ಅಭಿಪ್ರಾಯ / ಸಲಹೆಗಳು

ಮಟ್ಕಾ ಜುಗಾರಿ ಪ್ರಕರಣ

  • ಕುಂದಾಪುರ: ದಿನಾಂಕ 25/03/2021 ರಂದು ಸದಾಶಿವ ಆರ್ ಗವರೋಜಿ, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಪೊಲೀಸ್ ಠಾಣೆ ಇವರಿಗೆ ಕುಂದಾಪುರ  ತಾಲೂಕು ವಡೇರ ಹೋಬಳಿ ಗ್ರಾಮದ ಶಾಸ್ತ್ರಿ ಪಾರ್ಕ್ ರಿಕ್ಷಾ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿತ ಸುಬ್ರಾಯ ದೇವಾಡಿಗ (57), ತಂದೆ: ದಿ.ಮಂಜುನಾಥ ದೇವಾಡಿಗ, ವಾಸ:ಉಳಿಗದ ಮನೆ, ಸಾಂತಾವರ, ಕಂದಾವರ ಗ್ರಾಮ, ಕುಂದಾಪುರ ತಾಲೂಕು ಎಂಬಾತನನ್ನು ದಸ್ತಗಿರಿ ಮಾಡಿ ಆತನ ವಶದಿಂದ ಮಟ್ಕಾ-ಜುಗಾರಿ ಆಟಕ್ಕೆ ಬಳಸುತ್ತಿದ್ದ ನಗದು ರೂಪಾಯಿ 450/-, ಮಟ್ಕಾ ನಂಬರ್‌ ಬರೆದ ಚೀಟಿ-1 ಹಾಗೂ ಬಾಲ್ ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 36/2021 ಕಲಂ: 78 (i) (iii)KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಮುತ್ತು ಮರಕಾಲ್ತಿ (70), ಗಂಡ: ದಿ|| ಗೋಪಾಲ ಮರಕಾಲ, ವಾಸ: “ಜನನಿ”, ನಡೂರು ಗುಡ್ಡೆಯಂಗಡಿ ಅಂಚೆ, ನಡೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರ ಸರ್ವೆ ನಂಬ್ರ 122/6ಬಿಪಿ2 ಗೆ ಸಂಬಂಧಿಸಿದ 86 ಸೆಂಟ್ಸ್ ಪಟ್ಟಾ ಸ್ಥಳ ಜಾಗಕ್ಕೆ  ದಿನಾಂಕ 26/02/2021 ರಂದು ಬೆಳಿಗ್ಗೆ 11:30 ಗಂಟೆಗೆ ಆರೋಪಿ 1ನೇ ರಾಘು @ ರಾಘವೇಂದ್ರ , 2. ಪದ್ಮಾವತಿ, 3.  ಪದ್ಮಾವತಿಯ ತಂದೆ, 4. ಸಂಪತ್‌ ಕುಮಾರ್ ಶೆಟ್ಟಿ, ಹಾಗೂ ಇಬ್ಬರೂ ಕೆಲಸಗಾರರೊಂದಿಗೆ  ಜಾಗಕ್ಕೆ ಅಳವಡಿಸಿದ ತಂತಿ ಬೇಲಿಯನ್ನು ದಾಟಿ ಅಕ್ರಮವಾಗಿ ಬಂದು  ಜಾಗದಲ್ಲಿರುವ ಮರಗಳನ್ನು ಕೆಲಸಗಾರರಿಂದ ಮರ ಕಟ್ ಮಾಡುವ ಮೆಷಿನ್ ಬಳಸಿ ಪಿರ್ಯಾದಿದಾರರು ಸಂರಕ್ಷಿಸಿದ ಬೋಗಿ ಮರಗಳನ್ನು ಕಡಿದು ಹಾಕುತ್ತಿದ್ದಾಗ ಪಿರ್ಯಾದಿದಾರು ಹಾಗೂ ಅವರ ಮಗ ಬಾಲಕೃಷ್ಣರವರು ಮರಗಳನ್ನು ಕಡಿಯಲು ಆಕ್ಷೇಪಿಸಿದ್ದಕ್ಕೆ  4ನೇ ಆರೋಪಿ  ಬೆದರಿಕೆ ಹಾಕಿದ್ದು, ಅಷ್ಟರಲ್ಲಿ ಪಿರ್ಯಾದಿದಾರರು ಹಾಗೂ ಅವರ ಮಗ  ಮರಗಳನ್ನು ಕಡಿಯಲು ನಾವು ಬಿಡುವುದಿಲ್ಲ ಎಂದು ಹೇಳಿದಾಗ ಆರೋಪಿಗಳು ಮರಕಡಿಯುದನ್ನು ನಿಲ್ಲಿಸಿ ಹೊರಟು ಹೋಗುವಾಗ ಪಿರ್ಯಾದಿದಾರರನ್ನು ಉದ್ದೇಶಿಸಿ 1ನೇ ಮತ್ತು 2ನೇ ಆರೋಪಿಯು  ಬೆದರಿಕೆ ಹಾಕಿ ಮರ ಕಡಿಯಲು ತಂದಿದ್ದ ಮೆಷಿನ್‌ನ್ನು ಪೊದೆಯ ಮಧ್ಯೆ ಬಿಟ್ಟು ಹೊರಟು ಹೋಗಿರುತ್ತಾರೆ. ನಂತರ ದಿನಾಂಕ 28/02/2021 ರಂದು ಸಂಜೆ 5:30 ಗಂಟೆಗೆ ಪಿರ್ಯಾದಿದಾರರು ಮನೆಯಲ್ಲಿ ಒಬ್ಬರೇ ಇದ್ದಾಗ 2ನೇ ಆರೋಪಿತೆಯು ಮನೆಯ ಬಳಿ ಬಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. 1 ಮತ್ತು 2ನೇ ಆರೋಪಿಗಳ  ಜಾಗಕ್ಕೆ ಹೋಗಲು ರಸ್ತೆ ಮಾಡುವ ದುರುದ್ದೇಶದಿಂದ , ರಸ್ತೆ ಮಾಡಲು ತಡೆ ಮಾಡುವ ಮರಗಳನ್ನು ಕಡಿಯಲು ಮರದ ವ್ಯಾಪಾರಿಯಾದ 4ನೇ ಆರೋಪಿಯೊಂದಿಗೆ ಸೇರಿಕೊಂಡು ಸಂಚು ಮಾಡಿದ್ದು, ಅದರಂತೆ 4ನೇ ಆರೋಪಿಯು ತನ್ನ ಸ್ವಂತ ಲಾಭಕ್ಕಾಗಿ ರಸ್ತೆ ಮಾಡಲು ಯಾರಿಗೂ ತಿಳಿಯದಂತೆ ಮರಗಳನ್ನು ಕತ್ತರಿಸಿ ಸಾಗಾಟ ಮಾಡುವ ಉದ್ದೇಶದಿಂದ ಪಿರ್ಯಾದಿದಾರರ ಜಾಗದಲ್ಲಿರುವ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ 30-35 ಬೋಗಿ ಹಾಗೂ ಇನ್ನಿತರ ಮರಗಳನ್ನು ಕಡಿದು ನಷ್ಟವುಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 47/2021 ಕಲಂ: 447 ,427, 504, 506, 379, 511, 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-03-2021 05:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080