ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾಪು: ಪಿರ್ಯಾದಿದಾರರಾದ ಅನಿಲ್ ಕುಮಾರ (45),  ತಂದೆ : ದಿ. ಸದಾನಂದ,  ವಾಸ : ಕಿಸಾನ್ ಹೌಸ್, ಪಡು  ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 23/01/2023 ರಂದು  ಕಾಪು ಪೇಟೆಯಿಂದ ತನ್ನ ಮೋಟಾರು ಸೈಕಲ್‌ನಲ್ಲಿ  ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು ಉಡುಪಿಯ  ಸರ್ವಿಸ್  ರಸ್ತೆಯಲ್ಲಿ ಮನೆಗೆ ಹೋಗುತ್ತಿರುವಾಗ ಎಸ್‌.ಬಿ.ಐ ಬ್ಯಾಂಕ್ ಬಳಿ ತಲುಪುತ್ತಿದ್ದಂತೆ 19:15 ಗಂಟೆಗೆ ಪಿರ್ಯಾದಿದಾರರ ಎದುರಿನಲ್ಲಿ KA-21-Z-5805 ನೇ ನಂಬ್ರದ ಕಾರಿನ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಓವರ್‌ಟೆಕ್ ಮಾಡುತ್ತಾ ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಹೋಗಿ, ಅದೇ ರಸ್ತೆಯಲ್ಲಿ ಉಡುಪಿ ಕಡೆಯಿಂದ ಕಾಪು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ ರವಿಂದ್ರ ಎಮ್‌. ರವರ  KA-20-EP- 9820 ನೇ ನಂಬ್ರ ಮೋಟಾರು ಸೈಕಲ್‌ನ ಬಲಬದಿಗೆ ಢಿಕ್ಕಿ ಹೊಡೆದ ಪರಿಣಾಮ ರವೀಂದ್ರ ಎಮ್. ರವರು ಮೋಟಾರು ಸೈಕಲ್‌ಸಮೇತ ರಸ್ತೆಗೆ ಬಿದ್ದಿದ್ದು, ಕೂಡಲೇ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ರವೀಂದ್ರ ಎಮ್‌ರವರನ್ನು ಉಪಚರಿಸಿ ನೋಡಲಾಗಿ ಅವರ ಬಲಕಾಲಿಗೆ ತೀವೃ ಜಖಂ, ಎದೆಗೆ ಗುದ್ದಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಸಾರ್ವಜನಿಕರ ಸಹಾಯದಿಂದ ಅಂಬುಲೇನ್ಸ್ ವಾಹನದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು  ಹೋಗಿ ಬಳಿಕ ಹೆಚ್ಚಿ ನ ಚಿಕಿತ್ಸೆಯ ಬಗ್ಗೆ ಉಡುಪಿ  ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ಅಲ್ಲಿನ ವೈದ್ಯರು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 12/2023 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ 22/01/2023 ರಂದು ಪಿರ್ಯಾದಿದಾರರಾದ ಕೃಷ್ಣ  (35), ತಂದೆ: ಗೋವಿಂದ ,  ವಾಸ: ಶ್ರೀ  ಅಮ್ಮ  ನಿಲಯ ಹನೆಹಳ್ಳಿ  ಗ್ರಾಮ  ಬ್ರಹ್ಮಾವರ ತಾಲೂಕು ಇವರ ಹೆಂಡತಿಯ  ತಮ್ಮ  ಚೇತನ್‌  ಕುಮಾರ್‌   ಕಚ್ಚೂರು ಜಾತ್ರೆಯ ಬಗ್ಗೆ  ತನ್ನ ತಾಯಿಯಾದ ಕುಸುಮ ರವರೊಂದಿಗೆ  ಮೋಟಾರು ಸೈಕಲಿನಲ್ಲಿ  ಬರುವುದಾಗಿ  ತಿಳಿಸಿದ್ದು.  ಈ ಬಗ್ಗೆ    ನೀವು  ಬ್ರಹ್ಮಾವರಕ್ಕೆ  ಬನ್ನಿ  ಒಟ್ಟಿಗೆ ಹೊಗುವ ಎಂದು  ಹೇಳಿದಂತೆ  ಪಿರ್ಯಾದಿದಾರರು  ತನ್ನ KA-20-EE-3030 ನೇ ಮೊಟಾರು  ಸೈಕಲಿನಲ್ಲಿ  ಹಾಗೂ  ಚೇತನ್‌ ಕುಮಾರ್‌  ಅವರ ಮೊಟಾರು  ಸೈಕಲಿನಲ್ಲಿ  ಆತನ ತಾಯಿಯನ್ನು  ಕುಳ್ಳಿರಿಸಿಕೊಂಡು ಬ್ರಹ್ಮಾವರದಿಂದ  ಕಚ್ಚೂರು ಕಡೆಗೆ ಹೋಗಲು ಮೋಟಾರು ಸೈಕಲನ್ನು  ಚಲಾಯಿಸಿಕೊಂಡು ಬ್ರಹ್ಮಾವರ-ಸಾಯಿಬರ ಕಟ್ಟೆ  ರಸ್ತೆಯಲ್ಲಿ  ಚಲಾಯಿಸಿಕೊಂಡು ಬರುತ್ತಾ ಹಂದಾಡಿ ಗ್ರಾಮದ ಬಾರ್ಕೂರು ಸೇತುವೆ  ತಿರುವು  ಕ್ರಾಸ್ ಸಮೀಪ ತಲುಪುವಾಗ ಮಧ್ಯಾಹ್ನ 3:50 ಗಂಟೆಗೆ ಅವರ ಮುಂಭಾಗದಲ್ಲಿ ಕಚ್ಚೂರು ಕಡೆಗೆ  ಹೋಗುತ್ತಿದ್ದ ಆರೋಪಿ ಚೇತನ್‌  ಕುಮಾರ್‌ ರವರು ಅವರ ನೊಂದಣಿಯಿಲ್ಲದ ಹೊಸ ಬಜಾಜ್‌ ಮೋಟಾರು  ಸೈಕಲನ್ನು   ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಹೋಗಿ  ಬಾರ್ಕೂರು ಸೇತುವೆಯ ಬ್ರಹ್ಮಾವರ-ಸಾಯಿಬರಕಟ್ಟೆಯ ರಸ್ತೆಯ ತಿರುವಿನಲ್ಲಿ ಒಂದೇ ಸಮನೆ ಏಕಾಎಕಿ ಓಮ್ಮಲೆ ಬ್ರೇಕ್‌ ಹಾಕಿದ ಪರಿಣಾಮ  ಮೋಟಾರು ಸೈಕಲ್‌ ಸಮೇತ ಹಿಂಬದಿ ಸವಾರಿಯೊಂದಿಗೆ ರಸ್ತೆಗೆ  ಬಿದ್ದು, ಹಿಂಬದಿ ಸವಾರೆ ಕುಸುಮ ರವರ ತಲೆಗೆ ಮತ್ತು ಕೈಕಾಲುಗಳಿಗೆ ರಕ್ತಗಾಯ ಉಂಟಾಗಿ ಚೇತನರವರಿಗೆ  ತರುಚಿದ ಗಾಯ ಉಂಟಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 10/2023  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .    

ಕಳವು ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ಸುಧಾಕರ ಸೆರೆಗಾರ್ (51), ತಂದೆ:  ಸೀತಾರಾಮ ಸೆರೆಗಾರ್, ವಾಸ: ಮನೆ ನಂಬ್ರ 140, ಹಿಲ್ಕೋಮೆ ಮನೆ, ಜಫ್ತಿ ಗ್ರಾಮ ಕುಂದಾಪುರ ತಾಲುಕು ಉಡುಪಿ ಜಿಲ್ಲೆ ಇವರು SSO KARNATAKA CITIZEN CENTRIC PORTAL APPLICATION ನಲ್ಲಿ ದಾಖಲಿಸಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿದಾರರರು ಸುಜುಕಿ ಎಕ್ಸೆಸ್ 125 ಕಂಪನಿಯ KA-01-EL-7572 ನೇ ನೊಂದಣಿ ಸ್ಕೂಟರ್ ನ ಮಾಲೀಕರಾಗಿದ್ದು ವಾಹನವನ್ನು ದಿನಾಂಕ 20/01/2023 ರಂದು ಪಿರ್ಯಾದಿದಾರರು ಕೆಲಸದ ನಿಮಿತ್ತ ಹಾವೇರಿಗೆ  ತೆರಳುವವರು ಮದ್ಯಾಹ್ನ 14:30 ಗಂಟೆಗೆ ಕುಂದಾಪುರ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ  ಸ್ಕೂಟರನ್ನು ನಿಲ್ಲಿಸಿ ಹೋದವರು  ದಿನಾಂಕ 21/01/2023 ರಂದು ರಾತ್ರಿ 23:00 ಗಂಟೆಗೆ ವಾಪಸ್ಸು ಬಂದು  ಸ್ಕೂಟರನ್ನು  ನಿಲ್ಲಿಸಿದ ಸ್ಥಳದಲ್ಲಿ ನೋಡಿದಾಗ ವಾಹನವು ಸ್ಥಳದಲ್ಲಿ ಇರದೆ ಇದ್ದು ನಂತರದಲ್ಲಿ ಸ್ಕೂಟರ್ ನಿಲ್ಲಿಸಿದ ಸ್ಥಳದ ಸುತ್ತ ಮುತ್ತಲು ಮತ್ತು ಎಲ್ಲಾಕಡೆಯು ಹುಡುಕಾಡಿದರು ಪತ್ತೆಯಾಗಿರುವುದಿಲ್ಲ.  ವಾಹನವನ್ನು ಯಾರೊ ಕಳ್ಳರು ಕಳುವು ಮಾಡಿಕೊಂಡು ಹೊಗಿರುವ ಸಾದ್ಯತೆ ಇದ್ದು ಅದರ ಮೌಲ್ಯ 30,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 08/2023 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಅಸ್ವಾಭಾವಿಕ ಮರಣ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಉದಯ (32), ತಂದೆ: ಸುಬ್ರಾಯ, ವಾಸ: ಕುಂಬ್ರಿಕಾ, ಮುಳುಗುಡ್ಡೆ ಗ್ರಾಮ ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ ಇವರ ತಮ್ಮ  ಶಶಿಕುಮಾರ (32) ವಿಪರೀತ ಮಧ್ಯಪಾನ ಮಾಡುವ ಸ್ವಭಾವವನ್ನು ಹೊಂದಿದ್ದು ಮದ್ಯಸೇವನೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ದಿನಾಂಕ 23/01/2023 ರಂದು  ಸಂಜೆ 6:30 ಗಂಟೆಯಿಂದ  ರಾತ್ರಿ 1:20 ಗಂಟೆಯ ಮದ್ಯಾವಧಿಯಲ್ಲಿ ತನ್ನ  ನಿರ್ಮಾಣ ಹಂತದಲ್ಲಿರುವ ಮನೆಯ ಮಾಡಿನ ಜಂತಿಗೆ ನೈಲಾನ್ ಹಗ್ಗವನ್ನು ಕಟ್ಟಿ  ಕುತ್ತಿಗೆಗೆ ನೇಣು ಬಿಗಿದುಕೊಂಡವರನ್ನು ಹೆಂಡತಿ ಶೋಬಾ ರವರು ಮನೆಯವರ ಸಹಾಯದಿಂದ ನೇಣಿನಿಂದ ಬಿಡಿಸಿ  ಚಿಕಿತ್ಸೆ ಬಗ್ಗೆ  ಬೈಂದೂರು ಸರಕಾರಿ ಆಸ್ಪತ್ರೆಗೆ  ಕರೆ ತಂದಲ್ಲಿ ವೈದ್ಯರು ಪರೀಕ್ಷಿಸಿ ಶಶಿಕುಮಾರ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.   ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 04/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  

 

ಇತ್ತೀಚಿನ ನವೀಕರಣ​ : 25-01-2023 09:49 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080