ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಮನೀಶ್ ನಾಗಪ್ಪ ಪೂಜಾರಿ (43), ತಂದೆ: ನಾಗಪ್ಪ ಪೂಜಾರಿ , ವಾಸ: ಮನೆ ನಂ: 211 ಕೋಟೆ ರೋಡ್ ಕಲ್ಯಾಣಪುರ ಸಂತೆಕಟ್ಟೆ ಪುತ್ತೂರು ಗ್ರಾಮ, ಉಡುಪಿ ತಾಲೂಕು ಮತ್ತು ಉಡುಪಿ ಜಿಲ್ಲೆ ಇವರು  ದಿನಾಂಕ 24/02/2023 ರಂದು ತನ್ನ ಸ್ಕೂಟರ್ KA-20-EY-2610ನೇದರಲ್ಲಿ ಸವಾರಿ ಮಾಡಿಕೊಂಡು ಕಟಪಾಡಿ ಕಡೆಯಿಂದ ಉಡುಪಿ ಕಡೆಗೆ ಬರುತ್ತಿರುವಾಗ  ಮಧ್ಯಾಹ್ನ 2:05 ಗಂಟೆಗೆ ಅಂಬಲಪಾಡಿ ಗ್ರಾಮದ ಕಿನ್ನಿಮುಲ್ಕಿ ಸ್ವಾಗತ ಗೋಪುರದ ಹತ್ತಿರ ಜೆ.ಎ.ಇಎಸ್ ಅಲೈನ್ ಮೆಂಟ್ ವೀಲ್ ಅಂಗಡಿಯ ಬಳಿ ತಲುಪುವಾಗ KA-52-A-7672ನೇ ಈಚರ್ ವಾಹನದ ಚಾಲಕ ರಾಜು  ತನ್ನ ಈಚರ್ ವಾಹನವನ್ನು ಕಟಪಾಡಿ ಕಡೆಯಿಂದ ಉಡುಪಿ ಕಡೆಗೆ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್ ನ್ನು ಬಲಗಡೆಯಿಂದ ಓವರ್ ಟೆಕ್ ಮಾಡಿ ಪಿರ್ಯಾದಿದಾರರ ಮುಂದುಗಡೆಯಿಂದ ಸ್ವಾತಿ ಯವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-ES-8207ನೇ ಸ್ಕೂಟರ್ ಗೆ ಎಡಬದಿಯಿಂದ ಡಿಕ್ಕಿಹೊಡೆದ ಪರಿಣಾಮ ಸ್ವಾತಿ ಯವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಮುಖ, ಕೈಕಾಲುಗಳಿಗೆ ತರಚಿದ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.  ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 19/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಶೋಭಾ (28), ವಾಸ: ಉಮೇಶ್, ವಾಸ: ಪರನೀರು ದರ್ಖಾಸು ಮನೆ ನಲ್ಲೂರು ಗ್ರಾಮ ಮತ್ತು ಅಂಚೆ ಕಾರ್ಕಳ ತಾಲೂಕು ಇವರು  ದಿನಾಂಕ 20/02/2023 ರಂದು 12:30 ಗಂಟೆಗೆ ಕಾರ್ಕಳ ತಾಲೂಕು, ನಲ್ಲೂರು  ಗ್ರಾಮದ ಪರಪ್ಪಾಡಿ ಅಂಗನವಾಡಿ ಬಳಿ ತನ್ನ ಮಗುವಿನೊಂದಿಗೆ ರಸ್ತೆಯನ್ನು ದಾಟುತ್ತಿರುವಾಗ ಈದು ಕಡೆಯಿಂದ ಬಜಗೋಳಿ ಕಡೆಗೆ KA-05-ME-6035 ನೇ ನಂಬ್ರದ ಕಾರು ಚಾಲಕ ಪ್ರದೀಪ್ ತನ್ನ ಕಾರನ್ನು  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡಕೈಗೆ ತರಚಿದ ಗಾಯ, ತಲೆಗೆ ರಕ್ತ ಗಾಯ, ಸೊಂಟಕ್ಕೆ ಮತ್ತು ಬಲಕೈಗೆ ಗುದ್ದಿದ್ದ ಗಾಯವಾಗಿ ಎಡಕೈಯ ಮೂಳೆ ಮುರಿತವಾಗಿದ್ದು, ಮೊದಲು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ   ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ  ನಿಟ್ಟೆ ಗಾಜ್ರಿಯಾ ದಾಖಲಾಗಿರುವುದಾಗಿದೆ.  ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 27/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಹೆಚ್ ಕುಮಾರಸ್ವಾಮಿ ಮೇರ್ಟ(22), ತಂದೆ: ಹೆಚ್ ನಾಗರಾಜ್ ಮೇರ್ಟ,  ವಾಸ: 1-4 ಬಿ ದೇವಿಕೃಪಾ , ಮೇರ್ಟಕಂಪೌಂಡ್ , ಕಲ್ಗೇರಿ, ಹೇರಂಜಾಲು ಗ್ರಾಮ , ಬೈಂದೂರು ತಾಲೂಕು ಇವರು ಹೆರಂಜಾಲು ಗ್ರಾಮದ  ಕಲ್ಗೇರಿ, ದೇವಿ ಕೃಪಾ,  ಮೇರ್ಟ ಕಂಪೌಂಡ್ ಇವರ  ತಂದೆ ಹೆಚ್ ನಾಗರಾಜ್ ಮೇರ್ಟ (59)  ರವರು  ಕಂಬದಕೋಣೆ ಬ್ಯಾಂಕ್ ಆಫ್ ಬರೊಡಾದಲ್ಲಿ  ಅಸಿಸ್ಟೆಂಟ್ ಮ್ಯಾನೆಜರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ತಂದೆ ಹೆಚ್ ನಾಗರಾಜ್ ಮೇರ್ಟ ರವರು ದಿನಾಂಕ  24/02/2023 ರಂದು  ಬೆಳಿಗ್ಗೆ  09:00 ಗಂಟೆಗೆ  ಬ್ಯಾಂಕ್ ಕೆಲಸಕ್ಕೆ ತೆರಳುವ ಸಲುವಾಗಿ ಕಾರಿಗೆ ಹತ್ತಲು ಹೋಗುವ ಸಮಯ ಮನೆಯಲ್ಲಿ ಒಮ್ಮೇಲೆ ಎದೆ ನೋವು ಎಂದು ಕುಸಿದು ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು  ಚಿಕಿತ್ಸೆ ಬಗ್ಗೆ  ಕರೆದೊಯ್ಯಲು 108 ಅಂಬುಲೆನ್ಸ್ ಕರೆ ಮಾಡಿದಲ್ಲಿ 108 ಅಂಬುಲೆನ್ಸ್ ನವರು ಬಂದು ನೋಡಿ  ನಾಗರಾಜ್ ಮೇರ್ಟ ರವರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 09/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಕಾರ್ಕಳ: ಕಾರ್ಕಳ ತಾಲೂಕು ಬೆಳ್ಮಣ್  ಗ್ರಾಮದ ದುರ್ಗಾ ಕೃಶರ್ ನಲ್ಲಿ ದಿನಾಂಕ 22/02/2023  ರಂದು ಬೆಳಿಗ್ಗೆ 11:15 ಗಂಟೆಗೆ ದುರ್ಗಾ ಕೃಶರ್ ನ ಮಾಲಿಕ ನಿತ್ಯಾನಂದ ಶೆಟ್ಟಿ ರವರ ಮಾಲಿಕತ್ವದ KA-20-C-747 ನೇ ಟಿಪ್ಪರ್ ನಲ್ಲಿ ಚಾಲಕ ರವಿ ಎಂಬಾತನು ಟಿಪ್ಪರ್ ನ ಬಂಕರ್ ನಿಂದ ಜೆಲ್ಲಿಯನ್ನು ಲೋಡ್ ಮಾಡುತ್ತಿದ್ದು, ಕೃಶರ್ ನಲ್ಲಿ ಕೆಲಸ ಮಾಡಿಕೊಂಡಿರುವ ಸಾವ್ಕಾರ್ ಬಾರೋ ಎಂಬುವವರು ಟಿಪ್ಪರ್ ನ ಮೇಲೆ ಹತ್ತಿ ಜೆಲ್ಲಿಯನ್ನು ಲೆವೆಲ್ ಮಾಡುತ್ತಿದ್ದು, ಕೃಶರ್ ನ ಮಾಲಿಕ ನಿತ್ಯಾನಂದ ಶೆಟ್ಟಿ ಹಾಗೂ ಟಿಪ್ಪರ್ ನ ಚಾಲಕ ರವಿರವರು ಯಾವುದೇ ಮುಂಜಾಗ್ರತಾ ಕ್ರಮ ವಹಿಸದೇ ಇದ್ದುದರಿಂದ ಟಿಪ್ಪರ್ ನ ಮೇಲೆ ಹತ್ತಿ ಜೆಲ್ಲಿ ಲೆವಲ್ ಮಾಡುತ್ತಿರುವ ಸಾವ್ಕಾರ್ ಬಾರೋ ನು ಆಯತಪ್ಪಿ ಟಿಪ್ಪರ್ ನಿಂದ ಕೆಳಗೆ ಪಿಲ್ಲರ್ ನ ಮಧ್ಯದಲ್ಲಿನ ಕಲ್ಲಿನ ಮೇಲೆ ಬಿದ್ದ ಪರಿಣಾಮ ಅವರ ತಲೆಯ ಹಿಂಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 26/2023 ಕಲಂ: 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 25-02-2023 09:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080