ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಅಭಿಜಿತ್‌ ಮೂಲ್ಯ (30),  ತಂದೆ : ದಿ. ಗುರುದತ್ತ ಮೂಲ್ಯ,  ವಾಸ : ಉಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಹತ್ತಿರ, ಇನ್ನಂಜೆ ಗ್ರಾಮ & ಅಂಚೆ ಕಾಪು ತಾಲೂಕು ಉಡುಪಿ ಜಿಲ್ಲೆ ಇವರ ತಂಗಿ ಅಕ್ಷತಾ ರವರು ದಿನಾಂಕ 24/02/2023 ರಂದು ಕೆಲಸದ ನಿಮಿತ್ತ KA-20-EU-2064 ನೇ ಸ್ಕೂಟರ್‌ ನಲ್ಲಿ ಕಾಪು ಪೇಟೆಗೆ ಹೋಗಿದ್ದು, ಕೆಲಸ ಮುಗಿದ ಬಳಿಕ ಸ್ಕೂಟರ್‌ ಗೆ ಪೆಟ್ರೋಲ್‌ ಹಾಕಿಸಲು ಕಾಪು ತಾಲೂಕು, ಪಡು ಗ್ರಾಮದ K1 ಹೋಟೆಲ್‌ ಎದುರಿನ ರಾಷ್ಟ್ರೀಯ ಹೆದ್ದಾರಿ 66 ಉಡುಪಿ-ಮಂಗಳೂರು ರಸ್ತೆಯನ್ನು ದಾಟಿ ಮಂಗಳೂರು-ಉಡುಪಿ ರಸ್ತೆಯಲ್ಲಿ ಉಡುಪಿ ಕಡೆಗೆ ಸ್ಕೂಟರ್‌ ನ್ನು ತಿರುಗಿಸುತ್ತಿದ್ದಂತೆ ಸಂಜೆ 4:10 ಗಂಟೆಗೆ  ರಸ್ತೆ ರೀಪೆರಿಯಲ್ಲಿದ್ದ ಕಾರಣ ಮಂಗಳೂರು-ಉಡುಪಿ ರಸ್ತೆಯಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ KA-30-A-0622 ನೇ ಲಾರಿಯನ್ನು ಅದರ ಚಾಲಕ ಇಸ್ಮಾಯಿಲ್‌ ಬಹದ್ದೂರ್‌ ರವರು ಅತೀವೇಗ & ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್‌ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಕ್ಷತಾರವರು ರಸ್ತೆಗೆ ಬಿದ್ದಿದ್ದು, ಸ್ಕೂಟರ್‌ ಲಾರಿಯ ಮುಂದಿನ ಬಂಪರ್‌ ಕೆಳಗೆ ಸಿಕ್ಕಿಹಾಕಿಕೊಂಡಿರುತ್ತದೆ. ರಸ್ತೆಗೆ ಬಿದ್ದ ಪರಿಣಾಮ ಅಕ್ಷತಾರವರ ತಲೆಯ ಹಿಂಭಾದ ಊದಿಕೊಂಡು, ಕುತ್ತಿಗೆಯ ಹಿಂಭಾಗಕ್ಕೆ ಗುದ್ದಿದ ನೋವಾಗಿದ್ದು, ಕೈ-ಕಾಲುಗಳಿಗೆ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ಪಿರ್ಯಾದಿದಾರರು ಅಕ್ಷತಾರವರನ್ನು ಚಿಕಿತ್ಸೆಯ ಬಗ್ಗೆ ಕಾಪುವಿನ ಪ್ರಶಾಂತ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 32/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕೊಲೆ ಪ್ರಕರಣ

  • ಹೆಬ್ರಿ: ಆರೋಪಿ ಕುಟ್ಟಿ ಪೂಜಾರಿ ಹಾಗೂ ಮೃತ ಸತೀಶ್‌ ಪೂಜಾರಿ(40) ಇವರು ತಂದೆ ಹಾಗೂ ಮಗ ಆಗಿದ್ದು, ಅವರು ಹೆಬ್ರಿ ತಾಲೂಕು ವರಂಗ ಗ್ರಾಮದ ಮೂಡುಬೆಟ್ಟು ಶ್ರೀ ಮಣಿಕಂಠ ನಿಲಯ ಎಂಬ ಮನೆಯಲ್ಲಿ ವಾಸವಿದ್ದು, ದಿನಂಪ್ರತಿ ಮದ್ಯಪಾನ ಮಾಡಿ ಗಲಾಟೆ ಮಾಡಿಕೊಳ್ಳುತ್ತಿದ್ದು, ಅದೇ ರೀತಿ ದಿನಾಂಕ 24/02/2023 ರಂದು ರಾತ್ರಿ 9:00 ಗಂಟೆಗೆ ಕುಟ್ಟಿ ಪೂಜಾರಿ ಯವರು ಮನೆಯ ಒಳಗೆ ಮಲಗಿದ್ದಾಗ ಸತೀಶ ಪೂಜಾರಿಯು ವಿಪರೀತ ಮದ್ಯಪಾನ ಸೇವಿಸಿ ಬಂದು ಕುಟ್ಟಿ ಪೂಜಾರಿ ಮಲಗಿದ್ದ ಕೋಣೆಯ ಬಾಗಿಲಿಗೆ ಕಾಲಿನಿಂದ ಒದ್ದು ಕುಟ್ಟಿ ಪೂಜಾರಿಯವರನ್ನು ಮನೆಯ ಹೊರಗೆ ಅಂಗಳಕ್ಕೆ ಎಳೆದು ತಂದಾಗ ಕೋಪಗೊಂಡ ಕುಟ್ಟಿ ಪೂಜಾರಿಯು ಅಡುಗೆ ಕೋಣೆಯಲ್ಲಿದ್ದ ಒಲೆ ಬೆಂಕಿ ಊದುವ ಕಬ್ಬಿಣದ ಕೊಳವೆಯಿಂದ ಸತೀಶ ಪೂಜಾರಿ ರವರ ಕೈಕಾಲುಗಳಿಗೆ ಹಲ್ಲೆ ನಡೆಸಿದ ಪರಿಣಾಮ ಸತೀಶ ಪೂಜಾರಿಯವರು ಮೃತಪಟ್ಟಿರುವುದಾಗಿ ಸುರೇಶ್‌ ಪೂಜಾರಿ (42), ತಂದೆ: ಕುಟ್ಟಿ ಪೂಜಾರಿ, ವಾಸ: ಉಪ್ಪಳ ಶಾಲೆ ಬಳಿ, ಮುದ್ರಾಡಿ ಗ್ರಾಮ, ಹೆಬ್ರಿ ತಾಲೂಕು ಇವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 10/2023 ಕಲಂ: 302 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 25-02-2023 04:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080