ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 24/03/2022 ರಂದು ಪಿರ್ಯಾದಿದಾರರಾದ ಪ್ರಸಾದ್ ಕುಮಾರ್ (20), ತಂದೆ: ದಿ. ಗೋವಿಂದ ,ವಾಸ: ಭಗವಾನ್ ನಿಲಯ, ಹಂದಾಡಿ, ಹಂದಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಉಪ್ಪಿ ನಕೋಟೆ ಧರ್ಮಾವರ ಆಡಿಟೋರಿಯಂ ಬಳಿ ಇರುವ ಕರ್ನಾಟಕ ಬ್ಯಾಂಕ್‌ಗೆ ಹೋದ ಅವರ ತಾಯಿ ಜಲಜ (55) ರವರನ್ನು ಕರೆದುಕೊಂಡು ಹೋಗಲು ಹಂದಾಡಿ ಬೇಳೂರುಜೆಡ್ಡು ಕ್ರಾಸ್ ಬಳಿ ಅವರ ಸ್ಕೂಟರ್‌ನಲ್ಲಿ ಬಂದು ರಸ್ತೆಯ ಈಚೆಯ ಬದಿ ನಿಂತು ಕಾಯುತ್ತಿರುವಾಗ ಮಧ್ಯಾಹ್ನ 3:00 ಗಂಟೆಗೆ ಅವರ ತಾಯಿ ಜಲಜರವರು ಕರ್ನಾಟಕ ಬ್ಯಾಂಕಿನಿಂದ ಪಿರ್ಯಾದಿದಾರರ ಕಡೆಗೆ ಬರಲು ಕುಂದಾಪುರ- ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರ ಟಾರ್ ರಸ್ತೆಯನ್ನು ದಾಟಿ ಉತ್ತರ ಅಂಚಿಗೆ ಬರುತ್ತಿದ್ದಂತೆ ಆರೋಪಿಯು KA-20-MC-4704 ನೇ ನಂಬ್ರದ ಓಮಿನಿ ಕಾರನ್ನು  ಕುಂದಾಪುರ ಕಡೆಯಿಂದ ರಾಹೆ 66 ರಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜಲಜ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಜಲಜ ರವರು ರಸ್ತೆಯ ಬದಿಯಲ್ಲಿ ಬಿದ್ದು ಅವರ ಬೆನ್ನಿಗೆ ತೀವ್ರ ತರದ ಗುದ್ದಿದ ಒಳನೋವು ಹಾಗೂ ಕಾಲುಗಳಿಗೆ ತರಚಿ ಗಾಯವಾಗಿರುತ್ತದೆ. ಗಾಯಗೊಂಡ ಜಲಜ ರವರನ್ನು  ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 49/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 24/03/2022 ರಂದು ಪಿರ್ಯಾದಿದಾರರಾದ ಚಂದ್ರ ಪೂಜಾರಿ (53), ತಂದೆ: ದಿ ತಿಮ್ಮ ಪೂಜಾರಿ, ವಾಸ: ರಜತಾದ್ರಿ ನಿಲಯ,ಬಂಡಿಮಠ, ಹನೇಹಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಮಗ ಕಾರ್ತಿಕ್ ಸವಾರಿ ಮಾಡುತ್ತಿದ್ದ KA-20-EQ-2464 ನೇ ಬಜಾಜ್ ಪ್ಲಾಟಿನ 100 ಮೋಟಾರ್‌ಸೈಕಲ್‌ನಲ್ಲಿ ಸಹಸವಾರರಾಗಿ ಕುಳಿತು ಬಾರ್ಕೂರು ಕಡೆಯಿಂದ ಬ್ರಹ್ಮಾವರ ಕಡೆಗೆ ರಸ್ತೆಯಲ್ಲಿ ಬರುವಾಗ ಬೆಳಿಗ್ಗೆ 05:30 ಗಂಟೆಗೆ ಹಂದಾಡಿ ಗ್ರಾಮದ ಬ್ರಹ್ಮಾವರ ಆಕಾಶವಾಣಿ ಪ್ರಸಾರ ಕೇಂದ್ರದ ಎದುರು ತಲುಪುವಾಗ ಅವರ ಎದುರುಗಡೆಯಿಂದ ಬ್ರಹ್ಮಾವರ ಕಡೆಗೆ ಆರೋಪಿಯು ಚಲಾಯಿಸುತ್ತಿದ್ದ KA-01-AH-7256 ನೇ ನಂಬ್ರದ ಭಾರತ್ ಗ್ಯಾಸ್ ತುಂಬಿರುವ ಗೂಡ್ಸ್ ಕ್ಯಾರಿಯರ್ ಲಾರಿಯನ್ನು ಆರೋಪಿ ಯಾವುದೇ ಸೂಚನೆಯನ್ನು ನೀಡದೇ ಏಕಾಏಕಿ ಒಮ್ಮೇಲೆ ಬ್ರೇಕ್ ಹಾಕಿ ರಸ್ತೆ ಯಲ್ಲೆ ನಿಲ್ಲಿಸಿದಾಗ ಅದೇ ಸಮಯ ಪಿರ್ಯಾದಿದಾರರಿದ್ದ ಮೋಟಾರ್‌ಸೈಕಲ್ ಮುಂಭಾಗ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಮಗ ಮೋಟಾರ್ ಸೈಕಲ್ ಸಮೇತ ಟಾರ್ ರಸ್ತೆಯ ಮೇಲೆ ಬಿದ್ದು ಪಿರ್ಯಾದಿದಾರರ ಎಡಕೈ, ಮಣಿಗಂಟಿಗೆ ಮೂಳೆ ಮುರಿತದ ಒಳ ಜಖಂ ಆಗಿದ್ದು, ಅವರ ಮಗ ಕಾರ್ತಿಕ್ ರವರ ಬಲ ಹುಬ್ಬಿನ ಮೇಲ್ಭಾಗ ರಕ್ತಗಾಯ ಹಾಗೂ ಬಲಕಣ್ಣಿನ ಕೆಳ ಭಾಗ ಮೂಳೆ ಮುರಿತದ ಒಳ ಜಖಂ, ತುಟಿಯ ಒಳ ಭಾಗ ರಕ್ತ ಗಾಯ ಆಗಿರುತ್ತದೆ. ಗಾಯಗೊಂಡ ಇಬ್ಬರನ್ನೂ ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಆಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 48/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 23/03/2022 ರಂದು NL-01-AD-3158 ನೇ ಕಾರ್‌ಕ್ಯಾರಿಯರ್ ಕಂಟೈನರ್ ಲಾರಿ ಚಾಲಕ ವಿನೋದ್ ಕುಮಾರ್ ಯಾದವ್ ತನ್ನ ಲಾರಿಯನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚಲಾಯಿಸಿಕೊಂಡು ಬಂದು ಮುಂಜಾನೆ 00:45 ಗಂಟೆಗೆ ಪುತ್ತೂರು ಗ್ರಾಮದ ನಿಟ್ಟೂರು ಬಾಳಿಗಾ ಜಂಕ್ಷನ್ ಬಳಿ ಎನ್. ಹೆಚ್ 66 ರಲ್ಲಿ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ತೀರಾ ಬಲಬದಿಗೆ ಚಲಾಯಿಸಿ ನವಯುಗ ಕಂಪೆನಿಗೆ ಸಂಬಂಧಪಟ್ಟ ಮೆಟಾಲಿಕ್ ಬೀಮ್ ಕ್ರಾಸ್ ಬ್ಯಾರಿಯರ್ ಮತ್ತು ಸೋಲಾರ್ ಬ್ಲಿಂಕರ್ ಗೆ ಅಫಘಾತಪಡಿಸಿ ನವಯುಗ ಕಂಪೆನಿಗೆ ನಷ್ಟ ಉಂಟು ಮಾಡಿದ್ದಾಗಿದೆ.  ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 26/2022 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 24/03/2022  ರಂದು  ಮಧ್ಯಾಹ್ನ  03:00  ಗಂಟೆಗೆ, ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಶಾಸ್ತ್ರಿಸರ್ಕಲ್‌‌‌ ಬಳಿ  ರಸ್ತೆಯಲ್ಲಿ  ಆಪಾದಿತ  ಶಿವ KA-51-C-5730 ನೇ ಬಸ್‌ ನ್ನು ಬೈಂದೂರು  ಕಡೆಯಿಂದ  ಕುಂದಾಪುರ ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ  ಚಾಲನೆ  ಮಾಡಿಕೊಂಡು ಬಂದು ಶಾಸ್ತ್ರಿಸರ್ಕಲ್‌‌‌ ನಲ್ಲಿ  ಒಮ್ಮೇಲೆ  ತಿರುಗಿಸಿದ ಕಾರಣ  ಬಸ್ಸಿನ ಮುಂಭಾಗದ ಡೋರ್‌ ಬಳಿ ಕುಳಿತುಕೊಂಡಿದ್ದ  ಬಸ್‌ ಪ್ರಯಾಣಿಕ ಪಿರ್ಯಾದಿದಾರರಾದ ಮಹಾಲಿಂಗ ಪೂಜಾರಿಯವರು ಬಸ್ಸಿಂದ ಎಸೆದು ಮುಂಭಾಗದ ಡೋರ್‌ ನಿಂದ ರಸ್ತೆಗೆ ಬಿದ್ದು ಅವರ ತಲೆಗೆ, ಎಡಬದಿಯ ಹಣೆ, ಕೆನ್ನೆ, ಬೆನ್ನಿಗೆ ಹಾಗೂ ಬಲಭುಜಕ್ಕೆ ಗಾಯನೋವಾಗಿ ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 40/2022 ಕಲಂ: 279,  337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಸೌಮ್ಯ ಬಿ (32), ಗಂಡ: ಪ್ರಶಾಂತ್ ಸಂಕೊಳ್ಳಿ, ವಾಸ: 4-203, ಬಂಕೇಶ್ವರ ರಸ್ತೆ, ಯಡ್ತರೆ ಗ್ರಾಮ ಬೈಂದೂರು  ತಾಲೂಕು ಇವರು ತಂದೆ ಸತ್ಯನಾರಾಯಣ  ಭಟವಾಡಿ (62) ರವರೊಂದಿಗೆ ದಿನಾಂಕ 24/03/2022 ರಂದು ಬೆಳಿಗ್ಗೆ  09:00 ಗಂಟೆಗೆ  ಭಟ್ಕಳದ  ಜ್ಞಾನೇಶ್ವರಿ ಬಿ ಎಡ್ ಕಾಲೇಜಿಗೆ ಹೋಗಲು ಮೋಟಾರು ಸೈಕಲ್ ನಲ್ಲಿ ಮನೆಯಿಂದ ಬೈಂದೂರು ಬಸ್ ನಿಲ್ದಾಣಕ್ಕೆ ಬಂದ ಸಮಯ ಸತ್ಯನಾರಾಯಣ ರವರು ಒಮ್ಮೆಲೆ ತೇಗಲು  ಪ್ರಾರಂಭಿಸಿದ್ದನ್ನು  ಕಂಡು  ಪಿರ್ಯಾದಿದಾರರು ಆಸ್ಪತ್ರೆಗೆ ಹೋಗಿ ಪರೀಕ್ಷೀಸಿಕೊಳ್ಳುವಂತೆ ತಿಳಿಸಿ ಕಾಲೇಜಿಗೆ ಹೋಗಿದ್ದು  ಸತ್ಯನಾರಾಯಣ  ಭಟವಾಡಿ ರವರು ಬೈಂದೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಹೋದಲ್ಲಿ ವೈದ್ಯರು  ಪರೀಕ್ಷೀಸಿ ಪಿರ್ಯಾದಿದಾರರ ದೂರವಾಣಿ ಸಂಖೈಗೆ ಕರೆ ಮಾಡಿ ಪಿರ್ಯಾದಿದಾರರ ತಂದೆಯ ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಣಿಪಾಲ ಕೆ ಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು ಪಿರ್ಯಾದಿದಾರರು ಭಟ್ಕಳದಲ್ಲಿರುವುದರಿಂದ ಸತ್ಯನಾರಾಯಣ  ಭಟವಾಡಿ ಯವರನ್ನು  ಪಿರ್ಯಾದಿದಾರರ ತಾಯಿ ಮತ್ತು ನರ್ಸ ಜೊತೆಯಲ್ಲಿ  108 ಅಂಬುಲೆನ್ಸ್ ವಾಹನದಲ್ಲಿ ಕೆ ಎಂ ಸಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಹೆಮ್ಮಾಡಿ ಬಳಿ ಹೋಗುವಾಗ  ಸತ್ಯನಾರಾಯಣ  ಭಟವಾಡಿ ರವರ ಉಸಿರಾಟ ನಿಂತ ಕಾರಣ  ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ಪಿರ್ಯಾದಿದಾರರು  ಮಧ್ಯಾಹ್ನ 2:00 ಗಂಟೆಗೆ  ವೈದ್ಯರನ್ನು ಭೇಟಿ ಮಾಡಿ ಸತ್ಯನಾರಯಾಣ ಭಟವಾಡಿ ಯವರ ಆರೋಗ್ಯದ ಬಗ್ಗೆ  ವಿಚಾರಿಸಿದಲ್ಲಿ ದಾರಿಯ ಮಧ್ಯದಲ್ಲಿ ಬರುವಾಗಲೇ ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ ಎಂದು  ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 15/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಗಂಡಸು ಕಾಣೆ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಸಾಧು ಮಡಿವಾಳ (54),  ವಾಸ: ಬ್ರಾಹ್ಮೀ ನಿಲಯ, ಭೂತನಾಡಿ, ಹಳ್ಳಿಹೊಳೆ ಅಂಚೆ ಮತ್ತು ಗ್ರಾಮ ಬೈಂದೂರು ತಾಲೂಕು ಉಡುಪಿ ಜಿಲ್ಲೆ ಇವರ ಮಗ ಪ್ರತಾಪ (29) ಇವರು ದಿನಾಂಕ 21/02/2022 ರಂದು 16:00 ಗಂಟೆಗೆ  ಬೈಂದೂರು   ತಾಲೂಕಿನ ಹಳ್ಳಿ ಹೊಳೆ  ಗ್ರಾಮದ ಬ್ರಾಹ್ಮಿನಿಲಯ ಭೂತನಾಡಿ ವಾಸದ ಮನೆಯಿಂದ ಬೆಳಗಾವಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು  ಹೇಳಿ ಹೋದವರು  ಬೆಳಗಾವಿಗೂ ಹೋಗದೆ  ವಾಪಾಸು   ಮನೆಗೆ  ಬಾರದೇ   ಕಾಣೆಯಾಗಿದ್ದು,  ದೂರವಾಣಿ ಕರೆ ಮಾಡಿದರೆ  ಮೊಬೈಲ್ ಪೋನ್ ನಾಟ್ ರೀಚೆಬಲ್ ಆಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 41/2022 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ರಂಜಿತ್ ಶೆಟ್ಟಿ, (26), ತಂದೆ: ಭುಜಂಗ ಶೆಟ್ಟಿ, ವಾಸ: ಗುಡಿಬೆಟ್ಟು ಮೇಲ್ ಬೆಟ್ಟು ಹೆಬ್ಬಾಗಿಲು ಮನೆ ಕವ್ರಾಡಿ ಅಂಚೆ ಅಂಪಾರು ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 23/03/2022 ರಂದು ರಾತ್ರಿ  ಪಿರ್ಯಾದಿದಾರರು ಹಾಗೂ  ಆತನ   ಸ್ನೇಹಿತ   ಅಂಪಾರು  ನಾಗಶ್ರೀ ಬಾರ್  ನಲ್ಲಿ  ಊಟ  ಮಾಡಿ   ಹೊರಗಡೆ  ಬರುವಾಗ  ಆರೋಪಿಗಳು  ಕಾಲನ್ನು  ಅಡ್ಡಹಾಕಿ  ಗಲಾಟೆ  ಮಾಡಿರುತ್ತಾರೆ, ಆ  ಬಳಿಕ ಅವರು  ಅಲ್ಲಿಂದ  ಊಟ  ಮಾಡಿ   ಹೊರಗಡೆ  ಬಂದು 22:00 ಗಂಟೆಗೆ ಕುಂದಾಪುರ ತಾಲೂಕು ಅಂಪಾರು ಗ್ರಾಮದ ಹಾಲು ಡೈರಿ ಬಳಿ ಹೋಗುತ್ತಿರುವಾಗ ಆರೋಪಿಗಳಾದ ಅಭಿಷೇಕ್ ಶೆಟ್ಟಿ ಮತ್ತು ಪ್ರಜ್ವಲ್ ಶೆಟ್ಟಿ ಮತ್ತು ಇತರೇ ನಾಲ್ಕು ಜನರು ಅಕ್ರಮ ಕೂಟ ಸೇರಿಕೊಂಡು ಸಮಾನ ಉದ್ದೇಶದಿಂದ ಪಿರ್ಯಾದಿದಾರರನ್ನು ಹಾಗೂ ಅವರ   ಸ್ನೇಹಿತರನ್ನು ಅಡ್ಡಕಟ್ಟಿಹಲ್ಲೆ ಮಾಡಿರುತ್ತಾರೆ. ಇದರ  ಪರಿಣಾಮ ಪಿರ್ಯಾದಿದಾರರು  ಧರಿಸಿದ ಶರ್ಟ ಹರಿದು ಕುತ್ತಿಗೆಗೆ ಗಿರಿದ ಗಾಯವಾಗಿರುತ್ತದೆ. ಚಿಕಿತ್ಸೆಯ  ಬಗ್ಗೆ ಕುಂದಾಪುರ ಸರಕಾರಿ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 40/2022  ಕಲಂ: 143, 147, 341, 323 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಇತ್ತೀಚಿನ ನವೀಕರಣ​ : 25-03-2022 09:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080