ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ದಿನಾಂಕ 23/05/2023 ರಂದು ಪಿರ್ಯಾದಿದಾರರಾದ ಶೀತಲ್ ಕುಂದರ್ (29) , ತಂದೆ: ಧನಂಜಯ ಕುಂದರ್, ವಾಸ: ಅಮ್ಮುಂಜೆ ಕುದ್ರು, ತೆಂಕಬೆಟ್ಟು ಪೋಸ್ಟ್, ಉಪ್ಪೂರು ಗ್ರಾಮ ಬ್ರಹ್ಮಾವರ ಇವರು ಅಂಬಲಪಾಡಿ ಕಡೆಯಿಂದ ಮನೆಯಾದ ಉಪ್ಪೂರು ಕಡೆಗೆ ತನ್ನ ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಮದ್ಯಾಹ್ನ 13:45 ಗಂಟೆಗೆ ಅಂಬಲಪಾಡಿ ಗ್ರಾಮದ ರಾಯಲೆ ಎನ್‌ಪೀಲ್ಡ್ ಶೋ ರೂಂ ಬಳಿ  ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ನೇ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ KA-20-HA-9898 ನೇ ಸವಾರ ಅಜಿತ್ ಆಚಾರ್ಯ ಅಂಬಲಪಾಡಿ ಕಡೆಯಿಂದ ಕರಾವಳಿ ಕಡೆಗೆ ತಾನು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಯಾವುದೇ ಸೂಚನೆಯನ್ನು ನೀಡದೇ ಒಮ್ಮೆಲೆ ಸರ್ವಿಸ್ ರಸ್ತೆಗೆ ತಿರುಗಿಸಿದ ಪರಿಣಾಮ ಅದೇ ರಸ್ತೆಯಲ್ಲಿ KA-20-EF-0836 ನೇ ಸ್ಕೂಟರ್ ಸವಾರರಾದ ಪೂರ್ಣಿಮಾ ರವರು ಅಂಬಲಪಾಡಿ ಕಡೆಯಿಂದ ಕರಾವಳಿ ಕಡೆಗೆ ಹೋಗುತ್ತಿದ್ದವರಿಗೆ ಡಿಕ್ಕಿಹೊಡೆದ ಪರಿಣಾಮ ಪೂರ್ಣಿಮಾ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಬಲಕಾಲಿಗೆ ಮೂಳೆಮುರಿತದ ಜಖಂ ಹಾಗೂ ಬಲಕಣ್ಣಿ ಹುಬ್ಬಿನ ಮೇಲೆ ತರಚಿದ ರಕ್ತಗಾಯ ಆದವರನ್ನು ಚಿಕಿತ್ಸೆಯ ಬಗ್ಗೆ ಹೈಟೆಕ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 55/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕಾಪು: ಪಿರ್ಯಾದಿದಾರರಾದ ಉಮೇಶ್ ಆಚಾರ್‌(58), ತಂದೆ: ರಾಮಚಂದ್ರ ಆಚಾರ್‌, ವಾಸ: ಹಂಗಳೂರು ಹುಚ್‌ಕೆರೆ ಕುಂದಾಪುರ ತಾಲೂಕು ಇವರ ಮಾವ ಮಂಜಯ್ಯ ಆಚಾರ್ (73) ರವರು ದಿನಾಂಕ 24/05/2023 ರಂದು ತನ್ನ ಸಂಬಂಧಿಕರ ಉಪನಯನ ಕಾರ್ಯಕ್ರಮಕ್ಕೆ ಕಾಪುವಿನ ಕಾಳಿಕಾಂಬ ದೇವಸ್ಥಾನಕ್ಕೆ ತನ್ನ KA-20-EQ-1334 ನೇ ಸ್ಕೂಟರಿನಲ್ಲಿ ಬಂದು ಕಾರ್ಯಕ್ರಮ ಮುಗಿಸಿ ವಾಪಾಸು ತನ್ನ ಮನೆ ತ್ರಾಸಿ ಕಡೆಗೆ ಹೋಗಲು ಕಾಪು ಪೇಟೆಯಿಂದ ಕಾಪು ಕೆ 1 ಹೋಟೆಲ್ ಬಳಿ ಉಡುಪಿ ಮಂಗಳೂರು ರಸ್ತೆಯನ್ನು ದಾಟಿ ಡೈವರ್ಶನ್ ಮೂಲಕ ಮಂಗಳೂರು ಉಡುಪಿ ರಾಷ್ಟೀಯ ಹೆದ್ದಾರಿ 66 ರಸ್ತೆಗೆ  ಬರುತ್ತಿರುವಾಗ ದಿನಾಂಕ 24/05/2023 ರಂದು 14:00 ಗಂಟೆಗೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ KA-20-MC-9754 ನೇ ಕಾರು ಚಾಲಕ ರಮೇಶ್ ಪಾಂಡುರಂಗ ರವರು ತನ್ನ ಕಾರನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಮಂಜಯ್ಯ ಆಚಾರ್ ರವರು ಸವಾರಿಮಾಡಿಕೊಂಡು ಹೋಗುತ್ತಿದ್ದ KA-20-EQ-1334 ನೇ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮಂಜಯ್ಯ ಆಚಾರ್ ರವರ ತಲೆಗೆ ತೀವೃ ರಕ್ತ ಗಾಯ ಹಾಗೂ ಕೈ ಕಾಲು ಮೈಗೆ ತರಚಿದ ಗಾಯ ಆಗಿರುತ್ತದೆ. ಈ ಬಗ್ಗೆ ಮಂಜಯ್ಯ ಆಚಾರ್ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಓಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 88/2023,  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ 24/05/2023 ರಂದು ನರೇಂದ್ರ, ಪೊಲೀಸ್‌ ಉಪನಿರೀಕ್ಷಕರು (ತನಿಖೆ), ಕೋಟ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಪಾರಂಪಳ್ಳಿ  ಗ್ರಾಮದ ಸಾಲಿಗ್ರಾಮ ಗಣೇಶ ಗ್ರ್ಯಾಂಡ್ ಹೋಟೆಲ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಉಡುಪಿ ಕಡೆಯಿಂದ ಕುಂದಾಪುರ ಕಡೆಗ KA-20-V-9992 ನೇ ಪ್ಲಾಟಿನಮ್ ಮೋಟಾರ್ ಸೈಕಲಿನಲ್ಲಿ 4 ಜನರು ಕುಳಿತು ಅದರ ಸವಾರ ಹೆಲ್ಮೇಟ್‌ ಕೂಡಾ ಧರಿಸದೇ ಅತೀವೇಗವಾಗಿ ಬರುತ್ತಿರುವುದನ್ನು  ಸ್ಕೂಟಿ ಸವಾರನಿಗೆ ವಾಹನ ನಿಲ್ಲಿಸುವಂತೆ ಸೂಚನೆ ನೀಡಿದರೂ ಸಹ  ಸ್ಕೂಟಿ ಸವಾರನು ಮೋಟಾರ್ ಸೈಕಲ್ ಅನ್ನು ನಿಧಾನಿಸದೇ ಇನ್ನೂ ಹೆಚ್ಚಿನ ಎಕ್ಸಲೈಟರ್ ನೊಂದಿಗೆ ಅತೀವೇಗವಾಗಿ ಸವಾರಿ ಮಾಡಿಕೊಂಡು ಬಂದು ವಾಹನ ತಪಾಸಣೆ ಮಾಡುತ್ತಿದ್ದ ಪಿರ್ಯಾದಿದಾರರು ಮತ್ತು ಸಿಬ್ಬಂದಿಗಳ ಮೈಮೇಲೆ ಬಂದಂತೆ ಚಲಾಯಿಸಿ, ಕರ್ತವ್ಯದಲ್ಲಿದ್ದವರ  ದೈಹಿಕ ಸುರಕ್ಷತೆಗೆ ಮತ್ತು ಪ್ರಾಣಕ್ಕೆ ಅಪಾಯವಾಗುವಂತೆ ಸಾರ್ವಜನಿಕ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಮೋಟಾರ್ ಸೈಕಲ್ ಸವಾರಿ ಮಾಡಿಕೊಂಡು ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ ಕ್ರ  100/2023  ಕಲಂ: 279, 336 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ದಿನಾಂಕ 24/05/2023 ರಂದು ಮದ್ಯಾಹ್ನ 1:05 ಗಂಟೆಯಿಂದ 03:00 ಗಂಟೆಯ ನಡುವೆ  ಸಂತೋಷ (41) ಎಂಬುವವರು ಜೀವನದಲ್ಲಿ ಜಿಗುಪ್ಸೆಗೊಂಡು  ಉಡುಪಿ ತಾಲೂಕು ಮರ್ಣೆ ಗ್ರಾಮದ ಪ್ರೆಂಡ್ಸ್‌ ಸರ್ಕಲ್‌ಹತ್ತಿರ ಇರುವ ಶ್ರೀಲ ಎಂಬ ಮನೆಯ ಹಾಲ್‌ನ ಮಹಡಿಗೆ ಅಳವಡಿಸಿದ ಕಬ್ಬಿಣದ ಆಂಗ್ಲರ್‌ಗೆ ನೈಲಾನ್‌ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 27/2023 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-05-2023 09:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080