ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಬ್ರಹ್ಮಾವರ: ಪಿರ್ಯಾದಿದಾರರಾದ ಪ್ರತೀಶ್ ಶೆಟ್ಟಿ (23), ತಂದೆ: ಸದಾಶಿವಶೆಟ್ಟಿ, ವಾಸ: ಕರ್ದಾಡಿ ಪಡುಮನೆ, ನೀಲಾವರ ಅಂಚೆ & ಗ್ರಾಮ, ಬ್ರಹ್ಮಾವರ ತಾಲೂಕು ಇವರೊಂದಿಗೆ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಸಿಯ್ಯಪ್ಪ ಗೌಡ ಎಂಬುವವರು ದಿನಾಂಕ 23/02/2021 ರಂದು ರಾತ್ರಿ ಆರೋಪಿ ವೆಂಕಟೇಶ ರವರು ಸವಾರಿ ಮಾಡುತ್ತಿದ್ದ KA-20-EH-7278 ನೇ ನಂಬ್ರದ ಹೊಂಡಾ ಡ್ರೀಮ್ ಯುಗ ಮೋಟಾರ್ ಸೈಕಲ್‌ನಲ್ಲಿ ಸಹಸವಾರನಾಗಿ ಕುಳಿತು ಕನ್ನಾರಿಗೆ ಹೋಗುತ್ತಿರುವಾಗ ಚೇರ್ಕಾಡಿ ಗ್ರಾಮದ, ಕನ್ನಾರು ತೆಂಗಿನಜೆಡ್ಡು ರಸ್ತೆಯಲ್ಲಿ ಆರೋಪಿಯು ತನ್ನ ಮೋಟಾರ್‌ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿ ಸಮಯ ರಾತ್ರಿ 9:30 ಗಂಟೆಯ ಸಮಯಕ್ಕೆ ರಸ್ತೆಯಲ್ಲಿ ಯಾವುದೋ ಕಾಡು ಪ್ರಾಣಿ ಅಡ್ಡ ಬಂದಿದ್ದನ್ನು ತಪ್ಪಿಸಲು ಹೋಗಿ ಒಮ್ಮೇಲೆ ಬ್ರೇಕ್ ಹಾಕಿರುವುದರಿಂದ ಹತೋಟಿ ತಪ್ಪಿ ಮೋಟಾರ್ ಸೈಕಲ್ ಬಲಭಾಗಕ್ಕೆ ವಾಲಿದ್ದು, ಆಗ ಹಿಂಬಾಗದಲ್ಲಿ ಕುಳಿತಿದ್ದ ಮಂಜುನಾಥ ಸಿಯ್ಯಪ್ಪ ಗೌಡ ರವರು ರಸ್ತೆಗೆ ಬಿದ್ದು, ಪರಿಣಾಮ ಅವರ ತಲೆಗೆ ಗಂಭೀರ ಒಳಜಖಂ ಆಗಿರುತ್ತದೆ. ಆರೋಪಿಗೆ ಯಾವುದೇ ಗಾಯವಾಗಿರುವುದಿಲ್ಲ. ಗಾಯಗೊಂಡ ಮಂಜುನಾಥ ಸಿಯ್ಯಪ್ಪ ಗೌಡರವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ದಿನಾಂಕ 24/02/2021 ರಂದು ಪಿರ್ಯಾದಿದಾರರಾದ ವಿಶ್ವನಾಥ ಖಾರ್ವಿ (28), ತಂದೆ: ನಾರಾಯಣ ಖಾರ್ವಿ, ವಾಸ: ಅನ್ನಪೂರ್ಣೇಶ್ವರಿ ಕೃಪಾ, ಕಂಚುಗೋಡು, ಹೊಸಾಡು ಗ್ರಾಮ, ಕುಂದಾಪುರ ತಾಲೂಕು ಹಾಗೂ ಅವರ ತಂದೆ ನಾರಾಯಣ ಖಾರ್ವಿ (73) ಎಂಬುವವರು ಕಂಚುಗೋಡಿನಿಂದ ತ್ರಾಸಿ ಕಡೆಗೆ ನಡೆದುಕೊಂಡು ಹೊರಟಿದ್ದು, ಮಧ್ಯಾಹ್ನ 12:40 ಗಂಟೆಗೆ ಅವರು ಸಾರಥಿ ಮೋಟಾರ್ಸ್‌ ಡ್ರೈವಿಂಗ್‌ ಸ್ಕೂಲ್‌ ಮುಂಭಾಗ ಪಶ್ಚಿಮದ ಮಣ್ಣು ರಸ್ತೆಯಲ್ಲಿ ಹೋಗುತ್ತಿರುವಾಗ ಗಂಗೊಳ್ಳಿ ಕಡೆಯಿಂದ ತ್ರಾಸಿ ಕಡೆಗೆ KA-47-K-6972 ನೇ Hero ಕಂಪನಿಯ  Pleasure ಸ್ಕೂಟರನ್ನು ಅದರ ಸವಾರ ಗಜಾನನ ಪುಂಡು ಮೇಸ್ತ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿದಾರರ ಹಿಂದಿನಿಂದ ಬಂದು ಅವರ ತಂದೆ ನಾರಾಯಣ ಖಾರ್ವಿ ಯವರಿಗೆ ಢಿಕ್ಕಿ ಹೊಡೆದ ಪರಿಣಾಮ ನಾರಾಯಣ ಖಾರ್ವಿಯವರು ತೀವ್ರ ಸ್ವರೂಪದ ಗಾಯಗೊಂಡು ಚಿಕಿತ್ಸೆ ಬಗ್ಗೆ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ  20/02/2021  ರಂದು   19:00  ಗಂಟೆಗೆ ಪಿರ್ಯಾದಿದಾರರಾದ ಚಂದ್ರ ಪೂಜಾರಿ (46), ತಂದೆ: ಶೀನ ಪೂಜಾರಿ, ವಾಸ: ಆಜ್ರಿ ಗ್ರಾಮ ಕುಂದಾಪುರ ತಾಲೂಕು ಇವರು ಕುಂದಾಪುರ ತಾಲೂಕಿನ ಆಜ್ರಿ ಗ್ರಾಮದ ಚೌಕುಳಮಕ್ಕಿ ಶಾಲೆಯ ಎದುರುಗಡೆ   ನಿಂತುಕೊಂಡಿರುವಾಗ ಆರೋಪಿ KA-20-EC-1456 ನೇ ನಂಬ್ರದ  ಮೋಟಾರ್  ಸೈಕಲ್‌ನ್ನು  ಸಿದ್ದಾಪುರ  ಕಡೆಯಿಂದ ಆಜ್ರಿ ಕಡೆಗೆ ಅತೀ ವೇಗ   ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ  ಎಡಭಾಗದ ಮಣ್ಣು  ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಿದ್ದ  ಮಂಜುನಾಥ  ಎಂಬುವವರಿಗೆ ಹಿಂದಿನಿಂದ ಡಿಕ್ಕಿ  ಹೊಡೆದ  ಪರಿಣಾಮ  ಮಂಜುನಾಥ ರವರು  ರಸ್ತೆಗೆ  ಬಿದ್ದು  ತೀವ್ರ ಸ್ವರೂಪದ  ಗಾಯಗಳಾಗಿರುತ್ತದೆ.  ಕೂಡಲೇ   108 ವಾಹನದಲ್ಲಿ  ಚಿಕಿತ್ಸೆಯ ಬಗ್ಗೆ   ಕುಂದಾಪುರ ಸರಕಾರಿ   ಆಸ್ಪತ್ರೆಗೆ  ಕರೆದುಕೊಂಡು  ಹೋಗಿ  ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ  ಆದರ್ಶ ಆಸ್ಪತ್ರೆಗೆ  ಕರೆದುಕೊಂಡು ಹೋಗಿ  ದಾಖಲು  ಮಾಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 21/2021  ಕಲಂ: 279, 338 ಐಪಿಸಿ, 134 (ಬಿ) ಮೊ.ವಾ. ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾಪು: ಪಿರ್ಯಾದಿದಾರರಾದ ರಾಘವೇಂದ್ರ.ಕೆ, ಸಶಸ್ತ್ರ ಹೆಡ್ ಕಾನ್ಸಟೇಬಲ್, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಉಡುಪಿ ಜಿಲ್ಲೆ ಇವರು ಇಲಾಖಾ ವಾಹನ ನಂಬ್ರ KA-20-G-307 ನೇದರ ಚಾಲಕರಾಗಿದ್ದು, ದಿನಾಂಕ 24/02/2021 ರಂದು ಪಿರ್ಯಾದಿದಾರರನ್ನು ಉಡುಪಿ ಜಿಲ್ಲಾ ವಿಶೇಷ ವಿಭಾಗದ ಪೊಲೀಸ್ ನಿರೀಕ್ಷಕರಾದ ನಿಲೇಶ್ ಚೌಹಾಣ್ ರವರಿಗೆ ರಾತ್ರಿ ರೌಂಡ್ಸ್ ಕರ್ತವ್ಯದ ಬಗ್ಗೆ ಇಲಾಖಾ ವಾಹನ ಚಲಾಯಿಸುವ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ಪಿರ್ಯಾದಿದಾರರು ಉಡುಪಿ ನಗರದಿಂದಾಗಿ  ಹೊರಟು ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ ಮಂಗಳೂರು ರಸ್ತೆಯಲ್ಲಿ ಮಂಗಳೂರು ಕಡೆಗೆ ಹೋಗುತ್ತಾ ದಿನಾಂಕ 25/02/2021 ರಂದು ರಾತ್ರಿ 00:15 ಗಂಟೆಗೆ ಕಟಪಾಡಿ ಹೆಚ್.ಪಿ. ಪೆಟ್ರೋಲ್ ಬಂಕ್ ಗಿಂತ ಸ್ವಲ್ಪ ಮುಂದೆ ತಲುಪುತಿದ್ದಂತೆ ಅವರ ಹಿಂದಿನಿಂದ ಉಡುಪಿ ಕಡೆಯಿಂದ ಲಾರಿ ನಂಬ್ರ MH-6-CC-2797 ನೇ ದನ್ನು ಅದರ ಚಾಲಕ ಪಾಂಡುರಂಗ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬೆನ್ನಿಗೆ ಮತ್ತು ತಲೆಯ ಹಿಂಭಾಗಕ್ಕೆ ಗುದ್ದಿದ ನೋವು ಉಂಟಾಗಿದ್ದು, ಅವರ ಜೊತೆಗಿದ್ದ ಪೊಲೀಸ್ ನಿರೀಕ್ಷಕರಾದ ನಿಲೇಶ್ ಚೌಹಾಣ್ ರವರಿಗೂ ಸಹ ಮೈಕೈಗೆ ಗುದ್ದಿದ ನೋವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಪಿರ್ಯಾದಿದಾರರನ್ನು ಹಾಗೂ ಪೊಲೀಸ್ ನಿರೀಕ್ಷಕರನ್ನು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಅವರಿಬ್ಬರನ್ನು ಪರೀಕ್ಷಿಸಿ ಪಿರ್ಯಾದಿದಾರರನ್ನು ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದು,  ಪೊಲೀಸ್ ನಿರೀಕ್ಷಕರಾದ ನಿಲೇಶ್ ಚೌಹಾಣ್ ರವರನ್ನು ಹೊರರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2021  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಾಣೆ ಪ್ರಕರಣಗಳು

  • ಶಂಕರನಾರಾಯಣ: ದಿನಾಂಕ 21/02/2021 ರಂದು 16:30 ಗಂಟೆಗೆ ಪಿರ್ಯಾದಿದಾರರಾದ ರಮೇಶ  ಪೂಜಾರಿ (50), ತಂದೆ: ಚೆನ್ನ ಪೂಜಾರಿ, ವಾಸ:  ಶ್ರೀಹೊನ್ನಮ್ಮ ನಿಲಯ  ಮೇಲ್ಜೆಡ್ಡು  ಸಿದ್ದಾಪುರ ಗ್ರಾಮ ಕುಂದಾಪುರ ಇವರ  ಮಗ   ಕೃಷ್ಣಮೂರ್ತಿ (28) ಇವರು  ಕುಂದಾಪುರ  ತಾಲೂಕಿನ  ಸಿದ್ದಾಪುರ ಗ್ರಾಮದ  ಸಿದ್ದಾಪುರ  ಮೇಲ್ಜಡ್ಡು   ಎಂಬಲ್ಲಿಂದ  ಸಿದ್ದಾಪುರ  ಪೇಟೆಗೆ  ಹೋಗಿ   ಬರುತ್ತೇನೆ  ಎಂದು   ಹೇಳಿದವರು ವಾಪಾಸು   ಮನೆಗೆ  ಬಾರದೇ  ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 20/2021  ಕಲಂ:  ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಉಡುಪಿ: ಪಿರ್ಯಾದಿದಾರರಾದ ವೀಣಾ (55), ಗಂಡ: ಜನಾರ್ಧನ ತಿಂಗಳಾಯ, ವಾಸ: ಚೈತ್ರಶ್ರೀ ಕೋಡಿಬೇಂಗ್ರೆ ಇವರು ಕೆಲಸ ಮಾಡುವ ರಾಜ್ಯ ಮಹಿಳಾ ನಿಲಯ ನಿಟ್ಟೂರು ಪುತ್ತೂರು ಗ್ರಾಮ ಎಂಬ ಸಂಸ್ಥೆಯಲ್ಲಿ 1 ವರ್ಷದಿಂದ ವಾಸವಿರುವ ಕಿರಣ್ (30) ಎಂಬುವವರು ಮಾನಸಿಕ ಅಸ್ವಸ್ಥರಾಗಿದ್ದು  ದಿನಾಂಕ 24/02/2021 ರಂದು ಬೆಳಿಗ್ಗೆ 09:00 ಗಂಟೆಗೆ ಬಟ್ಟೆ ಒಣ ಹಾಕಲು ಇತರರೊಂದಿಗೆ  ಹೊರ ಹೋದವರು ವಾಪಾಸು ಬಾರದೇ ಸಂಸ್ದೆಯಿಂದ  ತಪ್ಪಿಸಿಕೊಂಡು ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2021 ಕಲಂ: ಹೆಂಗಸು  ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.   

 ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಕೃಷ್ಣ ಪೂಜಾರಿ (38), ತಂದೆ: ಮಹಾಲಿಂಗ ಪೂಜಾರಿ, ವಾಸ: ಹೊಸಹಿತ್ಲು ನೂಜಾಡಿ ಮೂಡುಮಠ ಅಂಚೆ,11 ನೇ ಉಳ್ಳೂರು ಗ್ರಾಮ,ತಾಲೂಕು ಉಡುಪಿ ಜಿಲ್ಲೆ ಇವರ ತಂದೆ ಮಹಾಲಿಂಗ ಪೂಜಾರಿ (73) ರವರು ದಿನಾಂಕ 20/11/2020 ರಂದು ಕಿರಿಮಂಜೇಶ್ವರ  ಗ್ರಾಮದ ನಾಗೂರು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಪಘಾತಕ್ಕೀಡಾಗಿ ಗಾಯಗೊಂಡು ಕೆ.ಎಂಸಿ ಆಸ್ಪತ್ರೆ ಮಣಿಪಾಲದಲ್ಲಿ ದಾಖಲಾಗಿ  ಚಿಕಿತ್ಸೆ ಪಡೆದುಕೊಂಡು ದಿನಾಂಕ 25/11/2020 ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಯಲ್ಲಿ ಆರೈಕೆಯಲ್ಲಿ ಇರುತ್ತಾ ದಿನಾಂಕ 24/02/2021 ರಂದು ಬೆಳಿಗ್ಗೆ 9:30 ಗಂಟೆಗೆ ಅವರಮನೆಯಲ್ಲಿ ಮಂಚದ ಮೇಲೆ ಕುಳಿತವರು ಕುಳಿತಲ್ಲಿಯೇ ಕುಸಿದು ಅಸ್ವಸ್ಥ ರಾದವರನ್ನು ಚಿಕಿತ್ಸೆಯ ಬಗ್ಗೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪರೀಕ್ಷಿಸಿದ ವೈದ್ಯರು ಮಹಾಲಿಂಗ ಪೂಜಾರಿ ಯವರು ಮೃತಪಟ್ಟಿರುವುದಾಗಿ ಧೃಢ ಪಡಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 04/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಮಲ್ಪೆ: ದಿನಾಂಕ  23/02/2021  ರಂದು ಪಿರ್ಯಾದಿದಾರರಾದ ದುನುಷ್  ಶೆಟ್ಟಿ (28) , ತಂದೆ: ಮನೋಹರ ಶೆಟ್ಟಿ, ವಾಸ: ಬೆಳ್ಕಳೆ ಬಡಮನೆ  ತೆಂಕನಿಡಿಯೂರು  ಗ್ರಾಮ ಉಡುಪಿ ಇವರು ತನ್ನ  ಸ್ನೇಹಿತರೊಂದಿಗೆ ರಾತ್ರಿ 9:15 ಗಂಟೆಗೆ  ತೆಂಕನಿಡಿಯೂರು ಗ್ರಾಮ ಪಂಚಾಯತ್  ಬಳಿ ತಲುಪುವಾಗ ಸುಮಾರು 45 ರಿಂದ 50 ವರ್ಷ  ಪ್ರಾಯದ ಅಪರಿಚಿತ  ಗಂಡಸು ತೀವ್ರ ಅಸ್ವತ್ತಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ  ಇದ್ದವರನ್ನು ಚಿಕಿತ್ಸೆ  ಬಗ್ಗೆ  108 ಅಂಬುಲೇನ್ಸ್ ನಲ್ಲಿ  ಉಡುಪಿ ಜಿಲ್ಲಾ ಆಸ್ಪತ್ರೆಗೆ  ಕರೆದುಕೊಂಡು ಬಂದಾಗ  ಆತನನ್ನು  ವೈದ್ಯರು ಪರೀಕ್ಷಿಸಿ  ಈಗಾಗಲೇ ಮೃತ ಪಟ್ಟಿರುವುದಾಗಿ  ರಾತ್ರಿ 9:45  ಗಂಟೆಗೆ  ತಿಳಿಸಿರುತ್ತಾರೆ. ವ್ಯಕ್ತಿಯು  ಅನಾರೋಗ್ಯದಿಂದ  ಅಥಾವ  ಇನ್ಯಾವುದೇ ಕಾರಣದಿಂದ  ತೀವ್ರ ಅಸ್ವತ್ತಗೊಂಡು  ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 11/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ರಾಘವೇಂದ್ರ ಖಾರ್ವಿ(40), ತಂದೆ: ಲಕ್ಷ್ಮಣ ಖಾರ್ವಿ,ವಾಸ: ಶ್ರೀ ಮೂಕಾಂಬಿಕಾ ನಿಲಯ, ಹೊಸಕೇರಿ ಮದ್ದುಗುಡ್ಡೆ, ಕುಂದಾಪುರ ಕಸಬಾ ಗ್ರಾಮ, ಕುಂದಾಪುರ ತಾಲೂಕು ಇವರು ಪುರಸಭಾ ಸದಸ್ಯರಾಗಿದ್ದು ದಿನಾಂಕ 23/02/2021 ರಂದು11:20 ಗಂಟೆಗೆ ಕುಂದಾಪುರ ಗಾಂಧಿ ಮೈದಾನದ ಬಳಿ ಶಿವಮೊಗ್ಗದ ಹಾಲೇಶ ಎಂಬ ವ್ಯಕ್ತಿ ತೀವ್ರ ಜ್ವರದಿಂದ ಅಸ್ವಸ್ಥನಾಗಿದ್ದು ಆತನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ಪಿರ್ಯಾದಿದಾರರು ಮತ್ತು ಇತರರು ಚಿಕಿತ್ಸೆ ಬಗ್ಗೆ ದಾಖಲು ಮಾಡಿದ್ದು ದಿನಾಂಕ 24/02/2021 ರಂದು 08:00 ಗಂಟೆಗೆ ಹಾಲೇಶನು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 12/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತರ ಪ್ರಕರಣಗಳು

  • ಕೋಟ: ಪಿರ್ಯಾದಿದಾರರಾದ ಚೇತನಾ (31), ತಂದೆ:ದಿ.ಕೊರಗ ತಾಂಡೇಲ, ವಾಸ: ಅರಮ ದೇವಸ್ಥಾನ ಹತ್ತಿರ, ಕೋಟತಟ್ಟು, ಪಡುಕೆರೆ, ಕೊಟತಟ್ಟು ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇವರು ಮಲ್ಪೆಯಲ್ಲಿ ಮೀನು ಬೋಟಿನಲ್ಲಿ ಕೆಲಸ ಮಾಡಿಕೊಂಡಿರುವವರು ದಿನಾಂಕ 23/02/2021 ಮತ್ತು 24/02/2021 ರಂದು ರಜೆ ಇದ್ದುದರಿಂದ ಬೋಟ್‌ನ್ನು ದಿನಾಂಕ 23/02/2021 ರಂದು ಸಂಜೆ ಮಲ್ಪೆಯಲ್ಲಿ ನಿಲ್ಲಿಸಿ ಬೋಟಿನ ಕೆಲಸ ಮುಗಿಸಿ ಬೋಟಿನ ಇತರ ಕೆಲಸಗಾರರು ಭಟ್ಕಳಕ್ಕೆ ಹೋಗಿದ್ದು ಪಿರ್ಯಾದಿದಾರರು ಸಂಜೆ ಮನೆಗೆ ಹೋಗಲು ಹೊರಟು 9:00 ಗಂಟೆಗೆ ಸಾಲಿಗ್ರಾಮಕ್ಕೆ ಬಂದಿದ್ದು ಸಾಲಿಗ್ರಾಮದಲ್ಲಿ ಊಟ ಮಾಡಿ ಮನೆಗೆ ವಾಪಾಸು ಹೋಗಲು ಪಿರ್ಯಾದಿದಾರರನ್ನು ಕರೆದುಕೊಂಡು ಹೋಗಲು ಸಾಲಿಗ್ರಾಮಕ್ಕೆ ವಾಹನದಲ್ಲಿ ಬರುವಂತೆ  ಪಿರ್ಯಾದಿದಾರರ ಮನೆಯ ಹತ್ತಿರದ ಪಿರ್ಯಾದಿದಾರರ ಸ್ನೇಹಿತ ಅಕ್ಷಯ ಎಂಬುವವನಿಗೆ ಹೇಳಿದಂತೆ ಆತನು ಸ್ಕೂಟಿಯಲ್ಲಿ ಸಾಲಿಗ್ರಾಮ ಜಂಕ್ಷನ್‌ಗೆ 09:30 ಗಂಟೆಗೆ ಬಂದಿರುತ್ತಾನೆ. ನಂತರ ಅವರಿಬ್ಬರು  ಸ್ಕೂಟಿಯಲ್ಲಿ ಒಟ್ಟಿಗೆ ಕೋಟದ ಆದಂ ಹೋಟೆಲ್‌ನಲ್ಲಿ ಊಟ ಮಾಡಲು ಹೊರಟಿದ್ದು ಆ ಸಮಯ ಸ್ಕೂಟಿ ಸವಾರಿ ಮಾಡಿಕೊಂಡಿದ್ದ ಅಕ್ಷಯ ಆತನ ಮೊಬೈಲ್‌ನಲ್ಲಿ ಯಾರೊಂದಿಗೋ ಏರು ದ್ವನಿಯಲ್ಲಿ ವಾದ ವಿವಾದ ಮಾಡುತ್ತಿದ್ದನು. ವಾದ ಮಾಡುವಾಗ ಗಗನ್‌ ಹೆಸರು ಹೇಳಿ ಮಾತನಾಡುತ್ತಿದ್ದನು. ನಂತರ ಆದಂ ಹೋಟೆಲ್‌ನಲ್ಲಿ ಊಟ ಮಾಡಿ ವಾಪಾಸು ಅದೇ ಸ್ಕೂಟಿಯಲ್ಲಿ ಮನೆ ಕಡೆಗೆ ಹೊರಟಿದ್ದು ಪುನಃ ಅಕ್ಷಯ ಈ ಹಿಂದಿನಂತೆಯೇ ಗಗನ್‌ ಎಂಬುವವನೊಂದಿಗೆ ಪೋನ್‌ನಲ್ಲಿ ವಾದ ವಿವಾದ ಮಾಡುತ್ತಿದ್ದು ಆಗ ಪಿರ್ಯಾದಿದಾರರು ಏನು ವಿಚಾರ ಎಂದು ಅಕ್ಷಯನಿಗೆ ಕೇಳಿದೆ ಅದಕ್ಕೆ ಅಕ್ಷಯನು ಗಗನ್‌ನೊಂದಿಗೆ ಗಲಾಟೆ ಮಾಡುತ್ತಿರುವುದಾಗಿ ತಿಳಿಸಿ ಅಕ್ಷಯನನ್ನು ಆತನು ಆತನ ಮನೆಯ ಹತ್ತಿರ ಬರುವಂತೆ ಬೆದರಿಕೆ ಹಾಕುತ್ತಿರುವುದಾಗಿ ಅಕ್ಷಯ  ತಿಳಿಸಿದ್ದು, ಪಿರ್ಯಾದಿದಾರರು ಅಕ್ಷಯನನ್ನು ಸಮಾಧಾನಪಡಿಸಿ ಸ್ಕೂಟಿಯಲ್ಲಿ ಮನೆಗೆ ಹೋಗುತ್ತಾ ದಾರಿಯಲ್ಲಿ ಗಗನ್‌ ಮನೆ ಹತ್ತಿರ ತಲುಪುವಾಗ 10:45 ಗಂಟೆಗೆ ಗಗನ್‌ ಮನೆಯ ಎದುರು ರಸ್ತೆಯ ಮೇಲೆ ಗಗನ್‌, ಅಪ್ಪ ಶಂಬು ಪೂಜಾರಿ, ಅಮ್ಮ ಗೀತಾ, ಗಗನ್‌ ಮನೆಯ ಗೇಟಿನ ಹತ್ತಿರ ರಸ್ತೆಯಲ್ಲಿ ನಿಂತಿದ್ದರು. ಅವರಲ್ಲಿ ಗಗನ್‌ ಸ್ಕೂಟಿಯನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕುತ್ತಿದ್ದು, ಆಗ ಪಿರ್ಯಾದಿದಾರರು ಅಕ್ಷಯನನ್ನು ತಡೆಯುತ್ತಿದ್ದು, ಗಗನ್‌ನನ್ನು ಅವನ ಅಪ್ಪ ಅಮ್ಮ ಸಮಾಧಾನ ಮಾಡುತ್ತಿದ್ದರು ಆದರೆ ಗಗನ್‌ ಸುಮ್ಮನಿರದೇ ಏಕಾ ಏಕಿ ಅಕ್ಷಯನ ಹಿಂದುಗಡೆ ಬಂದು ಒಂದು ಕಬ್ಬಿಣದ ರಾಡ್‌ನಿಂದ ಬಲವಾಗಿ ಅಕ್ಷಯನ ತಲೆಯ ಹಿಂಬದಿಗೆ ಹೊಡೆದು ನಂತರ ರಾಡ್‌ನ್ನು ಅಲ್ಲೆ ಬಿಸಾಡಿ ಅಲ್ಲಿಂದ ಓಡಿ ಹೋದನು. ನಂತರ ಪಿರ್ಯಾದಿದಾರರು  ನೋಡುವಷ್ಟರಲ್ಲಿ ಅಕ್ಷಯ ಒಮ್ಮೇಲೆ ಕುಸಿದು ರಸ್ತೆಯಲ್ಲಿ ಬಿದ್ದಿದ್ದು ಆತನ ತಲೆಯಿಂದ ರಕ್ತ ಬರುತ್ತಿದ್ದು ಆತನು ಮಾತನಾಡುತ್ತಿರದೇ ಇದ್ದು ತೀವೃ ಅಸ್ವಸ್ಥಗೊಂಡಿದ್ದವನನ್ನು ಪಿರ್ಯಾದಿದಾರರ ಸ್ನೇಹಿತರಾದ ಪ್ರದೀಪ, ಕೀರ್ತಿ ವಿಷಯ ತಿಳಿಸಿ ಕರೆಯಿಸಿಕೊಂಡು ಕೂಡಲೇ ಅಕ್ಷಯನನ್ನು ಚಿಕಿತ್ಸೆಯ ಬಗ್ಗೆ ಶಂಬು ಪೂಜಾರಿಯವರ ಕಾರಿನಲ್ಲಿ ಹಾಕಿಕೊಂಡು ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹೋಗುವಂತೆ ವೈದ್ಯರು ತಿಳಿಸಿದ್ದು ಅಷ್ಟರಲ್ಲಿ ಅಕ್ಷಯನ ಮಾವ ಶೇಖರ ಎಂಬುವವರು ಆಸ್ಪತ್ರೆಗೆ ಬಂದಿದ್ದು ಶೇಖರ ಹಾಗೂ ಕೀರ್ತಿ ರವರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಒಂದು ಅಂಬುಲೆನ್ಸ್‌ ವಾಹನದಲ್ಲಿ ಮಣೆಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 36/2021  ಕಲಂ: 341, 326, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾದ ಎನ್  ರಮೇಶ್  ಶೆಟ್ಟಿ(72), ತಂದೆ: ನಾರಯಣ ಶೆಟ್ಟಿ, ವಾಸ: ಕಿಶೋರ್ ಕಿರಣ್ ನಿಲಯ, ಕುಕ್ಕೆಹಳ್ಳಿ ಗ್ರಾಮ, ಉಡುಪಿ ತಾಲೂಕು , ಉಡುಪಿ ಜಿಲ್ಲೆ ಇವರು ತನ್ನ ಹೆಂಡತಿ ಮಗ ಹಾಗೂ ಸೊಸೆಯೊಂದಿಗೆ ಮನೆಯಲ್ಲಿರುವಾಗ ದಿನಾಂಕ 23/02/2021 ರಂದು ರಾತ್ರಿ  10:30 ಗಂಟೆಗೆ ಬಾಗಿಲು ಬಡಿದ ಶಬ್ದ ಕೇಳಿ ಪಿರ್ಯಾದಿದಾರರು ಕಿಟಕಿ ಬಾಗಲು ತೆಗೆದು ನೋಡಿದಾಗ ಅವರ ಮನೆಯ ಅಂಗಳದಲ್ಲಿ ಜಗದೀಶ  ಯಾನೆ ಸುನಿಲ್ ಶೆಟ್ಟಿ, ತಂದೆ: ವಾದಿರಾಜ ಶೆಟ್ಟಿ,  ಒಳಮಡಿ, ಅನಿಲ್ ಶೆಟ್ಟಿ ತಂದೆ:  ಬಾಬು ಶೆಟ್ಟಿ, ಹಾವಂಜೆ ಮತ್ತು ಅಜಿತ್ ಶೆಟ್ಟಿ, ತಂದೆ: ಬಾಬು ಶೆಟ್ಟಿ, ಹಾವಂಜೆ ಹಾಗೂ ಇತರರು  ಇದ್ದು, ಪಿರ್ಯಾದಿದಾರರು ಯಾರು ಎಂದು ಕೇಳಿದಾಗ ಅಂಗಳದಲ್ಲಿ ನಿಂತವರು ಅವಾಚ್ಯ ಶಬ್ದಗಳಿಂದ ಬೈದು ನಿಂದನೆ ಮಾಡಿ ಬೆದರಿಕೆ ಒಡ್ಡಿ ಅಲ್ಲಿಯೇ ಹೊರಗಡೆ ನಿಲಿಸಿದ್ದ ಪಿರ್ಯಾದಿದಾರರ KA-20-Z-6890 ನೇ ಶಿಪ್ಟ್  ಕಾರಿನ ಬಾಗಿಲುಗಳಿಗೆ ಹಾನಿಗೊಳಿಸಿರುತ್ತಾರೆ. ಈ ಸಮಯ ಪಿರ್ಯಾದಿದಾರರ  ಮಗ ಕಿರಣ್ ಕುಮಾರ್  ಹೆಗ್ಡೆ  ಇವರು  ಹೊರಗಡೆ ಹೋದಾಗ ಬೆದರಿಕೆ ಹಾಕಿ ಕೆಂಪು ಬಣ್ಣದ ಜೀಪಿನಲ್ಲಿ ಹೋಗಿರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 05/2021  ಕಲಂ: 447,427,504,506, ಜೊತೆಗೆ  34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-02-2021 12:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080