ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಶ್ರೀಮತಿ ಶಾರದ ಬಳೆಗಾರ್ತಿ  (62) ಗಂಡ. ಯೊಗೇಂದ್ರ ಬಳೆಗಾರ ವಾಸ, ದುರ್ಗಾ ನಿಲಯ ಬೆದ್ರಕಟ್ಟೆ   ಶಂಕರನಾರಾಯಣ ಗ್ರಾಮ ಕುಂದಾಪುರ  ಇವರು  ದಿನಾಂಕ 18/03/2023 ರಂದು KA-20 EX-9637 ನೇ ನಂಬ್ರದ ಮೋಟಾರ ಸೈಕಲನಲ್ಲಿ ಕುಂದಾಪುರ  ತಾಲೂಕಿನ  ಶಂಕರನಾರಾಯಣ ಗ್ರಾಮದ  ಬೆದ್ರಕಟ್ಟೆ  ಎಂಬಲ್ಲಿ ಅವರ ಮನೆಯಿಂದ  ಹೊರಟು ಅವರ  ವಾಸದ   ಮನೆಯಾದ   ಕುಂದಾಪುರ   ತಾಲೂಕಿನ  ಶಂಕರನಾರಾಯಣ ಗ್ರಾಮದ  ಬೆದ್ರಕಟ್ಟೆ  ಎಂಬಲ್ಲಿ ಮನೆಯ  ಗೇಟ್  ಬಳಿ   ಹೋಗುವಾಗ ಅಕಸ್ಮಾತ್  ನಾಯಿ  ಅಡ್ಡ  ಬಂದಾಗ  ಆರೋಪಿಯು  ಮೋಟಾರ್ ಸೈಕಲ್‌ನ್ನು ಅತೀವೇಗ ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿದ  ಪರಿಣಾಮ  ಶ್ರೀಮತಿ ಶಾರದ ಬಳೆಗಾರ್ತಿ  ರವರು   ಮೋಟಾರ್  ಸೈಕಲ್‌ನಿಂದ ಕೆಳಗಡೆ  ಬಿದ್ದಿರುತ್ತಾರೆ, ಇದರ  ಪರಿಣಾಮ ಅವರ   ಕುತ್ತಿಗೆಗೆ  ತಲೆಯ ಬಲಭಾಗಕ್ಕೆ  ಗುದ್ದಿದ ನೋವಾಗಿರುತ್ತದೆ, ಕೂಡಲೇ ಡಾ.ಎನ್ ಆರ್. ಆಚಾರ್ಯ  ಅಸ್ಪತ್ರೆ ಕೊಟೇಶ್ವರ  ಹೋಗಿ  ಅಲ್ಲಿ ಹೊರರೋಗಿಯಾಗಿ  ಚಿಕಿತ್ಸೆ ಪಡೆದುಕೊಂಡಿದ್ದು, ಆ ಬಳಿಕ  ಉಡುಪಿ  ಎಸ್‌.ಡಿ.ಎಮ್  ಆರ್ಯುವೇದ  ಆಸ್ಪತ್ರೆ  ಹಾಗೂ   ಉಡುಪಿ  ಜಿಲ್ಲಾ  ಸರಕಾರಿ   ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದುಕೊಂಡು  ನಂತರ  ದಿನಾಂಕ 21/03/2023 ರಂದು  ಮಂಗಳೂರು  ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ  ಹೋದಾಗ ಅಲ್ಲಿ  ಕುತ್ತಿಗೆಗೆ  ತೀವ್ರ ತರಹದ  ಗಾಯವಾಗಿದೆ  ಎಂದು  ಹೇಳಿ  ಚಿಕಿತ್ಸೆ ನೀಡಿ ಒಳರೋಗಿಯಾಗಿ  ದಾಖಲು  ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 31/2023  ಕಲಂ: :279,338  ಐ.ಪಿ.ಸಿ  134 (ಬಿ) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ .

ವಂಚನೆ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಮೊಹಮದ್‌ ತೌಫೀಕ್‌ (43) ತಂದೆ: ದಿ. ಅಬ್ದುಲ್‌ಸಲೀಮ್‌, ವಾಸ: ಡೋ.ನಂ. 3/79, ರೋಷನ್‌ಮಂಜಿಲ್‌, ಪೆರ್ಮುದೆ, ತೆಂಕಎಕ್ಕಾರು ಗ್ರಾಮ, ಮಂಗಳೂರು ಇವರು ಟ್ಯಾಕ್ಸಿ ಚಾಲಕರಾಗಿದ್ದು, ದಿನಾಂಕ 07/03/2023 ರಂದು ಬೆಳಿಗ್ಗೆ 11:00 ಗಂಟೆಗೆ ಕಾರ್ಕಳ ಪೇಟೆಯ ಪ್ರಕಾಶ್‌ಹೋಟೇಲ್‌ಬಳಿ ತಮ್ಮ ಪ್ಯಾಸೆಂಜರ್‌ಸೂಚನೆಯ ಮೇರೆಗೆ ಕಾಯುತ್ತಾ ನಿಂತುಕೊಂಡಿರುವಾಗ, 1 ನೇ ಅಪರಿಚಿತ ಆರೋಪಿತನು ಮೊಹಮದ್‌ ತೌಫೀಕ್‌ ರವರ ಬಳಿ ಬಂದು ಹಿಂದಿಯಲ್ಲಿ ಆತನ ಬಳಿಯಿದ್ದ ಗಲ್ಪ್‌ದೇಶದಲ್ಲಿ ಚಲಾವಣೆಯಲ್ಲಿರುವ 100 ದಿರಮ್ಸ್‌ಮೌಲ್ಯದ ಕರೆನ್ಸಿಯ ಒಂದು ನೋಟನ್ನು ತೋರಿಸಿ, ಇದನ್ನು ಎಲ್ಲಿ ಎಕ್ಸ್‌ಚೇಂಜ್‌ಮಾಡುತ್ತಾರೆ ಎಂದು ಕೇಳಿ ಇವರಲ್ಲಿ ವಿಚಾರಿಸಿದ್ದು, ಆ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದರೂ ಕೂಡಾ ಆ ನೋಟನ್ನು ಮೊಹಮದ್‌ ತೌಫೀಕ್‌  ರವರಿಗೆ ನೀಡಿದ್ದೂ ಅಲ್ಲದೇ ತಮ್ಮ ಆಂಟಿ ಬಳಿ ಇನ್ನೂ ಇದೇ ರೀತಿಯ ತುಂಬಾ ದಿರಮ್ಸ್‌ ಕರೆನ್ಸಿ ಇದೆ, ಬೇಕಾದಲ್ಲಿ ಕಡಿಮೆ ಮೌಲ್ಯಕ್ಕೆ ಕೊಡಿಸುತ್ತೇನೆ ” ಎಂದು ಹೇಳಿ, ಮೊಹಮದ್‌ ತೌಫೀಕ್‌ ರವರನ್ನು ಪದೇ ಪದೇ ಸಂಪರ್ಕಿಸಿ, ದಿನಾಂಕ 11/03/2023 ರಂದು ಬೆಳಿಗ್ಗೆ ಸುಮಾರು 10:30 ಗಂಟೆಗೆ ಸಾಲಿಗ್ರಾಮ ಬಸ್‌ನಿಲ್ದಾಣದ ಬಳಿಯ ಸರ್ವಿಸ್‌ರಸ್ತೆಯಲ್ಲಿ ಒಂದು ಪ್ಲಾಸ್ಟಿಕ್‌ಚೀಲದಲ್ಲಿದ್ದ 100 ದಿರಮ್ಸ್‌ಮೌಲ್ಯದ ಕರೆನ್ಸಿಯ ನೋಟಿನ ಕಟ್ಟುಗಳನ್ನು ತೋರಿಸಿ, ಅದರಲ್ಲಿ ದಿರಮ್ಸ್‌ಕರೆನ್ಸಿಯ 900 ನೋಟುಗಳು ಇದೆ ಎಂಬುದಾಗಿ 1 ನೇ ಆರೋಪಿತನು 2 ಮತ್ತು 3 ನೇ ಆರೋಪಿಗಳೊಂದಿಗೆ ಸೇರಿಕೊಂಡು ಮೊಹಮದ್‌ ತೌಫೀಕ್‌  ರವರನ್ನು ನಂಬಿಸಿ, 3 ಜನ ಆರೋಪಿಗಳು ದಿನಾಂಕ  07/03/2023 ರಿಂದ ದಿನಾಂಕ 14/03/2023 ರವರೆಗೆ ನಾನಾ ರೀತಿಯಲ್ಲಿ ನಾಟಕವಾಡಿ, ಮೊಹಮದ್‌ ತೌಫೀಕ್‌ ರವರಿಗೆ ವಂಚಿಸುವ ದುರುದ್ದೇಶದಿಂದ ದಿನಾಂಕ 14/03/2023 ರಂದು ಮಧ್ಯಾಹ್ನ 1.15 ಗಂಟೆಗೆ ಕೆಂಪು ಬಣ್ಣದ ಚೀಲದಲ್ಲಿ ದಿನಪತ್ರಿಕೆ ಹಾಗೂ ಸೋಪು ಇಟ್ಟು ಪ್ಯಾಕ್‌ಮಾಡಿ ಮೂರ್ನಾಲ್ಕು ಬಟ್ಟೆಯಿಂದ ಗಟ್ಟಿಯಾಗಿ ಗಂಟು ಹಾಕಿ, ಅದನ್ನು ತೋರಿಸಿ ಅದರಲ್ಲಿ 100 ದಿರಮ್ಸ್‌ಮೌಲ್ಯದ 900 ಕರೆನ್ಸಿ ನೋಟುಗಳು ಇವೆ ಎಂಬುದಾಗಿ ಮೊಹಮದ್‌ ತೌಫೀಕ್‌ ರವರಿಗೆ ನಂಬಿಸಿ, ಮೊಹಮದ್‌ ತೌಫೀಕ್‌ ರವರು ಆರೋಪಿಗಳು ನೀಡಿದ ಚೀಲಿದಲ್ಲಿದ್ದ ಸ್ವತ್ತನ್ನು ಪರಿಶೀಲಿಸುವ ಮೊಹಮದ್‌ ತೌಫೀಕ್‌ ರವರ ಕೈಯಲ್ಲಿದ್ದ ಹಣದ ಚೀಲವನ್ನು ಎಳೆದುಕೊಂಡು, ಆರೂವರೆ ಲಕ್ಷ ರೂಪಾಯಿ ಹಣ ಸುಲಿಗೆ ಮಾಡಿಕೊಂಡು ಓಡಿ ಹೋಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2023  ಕಲಂ: 420, 392 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಫಿರ್ಯಾದಿದಾರರಾಧ ಅಹಮ್ಮದ್‌ ಶರ್ಪೂದ್ದೀನ್‌ (46)ತಂದೆ: ದಿ. ಕಟಪಾಡಿ ಹುಸೇನ್‌,ವಾಸ: 7/105, ಬೀಚ್‌‌ರೋಡ್‌,ಕೋಡಿ, ಕುಂದಾಪುರ, ಕಸಬಾ ಗ್ರಾಮ, ಕುಂದಾಪುರ ಇವರು ಕುಂದಾಪುರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿರುವಾಗ ಆರೋಪಿಗಳಲ್ಲಿ ಒಬ್ಬನು ಅವರ ಬಳಿ ಬಂದು  ಒಂದು ಬರ್ಮುಡ ಚಡ್ಡಿಯನ್ನು ಖರೀದಿ ಮಾಡಿ ಹಣವನ್ನು ನೀಡಿ, ಬಳಿಕ ಆತನ ಪರ್ಸಿನಿಂದ ದುಬಾಯಿ ದೇಶದಲ್ಲಿ ಚಲಾವಣೆಯಲ್ಲಿರುವ 100 ದಿರಮ್ಸ್‌   ಮೌಲ್ಯದ ಕರೆನ್ಸಿ ನೋಟನ್ನು ತೋರಿಸಿ, ಇದನ್ನು ಎಲ್ಲಿ ಎಕ್ಸ್‌ಚೇಂಜ್‌ ಮಾಡುತ್ತಾರೆ ಎಂದು ಕೇಳಿ ವಿಚಾರಿಸಿದಾಗ ಅಹಮ್ಮದ್‌ ಶರ್ಪೂದ್ದೀನ್‌ ರವರು ಕನಿಕರದಿಂದ 100 ದಿರಮ್ಸ್ ಮೌಲ್ಯಕ್ಕೆ ಅವರ ಬಳಿಯಿದ್ದ 500 ರೂಪಾಯಿಯನ್ನು ಕೊಟ್ಟಿದ್ದು. ಆಗ ಆತನು , “ನನ್ನ ಬಳಿ ಇನ್ನೂ ಇದೇ ರೀತಿಯ ತುಂಬಾ ದಿರಮ್ಸ್‌ ಕರೆನ್ಸಿ ಇದೆ, ಬೇಕಾದಲ್ಲಿ ನೋಡಿ, ಕಡಿಮೆ ಮೌಲ್ಯಕ್ಕೆ ಕೊಡ್ತೇನೆ ” ಎಂದು ಹೇಳಿ ಅಹಮ್ಮದ್‌ ಶರ್ಪೂದ್ದೀನ್‌ ರವರ ಮೊಬೈಲ್‌ ನಂಬ್ರ ಪಡೆದು, ನಂತರ ಅದೇ ಆರೋಪಿ  ಕರೆ ಮಾಡಿ, “ ನನ್ನ ಬಳಿಯಿದ್ದ ದಿರಮ್ಸ್‌ ಕರೆನ್ಸಿ ನೋಡಲು ಬರ್ತಿರಾ,” ಎಂದು ಹೇಳಿ ಹಲವಾರು ಬಾರಿ ಸಮಯ ಹಾಗೂ ಸ್ಥಳವನ್ನು ಬದಲಿಸಿ ಅದಕ್ಕೆ ಸಮಜಾಯಿಷಿ ನೀಡಿ ಕೊನೆಗೆ “ ಬ್ರಹ್ಮಾವರಕ್ಕೆ ದಿರಮ್ಸ್  ಕರೆನ್ಸಿ ನೋಡಲು ಬರ್ತಿರಲ್ವಾ ” ಎಂದು ಹೇಳಿರುತ್ತಾನೆ. ಅದರಂತೆ  ದಿನಾಂಕ 19/03/2023 ರಂದು ಬೆಳಿಗ್ಗೆ ಸುಮಾರು 9:00 ಗಂಟೆ ಸುಮಾರಿಗೆ ಅಹಮ್ಮದ್‌ ಶರ್ಪೂದ್ದೀನ್‌ ರವರು ಒಂದೂವರೆ ಲಕ್ಷ ರೂಪಾಯಿ ಹಣವನ್ನು ಹಿಡಿದುಕೊಂಡು ಬ್ರಹ್ಮಾವರ ಬಸ್‌ ಸ್ಟ್ಯಾಂಡ್‌ ಬಳಿ ಬಂದಾಗ ಸದ್ರಿ ಆರೋಪಿಯು ಇನ್ನೊಬ್ಬ ಆರೋಪಿಯೊಂದಿಗೆ ಕಪ್ಪು ಬಣ್ಣದ ಮೋಟಾರ್ ಸೈಕಲ್ ನಲ್ಲಿ  ಇದ್ದಿದ್ದು. ಅವರು ಅಹಮ್ಮದ್‌ ಶರ್ಪೂದ್ದೀನ್‌ ರವರಲ್ಲಿ ಇಲ್ಲಿ ವ್ಯವಹಾರ ಮಾಡುವುದು ಬೇಡ, ಸ್ವಲ್ಪ ಮುಂದೆ ಹೋಗುವ ಎಂಬುದಾಗಿ ಹೇಳಿ, ಸ್ವಲ್ಪ ಮುಂದೆ ಸತ್ಯನಾಥ ಸ್ಟೋರ್ಸ್‌ ಬಟ್ಟೆಯಂಗಡಿ ಕಡೆಗೆ ಹೋಗುತ್ತಾ ಸತ್ಯನಾಥ ಸ್ಟೋರ್ಸ್‌   ಪಕ್ಕದ ರಸ್ತೆಯ ಬಳಿ ಮೋಟಾರ್ ಸೈಕಲ್ ನಿಲ್ಲಿಸಿದಾಗ, ಇನ್ನೊಬ್ಬ ಆರೋಪಿತೆ ಕೈಯಲ್ಲಿ ಒಂದು ಹಸಿರು ಬಣ್ಣದ ಪ್ಲಾಸ್ಟಿಕ್‌ ಚೀಲ ಹಿಡಿದುಕೊಂಡು ಬಂದಿದ್ದು, ಆಗ ಅಹಮ್ಮದ್‌ ಶರ್ಪೂದ್ದೀನ್‌ ರವರು ಮೂವರು ಆರೋಪಿಗಳ ಜೊತೆಯಲ್ಲಿ ಮಾತನಾಡಿ, ಆರೋಪಿಗಳು ದುಬಾಯಿ ದೇಶದಲ್ಲಿ ಚಲಾವಣೆಯಲ್ಲಿರುವ 100 ದಿರಮ್ಸ್ ಮೌಲ್ಯದ 900 ನೋಟುಗಳು ಇದೆ ಎಂಬುದಾಗಿ ಹೇಳಿದ್ದು, ಅಹಮ್ಮದ್‌ ಶರ್ಪೂದ್ದೀನ್‌ ರವರ ಬಳಿಯಿದ್ದ ಹಣಕ್ಕೆ ದಿರಮ್ಸ್  ಕೊಡುವುದಾಗಿ ಒಪ್ಪಿ, ಆರೋಪಿಯ ಕೈಯಲ್ಲಿದ್ದ ಹಸಿರು ಬಣ್ಣದ ಪ್ಯಾಕ್‌ ಮಾಡಿದ ಚೀಲವನ್ನು ಇವರಿಗೆ ಕೊಟ್ಟು, ಇದರಲ್ಲಿ ದಿರಮ್ಸ್  ಇದೆ ಎಂದು ಹೇಳಿ ಅಹಮ್ಮದ್‌ ಶರ್ಪೂದ್ದೀನ್‌ ರವರು ಪರಿಶೀಲಿಸುವ ಮೊದಲೇ ಆರೋಪಿಗಳು ಇವರ  ಕೈಯಲ್ಲಿದ್ದ ಹಣದ ಚೀಲವನ್ನು ಎಳೆದುಕೊಂಡು,  ಮೂರು ಆರೋಪಿಗಳು ಮೋಟಾರ್ ಸೈಕಲ್ ನಲ್ಲಿ ಪರಾರಿಯಾಗಿರುತ್ತಾರೆ. ನಂತರ ಅಹಮ್ಮದ್‌ ಶರ್ಪೂದ್ದೀನ್‌ ರವರು ಅವರಿಗೆ ನೀಡಿದ ಚೀಲವನ್ನು ತೆರೆದು ನೋಡಿದಾಗ, ಅದರಲ್ಲಿ ದಿನಪತ್ರಿಕೆಯ ಹಾಳೆಗಳನ್ನು ಕಟ್ಟು ಮಾಡಿ ಮತ್ತು ನೋಟನ್ನು ಸೇರಿಸಿ ಇಟ್ಟು, ಪ್ಯಾಕ್‌ ಮಾಡಿ ಬಟ್ಟೆಯಿಂದ ಸುತ್ತಿ ಗಂಟು ಕಟ್ಟಿರುವುದಾಗಿದೆ. ಸದ್ರಿ ಆರೋಪಿಗಳು  ದಿನಾಂಕ 10/03/2023 ರಿಂದ ದಿನಾಂಕ 19/03/2023 ರವರೆಗೆ ನಾನಾ ರೀತಿಯಲ್ಲಿ ಅಹಮ್ಮದ್‌ ಶರ್ಪೂದ್ದೀನ್‌ ರವರ ಮುಂದೆ ನಾಟಕವಾಡಿ, ಅಹಮ್ಮದ್‌ ಶರ್ಪೂದ್ದೀನ್‌ ರವರಿಗೆ  ವಂಚಿಸುವ ಉದ್ದೇಶದಿಂದ ಅವರನ್ನು ವಂಚಿಸಿ, ಒಂದೂವರೆ ಲಕ್ಷ ರೂಪಾಯಿ ಸುಲಿಗೆ ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63/2023  ಕಲಂ: 420, 392 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಾಧಕ ವಸ್ತು ಸೇವನೆ ಪ್ರಕರಣ

  • ಮಣಿಪಾಲ: ದಿನಾಂಕ 18/03/2023 ರಂದು ರಾತ್ರಿ  23:00 ಗಂಟೆ ಸಮಯಕ್ಕೆ ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ಆದ ನಾನು ಸಿಬ್ಬಂದಿಗಳಾದ ಹೆಚ್‌ಸಿ 164 ಪ್ರಸನ್, ಹಾಗೂ ಹೆಚ್‌ಸಿ 1094 ಇಮ್ರಾನ್‌, ಸಿಪಿಸಿ 2625 ನೇ ಚೇನ್ನೇಶ್‌ಕೆ ಹೆಚ್‌ರವರೊಂದಿಗೆ ರೌಂಡ್ಸ್‌ಕರ್ತವ್ಯದಲ್ಲಿರುವಾಗ ಅಪೂರ್ವ ರಾಯ್  (20) ತಂದೆ: ಸುಜೀತ್ ಕುಮಾರ್ ವಾಸ:  ರೂ ನಂ -005  ಎನ್ ಡಿ ಸಮೃದ್ದಿ ಅಪಾರ್ಟ್ಮೆಂಟ್ ಸರಳಬೆಟ್ಟು  ಮಣಿಪಾಲ, ಉಡುಪಿ  ತಾಲೂಕು  ಮತ್ತು ಜಿಲ್ಲೆ ಎಂಬಾತನನ್ನು  ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ  ಸರಳಬೆಟ್ಟು ರಸ್ತೆಯ ಸಮೃದ್ದಿ ಅಪಾರ್ಟ್ಮೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದು, ಆತನನ್ನು  ಅದೇ ದಿನ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ರವರು ಸದರಿ ವ್ಯಕ್ತಿ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಠಾಣಾ ಹೆಚ್‌ಸಿ 164 ಪ್ರಸನ್, ಹಾಗೂ ಹೆಚ್‌ಸಿ 1094 ಇಮ್ರಾನ್‌ ಸಿಪಿಸಿ 2625 ನೇ ಚೇನ್ನೇಶ್‌ಕೆ ಹೆಚ್‌ ರವರ ಜೊತೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲು ಕಳುಹಿಸಿಕೊಟ್ಟಿರುತ್ತಾರೆ. ಆರೋಪಿ ಅಪೂರ್ವ ರಾಯ್ ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 24/03/2023 ರಂದು ದೃಢಪತ್ರವನ್ನು ನೀಡಿರುವುದಾಗಿದೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63/2023  ಕಲಂ: 27 (ಬಿ) ಎನ್‌ಡಿಪಿಎಸ್‌ ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 18/03/2023 ರಂದು ರಾತ್ರಿ  23:00 ಗಂಟೆ ಸಮಯಕ್ಕೆ ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ಆದ ನಾನು ಸಿಬ್ಬಂದಿಗಳಾದ ಹೆಚ್‌ಸಿ 164 ಪ್ರಸನ್, ಹಾಗೂ ಹೆಚ್‌ಸಿ 1094 ಇಮ್ರಾನ್‌, ಸಿಪಿಸಿ 2625 ನೇ ಚೇನ್ನೇಶ್‌ ಕೆ ಹೆಚ್‌ರವರೊಂದಿಗೆ ರೌಂಡ್ಸ್‌ಕರ್ತವ್ಯದಲ್ಲಿರುವಾಗ ಪುನೀತ್ (19) ತಂದೆ: ಎ ಎಸ್ ಬಗೇಲ್  ವಾಸ: ರೂ ನಂಬರ್ – 1104 ಎಮ್ ಐ ಟಿ ಹಾಸ್ಟೆಲ್  ಮಣಿಪಾಲ, ಉಡುಪಿ ತಾಲೂಕು ಮತ್ತು ಜಿಲ್ಲೆ ಎಂಬಾತನನ್ನು  ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ  ಸರಳಬೆಟ್ಟು ರಸ್ತೆಯ ಸಮೃದ್ದಿ ಅಪಾರ್ಟ್ಮೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದು, ಆತನನ್ನು  ಅದೇ ದಿನ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ರವರು ಸದರಿ ವ್ಯಕ್ತಿ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಠಾಣಾ ಹೆಚ್‌ಸಿ 164 ಪ್ರಸನ್, ಹಾಗೂ ಹೆಚ್‌ಸಿ 1094 ಇಮ್ರಾನ್‌ ಸಿಪಿಸಿ 2625 ನೇ ಚೇನ್ನೇಶ್‌ಕೆ ಹೆಚ್‌ ರವರ ಜೊತೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲು ಕಳುಹಿಸಿಕೊಟ್ಟಿರುತ್ತಾರೆ. ಆರೋಪಿ ಪುನೀತ್ ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 24/03/2023 ರಂದು ದೃಢಪತ್ರವನ್ನು ನೀಡಿರುವುದಾಗಿದೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 64/2023  ಕಲಂ: 27 (ಬಿ) ಎನ್‌ಡಿಪಿಎಸ್‌ ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾ: ದಿನಾಂಕ 18/03/2023 ರಂದು ರಾತ್ರಿ  23:00 ಗಂಟೆ ಸಮಯಕ್ಕೆ ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ಆದ ನಾನು ಸಿಬ್ಬಂದಿಗಳಾದ ಹೆಚ್‌ಸಿ 164 ಪ್ರಸನ್, ಹಾಗೂ ಹೆಚ್‌ಸಿ 1094 ಇಮ್ರಾನ್‌, ಸಿಪಿಸಿ 2625 ನೇ ಚೇನ್ನೇಶ್‌ಕೆ ಹೆಚ್‌ರವರೊಂದಿಗೆ ರೌಂಡ್ಸ್‌ಕರ್ತವ್ಯದಲ್ಲಿರುವಾಗ ಅಖಿಲ್ ಮಿಶ್ರಾ (21) ತಂದೆ: ಕೃಷ್ಣ ಕುಮಾರ್ ಮಿಶ್ರಾ ವಾಸ: ರೂ ನಂಬರ್ – 609 ಎಮ್ ಐ ಟಿ ಹಾಸ್ಟೆಲ್ ಬ್ಲಾಕ್ ನಂಬರ್ - 15 . ಮಣಿಪಾಲ, ಉಡುಪಿ ತಾಲೂಕು ಮತ್ತು ಜಿಲ್ಲೆ ಎಂಬಾತನನ್ನು  ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ  ಸರಳಬೆಟ್ಟು ರಸ್ತೆಯ ಸಮೃದ್ದಿ ಅಪಾರ್ಟ್ಮೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದು, ಆತನನ್ನು  ಅದೇ ದಿನ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ರವರು ಸದರಿ ವ್ಯಕ್ತಿ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಠಾಣಾ ಹೆಚ್‌ಸಿ 164 ಪ್ರಸನ್, ಹಾಗೂ ಹೆಚ್‌ಸಿ 1094 ಇಮ್ರಾನ್‌ ಸಿಪಿಸಿ 2625 ನೇ ಚೇನ್ನೇಶ್‌ಕೆ ಹೆಚ್‌ ರವರ ಜೊತೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲು ಕಳುಹಿಸಿಕೊಟ್ಟಿರುತ್ತಾರೆ.  ಆರೋಪಿ ಅಖಿಲ್ ಮಿಶ್ರಾ ರವರು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 24/03/2023 ರಂದು ದೃಢಪತ್ರವನ್ನು ನೀಡಿರುವುದಾಗಿದೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 65/2023  ಕಲಂ: 27 (ಬಿ) ಎನ್‌ಡಿಪಿಎಸ್‌ ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 18/03/2023 ರಂದು ರಾತ್ರಿ  23:00 ಗಂಟೆ ಸಮಯಕ್ಕೆ ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ಆದ ನಾನು ಸಿಬ್ಬಂದಿಗಳಾದ ಹೆಚ್‌ಸಿ 164 ಪ್ರಸನ್, ಹಾಗೂ ಹೆಚ್‌ಸಿ 1094 ಇಮ್ರಾನ್‌, ಸಿಪಿಸಿ 2625 ನೇ ಚೇನ್ನೇಶ್‌ಕೆ ಹೆಚ್‌ರವರೊಂದಿಗೆ ರೌಂಡ್ಸ್‌ಕರ್ತವ್ಯದಲ್ಲಿರುವಾಗ ಶಿಬಾಶೀಸ್ ದಾಸ್ (20) ತಂದೆ: ಸಮೀರ್ ದಾಸ್ ವಾಸ: ರೂ ನಂಬರ್ -005  ಎನ್ ಡಿ ಸಮೃದ್ದಿ ಅಪಾರ್ಟ್ಮೆಂಟ್ ಸರಳಬೆಟ್ಟು ಮಣಿಪಾಲ, ಉಡುಪಿ  ತಾಲೂಕು ಮತ್ತು ಜಿಲ್ಲೆ ಎಂಬಾತನನ್ನು  ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ  ಸರಳಬೆಟ್ಟು ರಸ್ತೆಯ ಸಮೃದ್ದಿ ಅಪಾರ್ಟ್ಮೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದು, ಆತನನ್ನು  ಅದೇ ದಿನ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ರವರು ಸದರಿ ವ್ಯಕ್ತಿ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಠಾಣಾ ಹೆಚ್‌ಸಿ 164 ಪ್ರಸನ್, ಹಾಗೂ ಹೆಚ್‌ಸಿ 1094 ಇಮ್ರಾನ್‌ ಸಿಪಿಸಿ 2625 ನೇ ಚೇನ್ನೇಶ್‌ಕೆ ಹೆಚ್‌ ರವರ ಜೊತೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲು ಕಳುಹಿಸಿಕೊಟ್ಟಿರುತ್ತಾರೆ.     ಆರೋಪಿ ಶಿಬಾಶೀಸ್ ದಾಸ್ ರವರು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 24/03/2023 ರಂದು ದೃಢಪತ್ರವನ್ನು ನೀಡಿರುವುದಾಗಿದೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 66/2023  ಕಲಂ: 27 (ಬಿ) ಎನ್‌ಡಿಪಿಎಸ್‌ ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 18/03/2023 ರಂದು ರಾತ್ರಿ  23:00 ಗಂಟೆ ಸಮಯಕ್ಕೆ ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ಆದ ನಾನು ಸಿಬ್ಬಂದಿಗಳಾದ ಹೆಚ್‌ಸಿ 164 ಪ್ರಸನ್, ಹಾಗೂ ಹೆಚ್‌ಸಿ 1094 ಇಮ್ರಾನ್‌, ಸಿಪಿಸಿ 2625 ನೇ ಚೇನ್ನೇಶ್‌ಕೆ ಹೆಚ್‌ರವರೊಂದಿಗೆ ರೌಂಡ್ಸ್‌ಕರ್ತವ್ಯದಲ್ಲಿರುವಾಗ ಯಶ್ (21) ತಂದೆ: ಬಾಲಾಜಿ ವಾಸ: ರೂ ನಂಬರ್ -205   ಎನ್ ಡಿ ಸಮೃದ್ದಿ ಅಪಾರ್ಟ್ಮೆಂಟ್ ಸರಳಬೆಟ್ಟು  ಮಣಿಪಾಲ  , ಉಡುಪಿ  ತಾಲೂಕು ಮತ್ತು ಜಿಲ್ಲೆ ಎಂಬಾತನನ್ನು  ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ  ಸರಳಬೆಟ್ಟು ರಸ್ತೆಯ ಸಮೃದ್ದಿ ಅಪಾರ್ಟ್ಮೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದು, ಆತನನ್ನು ಅದೇ ದಿನ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ರವರು ಸದರಿ ವ್ಯಕ್ತಿ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಠಾಣಾ ಹೆಚ್‌ಸಿ 164 ಪ್ರಸನ್, ಹಾಗೂ ಹೆಚ್‌ಸಿ 1094 ಇಮ್ರಾನ್‌ ಸಿಪಿಸಿ 2625 ನೇ ಚೇನ್ನೇಶ್‌ಕೆ ಹೆಚ್‌ ರವರ ಜೊತೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲು ಕಳುಹಿಸಿಕೊಟ್ಟಿರುತ್ತಾರೆ. ಆರೋಪಿ ಯಶ್ ರವರು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 24/03/2023 ರಂದು ದೃಢಪತ್ರವನ್ನು ನೀಡಿರುವುದಾಗಿದೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 67/2023  ಕಲಂ: 27 (ಬಿ) ಎನ್‌ಡಿಪಿಎಸ್‌ ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 18/03/2023 ರಂದು ರಾತ್ರಿ  23:00 ಗಂಟೆ ಸಮಯಕ್ಕೆ ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ಆದ ನಾನು ಸಿಬ್ಬಂದಿಗಳಾದ ಹೆಚ್‌ಸಿ 164 ಪ್ರಸನ್, ಹಾಗೂ ಹೆಚ್‌ಸಿ 1094 ಇಮ್ರಾನ್‌, ಸಿಪಿಸಿ 2625 ನೇ ಚೇನ್ನೇಶ್‌ಕೆ ಹೆಚ್‌ರವರೊಂದಿಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲದ   ಡಿ ಸಿ ಆಪೀಸ್‌ ರಸ್ತೆಯ ಬಳಿ  ಸಾರ್ವಜನಿಕ ಸ್ಥಳದಲ್ಲಿ ರೌಂಡ್ಸ್‌ಕರ್ತವ್ಯದಲ್ಲಿರುವಾಗ ಅನುಜ ಉಮೇಶ (18) ತಂದೆ  ಉಮೇಶ  ಕುಮಾರ  ವಾಸ-  ಪ್ಲಾಟ್‌ ನಂ  401 ಹೈಪಾಯಿಂಟ್‌ ಸರಳೇಬೆಟ್ಟು  ಉಡುಪಿ  ತಾಲೂಕು ಎಂಬಾತನನ್ನು  ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ವಿಚಾರಣೆ ಮಾಡಿ ಮುರುದಿನ ದಿನಾಂಕ 19/03/2023 ರಂದು ಠಾಣೆಗೆ ಬರುವಂತೆ ತಿಳಿಸಿದ್ದು ಅದರಂತೆ ದಿನಾಂಕ 19/03/2023 ರಂದು ಠಾಣೆಗೆ ಬಂದಿದ್ದು, ಆತನನ್ನು  ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ರವರು ಸದರಿ ವ್ಯಕ್ತಿ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಠಾಣಾ ಹೆಚ್‌ಸಿ 164 ಪ್ರಸನ್, ಹಾಗೂ ಹೆಚ್‌ಸಿ 1094 ಇಮ್ರಾನ್‌ ರವರ ಜೊತೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲು ಕಳುಹಿಸಿಕೊಟ್ಟಿರುತ್ತಾರೆ. ಆರೋಪಿ ಅನುಜ ಉಮೇಶ ರವರು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 24/03/2023 ರಂದು ದೃಢಪತ್ರವನ್ನು ನೀಡಿರುವುದಾಗಿದೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 68/2023  ಕಲಂ: 27 (ಬಿ) ಎನ್‌ಡಿಪಿಎಸ್‌ ರಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ನಿಂಗವ್ವ. (36) ಗಂಡ: ಶರಣಪ್ಪ, ವಾಸ: ಬಿಸನಾಳ ಕೊಪ್ಪ, ಹುನಗುಂದ ತಾಲೂಕು, ಬಾಗಲಕೋಟೆ ಇವರು ಬಾಗಲಕೋಟೆ ಜಿಲ್ಲೆಯ ಮೂಲದವರಾಗಿದ್ದು, ಸುಮಾರು 06 ವರ್ಷಗಳಿಂದ ಉಡುಪಿ ಜಿಲ್ಲೆ ಕಾಪು ತಾಲೂಕು ತೆಂಕ ಎರ್ಮಾಳು ಗ್ರಾಮದ ಬೀಚ್‌ರಸ್ತೆಯ ವಿಜಯ ಎಂಬುವರ ಮನೆಯಲ್ಲಿ ಗಂಡ ಹಾಗೂ ಮಕ್ಕಳೊಂದಿಗೆ ಬಾಡಿಗೆಗೆ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಸದ್ರಿ ಪಿರ್ಯಾದಿದಾರರು ಹಾಗೂ ಅವರ ಗಂಡ ಎಂದಿನಂತೆ ದಿನಾಂಕ 24/03/2023 ರಂದು ಬೆಳಿಗ್ಗೆ 09:00 ಗಂಟೆಯ ವೇಳೆಗೆ ಕೂಲಿ ಕೆಲಸಕ್ಕೆಂದು ಮನೆಗೆ ಬೀಗ ಹಾಕಿ ಹೋಗಿದ್ದು, ನಿಂಗವ್ವ ರವರ ಗಂಡ ಮಧ್ಯಾಹ್ನ 15:10 ಗಂಟೆಯ ವೇಳೆಗೆ ವಾಪಾಸ್ಸು ಮನೆಗೆ ಬಂದಾಗ,ಯಾರೋ ಕಳ್ಳರು ಅವರ ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು, ಮನೆಯೊಳಗೆ ಹೋಗಿ ಗೋದ್ರೇಜ್‌‌ನಲ್ಲಿದ್ದ ಬಟ್ಟೆ ಬರೆಗಳನ್ನು ಹುಡುಕಾಡಿ ಚೆಲ್ಲಾಪಿಲ್ಲಿ ಮಾಡಿರುವುದಲ್ಲದೇ, ಗೋದ್ರೇಜ್ ಒಳಗೆ ಹಣ ಇರಿಸಿದ್ದ ಬ್ಯಾಗಿಗೆ ಹಾಕಿದ್ದ ಸಣ್ಣ ಬೀಗವನ್ನು ಜಿಪ್ ಸಮೇತ ಕಿತ್ತು ಹಾಕಿ, ಬ್ಯಾಗಿನೊಳಗಿದ್ದ 1] 1,10,000/- ರೂಪಾಯಿ ನಗದು, 2] ಸುಮಾರು 4 ಗ್ರಾಮ್ ತೂಕದ ಲಕ್ಷ್ಮೀ ಪದಕ ಇರುವ ಚಿನ್ನದ ಸರ-01 ಅಂದಾಜು ಮೌಲ್ಯ 14,000/- ರೂಪಾಯಿ, 3] ಸುಮಾರು 4 ಗ್ರಾಮ್ ತೂಕದ ಚಿನ್ನದ ಗುಂಡುಗಳಿರುವ ನೂಲಿನಿಂದ ಪೋಣಿಸಿದ ಸರ-01 ಅಂದಾಜು ಮೌಲ್ಯ 14,000/- ರೂಪಾಯಿ, 4] ಸುಮಾರು 80 ಗ್ರಾಮ್ ತೂಕದ ಬೆಳ್ಳಿಯ ದೇವರ ದೀಪ-01 ಅಂದಾಜು ಮೌಲ್ಯ 2,000/- ರೂಪಾಯಿ ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಎಲ್ಲಾ ವಸ್ತುಗಳ ಒಟ್ಟು ಮೌಲ್ಯ 1,40,000/- ರೂಪಾಯಿ ಆಗಿರಬಹುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 33/2023, ಕಲಂ:  454,  380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾಧ Zeena Pinto (42) W/O Hari lal R/O Mahalaxmi 7th Cross Hayagreeva Nagar Shivalli Village ಇವರು ಕೊಂಕಣ ರೈಲ್ವೇ ಇಲಾಖೆಯಲ್ಲಿ  ಕಾನ್ಸ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದ್ರಿಯವರು ದಿನಾಂಕ 24/03/2023 ರಂದು 15:15 ಗಂಟೆಗೆ ಇಂದ್ರಾಳಿ ರೈಲ್ವೆ ನಿಲ್ದಾಣದ ಕಛೇರಿಯಲ್ಲಿ ಕರ್ತವ್ಯದಲ್ಲಿರುವಾಗ ಟ್ರೇನ್ ನಂ: 12620 ರ ಮಂಗಳೂರು ಸೆಂಟ್ರಲ್  ಲೋಕ ಮಾನ್ಯ ತಿಲಕಡಿಯ ಜನರಲ್ ಕೋಚ್ ನಲ್ಲಿ  ವ್ಯಕ್ತಿಗಳು ಗಲಾಟೆ ಮಾಡುತ್ತಿದ್ದು ಹಾಗೂ ಅವಾಚ್ಯ ಶಬ್ದ ಬೈಯುತ್ತಿರುವ ಬಗ್ಗೆ ಕರೆ ಬಂದಿದ್ದು, ಸದ್ರಿ ಟ್ರೈನ್ 15:50 ಗಂಟೆಗೆ ಇಂದ್ರಾಳಿ ರೈಲ್ವೇ ನಿಲ್ದಾಣಕ್ಕೆ ಬಂದಿದ್ದು  ಪಿರ್ಯಾದಿದಾರರು ಕಾನ್ಸ್ ಟೇಬಲ್ ಶ್ರೀಕಾಂತ್ ರವರೊಂದಿಗೆ ಸದ್ರಿ ಬೋಗಿಯ ಬಳಿ ಹೋದಾಗ ಕರರ್ತವ್ಯ ನಿರತ TTE ಹಾಗೂ ಸಾರ್ವಜನಿಕರು ಗಲಾಟೆ ಮಾಡುತ್ತಿದ್ದ ಆರೋಪಿ Sameer Bivaji Shindu ಎಂಬುವನನ್ನು ಪಿರ್ಯಾದಿದಾರ ವಶಕ್ಕೆ ನೀಡಿದ್ದು, ಆ ಸಮಯ TTE ರವರು ನೀಡಿದ ಜ್ಞಾಪನವನ್ನು ಹಾಗೂ ಪಿರ್ಯಾದಿ ಪ್ರತಿಯನ್ನು ಆರೋಪಿ ಹರಿದು ಬಿಸಾಡಿ ಪಿರ್ಯಾದಿದಾರರಿಗೆ ಹಾಗೂ ಅವರ ಸಹದ್ಯೋಗಿ ಶ್ರೀಕಾಂತ್ ರವರಿಗೆ ಅವಾಚ್ಯ ಶಬ್ದದಿಂದ ಬೈದು ನಿಂದಿಸಿದ್ದು, ನಂತರ ಆತನನ್ನು ಕಛೇರಿಗೆ ಕರೆದುಕೊಂಡು ಹೋಗಿ ನಿರೀಕ್ಷಕರ ಮುಂದೆ ಹಾಜರು ಪಡಿಸಿದಾಗ ಅವರ ಎದುರು ಆರೋಪಿಯು ಪಿರ್ಯಾದಿದಾರರನ್ನು ಹಾಗೂ ಕಾನ್ಸ್ ಟೇಬಲ್ ಶ್ರೀಕಾಂತ್ ರವರನ್ನು ಉದ್ದೇಶಿಸಿ ನಿಮ್ಮನ್ನು ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ , ಮತ್ತು ಸಮವಸ್ತ್ರದಲ್ಲಿ ಸರ್ಕಾರಿ ಕರ್ತವ್ಯ  ನಿರ್ವಹಿಸಲು ಅಡ್ಡಿಪಡಿಸಿರುವುದಾಗಿದೆ . ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 69/2023, ಕಲಂ: 353,504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ದಿನಾಂಕ 24/03/2023 ರಂದು  ಮಾನ್ಯ  ಪೊಲೀಸ್ ಉಪಾಧಿಕ್ಷಕರ ಮೌಖಿಕ ಆದೇಶದಂತೆ ಸುಷ್ಮಾ ಜಿ ಭಂಢಾರಿ  ಪಿಎಸ್ ಐ ಮಹಿಳಾ ಪೊಲೀಸ್ ಠಾಣೆ ಉಡುಪಿ ಇವರು ಮೂಡುತೋನ್ಸೆ ಗ್ರಾಮದ ನೇಜಾರು ಚೆಕ್ ಪೋಸ್ಟ್ ನಲ್ಲಿ ಮಲ್ಪೆ ಪೊಲೀಸ್ ಠಾಣಾ ಪಿಸಿ 164 ಮಲಗೊಂಡ ಪಾಟೀಲ್, ಮಹೆಚ್ ಜಿ 46 ಆರತಿಯವರೊಂದಿಗೆ ವಾಹನ ತಪಾಸಣೆ ಮಾಡುತ್ತಿರುವಾಗ ಬೆಳಿಗ್ಗೆ 11:30 ಗಂಟೆಯ ಸಮಯಕ್ಕೆ  ಕೆಮ್ಮಣ್ಣು ಕಡೆಯಿಂದ ಸಂತೆಕಟ್ಟೆ ಕಡೆಗೆ KA-20 ME-3331  ನೇ ಕಾರು ಬರುತ್ತಿದ್ದು, ಸದ್ರಿ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಲಾಗಿ ಕಾರಿನ ಹಿಂಬದಿಯ ಡಿಕ್ಕಿನಲ್ಲಿ ಒಂದು ನೀಲಿ ಬಣ್ಣದ ಸ್ಕೂಲ್ ಬ್ಯಾಗ್ ಇದ್ದು , ಸದ್ರಿ ಬ್ಯಾಗನ್ನು ತೆರೆದು ಪರಿಶೀಲಿಸಲಾಗಿ ಬ್ಯಾಗಿನೊಳಗೆ 500 ರೂ ಮುಖ ಬೆಲೆಯ ನೋಟುಗಳಿರುವ ಒಟ್ಟು 8 ಕಟ್ಟುಗಳಿದ್ದು, ಪ್ರತಿಯೊಂದು ಕಟ್ಟಿನಲ್ಲಿ  500 ರೂ ಮುಖ ಬೆಲೆಯ 100 ನೋಟುಗಳಿದ್ದು, ಒಟ್ಟು 4 ಲಕ್ಷ  ಹಣವಿದ್ದು,   ಸದ್ರಿ ಹಣದ ಬಗ್ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದು ,  ಸಂತೋಷ್  ಕಿರಣ್ ಲೋಬೋ ಹಾಗೂ ರೇಖಾ ಲೋಬೋ ಇವರಲ್ಲಿ ವಿಚಾರಿಸಲಾಗಿ ಸದ್ರಿ ಹಣದ ಬಗ್ಗೆ ಯಾವುದೇ ದಾಖಲಾತಿ ಇರುವುದಿಲ್ಲವಾಗಿ ತಿಳಿಸಿದ್ದು, ಚುನಾವಣೆಯ ಸಮಯವಾದುದರಿಂದ ಮೇಲಾಧಿಕಾರಿಯವರ ಆದೇಶದಂತೆ  ಸದ್ರಿ ಹಣವನ್ನು  ಪಂಚರ ಸಮಕ್ಷಮ ದಲ್ಲಿ ಮಹಜರು ಮುಖೇನ ಸ್ವಾದೀನಪಡಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮದ ಬಗ್ಗೆ ವರದಿಯೊಂದಿಗೆ ಹಾಜರುಪಡಿಸಿರುವುದಾಗಿದೆ, ಸದ್ರಿ ವರದಿಯಂತೆ  ಮಲ್ಪೆ ಠಾಣಾ ಎನ್ ಸಿ ನಂಬ್ರ ನೋಂದಾಯಿಸಿಕೊಂಡು  ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣದ ದಾಖಲಿಸಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 28-2023 ಕಲಂ 98 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-03-2023 11:05 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080