ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಸಂತೋಷ ನಾಯ್ಕ್ (42), ತಂದೆ: ದಿವಂಗತ ಸೂರಪ್ಪ ನಾಯ್ಕ್, ವಾಸ: ಮಾತ್ರಛಾಯಾ, ಕುಲೇದುಮನೆ, ಚಿಕ್ಕಾಲ್ ಬೆಟ್ಟು, ಹಿರ್ಗಾನ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಇವರ ಅಣ್ಣ ಬಾಲಕೃಷ್ಣ ನಾಯ್ಕ್ (49) ಎಂಬುವವರು ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಉಳ್ಳವರಾಗಿದ್ದು, ಮನೆಯಿಂದ ಕೂಲಿ ಕೆಲಸಕ್ಕೆ ಹೋದರೆ 2-3 ದಿನ ಬಿಟ್ಟು ವಾಪಾಸು ಮನೆಗೆ ಬರುತ್ತಿದ್ದು, ಅದರಂತೆ ದಿನಾಂಕ 23/03/2021 ರಂದು ಬೆಳಿಗ್ಗೆ8:30 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋದವರು ರಾತ್ರಿ ಮನೆಗೆ ಬಾರದೇ ಇದ್ದು, ದಿನಾಂಕ 24/03/2021 ರಂದು ಸಂಜೆ 5:30 ಗಂಟೆಗೆ ಮನೆಯ ಹತ್ತಿರ ಹರಿಯುವ ಸ್ವರ್ಣ ನದಿಯ ಬದಿ ನೆಲದಲ್ಲಿ  ಮಲಗಿದ ಸ್ಥಿತಿಯಲ್ಲಿ ಕಂಡು ಬಂದವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆಯ ವೈದ್ಯರು ಬಾಲಕೃಷ್ಣ ನಾಯ್ಕ್ ರವರನ್ನು ಪರೀಕ್ಷಿಸಿ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 10/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಅಜೆಕಾರು: ದಿನಾಂಕ 23/03/2021 ರಂದು ಸಂಜೆ 7:00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ರತ್ನಾವತಿ  (48), ಗಂಡ :ದಿ.ಜಯ ನಾಯ್ಕ್, ವಾಸ: ಸೋಮರ್ ಜಡ್ಡು ಕಾಡುಹೊಳೆ ಕಾರ್ಕಳ ತಾಲೂಕು ಇವರ ಪಂಪ್ ಸೆಟ್ ನಿಂದ ಆರೋಪಿ ರವೀಂದ್ರನು ಅವರ ತೋಟಕ್ಕೆ ನೀರು ಬಿಟ್ಟಿದ್ದು, ಪಿರ್ಯಾದಿದಾರರು  ಕತ್ತಲೆ ಆಗಿರುವುದರಿಂದ ಪಂಪ್ ಬಂದ್ ಮಾಡಿದ್ದು, ಇದನ್ನು ನೋಡಿ ಆರೋಪಿ ರವೀಂದ್ರನು ಪಿರ್ಯಾದಿದಾರರಿಗೆ ಹಲ್ಲೆ ಮಾಡಿ ಬೈದು ಹಿಂಸಿಸಿರುವುದಾಗಿ ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2021 ಕಲಂ: 323, 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-03-2021 09:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ