ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ದೀಪಕ್ ಶೆಟ್ಟಿ (45), ತಂದೆ: ಸೀತಾರಾಮ ಶೆಟ್ಟಿ, ವಾಸ: ಕೃಷ್ಣ ನಿಲಯ ಜವಳಿಜೆಡ್ಡು  ಹಾರ್ದಳ್ಳಿ ಮಂಡಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 23/02/2022 ರಂದು ಸಂಜೆ ತನ್ನ ಕಾರಿನಲ್ಲಿ ಕೆಲಸದವರನ್ನು ಹಾಲಾಡಿಗೆ ಬಿಡಲು ಬಿದ್ಕಲ್ ಕಟ್ಟೆ ಕಡೆಯಿಂದ ಹಾಲಾಡಿ ಕಡೆಗೆ ಹೋಗುತ್ತಾ ಜವಳಿ ಜೆಡ್ಡು ಎಂಬಲ್ಲಿ ಹೋಗುತ್ತಿರುವಾಗ ಗಂಗೆ ಎಂಬುವವರ ಮನೆಯ ಎದುರು  ಹಾಲಾಡಿ ಕಡೆಯಿಂದ ಬಿದ್ಕಲ್ ಕಟ್ಟೆ ಕಡೆಗೆ KA-45-4412 ನೇ ಪಿಕಪ್ ವಾಹನ ಚಾಲಕ ಕೃಷ್ಣ ಕುಲಾಲ್ ಸಂಜೆ 6:30 ಗಂಟೆಗೆ ತನ್ನ ಪಿಕಪ್ ವಾಹನವನ್ನು ಅತೀವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆಯನ್ನು ನೀಡದೇ ಏಕಾಏಕಿ ಎಡಗಡೆ ಗಂಗೆಯವರ ಮನೆಯ ಕಡೆಗೆ ಚಲಾಯಿಸಿದ ಪರಿಣಾಮ ಪಿಕಪ್ ನ ಎಡ ಬದಿಯಿಂದ ಬರುತ್ತಿದ್ದ  ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆದು ಮೋಟಾರ್ ಸೈಕಲ್ ಸವಾರ ಸೃಜನ್ ಶೆಟ್ಟಿ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದನು ಆತನು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಹತ್ತಿರ ಹೋಗಿ ನೊಡಲಾಗಿ ಆತನಿಗೆ ತಲೆಗೆ ಬಲ ಕಾಲಿಗೆ ತೀವೃ ತರಹದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಶಂಕರ ಪೂಜಾರಿ (42), ತಂದೆ: ನಾರಾಯಣ ಪೂಜಾರಿ, ವಾಸ: ಕಣಿಕೇರಿ ಯಳಾಬೇರು ಕಮಲಶಿಲೆ ಗ್ರಾಮ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 25/02/2022 ರಂದು ಬೆಳಿಗ್ಗೆ 09:15 ಗಂಟೆಗೆ ತನ್ನ ಮಾವ ನಾಗರಾಜ ಪೂಜಾರಿಯವರನ್ನು ಅಸೌಖ್ಯದ ಬಗ್ಗೆ ಚಿಕಿತ್ಸೆ ಕೊಡಿಸಲು ತೆಕ್ಕಟ್ಟೆ ಡಾ.ಕುಸುಮಾಕರ ಅವರ ಕ್ಲಿನಿಕ್ ಗೆ ಬಂದು ಚಿಕಿತ್ಸೆ ಕೊಡಿಸಿ ಕ್ಲಿನಿಕ್ ನ ಎದುರು ರಾಷ್ಟ್ರೀಯ ಹೆದ್ದಾರಿ  66 ರ ಆಚೆ ಇರುವ ಮೆಡಿಕಲ್ ಶಾಪ್ ನಿಂದ ಮದ್ದು ತೆಗೆದುಕೊಳ್ಳಲು ಪಿರ್ಯಾದಿದಾರರು ಮತ್ತು ಮಾವ ನಾಗರಾಜ ಪೂಜಾರಿ ಯವರು ಕುಂದಾಪುರ ಉಡುಪಿ ರಾಷ್ಟ್ರೀಯ ಹೆದ್ದಾರಿ ದಾಟುತ್ತಿರುವಾಗ ತೆಕ್ಕಟ್ಟೆ ಗಣೇಶ್ ವೈನ್ಸ್ ಎದುರು, ಪಿರ್ಯಾದಿದಾರರು ನಾಗರಾಜ ಪೂಜಾರಿಯವರ ಹಿಂದೆ ನಡೆದುಕೊಂಡು ಹೋಗುತ್ತಿರುವಾಗ ಲಾರಿ ನಂಬ್ರ KA-22-D3909 ನೇದರ ಚಾಲಕ ಹಸನ್ ಸಾಬ್ ನದಾಫ್ ತನ್ನ ಲಾರಿಯನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಾಗರಾಜ ಪೂಜಾರಿಯವರಿಗೆ  ಢಿಕ್ಕಿ ಹೊಡೆದ ಪರಿಣಾಮ ನಾಗರಾಜ ಪೂಜಾರಿ ರಸ್ತೆಗೆ ಬಿದ್ದು ತಲೆಗೆ ತೀವೃ ತರಹದ ರಕ್ತಗಾಯವಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2022 ಕಲಂ: 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಮಣಿಪಾಲ: ದಿನಾಂಕ 24/02/2022 ರಂದು ಪಿರ್ಯಾದಿದಾರರಾದ ಸ್ವಾತಿ (24), ತಂದೆ: ದಿ. ಸದಾಶಿವ ಪೂಜಾರಿ, ವಾಸ: ಕಲ್ಲಿಬೈಲಿ ಮನೆ ಉಳಿಯಾರಗೋಳಿ ಗ್ರಾಮ, ಕಾಪು ತಾಲೂಕು  ಇವರು ತನ್ನ ಅಣ್ಣ ಸೂರಜ್ ಅವರೊಂದಿಗೆ ಅಣ್ಣನ ಮೋಟಾರು ಸೈಕಲ್ ನಂಬ್ರ KA-20-EP-4652  Honda Dio Scooty ರಲ್ಲಿ  ಸಹ ಸವಾರಳಾಗಿ ಕುಳಿತುಕೊಂಡು ಉಡುಪಿ ಮುಖಾಂತರ ರಾಷ್ಟ್ರೀಯ ಹೆದ್ದಾರಿ 169(ಎ) ರಲ್ಲಿ ಮಣಿಪಾಲ ಸಿಂಡಿಕೇಟ್ ಸರ್ಕಲ್ ತಲುಪಿದಾಗ ಉಡುಪಿ ಕಡೆಯಿಂದ ಒಂದು ಸರಕು ಸಾಗಾಣೆಯ KA-20-C-3912 ನೇ Ashok Layland ವಾಹನದ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಯಾವುದೇ ಮುನ್ಸೂಚನೆ ನೀಡದೆ ತೀರಾ ಎಡಭಾಗಕ್ಕೆ ಚಲಾಯಿಸಿ ಪಿರ್ಯಾದಿದಾರರು ಹೋಗುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಅಣ್ಣ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಅಣ್ಣನ ಎಡಕೈಗೆ ಮೂಳೆ ಮುರಿತದ ಒಳ ಜಖಂ ಆಗಿದ್ದು ಅರವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ  ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಸ್ವಾತಿ (28), ಗಂಡ: ವಿಘ್ನೇಶ್‌ ಐತಾಳ್‌, ವಾಸ: 46/12, 8ನೇ ಮೈನ್‌, ವಿ.ಎಂ ನಗರ, ದೊಡ್ಡಣ ಗುಡ್ಡೆ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ಗಂಡ ವಿಘ್ನೇಶ್‌ ಐತಾಳ್‌ (31) ರವರು ತಾನು ವಾಸವಿದ್ದ ವಿ.ಎಂ ನಗರ, ದೊಡ್ಡಣಗುಡ್ಡೆಯ ಕೃಷ್ಣ ರಾವ್‌ ರವರ ಬಾಡಿಗೆ ಮನೆಯಿಂದ ದಿನಾಂಕ 23/02/2022 ರಂದು 3:00 ಗಂಟೆಯಿಂದ ಕಾಣೆಯಾಗಿದ್ದು,   ಪಿರ್ಯಾದಿದಾರರು ಸಂಬಂದಿಕರ ಮತ್ತು ಸ್ನೇಹಿತರ ಮನೆಯಲ್ಲಿ ವಿಚಾರಿಸಿದ್ದು ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2022  ಕಲಂ:ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಬಿ.ಅರವಿಂದ ಆಚಾರ್ಯ (45), ತಂದೆ:ಚಂದ್ರಯ್ಯ ಆಚಾರ್ಯ, ವಾಸ: ಶ್ರೀ ಶುಕ್ಲಾ ತೆಂಕನಿಡಿಯೂರು ಪಂಚಾಯತ್ ಬಳಿ ಕೆಳಾರ್ಕಳಬೆಟ್ಟು, ಉಡುಪಿ ಇವರ ತಮ್ಮ ರಾಘವೇಂದ್ರ ಆಚಾರ್ಯ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದು, ಮಾನಸಿಕ ಅಸ್ವಸ್ಥರಾಗಿದ್ದು, ಟಿವಿಎಸ್ ಕಂಪೆನಿಯ ಟಿವಿಎಸ್ ರೇಡಿಯಾನ್ ಬೈಕ್ ನಂಬ್ರ KA-20-EX-0963 (Chassis No: MD625BK2XM1D00502,EngineNo: BK2DM1700531) ನೇದರ ಆರ್‌.ಸಿ ಮಾಲಕರಾಗಿರುತ್ತಾರೆ. ದಿನಾಂಕ 14/10/2021 ರಂದು ಮನೆ ಬಿಟ್ಟು ಯಾರಿಗೂ ಹೇಳದೇ ಹೋಗಿದ್ದು, ದಿನಾಂಕ 13/12/2021 ರಂದು ವಾಪಾಸು ಮನೆಗೆ ಬಂದಿದ್ದು, ಅವರು ಮಾನಸಿಕ ಅಸ್ವಸ್ಥರಾಗಿದ್ದುದರಿಂದ  ಅವರು ತೆಗೆದುಕೊಂಡು ಹೋದ ಬೈಕ್‌ನ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ದಿನಾಂಕ 10/02/2022 ರಂದು ಪಿರ್ಯಾದಿದಾರರು ತನ್ನ ತಮ್ಮನನ್ನು ವಿಚಾರಿಸಲಾಗಿ ತಾನು ಮನೆಬಿಟ್ಟು ಹೋಗುವಾಗ ಕರಾವಳಿ ಬೈಪಾಸ್ ಬಳಿ ನಿಲ್ಲಿಸಿದ್ದು ಎಂಬುದಾಗಿ ತಿಳಿಸಿರುತ್ತಾರೆ. ನಂತರ ಪಿರ್ಯಾದಿದಾರರು ಕರಾವಳಿ ಬೈಪಾಸ್ ಬಳಿ ಬಂದು ನೋಡಿದಾಗ ಬೈಕ್ ನಿಲ್ಲಿಸಿದ ಜಾಗದಲ್ಲಿ ಇಲ್ಲದೇ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಬೈಕ್‌ನ ಅಂದಾಜು ಮೌಲ್ಯ  40,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 36/2022, ಕಲಂ: 379  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-02-2022 06:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080