ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಪ್ರತೀಶ (18), ತಂದೆ: ರಾಮ ಖಾರ್ವಿ ವಾಸ: ಬತ್ತಾನಿ ಮನೆ, ನೈಕಾಡಿ, ಮರವಂತೆ ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 22/04/2022 ರಂದು ಸುರೇಶ್ ಖಾರ್ವಿಯವರ KA-20 ES-9008 ನೇ ಸ್ಕೂಟಿಯಲ್ಲಿ ಸಹಸವಾರನಾಗಿ ಕುಳಿತುಕೊಂಡು ಮೀನುಗಾರಿಕೆ ಬಗ್ಗೆ ಮನೆಯಿಂದ ಹೊರಟು ರಾತ್ರಿ 11:00 ಗಂಟೆಗೆ ಬೈಂದೂರು ತಾಲೂಕು ಮರವಂತೆ ಗ್ರಾಮದ ಮರವಂತೆ ಬ್ರೇಕ್ ವಾಟರ್ ಬಳಿ ತಲುಪಿದಾಗ ಸಿಮೆಂಟ್ ರೋಡ್ ನಿಂದ ಕಚ್ಚಾ ರೋಡ್ ಗೆ ಇಳಿಯುವಾಗ ಹೊಂಡವಿದ್ದು ಸುರೇಶ ಖಾರ್ವಿಯವರು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡಿದ್ದು ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಹಿಂದುಗಡೆ ಕುಳಿತಿದ್ದ ಪಿರ್ಯಾದಿದಾರರು ರಸ್ತೆಗೆ ಬಿದ್ದು ಎಡಬದಿಯ ದವಡೆಗೆ ತೀವ್ರ ಸ್ವರೂಪದ  ಗಾಯ ಹಾಗೂ ಎಡ ಬದಿಯ ಕಣ್ಣಿನ ಹತ್ತಿರ, ಬಲಬದಿಯ ದವಡೆಗೆ, ತಲೆಯ ಎಡಬದಿಗೆ, ಬಲಕಾಲಿನ ಮೇಲ್ಗಂಟು ಹಾಗೂ ಪಾದಕ್ಕೆ ಪೆಟ್ಟಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 39 /2022 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 24/04/2022 ರಂದು 23:00 ಗಂಟೆಗೆ ಪಿರ್ಯಾದಿದಾರರಾದ ಆನಂದ ಸರ್ಕಾರ್ (32), ತಂದೆ: ಜೀತೇಂದ್ರ ಸರ್ಕಾರ್, ವಾಸ: ಟಾಕಿ ಮಾರಿ ಗ್ರಾಮ, ಗೋಶಾನಿ ಮರಿ ಅಂಚೆ, ಕೋಚ್ ಬಿಹಾರ್ ಜಿಲ್ಲೆ, ವೆಸ್ಟ್ ಬೆಂಗಾಲ್ ಇವರು ತಮ್ಮ ರೂಂ ನಿಂದ ಲಕ್ಷ್ಮೀಂದ್ರ ನಗರದಲ್ಲಿರುವ  ತನ್ನ ಸ್ನೇಹಿತರನ್ನು ಭೇಟಿಯಾಗಲೆಂದು ಸುಧಾ ಫರ್ನಿಚರ್ ಅಂಗಡಿಯ ಎದುರಿನಲ್ಲಿನ NH 169(A) ರಸ್ತೆಯನ್ನು ದಾಟಿ ಮಣಿಪಾಲದಿಂದ – ಉಡುಪಿ ಕಡೆಗೆ ಹೋಗುವ ರಸ್ತೆಯ ಅಂಚಿಗೆ  ತಲುಪುವಾಗ ಮಣಿಪಾಲ ಕಡೆಯಿಂದ  ಉಡುಪಿಯ ಕಡೆಗೆ  ಬಂದ KA-20-U-6907 ನೇ ಸ್ಕೂಟರ್  ನ್ನು ಅದರ ಸವಾರೆಯು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಅಪಘಾತ ಪಡಿಸಿದ ಸ್ಕೂಟರ್ ಸವಾರೆ ಸ್ಕೂಟರ್ ನ ಸಮೇತ ರಸ್ತೆಗೆ  ಬಿದ್ದಿದ್ದು ಪಿರ್ಯಾದಿದಾರರಿಗೆ ಬಲಕಾಲಿನ ಮಣಿಗಂಟಿನ ಮೇಲ್ಭಾಗದಲ್ಲಿ ಮೂಳೆ ಮುರಿತದ ಗಾಯ, ಮುಖದ ಎಡ ಭಾಗಕ್ಕೆ ತರಚಿದ ಗಾಯವಾಗಿರುತ್ತದೆ, ಸ್ಕೂಟರ್ ಸವಾರೆಗೂ  ಕೂಡಾ ಮುಖ್ಕಕೆ, ಕೈ ಕಾಲಿಗೆ ಗಾಯವಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 55/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಭಾಸ್ಕರ ಪೂಜಾರಿ (42), ತಂದೆ: ನರಸು ಪೂಜಾರಿ, ವಾಸ: ಸೆಳೆಕೋಡು, ಪಕ್ಲಮನೆ, ಬಾಂಡ್ಯ ಅಂಚೆ, ಕುಂದಾಪುರ ತಾಲೂಕು ಇವರು ದಿನಾಂಕ 24/04/2022 ರಂದು KA-20-MD-5906 ನೇ ನೋಂದಣಿ ಸಂಖ್ಯೆಯ ಹುಂಡೈ I10 ಮಾದರಿಯ ಕಾರಿನಲ್ಲಿ ಪಿರ್ಯಾದಿದಾರರು ಚಾಲಕರಾಗಿ ಪಿರ್ಯಾದಿದಾರರ ಅಣ್ಣ ಮಹಾಬಲ ಪೂಜಾರಿ, ಅತ್ತಿಗೆ ಪಾರ್ವತಿ, ಅಕ್ಕ ರುಕ್ಮಿಣಿ ಮತ್ತು ಬಾವ ಚಂದ್ರ ಪೂಜಾರಿರವರೊಂದಿಗೆ ಧರ್ಮಸ್ಥಳದಿಂದ ಪಡುಬಿದ್ರೆ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರಟು ಸಂಜೆ 03:30 ಗಂಟೆಗೆ ಕಾರ್ಕಳ ಪುಲ್ಕೇರಿ ಬೈಪಾಸ್ ಬಳಿ ತಲುಪುವಾಗ KA-14-C-3402 ನೇ ನೋಂದಣಿ ಸಂಖ್ಯೆಯ ಪಿಕಫ್ ವಾಹನ ಚಾಲಕ ಶ್ರೀಧರ ಡಿ ಎಸ್ ಫಿಕಫ್ ವಾಹನವನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು, ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಮಹಾಬಲ ಪೂಜಾರಿ ರವರಿಗೆ ಎಡಕಿವಿ ಹಿಂಬಾಗಕ್ಕೆ ಗುದ್ದಿದ ಒಳಜಖಂ ಆಗಿದ್ದು, ಕಾರಿನ ಹಿಂಬದಿ ಕುಳಿತಿದ್ದ ಚಂದ್ರಪೂಜಾರಿ ರವರಿಗೆ ಹಣೆಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 60/2022  ಕಲಂ:  279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಮಲ್ಪೆ: ದಿನಾಂಕ 24/04/2022 ರಂದು  ಪಿರ್ಯಾದಿದಾರರಾದ ಮಂಜುನಾಥ, ಪೊಲೀಸ್‌ ನಿರೀಕ್ಷಕರು, 1 ನೇ ಬೆಟಾಲಿಯನ್ ಕೆ.ಎಸ್.ಐ.ಎಸ್.ಎಫ್ , ಯಲಹಂಕ ಬೆಂಗಳೂರು ಮತ್ತು  ಚಂದ್ರಶೇಖರ,  ಶರಣಬಸಪ್ಪ, ಚಿರಂಜೀವಿ,ತ್ರಿಣೇಶ  ಒಟ್ಟು 5 ಜನ ಸೇರಿ ಸಮಯ 12:00 ಗಂಟೆಗೆ ಮಲ್ಪೆ ಬೀಚ್ ಗೆ ಬಂದು ತಮ್ಮ ಬ್ಯಾಗ್, ಮೊಬೈಲ್ ಪೋನ್ , 5 ವಾಲೇಟ್ಸ್  , WRIST WATCH ಗಳನ್ನು  ಸಮುದ್ರ ಕಿನಾರೆಯಲ್ಲಿ ಇಟ್ಟು ಈಜಾಡಲು ಹೋಗಿ ಪುನ ಬಂದು ನೋಡಿದಾಗ  ಇಟ್ಟ  ವಸ್ತುಗಳು ಕಾಣಿಸದೆ ಇದ್ದು , ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸ್ವತ್ತಿನ ವಿವರ ಈ ಕೆಳಗಿನಂತಿದೆ. 3 ಕಾಲೇಜು ಬ್ಯಾಗ್, 4 ಸೆಲ್ ಪೋನ್ , 5 ವಾಲೆಟ್ಸ್ , ಎಟಿಎಂ ಕಾರ್ಡ್, ಆದಾರಕಾರ್ಡ್, ಪಾನ್ ಕಾರ್ಡ್,  ಮತದಾರ ಗುರುತಿನ ಚೀಟಿ , ಡಿಎಲ್, ಪಿರ್ಯಾದಿದಾರರ ಮತ್ತು ಚಂದ್ರಶೇಖರ ರವರ ಪೊಲೀಸ್ ಐಡಿ ಕಾರ್ಡ್ ಕಳ್ಳತನವಾಗಿದ್ದು . ಕಳ್ಳತನವಾದ ಸ್ವತ್ತಿನ ಒಟ್ಟು ಮೌಲ್ಯ 70,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2022 ಕಲಂ: 379  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಗೋಪಾಲ ನಾಯ್ಕ್ (42), ತಂದೆ: ದಿ. ಬೂದ ನಾಯ್ಕ್, ವಾಸ: ದೇವಸ್ಯ ಮನೆ, ಕುಕ್ಕುಂಜಾರು, ಪೆರ್ಡೂರು ಗ್ರಾಮ, ಉಡುಪಿ ತಾಲೂಕು ಇವರ ತಂದೆ ಬೂದ ನಾಯ್ಕ್ (68)ರವರು ತೋಟದ ಹಾಗೂ ಮನೆಯ ಕೆಲಸ ಮಾಡಿಕೊಂಡಿದ್ದು, ಈ ಹಿಂದೆ ಟಿಬಿ ಕಾಯಿಲೆ ಇದ್ದು, 4 ವರ್ಷಗಳ ಹಿಂದೆ ಗುಣವಾಗಿರುತ್ತದೆ. ಅವರಿಗೆ ವಿಪರೀತ ಕುಡಿತದ ಚಟ ಹೊಂದಿದ್ದು, ತನಗಿರವ ಟಿಬಿ ಕಾಯಿಲೆ ಗುಣವಾಗಿದ್ದರೂ ಟಿಬಿ ಕಾಯಿಲೆ ಗುಣವಾಗುವುದಿಲ್ಲ ಎಂದು ಹೇಳಿ ಅದೇ ಚಿಂತೆಯಲ್ಲಿಯೇ ಇದ್ದರು. ದಿನಾಂಕ 24/04/2022 ರಂದು ತೋಟದ ಕೆಲಸಕ್ಕೆ ಹೋಗಿದ್ದವರು  ಬಳಿಕ ಕುಡಿದ ಮತ್ತಿನಲ್ಲಿ ಮನೆ ಬಳಿ ಬಂದು ತನಗೆ ತುಂಬಾ ಎದೆ ನೋವು ಎಂದು ಹೇಳಿ ಮಲಗಿಕೊಂಡಿದ್ದು, ಪಿರ್ಯಾದಿದಾರರು ಮನೆಗೆ ಬಂದು ಸಂಜೆ 3:45 ನೋಡಿದಾಗ ಮನೆಯ ಬಳಿ ಬಿದ್ದುಕೊಂಡಿದ್ದವರನ್ನು ಚಿಕಿತ್ಸೆಗೆ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದಾಗ ವೈಧ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 21/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

  • ಕೋಟ : ಪಿರ್ಯಾದಿದಾರರಾದ ಉದಯ (40), ತಂದೆ: ಗೋವಿಂದ, ವಾಸ: ಗುಳ್ಳಾಡಿ ಬೇಳೂರು ಗ್ರಾಮ ಕುಂದಾಪುರ ತಾಲೂಕು ಇವರು  ದಿನಾಂಕ 22/04/2022 ರಂದು ಮೈಸೂರಿನಿಂದ ತನ್ನ ಮನೆಯಾದ ಗುಳ್ಳಾಡಿಗೆ ಬಂದಿದು,  ಸಂಜೆ 7:00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಅಕ್ಕನ ಮಗ ಸುಜನ್ ವಿನಾಕಾರಣ ಜಗಳಕ್ಕೆ ಬಂದಿದ್ದು ಆಗ ತಾಯಿ ಸುಮ್ಮನಿರಲು ಹೇಳಿದಕ್ಕೆ ಪಿರ್ಯಾದಿದಾರರು ಮನೆಗೆ ಹೋಗಿದ್ದು, ದಿನಾಂಕ 23/04/2022 ಬೆಳಿಗ್ಗೆ ಪಿರ್ಯಾದಿದಾರರು ಮನೆಯ ಹೊರಗೆ ನಿಂತುಕೊಂಡಿದ್ದಾಗ ಬೆಳಿಗ್ಗೆ 7:00 ಗಂಟಗೆ ಸುಜನ್‌ ಪಿರ್ಯಾದಿದಾರರನ್ನು ಉದ್ದೇಶಿಸಿ, ಅವಾಚ್ಯವಾಗಿ ಕೈಯಿಂದ ಹೊಡೆಯಲು ಬಂದಾಗ  ಪಿರ್ಯಾದಿದಾರರು ಅಲ್ಲಿಂದ ಹೋಗಲು ನೋಡಿದಾಗ ಅವರನ್ನು ತಡೆದು ನಿಲ್ಲಸಿ, ಮನೆಯ ಹೊರಗಿದ್ದ ಕತ್ತಿಯನ್ನು ತಂದು ಹೊಡೆಯಲು ಬಂದಾಗ ಪಿರ್ಯಾದಿದಾರರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಬಲ ಕೈಗೆ ತಾಗಿ ರಕ್ತಗಾಯವಾಗಿದ್ದು, ನಂತರ ಕೆಳಕ್ಕೆ ದೂಡಿ ಹಾಕಿ ಕಾಲಿನಿಂದ ತುಳಿದಿದ್ದು, ಆಗ ಪಿರ್ಯಾದಿದಾರರ ಅಕ್ಕ ಮತ್ತು ತಾಯಿ ತಪ್ಪಸಿದ್ದು, ಸುಜನ್ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಹಣೆಗೆ ತಲೆಗೆ ಎರಡೂ ಕೈಗೆ ಬೆನ್ನಿಗೆ ತರಚಿದ ಗಾಯವಾಗಿದ್ದು, ಮತ್ತು ಬಲ ಕೈಗೆ ರಕ್ತ ಗಾಯವಾಗಿರುತ್ತದೆ ಈ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 56/2022 ಕಲಂ: 341, 323, 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಬ್ರಹ್ಮಾವರ: ಪಿರ್ಯಾದಿದಾರರಾದ ಸಾಗರ್‌ ಆಚಾರ್ಯ (24),  ತಂದೆ: ಬಾಬುರಾಯ ಕೆ ಎಸ್‌ ಆಚಾರ್ಯ , ವಾಸ:  ಮಾರಿಕಟ್ಟೆ ಕೊಳಂಬೆ, 52 ಹೇರೂರು ಹಾಗೂ ಆರೋಪಿ  ಸತ್ಯನಾರಾಯಣ  ಆಚಾರ್ಯ (28), ತಂದೆ: ಶ್ರೀನಿವಾಸ  ಆಚಾರ್ಯ , ಕಮ್ಮರಢಿ ,ಕಡ್ತೂರು ಅಂಚೆ, ತೀರ್ಥಳ್ಳಿ  ತಾಲೂಕು ಶಿವಮೊಗ್ಗ ಜಿಲ್ಲೆ ಇವರು  ಸಂಭಂಧಿಕರಾಗಿದ್ದು ಆತನ ವ್ಯವಹಾರದ ಉದ್ದೇಶಕ್ಕಾಗಿ 2021 ಜೂನ್ ತಿಂಗಳಿನಿಂದ ಪಿರ್ಯಾದಿದಾರರ ಬಳಿ 10,00,000/- ರೂಪಾಯಿ ಸಾಲವನ್ನು  ಬೇಡಿಕೆ  ಇಟ್ಟಿದ್ದು  ಹಣ ಇಲ್ಲ ಎಂದರೂ ಪದೇ ಪದೇ ಸಾಲಕ್ಕಾಗಿ ಮನವಿ ಮಾಡಿದ ಮೇರೆಗೆ ಪಿರ್ಯಾದಿದಾರರು ತನ್ನ ಕೆನರಾ ಬ್ಯಾಂಕ್ ಖಾತೆ ಬ್ರಹ್ಮಾವರದಿಂದ 74,000/- ರೂಪಾಯಿ  ಹಣ ಹಾಗೂ  ಪಿರ್ಯಾದಿದಾರರು ತನ್ನ ದೊಡ್ಡಪ್ಪನ ಮಗನಾದ ರಮೇಶ ಆಚಾರ್ಯ  ರಿಂದ ಬ್ಯಾಂಕ್ ಆಫ್ ಬರೋಡ  ಸೂಡಾ ದಿಂದ  ಒಟ್ಟು 5,65,000/-  ಒಟ್ಟು  6,39,000/-   ರೂಪಾಯಿ ಹಣವನ್ನು ಆರೋಪಿಯು ಕೊಟ್ಟ  ಮಾತಿನಂತೆ ಆರೋಪಿತನ  ಕೆನರಾ ಬ್ಯಾಂಕ್‌ ಹಾಗೂ ಕರ್ನಾಟಕ ಬ್ಯಾಂಕ್‌ಕಮ್ಮರಡಿಯ ಖಾತೆಗೆ   ಹಣವನ್ನು ಖಾತೆಗೆ  ಜಮಾ ಮಾಡಿದ್ದು  ಆರೋಪಿಯು  ಹಣವನ್ನು ವಾಪಸ್ಸು  ನೀಡದೇ ವಂಚಿಸುತ್ತಾ ಬಂದಿದ್ದು,  ಈ  ಬಗ್ಗೆ  ತಾನು ಪೋಲೀಸರಿಗೆ  ದೂರು ನೀಡುವುದಾಗಿ  ಹೇಳಿದಾಗ ಪಿರ್ಯಾದಿದಾರರಿಗೆ  ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ  ಹಾಕಿ, ಹಣವನ್ನು  ವಾಪಸ್ಸು ಕೊಡುವುದಿಲ್ಲ  ಏನೂ ಬೇಕಾದರೂ  ಮಾಡಿಕೋ ಎಂದು ಆರೋಪಿಯು ಬೆದರಿಕೆ  ಹಾಕಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 71/2022 ಕಲಂ: 406, 417, 418, 420, 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 25-04-2022 09:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080