ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ದಿನಾಂಕ 24/03/2022 ರಂದು ಪಿರ್ಯಾದಿದಾರರಾದ ಪ್ರಿಯಾ ಡಿಸೋಜ (21) ತಂದೆ: ಸಿರಿಲ್ ಡಿ ಸೋಜ ವಾಸ: ಕ್ಯಾಶ್ಯು ಫ್ಯಾಕ್ಟರಿ ಹತ್ತಿರ ಕೊಳಲಗಿರಿ ಹಾವಂಜೆ ಗ್ರಾಮ ಬ್ರಹ್ಮಾವರ ತಾಲೂಕು ಇವರ ತಂದೆ ಸಿರಿಲ್ ಡಿಸೋಜ ರವರು ಅವರ KA-20 EX-8643 ಹೋಂಡಾ ಡಿಯೋ ಸ್ಕೂಟರಿನಲ್ಲಿ 13:15 ಗಂಟೆಯ ಸುಮಾರಿಗೆ ಉಡುಪಿಯಿಂದ ಮಣಿಪಾಲ ಕಡೆಗೆ ಹೋಗುತ್ತಾ ಇಂದ್ರಾಳಿ ರೈಲ್ವೇ ಬ್ರಿಡ್ಜ್ ಬಳಿ ಬರುತ್ತಿರುವಾಗ ಮಣಿಪಾಲ ಕಡೆಯಿಂದ KA-52 B-2631 TATA 1212  ವಾಹನವನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಕೂಟರಿನಲ್ಲಿದ್ದ ಪ್ರಿಯಾ ಡಿಸೋಜ ಇವರ ತಂದೆಗೆ ತಲೆಗೆ ತೀವ್ರ ರೀತಿಯ ರಕ್ತ ಗಾಯವಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 57/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 23/04/2022 ರಂದು 23:30 ಗಂಟೆಗೆ ಪಿರ್ಯಾದಿದಾರರಾದ ಇರ್ಭಾಜ್ (23) ತಂದೆ: ಮಹಮ್ಮದ್ ಯಹ್ಯಾ ವಾಸ: ಜೋಹಾರ್ ಮಂಜಿಲ್, ದೊಡ್ಡಣಗುಡ್ಡೆ  ಮಸೀದಿ ಬಳಿ, ಶಿವಳ್ಳಿ ಗ್ರಾಮ, ಉಡುಪಿ ಇವರು ತನ್ನ KA-20 EN-7630 ನೇ ಮೋಟಾರ್ ಸೈಕಲ್ ನಲ್ಲಿ ಸಫಾನ್ ನನ್ನು ಸಹ ಸವಾರನ್ನಾಗಿ ಕುಳಿರಿಸಿಕೊಂಡು ಮಣಿಪಾಲದ ಟೈಗರ್ ಸರ್ಕಲ್ ಬಳಿ ತಲುಪುವಾಗ ಅಲೆವೂರು ಕಡೆಯಿಂದ ಟೈಗರ್ ಸರ್ಕಲ್ ಕಡೆಗೆ ಬಂದು ಮೋಟಾರ್ ಸೈಕಲ್ ಬರುವುದನ್ನು ನೋಡಿ ಇರ್ಭಾಜ್ ರವರು ತನ್ನ ಮೋಟಾರ್ ಸೈಕಲ್ ನ್ನು ನಿಧಾನಗೊಳಿಸಿದಾಗ ಇವರ ಹಿಂದಿನಿಂದ ಅಂದರೆ ಈಶ್ವರನಗರ ಕಡೆಯಿಂದ ಉಡುಪಿ ಕಡೆಗೆ ಬಂದ KA-20 EY-1514 ನೇ Honda Activa ಸ್ಕೂಟರ್ ನ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಇರ್ಭಾಜ್ ರವರ ಮೋಟಾರ್ ಸೈಕಲ್ ನ ಬಲಬದಿಯ ಸೈಲನ್ಸರ್ ಗೆ ಡಿಕ್ಕಿ ಹೊಡೆದ ಪರಿಣಾಮ ಇವರು, ಸಹ ಸವಾರ ಮತ್ತು ಅಪಘಾತ ಪಡಿಸಿದ ಮೋಟಾರ್ ಸೈಕಲ್ ನ ಸವಾರ ಮತ್ತು ಸಹ ಸವಾರೆಯು ಸ್ಕೂಟರ್ ನ ಸಮೇತ ರಸ್ತೆಗೆ ಬಿದ್ದಿದ್ದು ಇರ್ಭಾಜ್ ರವರಿಗೆ ಬಲಕಾಲಿನ ಮಣಿಗಂಟಿಗೆ  ತರಿಚಿದ ಗಾಯ, ಬಲ ಭುಜಕ್ಕೆ ಗುದ್ದಿದ ನೋವು ಉಂಟಾಗಿರುತ್ತದೆ, ಇರ್ಭಾಜ್ ರವರ ಸಹ ಸವಾರನಾದ ಸಫಾನ್ ನಿಗೆ ಬಲ ಕಾಲಿನಮಣಿಗಂಟಿಗೆ ತರಚಿದ ಗಾಯವಾಗಿರುತ್ತದೆ, ಅಪಘಾತ ಪಡಿಸಿದ ಸ್ಕೂಟರ್ ಸವಾರನಿಗೂ ಬಲ ಕೈ ಮಣಿಗಂಟಿನ ಬಳಿ ತೀವ್ರ ಬಳ ಜಖಂ ಉಂಟಾಗಿರುತ್ತದೆ, ಎಡ ಕಾಳಿನ ಮಣಗಂಟಿನ ಬಳಿ, ಎಡ ಕೈ, ಮುಂಗೈ ಬಳಿ, ಬಲ ಕಾಲಿನ ಮೊಣ ಗಂಟಿನ ಬಳಿ, ಎಡ ಕೈ ಮಣಿಗಂಟಿನ ಬಳಿ ತರಿಚಿದ ಗಾಯ ಹಾಗೂ ಸಹ ಸವಾರೆಗೆ ಮುಖದ ಗಲ್ಲಕ್ಕೆ ತೀವ್ರ ಗಾಯ, ಎಡಕಣ್ಣಿನ ಬಳಿ, ಹಣೆಯ ಬಲ ಭಾಗಕ್ಕೆ ತರಚಿದ ಗಾಯ ಉಂಟಾಗಿರುತ್ತದೆ,  ಅಫಘಾತ ಪಡಿಸಿದ ಸ್ಕೂಟರ್ ಸವಾರನ ಹೆಸರು ಲಕ್ಷ್ಮಣ ಎಂದು ಸಹ ಸವಾರೆಯ ಹೆಸರು ಮಾಲತಿ ದೇವಿ ಎಂಬುದಾಗಿ ಇರ್ಭಾಜ್ ರವರು ವಿಚಾರಿಸಲಾಗಿ ತಿಳಿಯಿತು, ಈ ಅಫಘಾತಕ್ಕೆ KA-20 EY-1514 ನೇ Honda Activa ಸ್ಕೂಟರ್ ಸವಾರನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 56/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  •  ಕಾರ್ಕಳ: ಪಿರ್ಯಾದಿದಾರರಾದ ವಸಂತ ಶೆಟ್ಟಿ, (72), ತಂದೆ: ದಿ. ವಿಠಲ ಶೆಟ್ಟಿ  ವಾಸ: ಬೆಳ್ಳಿಬೆಟ್ಟು ಮನೆ ನಲ್ಲೂರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 24/04/2022 ರಂದು ಸಂಜೆ 6 ಗಂಟೆಯ ಸಮಯಕ್ಕೆ ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಬೆಳ್ಳಿಬೆಟ್ಟು ಎಂಬಲ್ಲಿ ಇರುವ ತನ್ನ  ಶೆಡ್ ನಲ್ಲಿ ವಿಶ್ರಾಂತಿ ಪಡೆಯುತ್ತಿರುವಾಗ ಆರೋಪಿತರಾದ ಆಶ್ರಯ ಸಫಲಿಗ, ಬಾಬು ವಸಂತ ಶೆಟ್ಟಿ ಮತ್ತೆ ಇನ್ನಿಬ್ಬರು ವಸಂತ ಶೆಟ್ಟಿ ರವರ ಶೆಡ್ ನೊಳಗಡೆ ಅಕ್ರಮ ಪ್ರವೇಶ ಮಾಡಿ ಇವರನ್ನು ಉದ್ದೇಶಿಸಿ ತುಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಎಲ್ಲರೂ ಸೇರಿ ವಸಂತ ಶೆಟ್ಟಿ ರವರ ಮೈಕೈಗೆ ಗುದ್ದಿದ್ದು ಅಲ್ಲದೆ ಆರೋಪಿ ಆಶ್ರಯ ಸಫಲಿಗನು ಇವರ ಎರಡು ಕೆನ್ನೆಗೆ ಕೈಯಿಂದ ಹೊಡೆದು ನೆಲಕ್ಕೆ ದೂಡಿದ ಪರಿಣಾಮ ವಸಂತ ಶೆಟ್ಟಿ ರವರು ನೆಲಕ್ಕೆ ಬಿದ್ದಿದ್ದು ಅವರಿಗೆ ಈ ಮೊದಲೇ ಅಪಘಾತ ಆಗಿ ಗಾಯಗೊಂಡಿದ್ದ ಬಲ ಕಾಲಿಗೆ ಪುನಃ ನೋವು ಉಂಟಾಗಿದ್ದು ಅಲ್ಲದೆ ಬಲ ಕಾಲಿನ ಮೊಣಗಂಟಿನ ಬಳಿ ತರಚಿದ ಗಾಯವಾಗಿದ್ದು, ಆರೋಪಿತರು ಜೀವಬೆದರಿಕೆ ಹಾಕಿ ಹೊರಟು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 49/2022 ಕಲಂ: 448, 323, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣಗಳು

  • ಪಡುವಿದ್ರಿ: ಪಿರ್ಯಾದಿ ಅಭಿಷೇಕ್ ಕುಂಜೂರು ಪ್ರಾಯ 28 ವರ್ಷ ತಂದೆ: ದಿ ರಘುರಾಮ ದೇವಾಡಿಗ ವಾಸ: ದುರ್ಗಾ ದೀಪ ನಿಲಯ  ಕುಂಜೂರು ಇವರ ಅಣ್ಣ ವಿಪರೀತ ಮದ್ಯಪಾನ ಮಾಡಿತ್ತಿದ್ದವರು ಮನೆಯಲ್ಲಿ ಜಗಳವಾಡಿ ಚಿಕ್ಕಂದಿನಿಂದಲೂ ಊರು ಬಿಟ್ಟು ಹೋಗಿದ್ದು ಇತ್ತೀಚಿಗೆ ಸುಮಾರು 04 ತಿಂಗಳ ಹಿಂದೆ ಕಾಲು ನೋವಿನ ಕಾರಣ ಊರಿಗೆ ಬಂದವರು ಮನೆಯಲ್ಲಿ ಚಿಕಿತ್ಸೆ ಪಡೆಯತ್ತಾ ಗುಣ ಮುಖವಾಗುತ್ತಿದ್ದಂತೆ ಪುನ: ಮದ್ಯಪಾನ ಮಾಡಿ ಮನೆಯವರೊಂದಿಗೆ ಜಗಳವಾಡಿ ಬೆಂಗಳೂರಿಗೆ ಹೋಗಿರುತ್ತಾರೆ ಈ ದಿನ ದಿನಾಂಕ: 25/04/2022 ರಂದು ರಾತ್ರಿ 12:10 ಗಂಟೆಗೆ ಯಾವುದೋ ರೈಲು ರವಿಕುಮಾರ್ ಗೆ ಡಿಕ್ಕಿ ಹೊಡೆದು ಮೃತ ಪಟ್ಟಿಇರುತ್ತಾರೆ. ಮಾಹಿತಿ ತಿಳಿದ ಪಿರ್ಯಾದಿದಾರರು ಸ್ಥಳಕ್ಕೆ ಬಂದು ನೋಡಿದಾಗ ಮೃತ ದೇಹವು ತನ್ನ ಅಣ್ಣ ರವಿಕುಮಾರ್ ಎಂಬುದಾಗಿ  ಗುರುತಿಸಿಕೊಂಡಿರುತ್ತಾರೆ. ಮೃತರು ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದವರು ಇದೇ ಕಾರಣ ದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಬೆಂಗಳೂರಿನಿಂದ ಬಂದು ಉಡುಪಿ-ಮಂಗಳೂರು ರೈಲ್ವೆ ಹಳಿಯಲ್ಲಿ ಹೋಗುವ ಮಾರ್ಗದಲ್ಲಿ ಚಲಿಸುವ ಯಾವುದೋ ರೈಲಿಗೆ ನಂದಿಕೂರು ರೈಲ್ವೆ ಬ್ರಿಡ್ಜ್ ಬಳಿ ತನ್ನನ್ನು ಡಿಕ್ಕಿ ಪಡಿಸಿಕೊಂಡು ತಲೆಗೆ ಗಂಭೀರ ಗಾಯ ಉಂಟಾಗಿ ಆತ್ಮ ಹತ್ಯೆ ಮಾಡಿಕೊಂಡಿರುತ್ತಾರೆ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಸದ್ರಿಯವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣಾ ಯುಡಿಆರ್  ನಂಬ್ರ 11/2022, ಕಲಂ: 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಫಿರ್ಯಾದಿ ಬಾಲಕೃಷ್ಣ ಶೆಟ್ಟಿ ಪ್ರಾಯ: 59 ವರ್ಷ ತಂದೆ: ದಿ: ಮಂಜಯ್ಯ ಶೆಟ್ಟಿ, ವಾಸ: ಆರ್ಮಕ್ಕಿ, ಶಿರೂರು ಗ್ರಾಮ, ಬೈಂದೂರು ಇವರ ಚಿಕ್ಕಮ್ಮನ ಮಗನಾದ ಪ್ರಶಾಂತ ಶೆಟ್ಟಿ ಪ್ರಾಯ: 58 ವರ್ಷರವರು ಸುಮಾರು 5 ವರ್ಷದಿಂದ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು  ವಾರಕ್ಕೆ ಎರಡು ಸಲ ಡಯಾಲಿಸಿಸ್  ಆಗಬೇಕಾಗಿದ್ದು  ಮಣಿಪಾಲಕ್ಕೆ ಹೋಗಿ ಬರುವರೇ ಅನಾನುಕೂಲವಾಗಿರುವುದರಿಂದ ಡಯಾಲಿಸಿಸ್ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಹೋಗಿ ಬರುವುದಾಗಿದೆ. ದಿನಾಂಕ: 19-04-2022 ರಂದು ಪ್ರಶಾಂತ ಶೆಟ್ಟಿಯವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಬಗ್ಗೆ ಹೋಗುವುದಾಗಿ ಮನೆಯಲ್ಲಿ ಹೆಂಡತಿಗೆ ಹೇಳಿ ಹೋಗಿದ್ದು ರಾತ್ರಿಯಾದರೂ ಮನೆಗೆ ಬಾರದೇ ಇರುವುದರಿಂದ ಅವರ ಹೆಂಡತಿಯಾದ ವಿನೋದ ಶೆಟ್ಟಿಯವರು  ಫಿರ್ಯಾದಿದಾರರಿಗೆ ಕರೆ ಮಾಡಿದ್ದು ಪತ್ತೆಯಾಗದ ಕಾರಣ ದಿನಾಂಕ: 20-04-2022 ರಂದು ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸ್ ಠಾಣೆಯಲ್ಲಿ ಒಂದು ಬ್ಯಾಗ್ ತೋರಿಸಿದ್ದು ಬ್ಯಾಗ್ ನಲ್ಲಿ ಪ್ರಶಾಂತ ಶೆಟ್ಟಿಯವರ ಬಾಬ್ತು  ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್, ಔಷದಿ ಚೀಟಿ, ಹಾಗೂ ಔಷಧ ಇದ್ದು ನಂತರ ಪ್ರಶಾಂತ ಶೆಟ್ಟಿಯವರು ಕಾಣೆಯಾದ ಬಗ್ಗೆ ಫಿರ್ಯಾದಿದಾರರ ಅಣ್ಣನ ಮಗನಾದ ಶಿವರಂಜನ್  ಎಂಬವರು ದೂರು ನೀಡಿ ಪ್ರಕರಣ ದಾಖಲಾಗಿರುತ್ತದೆ. ಈ ದಿನ ದಿನಾಂಕ: 25-04-2022 ರಂದು ಬೆಳಿಗ್ಗೆ 10:30 ಗಂಟೆಗೆ ಫಿರ್ಯಾದಿದಾರರ  ಭಾವನಾದ ಚಂದ್ರಶೇಖರ ಶೆಟ್ಟಿಯವರು ಪ್ರಶಾಂತ ಶೆಟ್ಟಿಯವರ ಮೃತದೇಹ ಕುಂದಾಪುರ ತಾಲೂಕು ಗಂಗೊಳ್ಳಿ  ಗ್ರಾಮದ ಗಂಗೊಳ್ಳಿ ಬಂದರ್ ಬಳಿ ಅರಬ್ಬೀ ಸಮುದ್ರದಲ್ಲಿ ತೇಲಾಡುತ್ತಿರುವುದನ್ನು ಸ್ಥಳೀಯ ಮೀನುಗಾರರು ದಡಕ್ಕೆ ತಂದು ಗಂಗೊಳ್ಳಿ  ಬಂದರ್ ನಲ್ಲಿ  ಇರಿಸಿರುವುದಾಗಿ ತಿಳಿಸಿದಂತೆ ಕೂಡಲೇ ಹೊರಟು ಸ್ಥಳಕ್ಕೆ ಹೋಗಿ ನೋಡಲಾಗಿ ಪ್ರಶಾಂತ ಶೆಟ್ಟಿಯವರ ಮೃತಶರೀರವಾಗಿರುತ್ತದೆ. ಪ್ರಶಾಂತ ಶೆಟ್ಟಿಯವರು ಸುಮಾರು 5 ವರ್ಷದಿಂದ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆ ಮಾಡಿದರೂ ಸಹ ಗುಣಮುಖರಾಗದೇ ಇದ್ದು  ಈ ಬಗ್ಗೆ ಮನನೊಂದು ದಿನಾಂಕ: 19-04-2022 ರಿಂದ ಈ ದಿನ ದಿನಾಂಕ: 25-04-2022 ರ ಮದ್ಯಾವಧಿಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ವಾರಾಹಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ಠಾಣೆ: ಯು.ಡಿ.ಆರ್ ನಂ 10/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಫಿರ್ಯಾದಿ ಅಣ್ಣಪ್ಪ ಶೆಟ್ಟಿ ಪ್ರಾಯ 36 ವರ್ಷ ತಂದೆ: ಮಂಜು ಶೆಟ್ಟಿ ವಾಸ: ನೆಲ್ಲಿಹಕ್ಲು ಬಿಜೂರು ಗ್ರಾಮ ಇವರ ಮಾವನ ಮಗಳು ವಸಂತಿರವರ ಮಗ ಚೇತನ ಪ್ರಾಯ 16 ವರ್ಷ ಈತನು ಪ್ರಥಮ ಪಿಯುಸಿ ವಿದ್ಯಾಬ್ಯಾಸ ಮಾಡುತ್ತಿದ್ದು, ಕಾಲೇಜಿಗೆ ರಜೆ ಇದ್ದುದ್ದರಿಂದ ದಿನಾಂಕ 24/04/2022 ರಂದು ಬೆಳಿಗ್ಗೆ 8:00 ಗಂಟೆಗೆ ಹೋಸ್ಕೋಟೆಯ ನಾಗರಾಜ ಭಂಡಾರಿಯವರ ಶ್ಯಾಮಿಯಾನ ಕೆಲಸಕ್ಕೆ ಹೋಗಿದ್ದವನು ರಾತ್ರಿ 10:30 ಗಂಟೆಗೆ ನಾಯ್ಕನಕಟ್ಟೆಯ ಅಶೋಕ ಭಟ್ ರವರ ಮನೆಯಲ್ಲಿ ಉಪನಯನ ಕಾರ್ಯಕ್ರಮದ ಬಗ್ಗೆ ಶ್ಯಾಮಿಯಾನ ಹಾಕುವರೇ ಕಬ್ಬಿಣದ ಏಣಿಯ ಮೇಲೆ ನಿಂತು ಶ್ಯಾಮಿಯಾನವನ್ನು ಕಟ್ಟುತ್ತಿರುವಾಗ ಶ್ಯಾಮಿಯಾನ್ ನ ಸುತ್ತ ಅಳವಡಿಸಿದ ಲೈಟಿಂಗ್ ನ ವಯರ್ ಗೆ ಅಳವಡಿಸಿದ ಗುಂಡು ಪಿನ್ನು ಆಕಸ್ಮಿಕವಾಗಿ ಚೇತನನ ಎಡಬದಿಯ ಎದೆಯ ಬಳಿ ತಾಗಿ ವಿಧ್ಯತ್ ಸ್ಪರ್ಶವಾಗಿ ಕೆಳಗೆ ಬಿದ್ದವನನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು 11:30 ಗಂಟೆಗೆ ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ಠಾಣಾ ಯುಡಿಅರ್‌ನಂಬ್ರ 21/2022 ಕಲಂ 174 ಸಿಅರ್‌ಪಿಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.  

ವರದಕ್ಷಿಣೆ ಕಿರುಕುಳ ಪ್ರಕರಣ:

  • ಉಡುಪಿ: ಪಿರ್ಯಾದಿ  ಶ್ರೀಮತಿ ಸುಜಾತಾ ಪೂಜಾರ್ತಿ ಪ್ರಾಯ 36 ವರ್ಷ ಗಂಡ: ಗಣೇಶ್ ಪೂಜಾರಿವಾಸ: ಸುಜಾತಾ ನಿಲಯ, ಕಾಳಿಂಗ ರಾವ್ ರಸ್ತೆ, ಪಾಂಡೇಶ್ವರ ,ಸಾಸ್ತಾನ ಇವರು ಅಪಾದಿತ 1.ಗಣೇಶ ಪೂಜಾರಿ (43) ಇವರನ್ನು ದಿನಾಂಕ: 17/04/2011 ರಂದು ಸಾಸ್ತಾನ್ ಶ್ರೀ ಶಿವಕೃಪಾ ಕಲ್ಯಾಣಮಂಟಪದಲ್ಲಿ ಜಾತಿ ಸಂಪ್ರದಾಯದಂತೆ ಮದುವೆಯಾಗಿರುತ್ತಾರೆ ಮದುವೆಯ  ಸಂಬಂಧ ಮಾಡುವಾಗ ಆರೋಪಿತರುಗಳು ರೂ 2,00,000/- ಹಾಗೂ 20 ಪವನ್ ಚಿನ್ನಾಭರಣ ವರಧಕ್ಷಿಣೆಯಾಗಿ ಭೇಡಿಕೆಯನ್ನು ಇಟ್ಟಿದ್ದು , ಪಿರ್ಯಾದಿದಾರರ ತಾಯಿ ವರದಕ್ಷಿಣೆಯನ್ನು ನೀಡಲು ನಿರಾಕರಿಸಿದಾಗ ಮದುವೆ ಪ್ರಸ್ತಾಪವನ್ನು ಮುರಿಯುವುದಾಗಿ ಬೆದರಿಕೆ ಹಾಕಿರುತ್ತಾರೆ. ಪಿರ್ಯಾದಿದಾರರ ತಾಯಿ ಬೇರೆ ವಿಧಿಯಿಲ್ಲದೇ 1,00,000/- ರೂ ಹಾಗೂ 10 ಪವನ್ ಚಿನ್ನಾಭರಣವನ್ನು ನೀಡಲು ಒಪ್ಪಿಕೊಂಡಿದ್ದು ನಿಶ್ಚಿತಾರ್ಥದ ದಿನವಾದ ದಿನಾಂಕ: 08/02/2011 ರಂದು  ರೂ 1,00,000/- ವನ್ನು 1 ನೇ ಆಪಾದಿತನ ಕೈಯಿಗೆ  ನಗದಾಗಿ ನೀಡಿದ್ದು 8 ಪವನ್ ಚಿನ್ನಾಭರಣವನ್ನು ಪಿರ್ಯಾಧಿದಾರರಿಗೆ ಹಾಗೂ 2 ಪವನ್ ಚಿನ್ನಾಭರಣವನ್ನು1 ನೇ ಆರೋಪಿಗೆ  ಆರೋಪಿಗಳ ಆಪೇಕ್ಷೆಯಂತೆ  ನೀಡಿರುವುದಾಗಿದೆ. ಮದುವೆಯಾದ ನಂತರ ಪಿರ್ಯಾದಿದಾರರನ್ನು ಆರೋಪಿಗಳು ಬ್ರಹ್ಮಾವರ ತಾಲೂಕಿನ ಬೆಳ್ಮಾರು ಮನೆಗೆ ಸಾಂಸಾರಿಕ ಜೀವನದ ಬಗ್ಗೆ ಕರೆದುಕೊಂಡು ಹೋಗಿದ್ದು ಆರೋಪಿತರಾದ 2.ಗಿರಿಜ ಪೂಜಾರ್ತಿ (64)ಗಂಡ: ಕುಷ್ಠ ಪೂಜಾರಿ 3.ವಾಸು ಪೂಜಾರಿ(47)ತಂದೆ: ಕುಷ್ಠ ಪೂಜಾರಿ 4.ಲೀಲಾ ಪೂಜಾರ್ತಿ(40) ಗಂಡ: ವಾಸು ಪೂಜಾರಿ ಮೇಲಿನ ಎಲ್ಲರ ವಾಸ: ಬೆಳ್ಮಾರು, ಆರೂರು ಅಂಚೆ, ಬ್ರಹ್ಮಾವರ ಇವರೆಲ್ಲರೂ ಪಿರ್ಯಾದಿದಾರರು ತಂದ ವರದಕ್ಷಿಣೆ ಕಡಿಮೆಯಾಯಿತೆಂದು ಪಿರ್ಯಾದಿದಾರರನ್ನು ಹೀಯಾಳಿಸಿ ಹಿಂಸಿಸುತ್ತಿದ್ದರು.  ಹಾಗೂ ಮದುವೆಯಾದ ಒಂದು ವಾರದಲ್ಲಿ ಪಿರ್ಯಾದಿದಾರರನ್ನು ಮನೆಯಿಂದ ಹೊರಗೆ ಹಾಕಿದ್ದು, ಪಿರ್ಯಾದಿದಾರರು ತನ್ನತಾಯಿ ಮನೆಯಲ್ಲಿ ವಾಸ ಮಾಡಿಕೊಂಡಿದ್ದರು. ಪಿರ್ಯಾದಿದಾರರು ಹಾಗೂ 1ನೇ ಆರೋಪಿಗೆ ವಿಸ್ಮಿತಾ (10) ಎಂಬ ಹೆಣ್ಣು ಮಗು ಇದ್ದು, ಒಂದನೇ ಆರೋಪಿಯು ಆಗಾಗ ಪಿರ್ಯಾದಿದಾರರ ತಾಯಿ ಮನೆಗೆ ಬಂದು ಪಿರ್ಯಾದಿದಾರರಿಗೆ ವೈವಾಹಿಕ ಹಿಂಸೆ ನೀಡುತ್ತಿದ್ದು ಪಿರ್ಯಾದಿದಾರರಿಗೆ ಹಾಗೂ ಮಗುವಿನ ಖರ್ಚಿಗೆ  ಯಾವುದೇ ಹಣವನ್ನು ನೀಡದೇ ನಿನ್ನ ಜೊತೆ ಸಂಸಾರ ಮಾಡಬೇಕೆಂದರೆ ನಿನ್ನನ್ನು ತಾಯಿಯನ್ನು ಕೊಂದು ಆಸ್ತಿಯನ್ನು ನನ್ನ ಹೆಸರಿಗೆ ಮಾಡಬೇಕು  ಎಂದು ಹೇಳಿ ಹಿಂಸೆಯನ್ನು ನೀಡಿರುತ್ತಾರೆ. ಈ ಬಗ್ಗೆ ಮಹಿಳಾ ಪೊಲೀಸ್‌  ಠಾಣಾ ಅಪರಾಧ ಕ್ರಮಾಂಕ : 33/2022 ಕಲಂ: 498(ಎ),504, 506 ಜೊತೆಗೆ 34    ಐ.ಪಿ.ಸಿ ಮತ್ತು ಕಲಂ:3 ಮತ್ತು  4 ಡಿಪಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 25-04-2022 06:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080