ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕಾರ್ಕಳ: ದಿನಾಂಕ 25/02/2021 ರಂದು ಬೆಳಿಗ್ಗೆ 11:30 ಗಂಟೆಗೆ ಕಾರ್ಕಳ ತಾಲೂಕು, ಕುಕ್ಕೂಂದೂರು ಗ್ರಾಮದ ಮೇಲ್ಜಡ್ಡು ಎಂಬಲ್ಲಿ ಹಾದು ಹೋಗುವ ಕಾರ್ಕಳ–ಉಡುಪಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ 407 ಟೆಂಪೋ ನಂಬ್ರ KA-20-B-5816 ನೇಯದರ ಚಾಲಕ ಅಮೃತ್ ಆನಂದ ಶೆಟ್ಟಿ ಎಂಬಾತನು ತನ್ನ 407 ಟೆಂಪೋವನ್ನು ಕಾರ್ಕಳ ಕಡೆಯಿಂದ ಬೈಲೂರು ಕಡೆಗೆ ಅತಿವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದವನು ಯಾವುದೇ ಸೂಚನೆ ನೀಡದೆ ಏಕಾ ಏಕಿ  ಆತನ ಬಲಬದಿಗೆ ಅಂದರೆ ಮೇಲ್ಜಡ್ಡು ಕ್ರಾಸ್ ಕಡೆಗೆ ನಿರ್ಲಕ್ಷತನದಿಂದ ಚಲಾಯಿಸಿ, ಅದೇ ದಿಕ್ಕಿನಲ್ಲಿ ಕಾರ್ಕಳ ಕಡೆಯಿಂದ ಬೈಲೂರು ಕಡೆಗೆ ಕಾರ್ಕಳ ನಗರ ಠಾಣೆಯ ಎ.ಎಸ್.ಐ. ಪ್ರಕಾಶ್‌‌ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ನಂಬ್ರ KA-20-V-7909 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಎ.ಎಸ್.ಐ. ಪ್ರಕಾಶ್ ರವರ  ಎಡಕಾಲಿನ ಮೊಣಗಂಟಿಗೆ ರಕ್ತ ಗಾಯ ಹಾಗೂ ಬಲ ಕಣ್ಣಿನ ಬಳಿ ತರಚಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಫುರ: ದಿನಾಂಕ 23/02/2021  ರಂದು ಸಂಜೆ 5:೦೦ ಗಂಟೆ ಸಮಯಕ್ಕೆ ಫಿರ್ಯಾದಿದಾರರಾಧ ವಿಶ್ವನಾಥ. (30) ತಂದೆ:- ಸತ್ಯನಾರಾಯಣ, ವಾಸ:- ಚೋಂಟಿ ಮನೆ ಕೊರವಡಿ  ಕುಂಬಾಶಿ ಗ್ರಾಮ ಕುಂದಾಪುರ ಇವರು ತನ್ನ ದ್ವಿಚಕ್ರ ವಾಹನದಲ್ಲಿ ಬೀಜಾಡಿಯಿಂದ ತನ್ನ ಮನೆಯಾದ ಕೊರವಡಿ ಕಡೆಗೆ ಹೋಗುತ್ತಿರುವಾಗ ಕುಂದಾಪುರ ತಾಲೂಕು ಕುಂಬಾಶಿ ಗ್ರಾಮದ ಬಂಗೇರ ಫಿಶ್ ಮಿಲ್ ಬಳಿ ರಸ್ತೆಯಲ್ಲಿ ತಲುಪುವಾಗ ವಿಶ್ವನಾಥ ರವರ ಎದುರುಗಡೆಯಿಂದ ಅವರ ನೆರಮನೆಯ ನರಸಿಂಹ ಎಂಬವರು ಅವರ KA-20-EE-3096 ನೇ ಬೈಕಿನಲ್ಲಿ ಅವರ ಪರಿಚಯದ ಸೋಮು ಎಂಬ ಹೆಂಗಸನ್ನು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ಕೊರವಡಿ ಕಡೆಗೆ ಹೋಗುತ್ತಿರುವಾಗ ಅವರ ಎದುರಿನಿಂದ ಒಂದು ನಾಯಿ ಅಡ್ಡ ಬಂದ ಕಾರಣ ನರಸಿಂಹರವರು ತಕ್ಷಣ  ತನ್ನ ಮೋಟಾರ್ ಸೈಕಲನ್ನು ನಿಲ್ಲಿಸಿದ ಕಾರಣ ಬೈಕ್ ಸವಾರ ನರಸಿಂಹ ಹಾಗೂ ಸಹಸವಾರಿಣಿಯಾಗಿ ಕುಳಿತಿದ್ದ ಸೋಮು ಎಂಬವರು ಆಯ ತಪ್ಪಿ ಮೋಟಾರ್ ಸೈಕಲಿನಿಂದ ಕೆಳಗೆ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಸೋಮು ರವರಿಗೆ ಬಲಕೈ ಮೂಳೆ ಮುರಿತ ಹಾಗೂ ಬಲಗಣ್ಣಿನ ಮೇಲಿನ ಹುಬ್ಬು ಮತ್ತು ಬಲಹಣೆಯ ಮೇಲೆ ತರಚಿದ ರಕ್ತಗಾಯವಾಗಿ ಕೋಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ KMC ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿರ್ಯಾದಿದಾರರಾಧ ರಾಘವೇಂದ್ರ.ಕೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆ ಉಡುಪಿ ಜಿಲ್ಲೆ ಇವರು ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ಪ್ರಸ್ತುತ ಇಲಾಖಾ ವಾಹನ ನಂಬ್ರ ಕೆಎ- 20-ಜಿ-307 ನೇದರ ಚಾಲಕರಾಗಿದ್ದು ದಿನಾಂಕ 24/02/2021 ರಂದು ರಾಘವೇಂದ್ರ ರವರನ್ನು ಉಡುಪಿ ಜಿಲ್ಲಾ ವಿಶೇಷ ವಿಭಾಗದ ಪೊಲೀಸ್ ನಿರೀಕ್ಷಕರಾದ ನಿಲೇಶ್ ಚೌಹಾಣ್ ರವರಿಗೆ ರಾತ್ರಿ ರೌಂಡ್ಸ್ ಕರ್ತವ್ಯದ ಬಗ್ಗೆ ಇಲಾಖಾ ವಾಹನ ಚಲಾಯಿಸುವ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ರಾಘವೇಂದ್ರ ರವರು ಪೊಲೀಸ್ ನಿರೀಕ್ಷಕರಾದ ನಿಲೇಶ್ ಚೌಹಾಣ್ ರವರನ್ನು ಉಡುಪಿ ಮಾನ್ಯ ಪೊಲೀಸ್ ಅಧೀಕ್ಷಕರ ಕಚೇರಿಯಿಂದ  ವಾಹನ ನಂಬ್ರ ಕೆಎ-20-ಜಿ-307 ನೇದರಲ್ಲಿ ಕುಳ್ಳಿರಿಸಿಕೊಂಡು ಉಡುಪಿ ನಗರದಿಂದಾಗಿ ಹೊರಟು ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ ಮಂಗಳೂರು ರಸ್ತೆಯಲ್ಲಿ ಮಂಗಳೂರು ಕಡೆಗೆ ಹೋಗುತ್ತಾ ದಿನಾಂಕ 25/02/2021 ರಂದು ರಾತ್ರಿ 00:15 ಗಂಟೆ ಸುಮಾರಿಗೆ ಕಟಪಾಡಿ ಹೆಚ್.ಪಿ. ಪೆಟ್ರೋಲ್ ಬಂಕ್ ಗಿಂತ ಸ್ವಲ್ಪ ಮುಂದೆ ತಲುಪುತಿದ್ದಂತೆ ಅವರ ಹಿಂದಿನಿಂದ ಅಂದರೆ ಉಡುಪಿ ಕಡೆಯಿಂದ ಲಾರಿ ನಂಬ್ರ: ಎಮ್.ಹೆಚ್-16-ಸಿಸಿ-2797 ನೇ ದನ್ನು ಅದರ ಚಾಲಕ ಪಾಂಡುರಂಗ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಘವೇಂದ್ರ.ಕೆ. ರವರು ಚಲಾಯಿಸಿಕೊಂಡು ಹೋಗುತ್ತಿದ್ದ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದು ಪರಿಣಾಮ ರಾಘವೇಂದ್ರ ರವರ ಬೆನ್ನಿಗೆ ಮತ್ತು ತೆಲೆಯ ಹಿಂಭಾಗಕ್ಕೆ ಗುದ್ದಿದ ನೋವು ಉಂಟಾಗಿದ್ದು, ಅವರ ಜೊತೆಗಿದ್ದ ಪೊಲೀಸ್ ನಿರೀಕ್ಷಕರಾದ ನಿಲೇಶ್ ಚೌಹಾಣ್ ರವರಿಗೂ ಸಹ ಮೈಕೈಗೆ ಗುದ್ದಿದ ನೋವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ರಾಘವೇಂದ್ರ ರವರನ್ನು ಹಾಗೂ ಪೊಲೀಸ್ ನಿರೀಕ್ಷಕರನ್ನು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಅವರಿಬ್ಬರನ್ನು ಪರೀಕ್ಷಿಸಿ ರಾಘವೇಂದ್ರ ರವರನ್ನು ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದು, ಪೊಲೀಸ್ ನಿರೀಕ್ಷಕರಾದ ನಿಲೇಶ್ ಚೌಹಾಣ್ ರವರನ್ನು ಹೊರರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿರುವುದಾಗಿದೆ. ಈ ಬಗ್ಗೆ ಕಾಫು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಪ್ರವೀಣ ಶೆಟ್ಟಿ  (51) ತಂದೆ: ವಿಠಲ ಶೆಟ್ಟಿ  ವಾಸ: ಮೂಡುಮನೆ ಮಲೆಬೆಟ್ಟು ದುರ್ಗಾ  ಗ್ರಾಮ ಕಾರ್ಕಳ ತಾಲೂಕು ಉಡುಪಿ ಇವರ ತಂದೆ ವಿಠಲ ಶೆಟ್ಟಿ (51) ಇವರು ಕಾರ್ಕಳ ತಾಲೂಕು ದುರ್ಗ ಗ್ರಾಮದ ಮೂಡುಮನೆಯಲ್ಲಿ ಕುಟುಂಬದೊಂದಿಗೆ ವಾಸ ಮಾಡಿಕೊಂಡಿದ್ದು, ಸುಮಾರು ಒಂದೂವರೆ ವರ್ಷದಿಂದ ಪಾರ್ಶ್ವ ವಾಯು ಕಾಯಿಲೆಯಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಮನನೊಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ದಿನಾಂಕ 25/02/2021 ರಂದು ಬೆಳಿಗ್ಗೆ 08:00 ಗಂಟೆಯಿಂದ ಬೆಳಿಗ್ಗೆ 09:30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಜಗುಲಿಯ ಮೇಲ್ಚಾವಣಿಗೆ ಹಾಕಿದ ಮರದ ಪಕ್ಕಾಸಿಗೆ ಹುರಿ ಹಗ್ಗದಿಂದ ಕುತ್ತಿಗೆಗೆ ನೇಣು  ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಯುಡಿಆರ್ ಕ್ರಮಾಂಕ 6/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಉಡುಪಿ: ಪಿರ್ಯಾದಿದಾರರಾಧ ಬಸವರಾಜು ಕೆ. (23) ತಂದೆ: ತಿಮ್ಮ ರೆಡ್ಡಿ  ವಾಸ: ಹತ್ತಿಗುಡ್ಡ, ಸಿಂಧನೂರು ರಾಯಚೂರು ಪ್ರಸ್ತುತ: ಸದಾಶಿವಶೆಟ್ಟಿಯವರ ಬಾಡಿಗೆ ಮನೆ, ಚಿಟ್ಪಾಡಿ, ಉಡುಪಿ ಇವರು ದಿನಾಂಕ 24/02/2021 ರಂದು ಬೆಳಿಗ್ಗೆ 9:00 ಗಂಟೆಗೆ ಉಡುಪಿ ಅಜ್ಜರಕಾಡಿನ ಭುಜಂಗ ಪಾರ್ಕ್ ಬಳಿ ಇರುವ ರಿಕ್ಷಾ ನಿಲ್ದಾಣದ ಎದುರು ಇರುವ ಪಾರ್ಕಿಂಗ್ ಸ್ಥ ಳದಲ್ಲಿ ತನ್ನ ತಂದೆಯವರ ಬೈಕ್ ನಂ  KA-36-EW-4967 BAJAJ PULSOR 150 CC ಬೈಕನ್ನು ಹ್ಯಾಂಡ್ ಲಾಕ್ ಮಾಡದೇ ಬೈಕಿನಲ್ಲಿಯೇ ಕೀ ಇಟ್ಟು ಪಾರ್ಕ್ನ ನೊಳಗೆ ಮೊಬೈಲ್ ನಲ್ಲಿ ಮಾತನಾಡಿಕೊಂಡು ಪಾರ್ಕ್ ನ ಒಳಗೆ ಹೋಗಿ ಸ್ವಲ್ಪ ಸಮಯ ಪಾರ್ಕ್ ನಲ್ಲಿ ಕುಳಿತುಕೊಂಡು ಮಧ್ಯಾಹ್ನ  12:45  ಗಂಟೆಗೆ ವಾಪಾಸ್ಸು ಬಂದು ಬೈಕ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ ಬಸವರಾಜು ರವರು ನಿಲ್ಲಿಸಿದ ಬೈಕ್ ಇಲ್ಲದೇ ಇದ್ದು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಬ್ರಹ್ಮಾವರ: ದಿನಾಂಕ 23/02/2021 ರಂದು ಸಂಜೆ 6:00 ಗಂಟೆಗೆ ಬ್ರಹ್ಮಾವರ ತಾಲೂಕು, ಉಪ್ಪೂರು ಗ್ರಾಮದ ಜಾತಬೆಟ್ಟು ಶಾಲೆಯಿಂದ ಸ್ವಲ್ಪ ಹಿಂದೆ ಭಟ್ಟರ ಅಂಗಡಿಯ ಎದುರು ಪಿರ್ಯಾದಿದಾರರಾದ ರವಿ ಪೂಜಾರಿ (44), ತಂದೆ: ವಾಸು ಪೂಜಾರಿ, ವಾಸ: ಕೆದಗೆಜೆಡ್ಡು, ಉಗ್ಗೇಲ್‌ಬೆಟ್ಟು, ಉಪ್ಪೂರು ಗ್ರಾಮ, ಬ್ರಹ್ಮಾವರ ರವರು ನಡೆದುಕೊಂಡು ಮನೆ ಕಡೆಗೆ ಬರುತ್ತಿರುವಾಗ ಅವರ ಪರಿಚಯದ ಆರೋಪಿಯಾದ ದುಗ್ಗಪ್ಪ ಪೂಜಾರಿ ಎಂಬವರು ಸೈಕಲ್‌ನಲ್ಲಿ ಬಂದು ರವಿ ಇವರನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ನೀನು ತುಂಬಾ ಹಾರಾಡುತ್ತಿದ್ದೀಯಾ, ನಿನ್ನ ಕೈಕಾಲು ಮುರಿಯುತ್ತೇನೆ ಎಂದು ಹೇಳಿ, ಸೈಕಲ್‌ನಿಂದ ಇಳಿದು ಕೈಯಿಂದ ಹೊಡೆದು ಕಾಲಿನಿಂದ ಸೊಂಟಕ್ಕೆ, ಬೆನ್ನಿಗೆ, ಭುಜಕ್ಕೆ ತುಳಿದಿದ್ದು ಅಲ್ಲದೇ ರವಿ ಇವರನ್ನು ಕೆಳಗೆ ಬಿಳಿಸಿ ದೂಡಾಡಿರುತ್ತಾನೆ. ಆ ಸಮಯ ರವಿ ರವರು ಬೊಬ್ಬೆ ಹಾಕಿದ್ದನ್ನು ಕೇಳಿ ಅವರ ಸಂಬಂಧಿ ಸಂಧ್ಯಾ ಹಾಗೂ ಭಟ್ಟರ ಅಂಗಡಿಯಲ್ಲಿದ್ದ ಜನರು ಅಲ್ಲಿಗೆ ಬರುವುದನ್ನು ನೋಡಿ ಆರೋಪಿಯು ರವಿ ರವರನ್ನ ಈಗ ನೀನು ಉಳಿದು ಕೊಂಡಿದ್ದಿಯಾ, ಮುಂದಕ್ಕೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ, ನನ್ನ ಮಗ ಮತ್ತು ನಾನು ಸೇರಿ ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಓಡಿ ಹೋಗಿರುತ್ತಾನೆ. ಈ ಹಲ್ಲೆಯಿಂದ ರವಿ ರವರ ಎರಡೂ ಕಾಲಿನ ಮೊಣಗಂಟಿನ ಹತ್ತಿರ ತರಚಿದ ಗಾಯವಾಗಿದ್ದು, ಸೊಂಟಕ್ಕೆ, ಬೆನ್ನಿಗೆ, ಭುಜಕ್ಕೆ ತೀವ್ರ ಒಳನೋವು ಆಗಿದ್ದು ಮತ್ತು ತಲೆಯ ಎಡಭಾಗ ಸಣ್ಣ ರಕ್ತಗಾಯವಾಗಿರುತ್ತದೆ. ಗಾಯಗೊಂಡ ರವಿ ರವರು ಚಿಕಿತ್ಸೆ ಬಗ್ಗೆ ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲು ಆಗಿರುತ್ತಾರೆ. ಈ ಹಿಂದೆ ರವಿ ಇವರಿಗೂ ಹಾಗೂ ಆರೋಪಿ ಮತ್ತು ಅವರ ಮಗ ನಾಗರಾಜನಿಗೂ ಗಲಾಟೆಯಾಗಿದ್ದು, ಅದೇ ದ್ವೇಷದಿಂದ ಆರೋಪಿಯು ರವಿ ಇವರ ಹಲ್ಲೆ ನಡೆಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 32/2021 ಕಲಂ: 341, 323, 504, 506 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಂಕರನಾರಾಯಣ: ದಿನಾಂಕ 24/02/2021  ರಂದು  12:45 ಘಂಟೆಗೆ ಫಿರ್ಯಾದಿದಾರರಾದ ಪ್ರದೀಪ (27)ತಂದೆ, ಗಣಪ ಮಡಿವಾಳ ವಾಸ, ಮಾವಿನಕೊಡ್ಲು ಕುಳ್ಳುಂಜೆ ಗ್ರಾಮ ಕುಂದಾಪುರ ಇವರು ಕುಂದಾಪುರ ತಾಲೂಕಿನ ಕುಳ್ಳುಂಜೆ ಗ್ರಾಮದ ಮಾವಿನಕೊಡ್ಲುವಿನ ಮೆಕ್ಕೋಡು ಮಾರ್ಗದಲ್ಲಿ ಹರೀಶ ಎಂಬುವರೊಂದಿಗೆ   ಮೋಟಾರ್ ಸೈಕಲ್‌‌ನಲ್ಲಿ ಹೋಗುತ್ತಿರುವಾಗ ಆರೋಪಿಯು ಕೆಎ-20-ಸಿ-6048 ನೇ ನಂಬ್ರದ ಗೂಡ್ಸ ವಾಹನವನ್ನು ಪ್ರದೀಪ ಇವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್‌ಗೆ ಮುಂದುಗಡೆ   ನಿಲ್ಲಿಸಿ, ಪ್ರದೀಪ ರವರಿಗೆ ಹಾಗೂ ಅವರೊಂದಿಗೆ ಇದ್ದ ಹರೀಶ ಎಂಬುವರಿಗೆ ಅವಾಚ್ಯ ಶಬ್ದದಿಂದ ಬೈಯುತ್ತಾ, ಜೀವ ಬೆದರಿಕೆ  ಹಾಕಿರುತ್ತಾನೆ,  ಆಗ ಪ್ರದೀಪ ರವರು ತಡೆದಾಗ ಅವರಿಗೆ ಹಲ್ಲೆ ಮಾಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2021 ಕಲಂ: 341 504,323 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಶಂಕರನಾರಾಯಣ: ದಿನಾಂಕ 24/02/2021 ರಂದು 12:00 ಘಂಟೆಗೆ ಪಿರ್ಯಾದಿದಾರರಾಧ ಕಂಠ (20) ತಂದೆ, ನರಸಿಂಹ ನಾಯ್ಕ ವಾಸ, ಬಾಳೆಹಿತ್ಲು ಹಕ್ಲಾಡಿ 28 ಹಾಲಾಡಿ ಗ್ರಾಮ ಕುಂದಾಪುರ ಇವರು  ಕುಂದಾಪುರ ತಾಲೂಕಿನ ಕುಳ್ಳುಂಜೆ ಗ್ರಾಮದ ಚೆಟ್ರೆ ಎಂಬಲ್ಲಿ ಮಾವಿನಕೊಡ್ಲು  ಕೆಡೆಗೆ ಕೆಎ-20-ಸಿ-6048 ನೇ ನಂಬ್ರದ ಗೂಡ್ಸ ವಾಹನದಲ್ಲಿ ಸಿಮೆಂಟ್‌ ತುಂಬಿಸಿಕೊಂಡು ಹೋಗುತ್ತಿರುವಾಗ ಆರೋಪಿ ಹರೀಶ ಪೂಜಾರಿ    ಹಾಗೂ ಇನ್ನೊಬ್ಬ ವ್ಯಕ್ತಿಯು ಗೂಡ್ಸ ವಾಹನದ ಹಿಂದೆ ಕೆಎ-20-ಇಯು-8658 ನೇ ನಂಬ್ರದ ಡ್ಯೂ ಸ್ಲೂಟಿಯನ್ನು ಚಲಾಯಿಸಿಕೊಂಡು  ಬರುತ್ತಿದವರು ಏಕಾಏಕೀ ಕಂಠ ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಗೂಡ್ಸ ವಾಹನದ ಮುಂದೆ ಅಡ್ಡ ನಿಲ್ಲಿಸಿ ಹಾರನ್ ಹಾಕಿದರು, ಯಾಕೇ ಸೈಡ ಕೊಡಲಿಲ್ಲ, ನೀನು ದೂಳನ್ನು ಹಾರಿಸಿಕೊಂಡು ಬರುತ್ತಿದಿಯಾ ಎಂದು ಹೇಳಿ ಶರ್ಟನ್ನು ಹಿಡಿದು ಕೆಳಗೆ ಎಳೆದು ಹಾಕಿ ಎರಡು ಜನರು ಕೈಯಿಂದ ಹಲ್ಲೆ ಮಾಡಿ ಕೆಟ್ಟ ಪದದಿಂದ ಬೈದಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2021 ಕಲಂ: 341 504 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 25-02-2021 06:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080