ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ:  ಪಿರ್ಯಾದಿದಾರರಾದ ನಿಶಾನ್ (22),  ತಂದೆ: ನರಸಿಂಹ ಪೂಜಾರಿ,  ವಾಸ: ಗಾಯತ್ರಿ ನಿವಾಸ, ಕುಂಟಲ್ಪಾಡಿ, ಸಾಣೂರು ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 23/04/2023 ರಂದು ಸಂಜೆ 5:30 ಗಂಟೆಗೆ ಕುಂಟಲ್ಪಾಡಿ ಜಂಕ್ಷನ್ ಬಳಿ ಇದ್ದಾಗ KA-20-ES-1285 ನೇ ನೋಂದಣಿ ಸಂಖ್ಯೆಯ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಕುಂಟಲ್ಪಾಡಿ ಬಳಿ ಹೊಟೇಲ್  ಇರುವ ಉಮೇಶ ಪ್ರಭು ಎಂಬುವವರು ತನ್ನ ಮಗ ನಾಗರಾಜ ಪ್ರಭುರವರನ್ನು ಸಹಸವಾರನ್ನಾಗಿ ಕುಳ್ಳಿರಿಸಿಕೊಂಡು ಕುಂಟಲ್ಪಾಡಿ ಕಡೆಯಿಂದ ಸಾಣೂರು ಗರಡಿ ಕಡೆಗೆ ಹೋಗಲು ಸಾಣೂರು ಗ್ರಾಮದ ಕುಂಟಲ್ಪಾಡಿ ಬಸ್‌‌ಸ್ಟ್ಯಾಂಡ್‌‌ ಬಳಿ‌ ತಲುಪುವಾಗ ನಿಟ್ಟೆ  ಕಡೆಯಿಂದ ಪುಲ್ಕೇರಿ ಕಡೆಗೆ KA-20-D-4520 ನೇ ಮಹಿಂದ್ರಾ ಕಂಪೆನಿಯ ಗೂಡ್ಸ್‌‌ ವಾಹನವನ್ನು ಅದರ ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಉಮೇಶ್ ಪ್ರಭುರವರು ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ  ಉಮೇಶ ಪ್ರಭು ಮತ್ತು ಹಿಂಬದಿ ಸವಾರ ನಾಗರಾಜ ಪ್ರಭುರವರು ದ್ವಿಚಕ್ರ ವಾಹನ ಸಮೇತ ಡಾಮಾರು  ರಸ್ತೆಗೆ ಬಿದ್ದಿದ್ದು, ಈ ಅಪಘಾತದಿಂದ ಉಮೇಶ್ ಪ್ರಭುರವರ ತಲೆಗೆ ಹಾಗೂ ದೇಹದ ಇತರ ಕಡೆಗೆ ತೀವ್ರ ತರಹದ ಗಾಯವಾಗಿದ್ದು, ಹಿಂಬದಿ ಸವಾರರಾದ ನಾಗರಾಜರವರಿಗೆ  ತಲೆಗೆ ಹಾಗೂ ಕಾಲಿಗೆ ಸಾಮಾನ್ಯ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 50/2023  ಕಲಂ: 279, 337, 338  ಐಪಿಸಿಯಂಯರ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 22/04/2023 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರರಾದ ಸುನೀತ ವಿ (50) , ಗಂಡ: ಲಕ್ಷ್ಮೀಶ ಎ, ಉಳಿಯಾರು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಮಜೂರು ಗ್ರಾಮ ಕಾಪು ತಾಲೂಕು ತನ್ನ ಮನೆಯಿಂದ ತನ್ನ  KA-20-EZ-6780 ನೇ ಇಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಕಾಪು ಕಡೆಗೆ ಬರುತ್ತಿರುವಾಗ ಮಜೂರು ಜಂಕ್ಷನ್ ಬಳಿ ತಲುಪುವಾಗ ಕಾಪು ಕಡೆಗೆ ಹೋಗಲು ರಸ್ತೆ ಬದಿ ನಿಂತಿದ್ದ ಸುಜಯ ಎಂಬುವವರನ್ನು ತನ್ನ ಸ್ಕೂಟರ್‌ ನಲ್ಲಿ ಕರೆದುಕೊಂಡು ಹೋಗಲು ರಸ್ತೆಯ ಎಡಬದಿಯಲ್ಲಿ ಪಿರ್ಯಾದಿದಾರರು ತನ್ನ ಸ್ಕೂಟರನ್ನು ನಿಲ್ಲಿಸಿದ್ದು, 10:20 ಗಂಟೆಗೆ  ಚಂದ್ರನಗರ ಕಡೆಯಿಂದ  KA-20-EU-3838 ನೇ ಸ್ಕೂಟರ್ ಸವಾರ ತನ್ನ ಸ್ಕೂಟರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಕೆಳಗೆ ಬಿದ್ದು ಅವರ ಬಲಕೈಯ ಹೆಬ್ಬೆರಳು ಹಾಗೂ ತೋರು ಬೆರಳಿಗೆ ಗುದ್ದಿದ ಒಳಜಖಂ ಆಗಿರುತ್ತದೆ ಹಾಗೂ ಸ್ಕೂಟರ್ ಕೂಡಾ ಜಖಂ ಆಗಿರುತ್ತದೆ. ಈ ಬಗ್ಗೆ ಪಿರ್ಯಾದಿದಾರರು ಕಾಪು ಟ್ರೂಕೇರ್‌ ಪಾಲಿಕ್ಲಿನಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿರುತ್ತಾರೆ. ಅಪಘಾತವುಂಟುಮಾಡಿದ ಸ್ಕೂಟರ್‌ ಸವಾರ ಖರ್ಚು ನೀಡುತ್ತೇನೆಂದು ತಿಳಿಸಿದ್ದು, ಈಗ ಹಣದ ವಿಚಾರವಾಗಿ ಸ್ಪಂದಿಸದೇ ಇರುವುದರಿಂದ ಈ ದಿನ ತಡವಾಗಿ ದೂರು ನೀಡಿರುವುದಾಗಿದೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 72/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ಪಿರ್ಯಾದಿದಾರರಾದ ವಿಠಲ ಬಿ ಶೆಟ್ಟಿ  (70 ), ತಂದೆ:ದಿ. ಬಾಬು ಶೆಟ್ಟಿ,  ವಾಸ:ಮನೆ ನಂ: 2/52,ಕೃಷ್ಣ ನಿವಾಸ, 108 ಕಳತ್ತೂರು  ಗ್ರಾಮ , ಕಾಪು ತಾಲೂಕು, ಉಡುಪಿ ಜಿಲ್ಲೆಇವರು ದಿನಾಂಕ 23/04/2023  ರಂದು  ಬೆಳಿಗ್ಗೆ  08:30 ಗಂಟೆಗೆ ಮನೆಯಿಂದ ಕಳತ್ತೂರು ನಿವಾಸಿಯಾದ  ಪ್ರದೀಪ್ ರವರ ಮನಗೆ ಹೋಗಿ ಅಲ್ಲಿಂದ  ರತ್ನಾಕರ ಆಚಾರ್ಯ ,ಜನಾರ್ಧನ ಆಚಾರ್ಯ  ಹಾಗೂ ಇತರರೊಂದಿಗೆ ಸೇರಿ ಕೊಂಡು ಕಳತ್ತೂರು  ಗ್ರಾಮದಲ್ಲಿರುವ ಮನೆ ಮನೆಗೆ ಹೋಗಿ ಮತ ನೀಡುವಂತೆ ಚುನಾವಣಾ ಕರ ಪ್ರತಗಳನ್ನು  ನೀಡಿ ಮತಯಾಚಿಸಿ ನಂತರ ರಾತ್ರಿ 9:00 ಗಂಟೆ ಸುಮಾರಿಗೆ  ರತ್ನಾಕರ ಆಚಾರ್ಯ ರವರ ಮೋಟಾರ್ ಸೈಕಲ್ ನಂಬ್ರ KA-20-EB-2968 ನೇ ದರಲ್ಲಿ ಹಿಂಬದಿ ಸವಾರನಾಗಿ  ಕುಳಿತುಕೊಂಡು ಕಳತ್ತೂರಿನಿಂದ ಶಿರ್ವ ಕಡೆಗೆ ಹೋಗಿ ಶಿರ್ವ ಪೇಟೆಯಲ್ಲಿ ಬೈಕ್‌ಗೆ  ಪೆಟ್ರೋಲ್‌ ಹಾಕಿಸಿ ಶಿರ್ವ ಪೇಟೆಯಿಂದ ಕಾಪು ಮಾರ್ಗವಾಗಿ  ಸಾರ್ವಜನಿಕ  ಡಾಮಾರು  ರಸ್ತೆಯಲ್ಲಿ ಹೋಗುತ್ತಿರುವಾಗ  9:45 ಗಂಟೆಗೆ ಕಳತ್ತೂರು  ಗ್ರಾಮದ  ನೆಟ್ಟಿಲ್‌ಗೆ  ಹೋಗುವ ರಸ್ತೆಯ ಬಳಿ ತಲುಪುವಾಗ ಎದುರುಗಡೆಯಿಂದ ಕಾಪು –ಶಾಂತಿಗುಡ್ಡೆಯಿಂದ ಶಿರ್ವ ಕಡೆಗೆ  ಓರ್ವ ಕಾರಿನ ಚಾಲನು ಕಾರನ್ನು  ಅತೀ ವೇಗ  ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರತ್ನಾಕರ ಆಚಾರ್ಯ ರವರು  ಸವಾರಿ  ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ಡಿಕ್ಕಿ ಹೊಡೆದ   ಪರಿಣಾಮ  ರತ್ನಾಕರ ಆಚಾರ್ಯ ಹಾಗೂ ಹಿಂಬದಿ ಸವಾರರಾಗಿ ಕುಳಿತ್ತಿದ್ದ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆ ಬದಿಯಲ್ಲಿದ್ದ ಮಣ್ಣು ರಸ್ತೆಗೆ ಬಿದ್ದ  ಪರಿಣಾಮ   ಪಿರ್ಯಾದಿದಾರರ ಬಲ ಕೈ ಹಾಗೂ ಬಲ ಕಾಲಿಗೆ ಮೂಳೆ ಮುರಿತದ ಒಳ ಜಖಂ  ಹಾಗೂ ರಕ್ತಗಾಯವಾಗಿದ್ದು ಮೋಟಾರ್‌ ಸೈಕಲ್‌ ಸವಾರ ರತ್ನಾಕರ ಆಚಾರ್ಯ ರವರಿಗೆ ಬಲ ಕೈ ಹಾಗೂ ಬಲ ಕಾಲಿಗೆ ಮೂಳೆ ಮುರಿತದ  ಒಳ ಜಖಂ ಹಾಗೂ ರಕ್ತ ಗಾಯವಾಗಿರುತ್ತದೆ ಅಪಘಾತಪಡಿಸಿದ ಕಾರಿನ ಚಾಲಕ ಉಪಚರಿಸದೆ ಕಾರನ್ನು ನಿಲ್ಲಿಸದೆ ಪರಾರಿಯಾಗಿರುತ್ತಾನೆ.  ಅಲ್ಲಿ ಸೇರಿದ ಸಾರ್ವಜನಿಕರು ಒಂದು ಅಂಬ್ಯುಲೆನ್ಸ್‌  ನಲ್ಲಿ ಪಿರ್ಯಾದಿದಾರರನ್ನು ಹಾಗೂ ಮೋಟಾರ್‌ ಸೈಕಲ್‌ ಸವಾರನನ್ನು  ಚಿಕಿತ್ಸೆ  ಬಗ್ಗೆ  ಉಡುಪಿ ಹೈಟೆಕ್  ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಿದ್ದು, ಇಬ್ಬರು ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ದಿನಾಂಕ   24/04/2023 ರಂದು ರತ್ನಾಕರ ಆಚಾರ್ಯ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು  ಹೋಗಿ ದಾಖಲಿಸಿರುವ ವಿಚಾರ ತಿಳಿಯಿತು.  ನಂತರ ಅಪಘಾತವೆಸಗಿದ ಕಾರು ಶಿರ್ವ  ಸೈಂಟ್ ಮೇರಿಸ್ ಕಾಲೇಜ್ ನ ಬಳಿ ಇರುವ ಕುಶಿ ಡ್ರೈವಿಂಗ್ ಸ್ಕೂಲ್ ಬಳಿ ಕಾರನ್ನು ನಿಲ್ಲಿಸಿದ್ದು ಕಾರಿನ ನಂಬ್ರ KA-20-M-6085   ಆಗಿರುವುದಾಗಿ  ತಿಳಿದಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 3720/23, ಕಲಂ: 279, 338 ಐಪಿಸಿ ಮತ್ತು 134(A) (B) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಸಂಜೀವ ಮರಾಠಿ (43), ತಂದೆ: ಅಪ್ಪು  ಮರಾಠಿ,  ವಾಸ: ಮೆಳ್ಳಿ ಯಳಜಿತ್ ಗ್ರಾಮ  ಬೈಂದೂರು ತಾಲೂಕು ಇವರು ದಿನಾಂಕ 24/04/2023 ರಂದು  ಬೆಳಿಗ್ಗೆ 11:30 ಗಂಟೆಗೆ  ತನ್ನ ಮನೆಯಾದ ಮಳ್ಳಿಯಿಂದ  ಯಳಜಿತ್ ಪೇಟೆಗೆ  ಕಾಂಬ್ಳಿ ಗಿಜಂ ಮತ್ತಯ್ಯ ಮರಾಠಿಯವರ ಮನೆ ಹತ್ತಿರ ರಸ್ತೆಯಲ್ಲಿ ನಡೆದುಕೊಂಡು  ಬರುತ್ತಿರುವಾಗ  ಕಾಂಬ್ಳಿ ಕಡೆಯಿಂದ KA-20-EW-5047 ನೇ  ಮೋಟಾರ್‌ ಸೈಕಲ್‌  ಚಾಲಕ ಭಾಸ್ಕರ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ಯಳಜಿತ್ ನಿಂದ ಕಾಂಬ್ಳಿ ಕಡೆಗೆ ಹೋಗುತ್ತಿರುವ  KA-20-EY-0192 ನೇ ಬೈಕ್ ಸವಾರ ಚಿಕ್ಕಯ್ಯ ಮರಾಠಿಯವರಿಗೆ  ಡಿಕ್ಕಿ ಹೊಡೆದ ಪರಿಣಾಮ 2 ಬೈಕ್ ಸವಾರರು ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರು  ಕೂಡಲೇ ಹೋಗಿ ಎತ್ತಿ ಉಪಚರಿಸಿ ಈ ಅಪಘಾತದಿಂದ ಚಿಕ್ಕಯ್ಯ ಮರಾಠಿಯವರಿಗೆ ಬಲಕಾಲಿನ ಗಂಟಿಗೆ ಒಳಜಖಂ ಆಗಿ ನೋವು ಉಂಟಾಗಿದ್ದು ಅಲ್ಲಿಂದ ಒಂದು ವಾಹನದಲ್ಲಿ ಚಿಕಿತ್ಸೆ ಬಗ್ಗೆ ಕುಂದಾಪುರದ ವಿವೇಕ ಆಸ್ಪತ್ರೆಗೆ ವಾಸು ಮರಾಠಿ ಹಾಗೂ ರಾಜೇಶ ಕೋಠಾರಿಯವರ ಮುಖೇನ  ಕಳುಹಿಸಿ  ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63/2023 ಕಲಂ:  279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಜುಡಿತಾ ಡಿಅಲ್ಮೇಡಾ (47), ಗಂಡ: ಸಿರಿಲ್ ಡಿಅಲ್ಮೇಡಾ, ವಾಸ: ಗುಡ್ಡಮ್ಮಾಡಿ, ಸೇನಾಪುರ ಗ್ರಾಮ ಕುಂದಾಪುರ  ತಾಲೂಕು ಇವರ ಅಣ್ಣ  ಆಲ್ಬನ್‌ (49) ರವರು ದಿನಾಂಕ 23/04/2023 ರಂದು 11:00 ಗಂಟೆಗೆ ಕುಂದಾಪುರ ತಾಲೂಕು. ಸೇನಾಪುರ  ಗ್ರಾಮದ  ಗುಡ್ಡಮ್ಮಾಡಿ ಎಂಬಲ್ಲಿರುವ ಪಿರ್ಯಾದಿದಾರರ ಮನೆ ಬಳಿ ಇರುವ ಸೌಪರ್ಣಿಕ ಹೋಳೆಗೆ ಮೀನು ಹಿಡಿಯಲು ಹೋದವರು ವಾಪಾಸ್ಸು ಮನೆಗೆ ಬಾರದೇ ಇರುವುದರಿಂದ ಅಕ್ಕಪಕ್ಕದಲ್ಲಿ ಎಲ್ಲಾ ಕಡೆಯಲ್ಲಿ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ. ದಿನಾಂಕ 24/04/2023 ರಂದು 15:00 ಗಂಟೆಗೆ  ಸೇನಾಪುರ ಗ್ರಾಮ ಗುಡ್ಡಮ್ಮಾಡಿ  ಜಲಜಾ ಮೋಗವೀರ್ತಿ ಎಂಬುಬವರ ಮನೆಯ ಬಳಿ ಸೌರ್ಪಣಿಕ ನದಿಯಲ್ಲಿ, ಆಲ್ಬನ್‌ ರವರ ಮೃತದೇಹವು ಪತ್ತೆಯಾಗಿರುತ್ತದೆ. ಪಿರ್ಯಾದಿದಾರರ ಅಣ್ಣ  ಆಲ್ಬನ್‌ ರವರು ದಿನಾಂಕ 23/04/2023 ರಂದು 11:00 ಗಂಟೆಯಿಂದ ದಿನಾಂಕ 24/04/2023 ರಂದು 15:00 ಗಂಟೆಯ ಮದ್ಯಾವದಿಯಲ್ಲಿ ಸೌಪರ್ಣಿಕ ಹೋಳೆಯಲ್ಲಿ ಮೀನು ಹಿಡಿಯುವಾಗ ಕಾಲು ಜಾರಿ ಸೌಪರ್ಣಿಕ ಹೊಳೆಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 09/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-04-2023 10:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080