ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು

  • ಕುಂದಾಪುರ: ದಿನಾಂಕ 25-05.2021 ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ದೀಪಾ ನಾಯ್ಕ್‌ ರವರು ಕುಂದಾಪುರ ತಾಲೂಕು  ಕಾವ್ರಾಡಿ  ಗ್ರಾಮದ   ಸೌಕೂರು ಕ್ರಾಸ್ ಕಂಡ್ಲೂರು ಚೆಕ್‌ಪೋಸ್ಟ್  ಬಳಿ ಕರ್ತವ್ಯ ನಿರ್ವಹಿಸುತ್ತಿರುವಾಗ 12:50 ಗಂಟೆಗೆ ಕಂಡ್ಲೂರು ಕಡೆಯಿಂದ ದೂಪದಕಟ್ಟೆ ಕಡೆಗೆ ಓರ್ವ ಸ್ಕೂಟರ್ ಸವಾರನು KA 20 EU 6172 ನೇ ಹೋಂಡಾ ಆ್ಯಕ್ಟಿವ್ ಸ್ಕೂಟರನ್ನು ಸವಾರಿ ಮಾಡಿಕೊಂಡು ಬಂದಿದ್ದು, ಈತನನ್ನು ನಿಲ್ಲಿಸಿ ವಿಚಾರಿಸಿದಾಗ ಒಂದು ಬಾರಿ ಮಣಿಪಾಲಕ್ಕೆ ಹೋಗಿದ್ದಾಗಿ ತಿಳಿಸಿದ್ದು ಪುನಃ ಕೇಳಿದಲ್ಲಿ ಉಡುಪಿಯಿಂದ ಬರುವುದಾಗಿ ತಿಳಿಸಿದ್ದು ಯಾವುದೇ ಸರಿಯಾದ ಮಾಹಿತಿ ನೀಡಿರುವುದಿಲ್ಲ. ಈತನು ಅಬ್ದುಲ್ ಬಾಸಿದ್ ಎಂಬುದಾಗಿ ತಿಳಿದು ಬಂದಿದ್ದು ಈ ವ್ಯಕ್ತಿಯನ್ನು ವಿಚಾರಿಸುತ್ತಿದ್ದಾಗ  ಅಲ್ಲಿಯೇ  ಇದ್ದ ಜಿಶಾನ್ ಹಾಗೂ ಮೊಹಮ್ಮದ್ ಸುಭಾನ್ ಇವರುಗಳು ಅಲ್ಲಿಗೆ ಬಂದು ಕೋವಿಡ್ 19 ನಿಯಮಾವಳಿಗಳನ್ನು ಪಾಲಿಸಿದೆ ಯಾವುದೇ ಸಾಮಾಜಿಕ ಅಂತರ ಕಾಪಾಡದೆ ಜೊತೆಯಲ್ಲಿ ನಿಂತುಕೊಂಡು ಚೆಕ್‌ಪೋಸ್ಟ ಕರ್ತವ್ಯದಲ್ಲಿದ್ದ ನೀವು ನಮ್ಮನ್ನು ವಿನಾ ಕಾರಣ ನಿಲ್ಲಿಸಿ ವಿಚಾರಣೆ ಮಾಡುತ್ತೀರ ಎಂದು ಆಕ್ಷೇಪಣೆ ಮಾಡಿರುತ್ತಾರೆ. ಹಾಗೂ ಈ ಸಮಯ ಮೊಹಮ್ಮದ್ ಸುಭಾನ್‌‌ನು ನಮಗೆ ತೊಂದರೆ ನೀಡಿದರೆ ನಮ್ಮ ಸಂಘಟನೆಯವರನ್ನು ಕರೆದುಕೊಂಡು ಬಂದು Rally ಮಾಡುತ್ತೇನೆ’ ಎಂದು ಹೇಳಿರುತ್ತಾನೆ. ಈ ಬಗ್ಗೆ ಆರೋಪಿತ ಅಬ್ದುಲ್ ಬಾಸಿದ್‌‌‌, (35), ತಂದೆ: ಮೊಹಮ್ಮದ್ ಮೀರಾ, ವಾಸ: ಜನತಾ ಕಾಲೊನಿ, ಕಂಡ್ಲೂರು, ಕಾವ್ರಾಡಿ ಗ್ರಾಮ, ಕುಂದಾಪುರ ತಾಲೂಕು. 2) ಜಿಶಾನ್‌‌, (25), ತಂದೆ: ಅಬ್ದುಲ್ ರವೂಫ್‌‌‌, ವಾಸ: ಜನತಾ ಕಾಲೊನಿ, ಕಂಡ್ಲೂರು, ಕಾವ್ರಾಡಿ ಗ್ರಾಮ, ಕುಂದಾಪುರ ತಾಲೂಕು 3) ಮೊಹಮ್ಮದ್ ಸುಭಾನ್‌‌‌, (30), ತಂದೆ: ಅಬ್ದುಲ್ ಮುನಾಫ್‌‌, ವಾಸ: ಜನತಾ ಕಾಲೊನಿ, ಕಂಡ್ಲೂರು, ಕಾವ್ರಾಡಿ ಗ್ರಾಮ, ಕುಂದಾಪುರ ತಾಲೂಕು. ಇವರುಗಳ ವಿರುದ್ದ ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 42/2021  ಕಲಂ: 269,271 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿದೆ.
  • ಉಡುಪಿ: ಹರೀಶ್‌ ಕೆ ಎ.ಎಸ್.ಐ, ಉಡುಪಿ ನಗರ ಪೊಲೀಸ್ ಠಾಣೆ ಇವರು ದಿನಾಂಕ: 24/05/2021 ರಂದು ಠಾಣಾ ಸರಹದ್ದಿನಲ್ಲಿ ಇಲಾಖಾ ಹೊಯ್ಸಳ ವಾಹನದಲ್ಲಿ ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಸಮಯ ಸುಮಾರು 23:00  ಮೂಡನಿಡಂಬೂರು ಗ್ರಾಮದ ಆದಿ ಉಡುಪಿ ಎಂಬಲ್ಲಿ ವಾಸವಾಗಿರುವ ವಲಸೆ ಕಾರ್ಮಿಕರನ್ನು ಅವರ ಊರಿಗೆ ಒಂದು ಫೋರ್ಸ್ ಟೆಂಪೋ ಟ್ರಾವೆಲ್ಲರ್ ನಂಬ್ರ ಕೆಎ 19 ಎಬಿ 2643 ವಾಹನದಲ್ಲಿ ದುಪ್ಪಟ್ಟು ಹಣ ಪಡೆದುಕೊಂಡು ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಗುಂಪು ಗುಂಪಾಗಿ ಬಾಗಲಕೋಟೆ ಜಿಲ್ಲೆಯ ಇಳಕಲ್‌ ಕಡೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ಖಚಿತ ವರ್ತಮಾನ ಬಂದಂತೆ  ಸ್ದಳಕ್ಕೆ ಹೋದಾಗ ಇಲಾಖಾ ವಾಹನವನ್ನು ಕಂಡು ಪ್ರಯಾಣಿಕರು ಅಲ್ಲಿಂದ ಓಡಿ ಹೋಗಿರುತ್ತಾರೆ. ಫೋರ್ಸ್ ಟೆಂಪೋ ಟ್ರಾವೆಲ್ಲರ್ ವಾಹನದ ಚಾಲಕ ಆರೀಫ್‌ ಪ್ರಾಯ 35 ವರ್ಷ, ತಂದೆ: ಅಬ್ದುಲ್‌ ರೆಹಮಾನ್‌  ವಾಸ: ಸುಮಯ ಮಂಜಿಲ್‌, ವಿಶಾಲನಗರ ಪ್ರಾಂತ್ಯ ಗ್ರಾಮ, ಕೊಡಂಗಲು ಅಂಚೆ, ಮೂಡಬಿದ್ರೆ ಈತನು ಕೋವಿಡ್-19 ರ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ಮಾನ್ಯ ರಾಜ್ಯ ಸರ್ಕಾರ ಹಾಗೂ ಉಡುಪಿ ಜಿಲ್ಲಾಧಿಕಾರಿಯವರ ಲಾಕ್ ಡೌನ್ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ಕೋವಿಡ್-19 ಸಾಂಕ್ರಾಮಿಕ ಖಾಯಿಲೆಯ ಸ್ಟೋಟ ಮತ್ತು ಹರಡುವುದನ್ನು ತಡೆಗಟ್ಟಲು ನಿರ್ಲಕ್ಷ ವಹಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 88/2021 ಕಲಂ: 269 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿದೆ. 

ಇತ್ತೀಚಿನ ನವೀಕರಣ​ : 25-05-2021 05:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080