Feedback / Suggestions

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಸಂತೋಷ ನಾಯ್ಕ್ (42), ತಂದೆ: ದಿವಂಗತ ಸೂರಪ್ಪ ನಾಯ್ಕ್, ವಾಸ: ಮಾತ್ರಛಾಯಾ, ಕುಲೇದುಮನೆ, ಚಿಕ್ಕಾಲ್ ಬೆಟ್ಟು, ಹಿರ್ಗಾನ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಇವರ ಅಣ್ಣ ಬಾಲಕೃಷ್ಣ ನಾಯ್ಕ್ (49) ಎಂಬುವವರು ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಉಳ್ಳವರಾಗಿದ್ದು, ಮನೆಯಿಂದ ಕೂಲಿ ಕೆಲಸಕ್ಕೆ ಹೋದರೆ 2-3 ದಿನ ಬಿಟ್ಟು ವಾಪಾಸು ಮನೆಗೆ ಬರುತ್ತಿದ್ದು, ಅದರಂತೆ ದಿನಾಂಕ 23/03/2021 ರಂದು ಬೆಳಿಗ್ಗೆ 8:30 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋದವರು ರಾತ್ರಿ ಮನೆಗೆ ಬಾರದೇ ಇದ್ದು, ದಿನಾಂಕ 24/03/2021 ರಂದು ಸಂಜೆ 5:30 ಗಂಟೆಗೆ ಮನೆಯ ಹತ್ತಿರ ಹರಿಯುವ ಸ್ವರ್ಣ ನದಿಯ ಬದಿ ನೆಲದಲ್ಲಿ  ಮಲಗಿದ ಸ್ಥಿತಿಯಲ್ಲಿ ಕಂಡು ಬಂದವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆಯ ವೈದ್ಯರು ಬಾಲಕೃಷ್ಣ ನಾಯ್ಕ್ ರವರನ್ನು ಪರೀಕ್ಷಿಸಿ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 10/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಅಜೆಕಾರು: ದಿನಾಂಕ 23/03/2021 ರಂದು ಸಂಜೆ 7:00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ರತ್ನಾವತಿ  (48), ಗಂಡ :ದಿ.ಜಯ ನಾಯ್ಕ್, ವಾಸ: ಸೋಮರ್ ಜಡ್ಡು ಕಾಡುಹೊಳೆ ಕಾರ್ಕಳ ತಾಲೂಕು ಇವರ ಪಂಪ್ ಸೆಟ್ ನಿಂದ ಆರೋಪಿ ರವೀಂದ್ರನು ಅವರ ತೋಟಕ್ಕೆ ನೀರು ಬಿಟ್ಟಿದ್ದು, ಪಿರ್ಯಾದಿದಾರರು  ಕತ್ತಲೆ ಆಗಿರುವುದರಿಂದ ಪಂಪ್ ಬಂದ್ ಮಾಡಿದ್ದು, ಇದನ್ನು ನೋಡಿ ಆರೋಪಿ ರವೀಂದ್ರನು ಪಿರ್ಯಾದಿದಾರರಿಗೆ ಹಲ್ಲೆ ಮಾಡಿ ಬೈದು ಹಿಂಸಿಸಿರುವುದಾಗಿ ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2021 ಕಲಂ: 323, 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 25-03-2021 09:39 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080