹಾಗೂ ಪದ್ಮನಾಭ ರವರ ಬಲಕೈಗೆ, ಬೆನ್ನಿಗೆ ತರಚಿದ ಗಾಯ, ಹೊಟ್ಟೆಗೆ ಗುದ್ದಿದ ಒಳನೋವು ಆಗಿರುತ್ತದೆ. ಗಾಯಾಳು ಇಬ್ಬರನ್ನೂ ಚಿಕಿತ್ಸೆ ಬಗ್ಗೆ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪಿರ್ಯಾದಿದಾರರು ಪ್ರಥಮ ಚಿಕಿತ್ಸೆ ಪಡೆದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ದಿನಾಂಕ: 23.06.2021 ರಂದು ಆಸ್ಪತ್ರೆಯಿಂದ ಬಿಡುಗಡೆಹೊಂದಿರುತ್ತಾರೆ. ಆದರೆ ಪದ್ಮನಾಭ ರವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಅವರು ಯಾವುದೇ ಚಿಕಿತ್ಸೆ ಪಡೆದಿರುವುದಿಲ್ಲ, ನಂತ್ರ ಮನೆಗೆ ಬಂದಾಗ ಪದ್ಮನಾಭ ರವರಿಗೆ ಹೊಟ್ಟೆಗೆ ಆದ ಒಳನೋವು ತೀವ್ರ ಜಾಸ್ತಿಯಾಗಿರುವುದರಿಂದ ಚಿಕಿತ್ಸೆ ಬಗ್ಗೆ ದಿನಾಂಕ:23.0.06.2021 ರಂದು ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 126/2021 ಕಲಂ: 279 , 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ: ದಿನಾಂಕ 25.06.2021 ರಂದು ಫಿರ್ಯಾದಿ ರಾಮ ಪೂಜಾರಿ ಇವರು ತನ್ನ ಬಾಬ್ತು KA-19-EG-9251 ನೇ Honda Activa ಮೋಟಾರ್‌ ಸೈಕಲಿನಲ್ಲಿ ತನ್ನ ಹೆಂಡತಿ ಪದ್ಮಾವತಿ(65ವರ್ಷ)ರವರನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ಗುಜ್ಜಾಡಿಯಿಂದ ಶೇಡಿಮನೆ ಎಂಬಲ್ಲಿಗೆ ತನ್ನ ಮನೆಗೆ ರಾ.ಹೆ-66 ರಲ್ಲಿ ಹೋಗುತ್ತಿರುವಾಗ ಸಮಯ ಸುಮಾರು ಪೂರ್ವಾಹ್ನ 09:00 ಗಂಟೆಗೆ ಮುಳ್ಳಿಕಟ್ಟೆ ಜಂಕ್ಷನ್‌ ನಲ್ಲಿ ಕುಂದಾಪುರ ಕಡೆಗೆ ಹೋಗುವ ರಸ್ತೆಗೆ ತನ್ನ ಬಾಬ್ತು ಮೋಟಾರ್‌ ಸೈಕಲ್ ಕ್ರಾಸ್‌ ಮಾಡಿಕೊಂಡು ಹೋಗುತ್ತಿರುವಾಗ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ KA 63 7148  ನೇ VRL ಗೂಡ್ಸ್‌ ಲಾರಿಯನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ತೀರಾಬಲಕ್ಕೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಹೆಂಡತಿ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಎಡಕೈ, ಎಡಕಾಲಿಗೆ ಕೆನ್ನೆಯ ಎಡಭಾಗ ತರಚಿದ ರಕ್ತಗಾಯ ವಾಗಿರುತ್ತದೆ ಅವರ ಹೆಂಡತಿ ಪದ್ಮಾವತಿ(65 ವರ್ಷ) ರವರಿಗೆ ಬಲಕಾಲಿನ ಪಾದದ ಗಂಟಿನ ಬಳಿ ಗಾಯವಾಗಿ ಮೂಳೆ ಜಖಂ ಆಗಿದ್ದು,ಸೊಂಟಕ್ಕೆ,ತಲೆಗೆ, ಕೈಗೆ ಒಳ ಜಖಂ ಉಂಟಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 59/2021 ಕಲಂ 279,337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿರ್ಯಾದಿ ಸಂತೋಷ ಇವರ ತಮ್ಮ ಗಣೇಶ ರವರು  ದಿನಾಂಕ 23.06.2021 ರಂದು ಸಮಯ ಸುಮಾರು ಬೆಳಗ್ಗೆ 11.30 ಗಂಟೆಗೆ ತನ್ನಬಾಬ್ತು ಮೋಟಾರು ಸೈಕಲ್‌  ನಂಬ್ರ ಕೆ.ಎ. 20 ಇ.ಜೆ. 1906 ನೇದರಲ್ಲಿ ಉಡುಪಿ ಮಂಗಳೂರು ರಾ ಹೆ 66 ರಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಉದ್ಯಾವರ ಜೈಹಿಂದ ಕಾಂಪ್ಲೇಕ್ಸ್ ಹತ್ತಿರ ಹೋಗುತ್ತಿರುವಾಗ ಅದೇ ರಸ್ತೆಯಲ್ಲಿ ನವೀನ್ ಎಂಬವರು ತನ್ನ ಬಾಬ್ತು ಕೆ.ಎ. 20 ಇ.ಎಫ್. 9997 ಮೋಟಾರು ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಮ್ಮನ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದಿದ್ದು ಪರಿಣಾಮ ಪಿರ್ಯಾದಿದಾರರ ತಮ್ಮ ಗಣೇಶ ರವರು ರಸ್ತೆಗೆ ಬಿದಿದ್ದು,  ಅಲ್ಲೇ ಇದ್ದ ಪಿರ್ಯಾದಿದಾರರು ಕೂಡಲೇ ಉಪಚರಿಸಿ ನೋಡುವಾಗ ಆತನಿಗೆ ಬಲಕಾಲಿಗೆ, ಪೆಟ್ಟಾಗಿದ್ದು, ಮೈಕೈಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪಿರ್ಯಾದಿದಾರರು ಅವರ ರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು ಉಡುಪಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ಅಲ್ಲಿನ ವೈದ್ಯರು ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 109/2021  ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕೋಟ: ದಿನಾಂಕ 25/06/2021 ರಂದು ಬೆಳಿಗ್ಗೆ ಕೋಟ  ಠಾಣೆಯ ಪಿ.ಎಸ್‌.ಐ. ಸಂತೋಷ ಬಿ.ಪಿ. (ಕಾ & ಸು) ರವರಿಗೆ ಬಾತ್ಮೀದಾರರೊಬ್ಬರು ಕರೆಮಾಡಿ  ಕಾವಡಿಯ ಸತೀಶ್‌ ಪೂಜಾರಿ ಎಂಬವರು ಸಾಲಿಗ್ರಾಮ ಕಡೆಯಿಂದ ಮಂಗಳೂರು ಕಡೆಗೆ ಒಂದು ಬುಲೇರೋ ಪಿಕ್‌ಅಪ್‌ ವಾಹನ ನಂಬ್ರ KA-19-AB-5828 ನೇ ಗೂಡ್ಸ್‌ ವಾಹನದಲ್ಲಿ  ಅಕ್ರಮವಾಗಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಜಾನುವಾರುಗಳನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಂತೆ ಮಾಹಿತಿಯನ್ನು ಖಚಿತಪಡಿಸಿಕೊಂಡು ಕೂಡಲೇ ಠಾಣೆಯಿಂದ ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪಿನಲ್ಲಿ ಠಾಣೆಯಿಂದ ಹೊರಟು ಬ್ರಹ್ಮಾವರ ತಾಲೂಕು ಗುಂಡ್ಮಿ ಗ್ರಾಮದ ಸಾಸ್ತಾನ ಜಂಕ್ಷನ್ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ ಪೂರ್ವ ಪಥದ ರಸ್ತೆಯಲ್ಲಿ ಕೋಟ ಸಾಲಿಗ್ರಾಮ ಕಡೆಯಿಂದ ಉಡುಪಿ ಮಂಗಳೂರು ಹೋಗುವ ಬರುವ ಎಲ್ಲಾ ವಾಹನಗಳ ತಪಾಸಣೆ ಮಾಡುತ್ತಿರುವಾಗ ಬೆಳಿಗ್ಗೆ 06-30 ಗಂಟೆಯ ಸಮಯಕ್ಕೆ ಬುಲೇರೋ ಪಿಕ್‌ಅಪ್‌ ವಾಹನ ನಂಬ್ರ KA-19-AB-5828 ನೇ ಗೂಡ್ಸ್‌ ವಾಹನದ ಚಾಲಕನು ಸಮವಸ್ರದಲ್ಲಿದ್ದ ಅವರನ್ನು ನೋಡಿ ತನ್ನ ವಾಹನವನ್ನು ಸುಮಾರು 50 ಮೀಟರ್ ಹಿಂದೆ ನಿಲ್ಲಿಸಿದ್ದು, ಸದ್ರಿ ವಾಹನದ ಮೇಲೆ ಸಂಶಯ ಬಂದಿದ್ದು, ಸಿಬ್ಬಂದಿಗಳೊಂದಿಗೆ ಸದ್ರಿ ವಾಹವನ್ನು ತಪಾಸಣೆ ಮಾಡಲು ಹೊರಟಾಗ ವಾಹನದಲ್ಲಿದ್ದ ಮೂವರು ವ್ಯೆಕ್ತಿಗಳು ಓಡಿ ಹೋಗಿದ್ದು, ಹತ್ತಿರಕ್ಕೆ ಹೋಗಿ ನೋಡಲಾಗಿ ಸದ್ರಿ ಪಿಕ್ ಅಪ್‌ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕತ್ತಿಗೆಗೆ ನೈಲಾನ್‌ ರೋಪ್‌ ಹಗ್ಗವನ್ನು ಕಟ್ಟಿ ಅವುಗಳಿಗೆ ಆಹಾರ ಮೇವು ನೀರು ನೀಡದೆ ಮಾಂಸಕ್ಕಾಗಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು ಸದ್ರಿ ಗೂಡ್ಸ್‌ ವಾಹನದ ಹಿಂಬದಿಯಲ್ಲಿರುವ 1) ಬುಲೇರೋ ಪಿಕ್‌ಅಪ್‌ ವಾಹನ ನಂಬ್ರ KA-19-AB-5828 ನೇಯದದ ಅಂದಾಜು ಮೌಲ್ಯ ಸುಮಾರು 2,00,000 2) ಕಂದು ಬಣ್ಣದ ಜರ್ನಿ ದನ-1 ಇದರ ಅಂದಾಜು ಮೌಲ್ಯ 10,000 3) ಕಂದು ಬಣ್ಣದ ಗಂಡು ಕರುಗಳು - ಅಂದಾಜು ಮೌಲ್ಯ 2,000 4) ಕಪ್ಪು ಬಣ್ಣದ ಗಂಡು ಕರು-1 ಅಂದಾಜು ಮೌಲ್ಯ 2,000 5) ಕಪ್ಪು ಬಣ್ಣದ ಕೋಣಗಳು-1 ಅಂದಾಜು ಮೌಲ್ಯ 15,000 6) ಕಪ್ಪು ಬಣ್ಣದ ಕೋಣಗಳು-1 ಅಂದಾಜು ಮೌಲ್ಯ 15,000 7) ದನಗಳನ್ನು ಕಟ್ಟಿರುವ ನೈಲಾನ್ ರೋಪ್‌ ಹಗ್ಗ 10  ಅಂದಾಜು ಮೌಲ್ಯ ಬೆಲೆಬಾಳುವುದಿಲ್ಲ., ಸದ್ರಿ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡು 3 ಜನ ಅಪರಿಚಿತ ವ್ಯಕ್ತಿಗಳು ಹಾಗೂ ಸತೀಶ್‌ ಪೂಜಾರಿ ಕಾವಡಿ ವಿರುದ್ದ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 123/2021 ಕಲಂ: 379 IPC,ಜೊತೆಗೆ ಕಲಂ 8.9.11 ಗೋ ಹತ್ಯೆ ತಡೆ ಹಾಗೂ ಜಾನುವಾರು ಸಂರಕ್ಷಣ ಕಾಯ್ದೆ 1964 ಮತ್ತು ಕಲಂ 11 (1)(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-06-2021 06:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080