ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 

ಗಂಗೊಳ್ಳಿ: ಪಿರ್ಯಾದಿ ಸತೀಶ್ ಎಂ ನಾಯಕ, ರವರು ದಿನಾಂಕ 25/04/2023 ರಂದು ಮುಂಜಾನೆ 5:30 ಗಂಟೆಗೆ ಮರವಂತೆ ಗ್ರಾಮದ  ಮಹಾರಾಜಸ್ವಾಮಿ ಶ್ರೀ ವರಹ ದೇವಸ್ಥಾನದ ಬಳಿ ರಾ.ಹೆ-66ರ ಮಧ್ಯದ ಡಿವೈಡರ್‌ ಬಳಿ ನಡೆದುಕೊಂಡು ಹೋಗುತ್ತಿರುವಾಗ ರಾ.ಹೆ-66 ರ ಕುಂದಾಪುರದಿಂದ ಬೈಂದೂರು ಕಡೆಗೆ ಹೋಗುವ ರಸ್ತೆಯ ಪಶ್ಚಿಮ ಬದಿಯ ಡಾಂಬಾರು ಅಂಚಿನಲ್ಲಿ ಓರ್ವ ವ್ಯಕ್ತಿ (ಭಿಕ್ಷುಕ) ರಸ್ತೆ ದಾಟಲು ನಿಂತಿದ್ದು, ಆಗ ಕುಂದಾಪುರ ಕಡೆಯಿಂದ  ಬೈಂದೂರು ಕಡೆಗೆ KA.31.Y.5500 ನೇ ಮೋಟಾರ್‌ ಸೈಕಲ್ ನ್ನು ಸವಾರ ಹರ್ಷ ಎಂಬಾತನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಎಡ ಬದಿಗೆ ಚಲಾಯಿಸಿ ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಢಿಕ್ಕಿ ಹೊಡೆದ ಪರಿಣಾಮ ಸದ್ರಿ ವ್ಯಕ್ತಿಯು ರಸ್ತೆಗೆ ಬಿದ್ದು, ಎರಡೂ ಕಾಲುಗಳಿಗೆ, ಎಡ ಕೈ ಗೆ ಹಾಗೂ ಹಣೆಗೆ ರಕ್ತಗಾಯವಾಗಿರುತ್ತದೆ.  ಅಲ್ಲದೇ ಮೋಟಾರ್‌ ಸೈಕಲ್‌ ಸವಾರನು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಮುಖಕ್ಕೆ  ಮೈ,ಕೈ,ಗೆ ರಕ್ತಗಾಯವಾಗಿರುತ್ತದೆ.  ಗಾಯಗೊಂಡವರನ್ನು ಪಿರ್ಯಾದಿದಾರರು ಹಾಗೂ ಸೇರಿದ ಜನರು ಅಂಬ್ಯುಲೆನ್ಸ್‌ ನಲ್ಲಿ ಕುಂದಾಪುರಕ್ಕೆ ಕಳುಹಿಸಿಕೊಟ್ಟಿದ್ದು, ಬಳಿಕ ಗಾಯಾಳುಗಳನ್ನು ಕುಂದಾಪುರದಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿರುತ್ತದೆ. ಚಿಕಿತ್ಸೆಯಲ್ಲಿರುವ ಅಪರಿಚಿತ ವ್ಯಕ್ತಿ ಚಿಕಿತ್ಸೆ ಪಲಕಾರಿಯಾಗದೇ ಬೆಳಿಗ್ಗೆ 8:40 ಗಂಟೆಗೆ ಮೃತಪಟ್ಟಿರುತ್ತಾನೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 49/2023 ಕಲಂ: 279, 304 (ಎ)ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕೋಟ: ಪಿರ್ಯಾದಿ ರಾಘವೇಂದ್ರ ಆಚಾರ್‌ ಇವರು ದಿನಾಂಕ: 24.04.2023 ರಂದು ಸುಮಾರು 19:30 ಗಂಟೆಗೆ ಬಂಟ್ಸಾಲೆ ಶಂಕರ ಪೂಜಾರಿ ರವರ ಅಂಗಡಿ ಎದುರು ನಿಂತುಕೊಂಡಿರುವಾಗ, ಪಿರ್ಯಾದಿದಾರರ ಸಂಬಂಧಿ ಲಕ್ಷ್ಮೀಕಾಂತ್ ಎಂಬುವವರು ನಂ. KA 20 ER 7077 ನೇ ಟಿವಿಎಸ್‌ ಜುಪಿಟರ್‌ ಸ್ಕೂಟಿಯನ್ನು ಹಿಲಿಯಾಣ - ಶಿರೂರು ಮೂರುಕೈ ರಸ್ತೆಯಲ್ಲಿ ಬಂಟ್ಸಾಲೆ ಕಡೆಯಿಂದ ಶಿರೂರುಮೂರುಕೈ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ, ಹಿಂದಿನಿಂದ ಅಂದರೆ ಹಿಲಿಯಾಣ ಕಡೆಯಿಂದ ಒರ್ವ ಚಾಲಕ ಶಶಿಧರ ಎಂಬಾತನು ನಂ: KA 20 D 4647 ನೇ ಪಿಕ್‌ಅಪ್‌ ಗೂಡ್ಸ್‌ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟಿಯ ಹಿಂಬದಿಗೆ ಢಿಕ್ಕಿ ಹೊಡೆದನು. ಪರಿಣಾಮ ಸ್ಕೂಟಿ ಸವಾರ ಲಕ್ಷ್ಮೀಕಾಂತ್‌ ರವರು ಸ್ಕೂಟಿ ಸಮೇತ ಕೆಳಗೆ ಬಿದ್ದಿದ್ದು ತಲೆಯ ಎಡಭಾಗಕ್ಕೆ ತೀವ್ರ ರಕ್ತಗಾಯ ಮತ್ತು ಎರಡೂ ಕಾಲುಗಳಿಗೆ ತರಚಿದ ಗಾಯಗಳಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 68/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರ ಪ್ರಕರಣ

ಉಡುಪಿ: ಪಿರ್ಯಾದಿ ಹಿತೇಶ್ ಕುಮಾರ್ ಇವರಿಗೆ ದಿನಾಂಕ 17.04.2023 ರಂದು ಯಾರೋ ಅಪರಿಚಿತ ವ್ಯಕ್ತಿಗಳು +639652457942 ನೇ ನಂಬ್ರದಿಂದ ಪ್ರೋಡೆಕ್ಟ್ ಗಳನ್ನು ಸೇಲ್ ಮಾಡಿ ಕಮಿಷನ್ ರೂಪದಲ್ಲಿ ಹಣ ಸಂಪಾದಿಸುವ ಆನ್‌‌ಲೈನ್ ಜಾಬ್ ಕುರಿತು ವಾಟ್ಸ್ ಅಪ್ ಮುಖೇನ ಸಂದೇಶ ಕಳುಹಿಸಿದ್ದು, ಇದನ್ನು ನಂಬಿದ ಪಿರ್ಯಾದಿದಾರರು ಪ್ರೋಡೆಕ್ಟ್ ಖರೀದಿಸುವರೆ ಸದ್ರಿ ಸಂದೇಶದಲ್ಲಿದ್ದ Ebay ಆಪ್ ಮುಖೇನ ದಿನಾಂಕ 17.04.2023 ರಿಂದ 20.04.2023 ರವರೆಗೆ ಒಟ್ಟು ರೂ. 1,05,651/- ನ್ನು UPI ಮುಖೇನ ಹಣ ವರ್ಗಾವಣೆ ಮಾಡಿರುತ್ತಾರೆ. ಆದರೆ, ಆರೋಪಿಗಳು ಪ್ರೋಡೆಕ್ಟ್ ನೀಡದೇ ಪಡೆದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್‌  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 78/2023  ಕಲಂ: 66(C)   66(D)   ಐ.ಟಿ. ಆಕ್ಟ್ನಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಡುಪಿ: ಪಿರ್ಯಾದಿ ಆರತಿ ಗಿಳಿಯಾರ್ ಇವರು ಪತ್ರಕರ್ತೆಯಾಗಿದ್ದು, ಸುಮಾರು 15 ದಿನಗಳ ಹಿಂದೆ ಪಿರ್ಯಾದಿದಾರರ ಫೋಟೋವನ್ನು ಎಡಿಟ್ ಮಾಡಿ ನಾಗವಲ್ಲಿ ವಿಡಿಯೋವೊಂದಕ್ಕೆ ಶೇಖರ ಹಾವಂಜೆ, ರಾಜು ಎಂ.ಎನ್. ವಿಜಯ ಬಾರ್ಕೂರು, ಸೃಜಿತ್, ಜಯಕರ ನಾಯ್ಕ, ವಿ. ಗೋಪಾಲ ಶೆಟ್ಟಿ ಇವರು ಎಡಿಟ್ ಮಾಡಿ ಸಾಮಾಜಿಕ ಜಾಲತಾಣ ಪ್ರಸರಿಸಿ ತೊಂದರೆ ನೀಡಿದ್ದು, ಈ ಬಗ್ಗೆ ಸೆನ್‌  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 79/2023  ಕಲಂ: 66(C), 67   ಐ.ಟಿ ಆಕ್ಟ್ನಂತೆ ಪ್ರಕರಣ ದಾಖಲಾಗಿರುತ್ತದೆ.

 

 

 

ಅಸ್ವಾಭಾವಿಕ ಮರಣ ಪ್ರಕರಣ

 

ಉಡುಪಿ:, ಪಿರ್ಯಾದಿ ಶಂಕರ ಶೆಟ್ಟಿ ಇವರ ಅಕ್ಕ ವಸಂತಿ ಶೆಟ್ಟಿ ಪ್ರಾಯ: ವರ್ಷ ರವರು ಉಡುಪಿ ಬಸ್‌ ನಿಲ್ದಾಣಗಳಲ್ಲಿ ಭಿಕ್ಷೆ ಬೇಡಿಕೊಂಡು ಜೀವನ ನಡೆಸಿಕೊಂಡಿದ್ದು, ಇನ್ನಾವುದೋ ಕಾರಣದಿಂದ ಆಥವಾ ಯಾವುದೋ ಖಾಯಿಲೆಯಿಂದ ದಿನಾಂಕ: 23/04/2023 ರಂದು 22:30 ಗಂಟೆಗೆ ಹಳೆ ಕೆ.ಎಸ್.ಆರ್‌.ಟಿ.ಸಿ ಬಸ್‌ ನಿಲ್ದಾಣದ ಹಿಂಭಾಗದಲ್ಲಿ ಪ್ರಜ್ಞಾಹೀನ ಸ್ದಿತಿಯಲ್ಲಿ ಬಿದ್ದವರನ್ನು ನಿತ್ಯಾನಂದ ಒಳಕಾಡು ರವರು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ವಸಂತಿ ಶೆಟ್ಟಿ ರವರು 23:14 ಗಂಟೆಗೆ ಮೃತಪಟಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 21/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೈಂದೂರು: ಫಿರ್ಯಾದಿ ಪ್ರಶಾಂತ ಗಾಣಿಗ ಇವರ ಭಾವ ಸುಬ್ರಮಣ್ಯ ಗಾಣಿಗ ರವರು ಸುಮಾರು  4 ತಿಂಗಳಿನಿಂದ ಮುಂಬೈಯಲ್ಲಿ ಹೊಟೇಲಿನಲ್ಲಿ ಕೆಲಸ ಮಾಡಿಕೊಂಡಿದ್ದವರು , ದಿನಾಂಕ 18/04/2023 ರಂದು ಮಧ್ಯಾಹ್ನ 2.00 ಗಂಟೆಗೆ ಮುಂಬೈಯಿಂದ ಮನೆಗೆ ಬಂದವರಿಗೆ  ಹೊಟ್ಟೆನೋವು ಕಾಣಿಸಿ ಅಸ್ವಸ್ಥಗೊಂಡಿದ್ದು ಅವರನ್ನು ಉಪ್ಪುಂದದ  ಆಸ್ಪತ್ರೆಗೆ ಕೆರೆದುಕೊಂಡು ಹೋದಲ್ಲಿ ಅಲ್ಲಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಸೂಚಿಸಿದ ಮೇರೆಗೆ  ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದು ಕೊಂಡು ಹೋದಾಗ  ವೈದ್ಯರು ಪರೀಕ್ಷಿಸಿ ವಿಷ ಪದಾರ್ಥ ಸೇವಿಸಿರುವುದಾಗಿ ತಿಳಿಸಿ ಒಳರೋಗಿಯಾಗಿ ದಾಖಲು ಮಾಡಿ ಕೊಂಡಿದ್ದು, ದಿನಾಂಕ 23/04/2023 ರವರೆಗೆ ಚಿಕಿತ್ಸೆ ನೀಡಿದ ವೈದ್ಯರು  ಬದುಕುವುದು ಕಷ್ಟ  ಡಿಸ್ ಚಾರ್ಜ್ ಮಾಡುವುದಾಗಿ ತಿಳಿಸಿದಲ್ಲಿ  ಸುಬ್ರಮಣ್ಯ ಗಾಣಿಗರವರನ್ನು  ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಯಿಂದ ಡಿಸ್ಚಾರ್ಜ   ಮಾಡಿ  ಉಡುಪಿ ಆದರ್ಶ  ಆಸ್ಪತ್ರೆಗೆ  ದಾಖಲಿಸಿದ್ದು, ದಿನಾಂಕ 25-04-2023 ರಂದು  ಬೆಳಿಗ್ಗೆ 01.50 ಗಂಟೆಗೆ  ಸುಬ್ರಮಣ್ಯ ಗಾಣಿರವರು ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 25/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಾರ್ಕಳ: ಫಿರ್ಯಾದಿ ರವೀಂದ್ರ ಹೆಗ್ಡೆ ಇವರ ಹೆಂಡತಿ ಸವಿತಾ ಹೆಗ್ಡೆ, ಪ್ರಾಯ 54 ವರ್ಷ ಎಂಬುವವರು ಪಿರ್ಯಾದುದಾರರೊಂದಿಗೆ ಕೃಷಿ ಕೆಲಸ ಮಾಡಿಕೊಂಡು ವಾಸ ಮಾಡಿಕೊಂಡಿದ್ದು ಫಿರ್ಯಾದುದಾರರ ಇಬ್ಬರು ಹೆಣ್ಣು ಮಕ್ಕಳು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿರುವುದಾಗಿದೆ, ಫಿರ್ಯಾದುದಾರರು ದಿನಾಂಕ 25-04-2023 ರಂದು ಬೆಳಿಗ್ಗೆ 09:30 ಗಂಟೆಗೆ ಪೇಟೆಗೆ ಹೋಗಿದ್ದು ಸುಮಾರು 10:00 ಗಂಟೆಗೆ ಮನೆಗೆ ಬಂದು ನೋಡುವಾಗ ಫಿರ್ಯಾದುದಾರರ ಹೆಂಡತಿ ಕಾಣೆಯಾಗಿದ್ದು ಹುಡುಕಾಡಿದಾಗ ಹತ್ತಿರದ ರೇಷ್ಮೆ ಕಟ್ಟಡದ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 16/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 25-04-2023 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080