ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಹೆರಾಲ್ಡ್‌ ಪ್ರಾನ್ಸಿಸ್‌ಲಿಯೋ ಮಂಥೆರೋ, (65) ತಂದೆ: ದಿ. ಲಿಯೋ ಮಂಥೆರೋ, ವಾಸ: ”ಫ್ರಾಂಕ್ಲಿನ್‌” ಸೈಟ್‌ನಂಬ್ರ 166, 5ನೇ ಬ್ಲಾಕ್‌, ಕೃಷ್ಣಾಪುರ, ಮಂಗಳೂರು ಇವರು ದಿನಾಂಕ 23/05/2022 ರಂದು ತಮ್ಮನ ಹೆಂಡತಿ ಲೀನಾ ಮೆಂತಾರೋ ಎಂಬವರ KA-19-EK-5309 ಹೋಂಡಾ ಆಕ್ಟೀವಾ ಸ್ಕೂಟ ರಿನಲ್ಲಿ ಬೆಳ್ಮಣ್‌‌ಗೆ ಬಂದು ವಾಪಸ್ಸು ಮನೆಗೆ ಹೋಗಲು ಅದೇ ಸ್ಕೂಟರಿನಲ್ಲಿ ಬೆಳ್ಮಣ್‌ನಿಂದ ಪಡುಬಿದ್ರಿ ಮಾರ್ಗವಾಗಿ ರಾಜ್ಯ ಹೆದ್ದಾರಿ -01 ರಲ್ಲಿ ಸವಾರಿ ಮಾಡಿಕೊಂಡು ಹೊರಟು ಮದ್ಯಾಹ್ನ 3:15 ಗಂಟೆ ಸುಮಾರಿಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಕಂಚಿನಡ್ಕ ಬಳಿಯ ಭಾರತ್‌ ಪೆಟ್ರೋಲ್ ಪಂಪ್‌ಬಳಿ ತಲುಪುವಾಗ ಎದುರುಗಡೆಯಿಂದ ಅಂದರೆ ಪಡುಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ KA-19-D-0593 ನಂಬ್ರದ ಟ್ಯಾಂಕರ್‌ಚಾಲಕನು ತನ್ನ ಟ್ಯಾಂಕರ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಹೆರಾಲ್ಡ್‌ ಪ್ರಾನ್ಸಿಸ್‌ಲಿಯೋ ಮಂಥೆರೋ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ ಸ್ಕೂಟರಿಗೆ ಟ್ಯಾಂಕರ್‌ನ ಬಲಬದಿಯ ಹಿಂಬಾಗದ ಟಯರ್‌ನ ಗಾರ್ಡ್‌ನ ಮುಂಭಾಗ ಡಿಕ್ಕಿ ಪಡಿಸಿದ್ದರಿಂದ ಸ್ಕೂಟರ್‌ ಸಮೇತ ಡಾಮರು ರಸ್ತೆಗೆ ಬಿದ್ದಿದ್ದು, ಪರಿಣಾಮ ಬಲಕಾಲಿನ ಮೂಳೆಮುರಿತ, ಸೊಂಟಕ್ಕೆ ಗುದ್ದಿದ ಒಳನೋವು, ಬಲಕೈ ಬೆರಳುಗಳಿಗೆ ಜಖಂ ಹಾಗೂ ಮುಖದ ಬಲಬದಿ, ಮೂಗು ಹಣೆಗೆ ತರಚಿದ ರಕ್ತಗಾಯ ಆಗಿ ಮಂಗಳೂರಿನ ಫಾದರ್ಸ್‌ ಮುಲ್ಲರ್ಸ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಅಫಘಾತಕ್ಕೆ KA-19-D-0593 ನಂಬ್ರದ ಟ್ಯಾಂಕರ್‌ ಚಾಲಕ ಗಿರಿಯಪ್ಪ ಪೂಜಾರಿ ಇವರ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ರಾಜೇಶ್ ಕುಂದರ್, (38) ತಂದೆ: ನಾರಾಯಣ ಎಸ್ ಕುಂದರ್, ವಾಸ: # 6/177, ತಾರಾ ನಿವಾಸ, ವಿಷ್ಣು ಭಜನಾ ಮಂದಿರದ ಬಳಿ, ಎರ್ಮಾಳು, ಬಡಾ ಗ್ರಾಮ, ಕಾಪು ಇವರು ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದು, ದಿನಾಂಕ 23/05/2022 ರಂದು ರಾತ್ರಿ ತನ್ನ KA-20-EV-1332 ನೇ ಟಿ.ವಿ.ಎಸ್. ಜುಪಿಟರ್ ಸ್ಕೂಟರ್ ನಲ್ಲಿ ಉಚ್ಚಿಲದಿಂದ ಮನೆಗೆ ಹೋಗುತ್ತಾ, ಸಮಯ ಸುಮಾರು 22:15 ಗಂಟೆಯ ವೇಳೆಗೆ ಕಾಪು ತಾಲೂಕು ಬಡಾ ಎರ್ಮಾಳು ಗ್ರಾಮದ ಬುನಿಯಾ ಹೌಸ್ ಬಳಿ ರಸ್ತೆಯ ಬದಿಯಲ್ಲಿ ಸ್ಕೂಟರನ್ನು ನಿಲ್ಲಿಸಿ ಸ್ನೇಹಿತನಿಗೆ ಫೋನ್‌ನಲ್ಲಿ ಮಾತಾಡಿ ಹೊರಡುವ ಸಮಯ ಎದುರಿನಿಂದ ಅಂದರೆ, ಉಡುಪಿ-ಮಂಗಳೂರು ಏಕಮುಖ ಸಂಚಾರ ರಸ್ತೆಯ ವಿರುದ್ಧ ದಿಕ್ಕಿನಲ್ಲಿ KA-20-EW-7876 ನೇ ನಂಬ್ರದ ಮೋಟಾರ್ ಸೈಕಲ್ ಸವಾರ ಯಶೋಧರ ಶೆಟ್ಟಿ ಎಂಬುವರು ತನ್ನ ಯೂನಿಕಾರ್ನ್‌ ಮೋಟಾರ್‌ ಸೈಕಲ್ಲನ್ನು ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಜೇಶ್‌ ಕುಂದರ್‌ ರವರ ಬಲಕಾಲಿಗೆ ಡಿಕ್ಕಿ ಹೊಡೆದು ಸ್ವಲ್ಪ ಮುಂದಕ್ಕೆ ಹೋಗಿ ಆತನೂ ಸಹ ಮೋಟಾರ್‌ಸೈಕಲ್ ಸಮೇತ ರಸ್ತೆಗೆ ಬಿದ್ದಿರುತ್ತಾನೆ. ಸದ್ರಿ ಅಪಘಾತದಿಂದ ರಾಜೇಶ್ ಕುಂದರ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಅವರ ಬಲಕಾಲಿನ ಪಾದಕ್ಕೆ ಮತ್ತು ಕೋಲು ಕಾಲಿಗೆ ಮಾಂಸ ಕಿತ್ತು ಹೋಗಿ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ನಂತರ ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಯಶೋಧರ ಶೆಟ್ಟಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ರಾಜೇಶ್ ಕುಂದರ್ ರವರು ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 62/2022 ಕಲಂ: 279,  338 ಐಪಿಸಿ. Rule 218, R/W 177 IMV Act ರಂಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾದ ರಾಘವೇಂದ್ರ ಶೆಟ್ಟಿ (42) ತಂದೆ: ಗಣಪತಿ ಶೆಟ್ಟಿ ವಾಸ: ಲಕ್ಷ್ಮೀ ನಿವಾಸ ಮೇರಿಹಿಲ್ ಮಂಗಳೂರು ಇವರು ತಮ್ಮ  ಕಾರು KA-19 MF-5669  ನೇದರಲ್ಲಿ  ಪ್ರಯಾಣಿಕರಾದ   ಪಿರ್ಯಾದಿದಾರ ಪತ್ನಿ ಅಪರ್ಣ ಹಾಗೂ ಮಕ್ಕಳಾದ ವೈಭವಿ, ವೈಷ್ಣವಿ ರವರೊಂದಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವರ ದರ್ಶನ ಮಾಡಿ ವಾಪಾಸ್ಸು ಮಂಗಳೂರಿಗೆ ತೆರಳುತ್ತಿರುವಾಗ ಇವರ ಕಾರು ದಿನಾಂಕ  24/05/2022  ರಂದು  14:00 ಗಂಟೆಗೆ  ಇಡೂರು  ಗ್ರಾಮದ  ರಾಜ್ಯಹೆದ್ದಾರಿ 27  ರಲ್ಲಿ ಇಂಬು ಏಳನೇ ಮೈಲು ತಲುಪುವಾಗ ಎದುರಿನಿಂದ ಅಂದರೆ  ಚಿತ್ತೂರು ಕಡೆಯಿಂದ  ಕೊಲ್ಲೂರು ಕಡೆಗೆ  ಆಪಾದಿತ KA-20-EY-7662 ನೇ ಮೋಟಾರ್ ಸೈಕಲ್  ಸವಾರನ್ನು  ತನ್ನ  ಮೋಟಾರ್ ಸೈಕಲ್ ನ್ನು ಪಿಕಪ್ ವಾಹನವನ್ನು ಓವವರ್ ಟೇಕ್ ಮಾಡುವ ಬಾರದಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ  ರಸ್ತೆಯ  ತೀರಾ ಬಲಭಾಗಕ್ಕೆ ಚಲಾಯಿಸಿ  ಮೋಟಾರ್ ಸೈಕಲ್ ಹತೋಟಿ ತಪ್ಪಿ ಸ್ಕಿಡ್ ಆಗಿ  ಮೋಟಾರ್ ಸೈಕಲ್ ನ ಸಹ ಸವಾರನೊಂದಿಗೆ ರಾಘವೇಂದ್ರ ರವರ ಕಾರಿನ ಬಲಬದಿಗೆ ಡಿಕ್ಕಿ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಆರೋಪಿ ಹಾಗೂ ಸಗ ಸವಾರನಿಗೂ ತಲೆಗೆ ಮತ್ತು ಕೈಗೆ  ರಕ್ತ ಗಾಯವಾಗಿರುತ್ತದೆ. ರಾಘವೇಂದ್ರ ಶೆಟ್ಟಿ ರವರು ಗಾಯಾಳುಗಳನ್ನು ಕುಂದಾಪುರ ಆದರ್ಶ ಆಸ್ಪತ್ರೆಗೆ ಚಿಕಿತ್ಸೆಬಗ್ಗೆ ದಾಖಲಿಸಿ ಠಾಣೆಗೆ ಬಂದು ದೂರು ನೀಡಿರುತ್ತಾರೆ.  ಈ ಅಪಘಾತಕ್ಕೆ  KA20-EY-7662 ನೇ ಮೋಟಾರ್ ಸೈಕಲ್  ಸವಾರನ ತನ್ನ  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿರುವುದೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹೆಂಗಸು ಕಾಣೆ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಸವೀತಾ ದೇವಾಡಿಗ, (38) ಗಂಡ: ನಾಗರಾಜ, ನಮ್ಮಭೂಮಿ, ಕನ್ಯಾನ ಗ್ರಾಮ, ಕುಂದಾಪುರ ಇವರು ನಮ್ಮಭೂಮಿ ಹೆಸರಿನ ಎನ್‌.ಜಿ.ಒ ಸಂಸ್ಥೆಯಲ್ಲಿ ವಾರ್ಡನ್‌ ಆಗಿ ಕೆಲಸ ಮಾಡಿಕೊಂಡಿದ್ದು ಸದ್ರಿ ಸಂಸ್ಥೆಗೆ ದಿನಾಂಕ 23/05/2022 ರಂದು ರಾತ್ರಿ 10:30 ಗಂಟೆಗೆ ಕುಂದಾಪುರ ಪೊಲೀಸ್‌ ಠಾಣೆಯ ಸಿಬ್ಬಂದಿಯವರು ಯಶೋಧ ಎಂಬ ಮಾನಸಿಕ ಅಸ್ವಸ್ಥ ರಂತೆ ಕಂಡುಬಂದ ಮಹಿಳೆಯನ್ನು ತಾತ್ಕಾಲಿಕ ನೆಲೆಯಲ್ಲಿ ಬಿಟ್ಟು ಹೋಗಿದ್ದು ದಿನಾಂಕ 24/05/2022 ರಂದು ಸಂಸ್ಥೆಯ ಸೆಕ್ಯೂರಿಟಿ ರವರು ಯಶೋಧರವರು ಇದ್ದ ರೂಮಿಗೆ ಹೋಗಿ ನೋಡಿದಾಗ ಯಶೋಧರವರು ಇಲ್ಲದೇ ಇದ್ದು ಈ ಬಗ್ಗೆ  ಸವೀತಾ ದೇವಾಡಿಗ ರವರು ಹಾಗೂ ಸಿಬ್ಬಂದಿಯವರು ಎಲ್ಲ ಕಡೆ ಹುಡುಕಾಡಿದರೂ ಯಶೋಧರವರು  ಪತ್ತೆ ಯಾಗಿರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2022 ಕಲಂ: ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಾಧಕ ವಸ್ತು ಸೇವನೆ ಪ್ರಕರಣ

  • ಶಿರ್ವಾ: ರಾಘವೇಂದ್ರ ಸಿ. ಪಿಎಸ್‌ಐ, ಶಿರ್ವ ಪೊಲೀಸ್‌ಠಾಣೆ ಇವರು ದಿನಾಂಕ 24/05/2022 ರಂದು ಬೆಳಗ್ಗೆ 08:30 ಗಂಟೆಗೆ ಕಾಪು ತಾಲೂಕು ಶಿರ್ವಾ ಗ್ರಾಮದ ಶಿರ್ವ ಮಸೀದಿಯ ಬಳಿ ಇರುವ ಸಾರ್ವಜನಿಕ ಬಸ್ಸು ನಿಲ್ದಾಣದ ಬಳಿ ಕರ್ತವ್ಯದಲ್ಲಿ ಇರುವಾಗ ಆಪಾದಿತ ಅಕ್ಬರ(33), ತಂದೆ: ಅಬ್ದುಲ್‌, ವಾಸ: ಶಾಯಿನ್‌ಮಂಜಿಲ್‌‌, ಪಕ್ಕೀರಣಕಟ್ಟೆ, ಮಲ್ಲಾರು ಅಂಚೆ ಮತ್ತು ಗ್ರಾಮ, ಕಾಪು ಇತನು ಮಾದಕ ವಸ್ತು ಗಾಂಜಾವನ್ನು ಸಿಗರೇಟ್‌ನಲ್ಲಿ ಸೇರಿಸಿ ಸೇದುತ್ತಿದ್ದವನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಪಾದಿತನು ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿ ಬಂದಿರುವುದಾಗಿದೆ, ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2022 ಕಲಂ: 27(b) NDPS Actರಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ರಾಘವೇಂದ್ರ ಸಿ. ಪಿಎಸ್‌ಐ, ಶಿರ್ವ ಪೊಲೀಸ್‌ಠಾಣೆ ಇವರು ದಿನಾಂಕ 24/05/2022 ರಂದು ಬೆಳಗ್ಗೆ 08:30  ಗಂಟೆಗೆ ಕರ್ತವ್ಯದಲ್ಲಿ ಇರುವಾಗ ಕಾಪು ತಾಲೂಕು ಶಿರ್ವಾ ಗ್ರಾಮದ ಶಿರ್ವ ಮಸೀದಿಯ ಬಳಿ ಇರುವ  ಸಾರ್ವಜನಿಕ ಬಸ್ಸು ನಿಲ್ದಾಣದ ಬಳಿ ಆಪಾದಿತ ಕಲಂದರ್‌(35), ತಂದೆ:ಮೊಹಮ್ಮದ್‌ಅಬುಬಕ್ಕರ್‌, ವಾಸ: ಜವನರಕಟ್ಟೆ, ಬೆಳಪು ಅಂಚೆ ಮತ್ತು ಗ್ರಾಮ, ಕಾಪು ತಾಲೂಕು, ಉಡುಪಿ ಇತನು ಮಾದಕ ವಸ್ತು ಗಾಂಜಾವನ್ನು ಸಿಗರೇಟ್‌ನಲ್ಲಿ ಸೇರಿಸಿ ಸೇದುತ್ತಿದ್ದವನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಪಾದಿತನು ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಬಂದಿರುವುದಾಗಿದೆ, ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2022 ಕಲಂ: 27(b) NDPS Actರಂತೆ ಪ್ರಕರಣ ದಾಖಲಾಗಿರುತ್ತದೆ.  

ಮಟ್ಕಾ ಜುಗಾರಿ ಪ್ರಕರಣ

  • ಕುಂದಾಪುರ: ನಿರಂಜನ ಗೌಡ ಬಿ.ಎಸ್ ಪೊಲೀಸ್ ಉಪ ನಿರೀಕ್ಷಕರು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಉಡುಪಿ ರವರು  ದಿನಾಂಕ 24/05/2022 ರಂಸು 15:30 ಗಂಟೆ ಸಮಯಕ್ಕೆ ದೊರೆತ ಖಚಿತ ವರ್ತಮಾನದ ಮೇರೆಗೆ ಠಾಣಾ ವ್ಯಾಪ್ತಿಯ ಕುಂದಾಪುರ ತಾಲೂಕು ಹಟ್ಟಿಯಂಗಡಿ ಗ್ರಾಮದ ಹಟ್ಟಿಯಂಗಡಿ ಜಂಕ್ಷನ್ ಬಳಿಯ ಆಟೋರಿಕ್ಷಾ ನಿಲ್ಧಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟವಾಡುತ್ತಿದ್ದ ಆರೋಪಿತ ಪ್ರವೀಣ ಮೊಗವೀರ ಪ್ರಾಯ-31 ವರ್ಷ, ತಂದೆ: ವಿಶ್ವನಾಥ ಶೆಟ್ಟಿ, ವಾಸ: ದಾರನಾಯ್ಕನ ಮನೆ ಹಟ್ಟಿಕುದ್ರು, ಬಸ್ರೂರು ಗ್ರಾಮ, ಕುಂದಾಪುರ ತಾಲೂಕು ಇವರನ್ನು ಸಮವಸ್ತ್ರದಲ್ಲಿದ್ದ ಸಿಬ್ಬಂಧಿಯವರ ಸಹಕಾರದಿಂದ ಹಾಗೂ ಪಂಚರ ಸಮಕ್ಷಮ 15:50 ಗಂಟೆಯ ಸಮಯಕ್ಕೆ ದಾಳಿ ನಡೆಸಿ ಆರೋಪಿತರಿಂದ  ಕೃತ್ಯದಿಂದ ಸಂಗ್ರಹಿಸಿದ ನಗದು ರೂಪಾಯಿ 945/-, ಕೃತ್ಯಕ್ಕೆ ಉಪಯೋಗಿಸಿದ ಮಟ್ಕಾ ನಂಬ್ರ ಬರೆದ ಚೀಟಿ-1 ಹಾಗೂ ಬಾಲ್ ಪೆನ್-1 ಅನ್ನು ಸ್ವಾದೀನಕ್ಕೆ ತೆಗೆದುಕೊಂಡು ಆರೋಪಿತರಿಗೆ ಕಲಂ: 41 (ಎ)CrPC ಯಂತೆ ನೋಟಿಸ್ ಜ್ಯಾರಿ ಮಾಡಿ ಆರೋಪಿತರ ವಿರುದ್ದ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 23/2022 ಕಲಂ: 78(1)&(3) KP Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ದಿನಾಂಕ 24/05/2022 ರಂದು ಸಕ್ತಿವೇಲು ಈ, ಪಿಎಸ್ಐ ಮಲ್ಪೆ ಠಾಣೆ ಇವರು ಠಾಣೆಯಲ್ಲಿರುವಾಗ ಸಂಜೆ 17:00 ಗಂಟೆ ಸಿಬ್ಬಂದಿಯಾದ ಎ ಎಸ್ ಐ ರವಿಚಂದ್ರ , ಎಚ್ ಸಿ 62 ನೇ ಲೋಕೇಶ್ ರವರೊಂದಿಗೆ  ಕಲ್ಮಾಡಿ ಜಂಕ್ಷನ್ ಬಳಿ ರೌಂಡ್ಸ್ ನಲ್ಲಿರುವಾಗ ಬೀಟ್ ಕರ್ತವ್ಯದ ಸಿಬ್ಬಂದಿ ಪಿಸಿ 319 ನಾಗರಾಜ ರವರು ಕರೆ ಮಾಡಿ ಇವರಿಗೆ ಬಾತ್ಮೀದಾರರು ಮೊಬೈಲ್ ಗೆ ಕರೆ ಮಾಡಿ ಕೊಡವೂರು ಗ್ರಾಮದ ಬಾಪುತೋಟ – ಪಡುಕೆರೆ ಸೇತುವೆಯ ಬಾಪುತೋಟದ ಎಡ ಭಾಗದ ಸೇತುವೆಯ ಕೆಳ ಭಾಗದಲ್ಲಿ ಸಾರ್ವಜನಿಕ ಖಾಲಿ ಹಾಡಿ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವುದಾಗಿ ಮಾಹಿತಿ ನೀಡಿದ್ದು  ಸದ್ರಿ ಮಾಹಿತಿಯನ್ನು ಸಕ್ತಿವೇಲು ಈ, ಪಿಎಸ್ಐ ಮಲ್ಪೆ ಠಾಣೆ ರವರಿಗೆ ತಿಳಿಸಿದಂತೆ ಇವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸದ್ರಿ ಸ್ಥಳಕ್ಕೆ ಹೋಗಿ ಸಮಯ ಸುಮಾರು 17:30 ಗಂಟೆಗೆ ಇಸ್ಪಿಟು ಜುಗಾರಿ ಆಟ ಆಡುವುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿದ್ದು ಜಗಾರಿ ಆಟ ಆಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಅವರಲ್ಲಿ 5 ಜನರಾದ 1) ಹನುಮೇಶ್ ಸಿರಿವಾರ್ , 2)ಅನಂದ್ ,;3) ಹನುಮಂತ 4) ಷಷ್ಣ್ಮಖ ನಾಯ್ಕ್, .5) ದ್ಯಾಮಣ್ಣ ರವರನ್ನು ವಶಕ್ಕೆ  ಪಡೆದು  ಅವರು ಜುಗಾರಿ ಆಟಕ್ಕೆ ಬಳಸಿದ ಇಸ್ಪೀಟು ಎಲೆಗಳು 52, ಚಾಪೆ ಹಾಗೂ  ಜೂಜಾಟಕ್ಕೆ ಬಳಸಿದ ಒಟ್ಟು ಹಣ 6320/- ರೂಪಾಯಿ ಪಂಚರ ಸಮಕ್ಷಮ ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿರುವುದಾಗಿದೆ.  ಈ ಬಗ್ಗೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 44/2022 ಕಲಂ: 87 KP Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ನಿರಂಜನ ಗೌಡ ಬಿ.ಎಸ್ ಪೊಲೀಸ್ ಉಪ ನಿರೀಕ್ಷಕರು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರು ಉಡುಪಿ ದಿನಾಂಕ 24/05/2022 ರಂದು 18:10 ಗಂಟೆ ಸಮಯಕ್ಕೆ ದೊರೆತ ಖಚಿತ ವರ್ತಮಾನದ ಮೇರೆಗೆ ಠಾಣಾ ವ್ಯಾಪ್ತಿಯ ಕುಂದಾಪುರ ತಾಲೂಕು ಕಾವ್ರಾಡಿ  ಗ್ರಾಮದ ಕಂಡ್ಲೂರು ದೂಪದಕಟ್ಟೆ ಬಸ್ ನಿಲ್ಧಾಣದ  ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ವಾಗಿ ಯಾವುದೇ ಪರವಾನಗಿ ಇಲ್ಲದೇ ಮಧ್ಯ ಸೇವನೆ ಮಾಡುತ್ತಿದ್ದ ಆರೋಪಿತ ಮುಡೂರ ಮೊಗವೀರ (50) ತಂದೆ: ಮಂಜನಾಥ ಮೊಗವೀರ, ವಾಸ: ನೆಂಪು ಮಂಗಲಾ- ಸನಕಟ್ಟೆ ಸಾರಾಳ ಕರ್ಕುಂಜೆ ಗ್ರಾಮ, ಕುಂದಾಪುರ ಇವರನ್ನು ಸಮವಸ್ತ್ರದ ಲ್ಲಿದ್ದ ಸಿಬ್ಬಂಧಿಯವರ ಸಹಕಾರದಿಂದ ಹಾಗೂ ಪಂಚರ ಸಮಕ್ಷಮ ದಾಳಿ ನಡೆಸಿ ಆರೋಪಿತರು ಕೃತ್ಯದಿಂದ ಉಪಯೋಗಿಸಿದ 1] 90 ML.ನ ಮೈಸೂರ್ ಲ್ಯಾನ್ಸರ್ ಮದ್ಯದ ಪೆಟ್‌ಪ್ಯಾಕ್-2.  2] 300 ML ನ ನೀರಿನ ಪ್ಲಾಸ್ಟಿಕ್ ಬಾಟಲಿ -1 3] 90 ML.ನ ಮೈಸೂರು  ಲ್ಯಾನ್ಸರ್ ಮದ್ಯದ ಖಾಲಿ ಪ್ಯಾಕ್ -1.  4] 300 ML ನೀರಿನ ಖಾಲಿ ಪ್ಲಾಸ್ಟಿಕ್ ಬಾಟಲಿ -1.  5] ಪ್ಲಾಸ್ಟಿಕ್ ಗ್ಲಾಸ್-1ಸ್ವಾದೀನಕ್ಕೆ ತೆಗೆದುಕೊಂಡು ಆರೋಪಿತರಿಗೆ ಕಲಂ: 41 (ಎ)CrPC ಯಂತೆ ನೋಟಿಸ್ ಜ್ಯಾರಿ ಮಾಡಿ ಆರೋಪಿತರ ವಿರುದ್ದ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 24/2022 ಕಲಂ: 15 (A)KE Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-05-2022 09:53 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080