ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ : ದಿನಾಂಕ 24/02/2022 ರಂದು  ಮದ್ಯಾಹ್ನ 14:25 ಗಂಟೆಗೆ ಕುಂದಾಪುರ ತಾಲುಕು ಹೆಮ್ಮಾಡಿ ಗ್ರಾಮದ ಜುವೇಲ್‌ ಪಾರ್ಕ ಹೋಟೇಲ್‌ ನ ಎದುರು ಹಾದು ಹೋದ ಪಶ್ಚಿಮ ಬದಿಯ ರಾಷ್ಟ್ರೀಯ ಹೆದ್ದಾರಿ  66 ಕುಂದಾಪುರ - ಬೈಂದೂರು ಏಕಮುಖ  ಸಂಚಾರ ರಸ್ತೆಯಲ್ಲಿ ಸ್ಕೂಟರ್‌ ನಂಬ್ರ KA-20-EX-4931 ನೇದರ ಸವಾರ ಕುಂದಾಪುರ ಕಡೆಯಿಂದ ಹೆಮ್ಮಾಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುವಾಗ ಆಪಾದಿತ ರಾಜು ಕುಲಾಲ್‌ ರವರು ಕಾರು ನಂಬ್ರ KA-20-MA-7925 ನೇಯದನ್ನು ಅದೇ ರಸ್ತೆಯಲ್ಲಿ ವಿರುಧ್ಧ ದಿಕ್ಕಿನಿಂದ ಹೆಮ್ಮಾಡಿ ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹೆಮ್ಮಾಡಿ ಕಡೆಗೆ ಹೋಗುತ್ತಿದ್ದ ಸ್ಕೂಟರ್‌ಗೆ  ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ  ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು ಸ್ಕೂಟರ್‌ ಸವಾರ ರಾಜು ರವರ  ಕಾಲಿಗೆ ಮೂಳೆ ಮುರಿತದ ಒಳ ಜಖಂ ಆಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಸಿ ಟಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾದ ಕ್ರಮಾಂಕ 29/2022 ಕಲಂ: 279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಕೆ.ಎಸ್ ಖಾಜಾ ಮೈನುದ್ದೀನ್ (29), ತಂದೆ: ಕೆ.ಎಸ್ ಸೈಯದ್ ಹಸನ್ ಸಾಹೇಬ್, ವಾಸ:ಬುಖಾರಿ ಕಾಲೋನಿ ಶಿರೂರು ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 23/02/2022 ರಂದು ಸಂಜೆ 7:00 ಗಂಟೆಗೆ ಶಿರೂರು ಗ್ರಾಮದ ಬುಕಾರಿ ಕಾಲೋನಿಯಲ್ಲಿನ ಮನೆಯಲ್ಲಿರುವ ಸಮಯ ಪಿರ್ಯಾದಿದಾರರ  ಅಣ್ಣ ಅನ್ವರ್ ಅಜೀಮ್  ತೆಂಗಿನ ಗಿಡಗಳನ್ನು ಕೀಳಲು ಬೇಬಿ ಯಾನೆ ಯಾಕೂಬ್ ಎಂಬಾತನನ್ನು ಕರೆದುಕೊಂಡು ಬಂದಿದ್ದು ಆಗ ಪಿರ್ಯಾದಿದಾರರು ತೆಂಗಿನ ಗಿಡಗಳನ್ನು ಕೀಳಬಾರದು ಎಂಬುದಾಗಿ ಆಕ್ಷೇಪಿಸಿದ್ದಕ್ಕೆ ಆರೋಪಿಯು ಆತನ ಕೈಯಲ್ಲಿದ್ದ ದೊಣ್ಣೆಯಿಂದ ಪಿರ್ಯಾದಿದಾರರ ಎಡ ಭುಜಕ್ಕೆ ಹೊಡೆದಿದ್ದು ಅಲ್ಲದೇ ಹೆಲ್ಮೇಟ್ ನಿಂದ  ತಲೆಗೆ ಹೊಡೆದಿದ್ದು, ಪಿರ್ಯಾದಿದಾರರು ಯಾಕೆ ಹೊಡೆಯುತ್ತಿಯಾ ಎಂದು ಕೇಳಿದ್ದಕ್ಕೆ  ಜೀವ ಬೆದರಿಕೆ ಹಾಕಿದ್ದಾಗಿದೆ. ಆರೋಪಿತನು ಹಲ್ಲೆ ಮಾಡಿರುವುದರಿಂದ ಕುತ್ತಿಗೆಗೆ ಎಡ ಭುಜಕ್ಕೆ ಎಡ ಕಿವಿಗೆ ನೋವು ಉಂಟಾಗಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 50/2022 ಕಲಂ. 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-02-2022 09:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080