ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 24/03/2022 ರಂದು 19:00 ಗಂಟೆಗೆ ಪಿರ್ಯಾದಿದಾರರಾದ ಅಭಿಷೇಕ್ (20) ದೆ: ಬಸವರಾಜ್ ವಾಸ: ಅಭಿಜ್ಞಾ ನಿವಾಸ ಮಾಳ ಗ್ರಾಮ  ಕಾರ್ಕಳ ತಾಲೂಕು ಉಡುಪಿ ಇವರ ಮೋಟಾರ್ ಸೈಕಲ್ ನಲ್ಲಿ  ಕಾರ್ಕಳ ತಾಲೂಕು ಮಾಳ ಗ್ರಾಮದ ಮಾಳ ಘಾಟ್ ನ ಅಬ್ಬಾಸ್ ಕಟ್ಟಿಂಗ್ ತಿರುವಿನಿಂದ ಸ್ವಲ್ಪ ಹಿಂದಕ್ಕೆ ಎಸ್ ಕೆ ಬಾರ್ಡರ್ ನಿಂದ ಮಾಳ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ  ಇವರ ಎದುರುಗಡೆ ಅಂದರೆ ಎಸ್ ಕೆ ಬಾರ್ಡರ್ ನಿಂದ ಮಾಳ ಕಾರ್ಕಳ ಕಡೆಗೆ TN-2 AP-527 ನೇ ಲಾರಿ ಚಾಲಕನು ಆತನ ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಬಲಕ್ಕೆ ಚಲಾಯಿಸಿದ ಪರಿಣಾಮ ಹತೋಟಿ ತಪ್ಪಿ ಬಲ ಮಗುಲಾಗಿ ಬಿದ್ದ ಪರಿಣಾಮ ಲಾರಿ ಚಾಲಕನ ಮುಖ ಕಾಲಿಗೆ ರಕ್ತ ಗಾಯವಾಗಿರುತ್ತದೆ.  ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 36/2022 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕುಂದಾಫುರ: ದಿನಾಂಕ 24/03/2022 ರಂದು ಬೆಳಿಗ್ಗೆ ಸುಮಾರು 07:00 ಗಂಟೆಗೆ, ಕುಂದಾಪುರ ತಾಲೂಕಿನ  ಹೊಸ್ ಬಸ್ ನಿಲ್ದಾಣದ ಬಳಿ, ಆಪಾದಿತ ಗಣೇಶ ಪೂಜಾರಿ ಎಂಬುವರು  KA-20 AA-855  ನೇ ಬಸ್ಸನ್ನು  ಆತೀವೇಗ ಹಾಗೂ ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೇಸ್ಕಾಂ ಇಲಾಖೆಗೆ ಸಂಬಂಧಿಸಿದ ವಿದ್ಯುತ್ತ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೇಸ್ಕಾಂ ಸಂಸ್ಥೆಗೆ 20,000 ಸಾವಿರ ನಷ್ಟ ಉಂಟಾಗಿರುತ್ತದೆ. ಆಪಾದಿತನು ಬಸ್ಸನ್ನು ಅಪಘಾತ ಸ್ಥಳದಿಂದ ಕೊಲ್ಲೂರು ಕಡೆಗೆ ಚಲಾಯಿಸಿಕೊಂಡು ಹೊಗಿರುವುದಾಗಿದೆ. ಎಂಬುದಾಗಿ ರಾಘವೇಂದ್ರ ಎಮ್ (46) ತಂದೆ: ಎಮ್ ಆರ್  ಮಂಜುನಾಥ ವಾಸ;   ಸಹಾಯಕ ಇಂಜಿನಿಯರ್ ಕಾರ್ಯ ಮತ್ತು ಪಾಲನೆ ಶಾಖೆ ಮೇಸ್ಕಾಂ ಕುಂದಾಪುರ ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 41/2022  ಕಲಂ 279, ಐಪಿಸಿ & 134(A) R/W 187 IMV ACTರಂತೆ ಪ್ರಕರಣ ದಾಖಲಾಗಿರುತ್ತದೆ. 
  • ಉಡುಪಿ: ಪಿರ್ಯಾದಿದಾರರಾದ ನಿತ್ಯಾನಂದ  ನಾಯಾಕ್ (60) ತಂದೆ ದಿ ಕೇಶವ ನಾಯಾಕ್ ವಾಸ-ಪ್ರಬಾ ಬಿಲ್ಡಿಂಗ್ ಹರಿಖಂಡಿಗೆ ಪೆರ್ಡೂರು ಅಂಚೆ 41 ಶೀರೂರು ಇವರು ದಿನಾಂಕ 25/03/2022 ರಂದು ಬಿ ವಾಮನ ನಾಯಾಕ್ ಎಂಬವರು KA-20 ED-6029 ನೇ ಮೋಟಾರು ಸೈಕಲಿನಲ್ಲಿ ಕಲ್ಸಂಕ ಕಡೆಯಿಂದ ಮಣಿಪಾಲ  ಕಡೆಗೆ ಸವಾರಿ ಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿ 169 (ಎ) ರಲ್ಲಿ ಹೋಗುತ್ತಿರುವಾಗ ಸಮಯ ಸುಮಾರು   ಬೆಳಿಗ್ಗೆ 8:00 ಗಂಟೆಗೆ ಉಡುಪಿ ಕುಂಜಿಬೆಟ್ಟು ಕಡಿಯಾಳಿ ಮೀರಜ್ ಆಪಾರ್ಟಾಮೆಂಟ್ ಎದುರು ತಲುಪುವಾಗ  ಹಿಂದಿನಿಂದ ಕಲ್ಸಂಕ ಕಡೆಯಿಂದ KA-20 MA-7044 ನೇ ಕಾರು ಚಾಲಕಿ ಆದಿತಿ ಉಡುಪ ಕೆ ಎಂಬಾಕೆ ತನ್ನ  ಕಾರನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಬಿ ವಾಮನ ನಾಯಾಕ್ ರವರು ಸವಾರಿ ಮಾಡಿಕೊಂಡು ಹೋಗುತಿದ್ದ KA-20 ED-6029 ನೇ ಮೋಟಾರು ಸೈಕಲಿಗೆ  ಹಿಂದಿನಿಂದ  ಡಿಕ್ಕಿ ಹೊಡೆದ  ಪರೀಣಾಮ ಮೋಟಾರು  ಸೈಕಲ್  ಸಮೇತ  ರಸ್ತೆಗೆ  ಬಿದ್ದು  ತಲೆಗೆ  ಗಂಬೀರ  ಗಾಯಗೊಂಡು  ಮಾತನಾಡದೇ  ಇದ್ದ ಬಿ ವಾಮನ  ನಾಯಾಕ ರವರನ್ನು  ಉಡುಪಿ ಜಿಲ್ಲಾ  ಸರಕಾರಿ  ಆಸ್ಪತ್ರೆಗೆ  ಚಿಕಿತ್ಸೆಗೆ  ದಾಖಲಿಸಿದ್ದು  ನಂತರ ಹೆಚ್ಚಿನ  ಚಿಕಿತ್ಸೆಯ  ಬಗ್ಗೆ  ಮಣಿಪಾಲ ಕೆ  ಎಂ ಸಿ  ಆಸ್ಪತ್ರೆಯಲ್ಲಿ  ಒಳರೋಗಿಯಾಗಿ  ದಾಖಲಾಗಿ  ಚಿಕಿತ್ಸೆ  ಪಡೆಯುತ್ತಿರುವದಾಗಿದೆ.  ಹಾಗೂ   ಆಫಘಾತ  ಪಡಿಸಿದ  ನಂತರ  ಕಾರಿನ ಬಾಲಕ ಸ್ವಲ್ಪ ನಿಧಾನ ಗೊಳಿಸಿ ಗಾಯಾಳುವನ್ನು ಆಸ್ಪತ್ರೆಗೆ ಸೆರಿಸದೇ ಅಲ್ಲಿಂದ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 27/2022 ಕಲಂ: 279, 279 338 ಐ.ಪಿಸಿ & 134 (ಎ) & ( ಬಿ) ಐ ಎಂ ವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.  

ವಂಚನೆ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಬೇಬಿ ಕುಲಾಲ (55 ) ಗಂಡ: ಸುಬ್ಬಣ್ಣ  ವಾಸ: ಪೂಪಾಡಿ ಮನೆ ಕುಕ್ಕೆಹಳ್ಳಿ ಅಂಚೆ ಮತ್ತು ಗ್ರಾಮ ಉಡುಪಿ ಇವರು ಮನೆವಾರ್ತೆ ಕೆಲಸ ಮಾಡಿಕೊಂಡಿದ್ದು ಸುಮಾರು 4 ವರ್ಷದಿಂದ ಕ್ಯಾನ್ಸರ್‌ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಮಂಗಳೂರು ಕೆಎಂ,ಸಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಮಾಡಿ   ನಂತರ ಕುಕ್ಕೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿಯವರಲ್ಲಿ ಮದ್ದು ಮಾಡಲಾಗುತ್ತಿದ್ದು  ದಿನಾಂಕ 05/02/2022 ರಂದು ಬೆಳಿಗ್ಗೆ 10:00 ಗಂಟೆಗೆ ಓರ್ವ ಅಪರಿಚಿತ ವ್ಯಕ್ತಿ  ತಾನು ಡಾಕ್ಟರ್‌ ಎಂದು ಹೇಳಿ ಬೇಬಿ ಕುಲಾಲ ರವರ ಮನೆಗೆ ಬಂದು ನಿಮ್ಮ ಕೈ ದಪ್ಪವಾಗಿರುವುದಕ್ಕೆ ಉಚಿತ ಮದ್ದು ಕೋಡುತ್ತೇವೆ   ಎಂದಾಗ ಬೇಬಿ ಕುಲಾಲ ರವರು ಕೆಲಸಕ್ಕೆ ಹೋಗಿದ್ದ ತನ್ನ ಗಂಡನನ್ನು ಪೋನ್ ಮಾಡಿ  ಕರೆಯಿಸಿದ್ದು ಬೇಬಿ ಕುಲಾಲ ಇವರ ಗಂಡ  ಮನೆಗೆ ಬಂದು ಆತನಲ್ಲಿ ಮಾತನಾಡಿ ಅವನು ಅದಕ್ಕೆ 3 ಇಂಜೆಕ್ಷನ್‌ ಕೋಡಬೇಕಾಗುತ್ತದೆ ಒಂದು ಇಂಜೆಕ್ಷನ್‌ಗೆ 6000 ದಂತೆ ಒಟ್ಟು 18,000 ಹಣ  ಪಡೆದುಕೊಂಡು  ತನ್ನ ಪೋನ್‌ ನಂಬ್ರ ನೀಡಿ ಇಂಜೆಕ್ಷನ್‌ ತರುವುದಾಗಿ ಹೇಳಿ ಹೋಗಿರುತ್ತಾನೆ.  ನಂತರ ಈ ಬಗ್ಗೆ ಸಂಶಯಗೊಂಡು ಬೇಬಿ ಕುಲಾಲ ರವರು ಕುಕ್ಕೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಲ್ಲಿ ತಿಳಿಸಿದಲ್ಲಿ ಅವರು ಆತನು ನೀಡಿದ ನಂಬ್ರಕ್ಕೆ ಪೋನ್‌ ಮಾಡಿದಾಗ ಹಣವನ್ನು ವಾಪಾಸು ಕೋಡುವುದಾಗಿ ತಿಳಿಸಿದ್ದು ನಂತರ ಆತನ ಮೊಬೈಲ್‌ ಸ್ವಿಚ್ಚ್‌ ಆಫ್‌ ಆಗಿರುತ್ತದೆ. ಈ  ಬಗ್ಗೆ ಠಾಣೆಯಲ್ಲಿ ದೂರು ಅರ್ಜಿ ನೀಡಿದ್ದು ಆದರೆ ಈವರೆಗೂ ಆತನು ಹಣ ಪಾಪಾಸು ನೀಡದೆ  ಆತನ ಸುಳಿವು ಇಲ್ಲದೆ ಇರುವುದರಿಂದ ಅಲ್ಲದೆ  ಬೇರೆ ಕಡೆಗಳಲ್ಲಿಯೂ ಇದೆ ರೀತಿ ಮೊಸ ಮಾಡಿದ ಬಗ್ಗೆ ತಿಳಿದು ಬಂದಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 14/2022 ಕಲಂ: 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಗಣೇಶ ದೇವಾಡಿಗ (31) ತಂದೆ: ರಾಮ ದೇವಾಡಿಗ ವಾಸ: ಹೊಳ್ಳರಹಿತ್ಲು ಯಡ್ತರೆ ಗ್ರಾಮ ಬೈಂದೂರು ಇವರ ತಂದೆ ರಾಮ ದೇವಾಡಿಗ (52) ರವರು ಯಡ್ತರೆ ಗ್ರಾಮದ ಹೊಳ್ಳರಹಿತ್ಲು ಎಂಬಲ್ಲಿ ಗಣೇಶ ದೇವಾಡಿಗ ರವರೊಂದಿಗೆ ವಾಸ ಮಾಡಿಕೊಂಡಿದ್ದು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ರಾಮ ದೇವಾಡಿಗ ರವರು ದಿನಾಂಕ 24/03/2022 ರಂದು ಬೆಳಿಗ್ಗೆ 10:00 ಗಂಟೆಗೆ ಮನೆಯಿಂದ ಕೆಲಸದ ಬಗ್ಗೆ  ಹೋದವರು ಕೆಲಸ ಮುಗಿಸಿ ರಾತ್ರಿ 10:00 ಗಂಟೆಗೆ ಮನೆಗೆ ಬರಲು ಮನೆಯ ಎದುರಿರುವ ಕೆರೆಯ ಬಳಿ  ನಡೆದುಕೊಂಡು ಬರುತ್ತಿರುವಾಗ ಕೆರೆಗೆ ಬಿದ್ದು  ನೀರಿನಲ್ಲಿ ಮುಳುಗಿದವರನ್ನು ಅಗ್ನಿಶಾಮಕ ದಳದವರು  ಕೆರೆಯಿಂದ ಮೇಲಕ್ಕೆ ಎತ್ತಿ ಚಿಕಿತ್ಸೆ ಬಗ್ಗೆ  ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷೀಸಿ ರಾಮ ದೇವಾಡಿಗ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಗಣೇಶ ದೇವಾಡಿಗ ರವರ ತಂದೆ ರಾಮ ದೇವಾಡಿಗ ರವರು ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಬರುವಾಗ ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ, ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 16/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾದ ರವೀಂದ್ರ (37) ತಂದೆ: ದಿ|| ಪಾಂಡುರಂಗ ವಾಸ: ಶ್ವೇತಾಶ್ರೀ ನಿಲಯ , ಕಬ್ಯಾಡಿ 80 ನೇ ಬಡಗುಬೆಟ್ಟು ಗ್ರಾಮ, ಉಡುಪಿ ಇವರ ಅಣ್ಣ  ಪ್ರವೀಣ (42) ರವರು ದಿನಾಂಕ 22/03/2022 ರಂದು ಅತ್ರಾಡಿ ಬಳಿಯ ಪರೀಕಾ ಅಸ್ಪತ್ರೆಯಲ್ಲಿ ಬಿದ್ದವರನ್ನು ಅಸ್ಪತ್ರೆಯ ಸಿಬ್ಬಂದಿ ವಿಶ್ವನಾಥ ಎಂಬವರು ಅಸ್ಪತ್ರೆಯ ವಾಹನದಲ್ಲಿ ರವೀಂದ್ರ ಇವರ ಮನೆಗೆ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದು ನಂತರ ರವೀಂದ್ರ ರವರು ಮತ್ತು ಅವರ ಅಣ್ಣ ನವೀನರವರು ಸೇರಿ ಪ್ರವೀಣನನ್ನು ಉಡುಪಿ ಜಿಲ್ಲಾ ಅಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಮಣಿಪಾಲ ಕೆಎಂಸಿ ಅಸ್ಪತ್ರೆಗೆ ಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಣಿಪಾಲ ಕೆಎಂಸಿಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದು ಬದುಕುವ ಸಾಧ್ಯತೆ ಇರುವುದಿಲ್ಲ ಮನೆಗೆ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದು, ಬಳಿಕ ವಾಪಾಸು ಜಿಲ್ಲಾ ಅಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ, ಅಲ್ಲಿ ಚಿಕಿತ್ಸೆಯಲ್ಲಿರುತ್ತಾ ದಿನಾಂಕ 24/03/2022 ರಂದು ಸಂಜೆ 7:06 ಗಂಟೆಗೆ  ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿರುವುದಾಗಿದೆ. ಪ್ರವೀಣರಿಗೆ ಬಿದ್ದು ತಲೆಗಾದ ಪೆಟ್ಟಿನಿಂದಲೇ ಮೃತಪಟ್ಟಿರುವುದಲ್ಲದೆ, ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 11/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-03-2022 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080