ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಮಲ್ಪೆ: ದಿನಾಂಕ  21/03/2023 ರಂದು ಪಿರ್ಯಾದಿದಾರರಾಧ ನಾಗೇಶ(55) ತಂದೆ: ನಂದು ಪೂಜಾರಿವಾಸ: ಅಮೀನ್‌ ನಿವಾಸ, ಮೂಡುದಡ್ಡಿ ಕಿದಿಯೂರು ಇವರು ತನ್ನ ಅಕ್ಕ ವನಜರವರನ್ನು ಮನೆ ಕೆಲಸದ ಬಗ್ಗೆ  ತನ್ನ KA-20 EC-6932  ನೇ ಸ್ಕೂಟರ್‌ ನಲ್ಲಿ  ಸಹಸವಾರಳಾಗಿ ಅಕ್ಕನನ್ನು ಕುಳ್ಳಿರಿಸಿಕೊಂಡು ಬೆಳಿಗ್ಗೆ 06:30 ಗಂಟೆಗೆ ಇವರು ಮನೆಯಿಂದ ಹೊರಟು  ಕಿದಿಯೂರು ಅಂಬಲಪಾಡಿ ಮಾರ್ಗವಾಗಿ ಹೋಗುತ್ತಿರುವಾಗ  ಕಿದಿಯೂರು ವಿಷ್ಣುಮೂರ್ತಿ ದೇವಸ್ಥಾನ ಬಳಿ ಸುಮಾರು ಬೆಳಿಗ್ಗೆ 6:45 ಗಂಟೆಗೆ  ಎದುರಿನಿಂದ ಅಂದರೆ ಅಂಬಲಪಾಡಿ  ಕಡೆಯಿಂದ ಕಿದಿಯೂರು ಕಡೆಗೆ KA-20 EX-7736  ನೇ  ಮೋಟಾರು  ಸೈಕಲ್‌   ಸವಾರ  ನಿರ್ಲಕ್ಷ್ಯತನ  ಹಾಗೂ ಅಜಾಗರೂಕತೆಯಿಂದ  ಸವಾರಿ ಮಾಡಿಕೊಂಡು ಬಂದು ರಸ್ತೆಯ ಬಲಬದಿಗೆ ಬಂದು  ನಾಗೇಶ ರವರ ಸ್ಕೂಟರ್‌ ಗೆ ಢಿಕ್ಕಿ ಹೊಡೆದ ಪರಿಣಾಮ  ಇವರಿಗೆ  ಬಲಕಾಲಿನ  ಪಾದದ ಕಿರುಬೆರಲಿನ ಬಳಿ ತರಚಿದ ಗಾಯ  ಹಾಗೂ ಎಡಬದಿಯ ಕಣ್ಣಿಗೆ  ಗುದ್ದಿದ  ನೋವು  ಎದೆಗೆ ಗುದ್ದಿದ ಗಾಯ ಉಂಟಾಗಿದ್ದು ಅಲ್ಲದೆ ಸಹಸವಾರ ಲಾಗಿದ್ದ  ಅಕ್ಕ ವನಜರವರಿಗೆ  ಮುಖದ ಕೆಳದವಡೆಯ ಮೂಳೆ ಮುರಿತದ  ಜಖಂ ಆಗಿದ್ದು, ಹಾಗೂ KA-20 EX-7736 ನೇ ಮೋಟಾರು ಸೈಕಲ್‌  ಸವಾರನಿಗೂ ಬೆನ್ನಿಗೆ ನೋವುಂಟಾಗಿರುತ್ತದೆ.ಅಪಘಾತ ನಡೆಸಿದ ಮೋಟಾರು ಸೈಕಲ್‌  ಸವಾರನ ಹೆಸರು ಮನೋಜ್‌ ಎಂದು ತಿಳಿದಿರುತ್ತದೆ. ಈ ಅಪಘಾತಕ್ಕೆ KA-20 EX-7736 ನೇ ಮೋಟಾರು ಸೈಕಲ್‌  ಸವಾರನ ನಿರ್ಲಕ್ಷ್ಯತನ  ಹಾಗೂ ಅಜಾಗರೂಕತೆಯ ಚಾಲನೆಯೆ ಕಾರಣವಾಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 29/2023 ಕಲಂ: 279, 337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹಿರಿಯಡ್ಕ: ಪಿರ್ಯಾದಿದಾರರಾದ ಪ್ರಸಾದ್‌ ಹೆಚ್‌  (34) ತಂದೆ: ಹೆರಿಯ ಮರಕಲಾ ವಾಸ: ಕೊಂಡಾಡಿ , ಭಜನಾಕಟ್ಟೆ, ಬೊಮ್ಮರಬೆಟ್ಟು  ಗ್ರಾಮ ಹಿರಿಯಡ್ಕ ಇವರು ದಿನಾಂಕ 25/03/2023 ರಂದು  ತನ್ನ ಕೆಎ-14 ಇಪಿ-4467 ನೇ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹಿರಿಯಡ್ಕಎಲ್ಲಿರುವ ತನ್ನ ಅಫೀಸಿಗೆ ಬರುತ್ತಿರುವಾಗ ಸಮಯ ಸುಮಾರು 10:40 ಗಂಟೆಗೆ ಹಿರಿಯಡ್ಕ ಹಿರಿಯಡ ಪ್ರಾಥಮಿಕ ಶಾಲೆಯ ತಲುಪುವಾಗ ಪ್ರಸಾದ್‌ ಹೆಚ್‌  ರಚರ ಬೈಕ್‌ನ್ನು  ಕೆಎ-21-4288 ನೇ ಟೆಂಪೋ ಚಾಲಕ ಸವಾದ್‌ ಎದುರಿನಲ್ಲಿ ಬರುತ್ತಿದ್ದ ಬಸ್‌ ಮತ್ತು  ಪ್ರಸಾದ್‌ ಹೆಚ್‌  ರವರ  ಬೈಕೆ ಮಧ್ಯೆ ತನ್ನ ಟೆಂಪೋವನ್ನು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿರುವುದಾಗಿದೆ.  ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 21/2023 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಫುರ: ದಿನಾಂಕ 24/03/2023 ರಂದು ಬೆಳಿಗ್ಗೆ  ಸುಮಾರು  11:45  ಗಂಟೆಗೆ, ಕುಂದಾಪುರ  ತಾಲೂಕಿನ, ಕಸಬಾ ಗ್ರಾಮದ  ಸಂಗಮ್‌ ಜಂಕ್ಷನ  ಬಳಿ  ಎನ್‌ ಹೆಚ್‌ 66 ರಸ್ತೆಯಲ್ಲಿ,ಆಪಾದಿತ ಸುರೇಂದ್ರ ಎಂಬುವರು KA-20-D-8235 ನೇ ಶ್ರೀ ದುರ್ಗಾಂಬ  ಬಸ್ಸನ್ನು ತಲ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು, ಕುಂದಾಪುರದ ಸಂಗಮ್‌ ಜಂಕ್ಷನ ಬಳಿ ಪಿರ್ಯಾದಿದಾರರಾದ ಶ್ರೀಮತಿ ಚಂದ್ರಕಲಾ ಪ್ರಾಯ 27 ವರ್ಷ ಗಂಡ: ಮಂಜುನಾಥ ಆಚಾರ್‌,ವಾಸ:ಪಿಂಗಾಣಿಗುಡ್ಡೆ,ತಲ್ಲೂರು ಗ್ರಾಮ ಕುಂದಾಪುರ ತಾಲೂಕು   ಇವರ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಅವರ 10 ವರ್ಷದ ಮಗ ಪವನ ಬಸ್ಸ್‌ ನಿಂದ ಇಳಿಯುತ್ತೀರುವ  ಸಮಯ  ಬಸ್ಸಿನ ಚಾಲಕ ಯಾವುದೇ ಸೂಚನೆ ನೀಡದೇ  ಬಸ್ಸನ್ನು ಒಮ್ಮೇಲೆ  ಮುಂದಕ್ಕೆ ಚಲಾಯಿಸಿದ ಪರಿಣಾಮ ಬಸ್ಸಿನಿಂದ ಇಳಿಯುತ್ತಿದ್ದ  ಪವನ್‌ ರವರು ಬಸ್ಸಿನ ಹಿಂಬದಿ ಡೋರ್‌ ನಿಂದ  ರಸ್ತೆಗೆ ಬಿದ್ದು ಗಾಯಗೊಂಡು ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 35/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಾಧಕ ವಸ್ತು ಸೇವನೆ ಪ್ರಕರಣ

 • ಉಡುಪಿ: ದಿನಾಂಕ 18/03/2023 ರಂದು ಉಡುಪಿ ತಾಲೂಕು, ಹೆರ್ಗ ಗ್ರಾಮದ ಸರಳಬೆಟ್ಟು, ಮಾವಿನಕಟ್ಟೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ಸಾತ್ವಿಕ್ ಜೋಷಿ ‌(19) ತಂದೆ:ವಿನಿತ್ ಜೋಷಿ, ವಾಸ:ಮನೆ ನಂಬ್ರ 496 ಎಸ್.ಡಿ ಬ್ಲಾಕ್, ಪಿಟಾಂಪುರ, ಸರಸ್ವತಿ ವಿಹಾರ್, ದೆಹಲಿ  ಹಾಲಿವಾಸ: ರೂಂ ನಂಬ್ರ 506,  ಹೈ ಪಾಯಿಂಟ್ ಹೈಟ್ಸ್‌ಅಪಾರ್ಟ್ಮೆಂಟ್ ಮಣಿಪಾಲ, ಶಿವಳ್ಳಿ ಗ್ರಾಮ ಉಡುಪಿ ಇತನನ್ನು ಸಿಬ್ಬಂದಿಗಳಾದ ಜೀವನ್ ರವರು 14:30 ಗಂಟೆ ವಶಕ್ಕೆ ಪಡೆದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ವರದಿಯೊಂದಿಗೆ ಠಾಣೆಗೆ ಕರೆತಂದು ಠಾಣಾ ಪ್ರಭಾರ ಕರ್ತವ್ಯದಲ್ಲಿದ್ದ ಹೆಚ್.ಸಿ ನೇಯವರ ಮುಂದೆ ಹಾಜರುಪಡಿಸಿದ್ದು, ಸದ್ರಿಯವರು ವರದಿಯನ್ನು ಸ್ವೀಕರಿಸಿ, ಮೇಲಾಧಿಕಾರಿಯವರ ಸೂಚನೆಯ ಮೇರೆಗೆ ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿರುತ್ತಾರೆ. ದಿನಾಂಕ 25/03/2023  ರಂದು ಪಿರ್ಯಾದಿದಾರ ಅಶೋಕ್ ಕುಮಾರ್  ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ. ಇವರು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನು ಸ್ವೀಕರಿಸಿ, ವರದಿಯಲ್ಲಿ ಆರೋಪಿ ಸಾತ್ವಿಕ್ ಜೋಷಿ ಈತನು  ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 48/2023 ಕಲಂ: 27 (ಬಿ) ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ದಿನಾಂಕ 18/03/2023 ರಂದು ಉಡುಪಿ ತಾಲೂಕು, ಹೆರ್ಗ ಗ್ರಾಮದ ಸರಳಬೆಟ್ಟು, ಮಾವಿನಕಟ್ಟೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ಗೋವಿಂದ ಆರ್ ನಾಯರ್ ‌(22) ತಂದೆ:ರದೀಶ್ ಜೆ.ಎಸ್, ವಾಸ:ಮನೆ ನಂಬ್ರ 25/2572 ಯಮುನಾ, ಕುನ್ನುಪುರಂ, ತಿರುವನಂತಪುರಂ ಜಿಲ್ಲೆ, ಕೇರಳ  ಹಾಲಿವಾಸ: ರೂಂ ನಂಬ್ರ 506,  ಹೈ ಪಾಯಿಂಟ್ ಹೈಟ್ಸ್‌ಅಪಾರ್ಟ್ಮೆಂಟ್ ಮಣಿಪಾಲ, ಶಿವಳ್ಳಿ ಇತನನ್ನು ಸಿಬ್ಬಂದಿಗಳಾದ  ಹೆಚ್ ಸಿ ಮತ್ತು ಮತ್ತು ಪಿ.ಸಿ ನೇ ಜೀವನ್ ರವರು 14:30 ಗಂಟೆ ವಶಕ್ಕೆ ಪಡೆದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ವರದಿಯೊಂದಿಗೆ ಠಾಣೆಗೆ ಕರೆತಂದು ಠಾಣಾ ಪ್ರಭಾರ ಕರ್ತವ್ಯದಲ್ಲಿದ್ದ ಹೆಚ್.ಸಿ ನೇಯವರ ಮುಂದೆ ಹಾಜರುಪಡಿಸಿದ್ದು, ಸದ್ರಿಯವರು ವರದಿಯನ್ನು ಸ್ವೀಕರಿಸಿ, ಮೇಲಾಧಿಕಾರಿಯವರ ಸೂಚನೆಯ ಮೇರೆಗೆ ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿರುತ್ತಾರೆ. ದಿನಾಂಕ 25/03/2023  ರಂದು ಪಿರ್ಯಾದಿದಾರರಾದ ಅಶೋಕ್ ಕುಮಾರ್  ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನು ಸ್ವೀಕರಿಸಿ, ವರದಿಯಲ್ಲಿ ಆರೋಪಿ ಗೋವಿಂದ ಆರ್ ನಾಯರ್ ಈತನು  ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 49/2023 ಕಲಂ: 27 (ಬಿ) ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ದಿನಾಂಕ 23/03/2023 ರಂದು ಠಾಣಾ ಸಿಬ್ಬಂದಿಯರಾದ ಸಂದೇಶ್ ಮತ್ತು -2559 ನೇ ಕರಿಬಸಜ್ಜ ರವರು ಠಾಣಾ ವ್ಯಾಪ್ತಿಯಲ್ಲಿ ಗಸ್ತು ನಡೆಸುತ್ತಿದ್ದಾಗ ಸಮಯ ಸುಮಾರು 15:30 ಗಂಟೆಗೆ ಕಾಫು ತಾಲೂಕು ಬಡಾ ಗ್ರಾಮದ ಉಚ್ಚಿಲದಲ್ಲಿ ಕೆವಿನ್‌ ಕುಲ್‌ದೀಪ್‌ ಮಜಲು ಎಂಬಾತನು ಯಾವುದೋ ಅಮಲಿನಲ್ಲಿದ್ದವನಂತೆ ತೂರಾಡುತ್ತಿದ್ದು, ಅವನು ಯಾವುದೋ ಮಾದಕ ಪದಾರ್ಥ ಸೇವಿಸಿರಬಹುದು ಎಂಬ ಬಗ್ಗೆ  ಅನುಮಾನಗೊಂಡು ಸದ್ರಿ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆತಂದು ಹಾಜರುಪಡಿಸಿದ್ದು, ಅದರಂತೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಸದ್ರಿ ಕೆವಿನ್‌ ಕುಲ್‌ದೀಪ್‌ ಮಜಲು ಎಂಬುವರು ಮಾದಕ ವಸ್ತುವಾದ ಗಾಂಜಾ ಸೇವಿಸಿರುವುದಾಗಿ ದಿನಾಂಕ 25/03/2023 ರಂದು ವೈದ್ಯರು ದೃಢ ಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 34/2023 ಕಲಂ: 27 (ಬಿ) ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ದಿನಾಂಕ 23/03/2023 ರಂದು ಠಾಣಾ ಸಿಬ್ಬಂದಿಯರಾದ ಸಿಪಿಸಿ-1240 ನೇ ಸಂದೇಶ್ ಮತ್ತು ಸಿಪಿಸಿ-2559 ನೇ ಕರಿಬಸಜ್ಜ ರವರು ಠಾಣಾ ವ್ಯಾಪ್ತಿಯಲ್ಲಿ ಗಸ್ತು ನಡೆಸುತ್ತಿದ್ದಾಗ ಸಮಯ ಸುಮಾರು 15:30 ಗಂಟೆಗೆ ಕಾಫು ತಾಲೂಕು ಬಡಾ ಗ್ರಾಮದ ಉಚ್ಚಿಲದಲ್ಲಿ ಅಶ್ವಿನ್‌ಪೂಜಾರಿ ಎಂಬಾತನು ಯಾವುದೋ ಅಮಲಿನಲ್ಲಿದ್ದವನಂತೆ ತೂರಾಡುತ್ತಿದ್ದು, ಅವನು ಯಾವುದೋ ಮಾದಕ ಪದಾರ್ಥ ಸೇವಿಸಿರಬಹುದು ಎಂಬ ಬಗ್ಗೆ  ಅನುಮಾನಗೊಂಡು ಸದ್ರಿ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆತಂದು ಹಾಜರುಪಡಿಸಿದ್ದು,  ಅದರಂತೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಸದ್ರಿ ಅಶ್ವಿನ್‌ಪೂಜಾರಿ ಎಂಬುವರು ಮಾದಕ ವಸ್ತುವಾದ ಗಾಂಜಾ ಸೇವಿಸಿರುವುದಾಗಿ ದಿನಾಂಕ 25/03/2023 ರಂದು ವೈದ್ಯರು ದೃಢ ಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 35/2023 ಕಲಂ: 27 (ಬಿ) ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

 • ಕೋಟ: ಪಿರ್ಯಾದಿದಾರರಾಧ ರವಿ ಚಂದ್ರ ಆಚಾರ್ಯ (36) ತಂದೆ: ನಾಗೇಂದ್ರ ಆಚಾರ್ಯ ವಾಸ: ಮಂಜುನಾಥ ಭಾವನಿ ನಿಲಯ, ದೇವಸ್ಥಾನಬೆಟ್ಟು ಅಂಚೆ, ಬೇಳೂರು ಗ್ರಾಮ ಕುಂದಾಪುರ ಇವರ ತಂದೆ  ನಾಗೇಂದ್ರ ಆಚಾರ್ಯ (70) ಇವರು ದಿನಾಂಕ 22/03/2023 ರಂದು ಮದ್ಯಾಹ್ನ 2:00 ಗಂಟೆಗೆ ರವಿ ಚಂದ್ರ ಆಚಾರ್ಯ  ರವರ ಅಕ್ಕನ ಮನೆಯಾದ ಸಾಲಿಗ್ರಾಮದಿಂದ ಕುಂದಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ನೆರೆಕೆರೆಯವರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಎಲ್ಲಿಯೂ ಪತ್ತೆಯಾಗದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 48/2023 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಹಿರಿಯಡ್ಕ: ದಿನಾಂಕ 24/03/2023 ರಂದು ಪಿರ್ಯಾದಿದಾರರಾಧ ಅನಿಲ್.ಬಿ. ಮಾದರ್‌ ಪಿ.ಎಸ್.ಐ, ಹಿರಿಯಡಕ ಪೊಲೀಸ್  ಠಾಣೆರು ಇಲಾಖಾ ವಾಹನದಲ್ಲಿ ಚಾಲಕ ಎ.ಪಿ.ಸಿ1417 ಸಂತೋಷ್‌, ಪಿ.ಸಿ 2593 ಆದರ್ಶ ನಾಯ್ಕ, ರವರೊಂದಿಗೆ ರೌಂಡ್ಸ್  ಕರ್ತವ್ಯದಲ್ಲಿದ್ದಾಗ 18:00 ಗಂಟೆ ಸಮಯಕ್ಕೆ,ಉಡುಪಿ ತಾಲೂಕು ಬೆಳ್ಳಂಪಳ್ಳಿ ಗ್ರಾಮದ ಮಹಾಲಕ್ಷ್ಮಿ ಭಜನಾಮಂದಿರ ಬಳಿಯಲ್ಲಿ ಆತ್ರಾಡಿ - ಬೆಳ್ಳಂಪಳ್ಳಿ  ರಸ್ತೆಯ ಬದಿಯಲ್ಲಿ ಓರ್ವ ಬಿಯರ್ ಸೇವನೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಆಗ ಪಂಚರೊಂದಿಗೆ  ಆರೋಪಿ ಬಳಿಗೆ  ಹೋದಾಗ  ಆರೋಪಿ ರಂಜಿತ್ ಎಸ್‌ಶೆಟ್ಟಿ ಎಂಬಾತನು  ಪಿರ್ಯಾದಿದಾರರನ್ನು ನೋಡಿ  ಆತನ ಕೈಯಲ್ಲಿದ್ದ ಬಿಯರ್‌ ಬಾಟಲಿಯಲ್ಲಿರುವ ಮದ್ಯವನ್ನು ನೆಲಕ್ಕೆ ಚೆಲ್ಲಿ ಓಡಲು ಯತ್ನಿಸಿದವನನ್ನು ಹಿಡಿದು ಆತನ  ಕೈಯಲ್ಲಿದ್ದ Budweiser ಎಂದು ಬರೆದಿರುವ 500 ML  ನ  1  ಖಾಲಿ ಟಿನ್ ಬಾಟಲಿಯನ್ನು ಮಹಜರು ಮುಖೇನಾ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 20/2023   ಕಲಂ: 15 (A), , 32(3) KE Actರಂತೆ ಪ್ರಕರಣ ದಾಖಲಾಗಿರುತ್ತದೆ.   
 • ಹಿರಿಯಡ್ಕ: ದಿನಾಂಕ 24/03/2023ರಂದು ಪಿರ್ಯಾದಿದಾರರಾಧ ಅನಿಲ್.ಬಿ. ಮಾದರ್‌ ಪಿ.ಎಸ್.ಐ, ಹಿರಿಯಡಕ ಪೊಲೀಸ್ ಠಾಣೆ ಇವರು ಇಲಾಖಾ ವಾಹನದಲ್ಲಿ ಚಾಲಕ ಎ.ಪಿ.ಸಿ1417 ಸಂತೋಷ್‌, ಪಿ.ಸಿ 2593 ಆದರ್ಶ ನಾಯ್ಕ,ರವರೊಂದಿಗೆ ರೌಂಡ್ಸ್  ಕರ್ತವ್ಯದಲ್ಲಿದ್ದಾಗ 16:00 ಗಂಟೆ ಸಮಯಕ್ಕೆ, ಆತ್ರಾಡಿ ಗ್ರಾಮದ ಪರೀಕ ಬ್ರಿಡ್ಜ್‌ಮೇಲೆ ಇಬ್ಬರು ಯುವಕರು ಬಿಯರ್ ಸೇವನೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಆಗ ಪಂಚರೊಂದಿಗೆ ಆರೋಪಿಗಳ ಬಳಿಗೆ  ಹೋದಾಗ  ಆರೋಪಿಗಳಾದ ವಿಘ್ನೇಶ್ ಪೂಜಾರಿ , ಮತ್ತು ಸನತ್‌‌ರವರು ಅನಿಲ್.ಬಿ. ಮಾದರ್‌ ರವರನ್ನು ನೋಡಿ ಕೈಯಲ್ಲಿದ್ದ ಬಿಯರ್‌ಬಾಟಲಿಯಲ್ಲಿರುವ ಮದ್ಯವನ್ನು ನೆಲಕ್ಕೆ ಚೆಲ್ಲಿ ಓಡಲು ಯತ್ನಿಸಿದವರನ್ನು  ಹಿಡಿದು ಅವರ ಕೈಯಲ್ಲಿದ್ದ UB EXPORT Premium   ಎಂದು ಬರೆದಿರುವ 650 ML ನ  ಖಾಲಿಯಾಗಿರುವ 2 ಬಿಯರ್ ಬಾಟಲಿಗಳನ್ನು  ಮಹಜರು ಮುಖೇನಾ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 19/2023   ಕಲಂ: 15 (A), , 32(3) KE Actರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 25-03-2023 05:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080