ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಜೀವನ್‌‌‌(19), ತಂದೆ: ಜಯ ರಾಮ್‌‌‌ ಶೆಟ್ಟಿ . ವಾಸ: ನಡೂರು ಗೋಳಿಬೆಟ್ಟು,  ನಡೂರು ಗ್ರಾಮ ಬ್ರಹ್ಮಾವರ ತಾಲೂಕು ಇವರ ತಾಯಿ ಜ್ಯೋತಿ (44) ರವರು ಸುಮಾರು ಒಂದು ವರ್ಷದಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು  ಈ ಬಗ್ಗೆ  ಉಡುಪಿಯ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು  ಕೊಡಿಸುತ್ತಿದ್ದು, ಪಿರ್ಯಾದಿದಾರರ ತಾಯಿ ಸುಮಾರು 9 ತಿಂಗಳ ಹಿಂದೆ  ಒಮ್ಮೆ ನೇಣು ಹಾಕಿಕೊಳ್ಳಲು  ಮತ್ತು ಬಾವಿಗೆ ಹಾರಲು  ಪ್ರಯತ್ನಿಸಿದ್ದು ತಪ್ಪಿಸಿರುವುದಾಗಿದೆ.  ಬಾಳಿಗ ಆಸ್ಪತ್ರೆಯವರು ತಾಯಿಯನ್ನು  ಸೂಕ್ಷ್ಮವಾಗಿ ನೋಡಿಕೊಳ್ಳುವಂತೆ ತಿಳಿಸಿದ್ದು, ದಿನಾಂಕ 21/04/2021 ರಂದು ಬೆಳಿಗ್ಗೆ 6:30 ಗಂಟೆಗೆ ಪಿರ್ಯಾದಿದಾರರು ಹಾಗೂ ಮನೆಯವರು ಮಲಗಿದ್ದಾಗ ಅಡುಗೆ ಕೋಣೆಯಲ್ಲಿ  ಪಿರ್ಯಾದಿದಾರರ ತಾಯಿ ಜೋರಾಗಿ ಕಿರುಚಿ ಕೊಳ್ಳುವುದು ಕೇಳಿ ಅಡುಗೆ ಕೋಣೆಯಲ್ಲಿ ನೋಡಿದಾಗ ಪಿರ್ಯಾದಿದಾರರ ತಾಯಿಯ ಮೈಯಲ್ಲಾ ಬೆಂಕಿ ಹತ್ತಿಕೊಂಡು ಕೂಗಾಡುತ್ತಿದ್ದರು ಆಗ ನೀರು ಹಾಕಿ ಬೆಂಕಿ ನಂದಿಸಿ  ನಂತರ ರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ಬಂದಾಗ ಅಲ್ಲಿನ ವೈದ್ಯರು ಚಿಕಿತ್ಸೆಯನ್ನು ಕೊಡಿಸಿ  ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ  ಕರೆದು ಕೊಂಡು ಹೋದಾಗ ಅಲ್ಲಿನ ವೈದ್ಯರು  ಪರೀಕ್ಷಿಸಿ ಬರ್‌‌ನಿಂಗ್‌‌ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ದಿನಾಂಕ 25/04/2021 ರಂದು ಬೆಳಿಗ್ಗಿನ ಜಾವ 01:32 ಗಂಟೆಗೆ ಚಿಕಿತ್ಸೆ ಫಲಕಾರಿ ಯಾಗದೇ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಪಿರ್ಯಾದಿದಾರರ ತಾಯಿ  ಒಂದು ವರ್ಷದಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಇದೇ ಕಾಯಿಲೆಯಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಅಡುಗೆ ಕೋಣೆಯಲ್ಲಿ ತಂದಿರಿಸಿದ ಸೀಮೆ ಎಣ್ಣೆಯನ್ನು ಮೈ ಮೇಲೆ  ಸುರಿದು ಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 25/2021 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಕೃಷ್ಣ ಪ್ರಾಯ : 60 ವರ್ಷ ,ತಂದೆ : ದಿ. ಮುದ್ದು, ವಾಸ : ಶಿವಾನಂದ ನಗರ ಮೂಡಬೆಟ್ಟು ಗ್ರಾಮ ಶಂಕರಪುರ ಅಂಚೆ ಕಾಪು ತಾಲೂಕು ಉಡುಪಿ ಜಿಲ್ಲೆ ಇವರು ಮೂಡಬೆಟ್ಟು ಗ್ರಾಮದ ಶಿವಾನಂದ ನಗರದಲ್ಲಿರುವ ಬಬ್ಬು ಸ್ವಾಮಿ ದೈವಸ್ಥಾನದ ಸದಸ್ಯರಾಗಿದ್ದು. ಎಂದಿನಂತೆ ದಿನಾಂಕ 24-04-2021 ರಂದು ಬೆಳಿಗ್ಗೆ 10:00 ಗಂಟೆಗೆ ದೈವಸ್ಥಾನಕ್ಕೆ ಬಂದು ಕೈ ಮುಗಿದು ಹೋಗಿದ್ದು ನಂತರ  10:30 ಗಂಟೆಗೆ ಸರಿಯಾಗಿ ದೈವಸ್ಥಾನಕ್ಕೆ ಬಂದು ನೋಡಿದಾಗ ದೈವಸ್ಥಾನದ ಗರ್ಭಗುಡಿಯ ಸಮೀಪವಿರುವ ಕಾಣಿಕೆ ಡಬ್ಬಿ ಕಾಣದೆ ಇದ್ದು. ಈ ಬಗ್ಗೆ ಹುಡುಕಾಡಿದಲ್ಲಿ ಕಾಣಿಕೆ ಡಬ್ಬಿ ಸಿಕ್ಕಿರುವುದಿಲ್ಲ.  ಕಾಣಿಕೆ ಡಬ್ಬಿಯಲ್ಲಿ  2000/- ರೂಪಾಯಿ ಇರುವ ಸಾಧ್ಯತೆ ಇದ್ದು ,ಕಾಣಿಕೆಯ ಡಬ್ಬಿಯ ಮೌಲ್ಯ 5000/- ರೂಪಾಯಿ ಇರುತ್ತದೆ.   ಕಾಣಿಕೆ ಡಬ್ಬಿಯನ್ನು ಕಾಣಿಕೆ ಸಮೇತ ಯಾರೋ ಕಳ್ಳರು ದಿನಾಂಕ 24-04-2021 ರಂದು ಬೆಳಿಗ್ಗೆ 10:00 ಗಂಟೆಯಿಂದ 10:30 ಗಂಟೆಯ ಮಧ್ಯಾವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2021  ಕಲಂ: 454 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-04-2021 01:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080