ಅಭಿಪ್ರಾಯ / ಸಲಹೆಗಳು

ಮಾಧಕ ವಸ್ತು ಸೇವನೆ ಪ್ರಕರಣ

  • ಕುಂದಾಫುರ: ದಿನಾಂಕ 24/01/2023 ರಂದು ಪಿರ್ಯಾದಿದಾರರಾದ ಸದಾಶಿವ ಆರ್ ಗವರೋಜಿ  ಪಿಎಸ್ಐ (L&O) ಕುಂದಾಪುರ ಪೊಲೀಸ್ ಠಾಣೆ ಇವರು ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪು ನಂಬ್ರ ಕೆಎ 20 ಜಿ 263 ನೇದರಲ್ಲಿ ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ ಕರ್ತವ್ಯದಲ್ಲಿರುವ ಸಮಯ ಬಾತ್ಮೀದಾರರೊಬ್ಬರು ಕರೆ ಮಾಡಿ ಕೊಟೇಶ್ವರ ಗ್ರಾಮದ ಕಿನಾರಾ ಜಂಕ್ಷನ್ ಬಳಿ ಗಾಂಜಾ ಸೇವನೆ  ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದು ಅದರಂತೆ, ಪಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ 20:30 ಗಂಟೆಗೆ ಸ್ಥಳಕ್ಕೆ ತೆರಳಿ ನೋಡಿದಾಗ ಅಲ್ಲಿ ಓರ್ವ ವ್ಯಕ್ತಿ ತೂರಾಡಿಕೊಂಡು ಅಮಲಿನಲ್ಲಿರುವುದು ಕಂಡುಬಂದಿದ್ದು, ಸುದರ್ಶನ (21) ತಂದೆ: ಗಣೇಶ್ ವಾಸ: ಹೌಸ್ ನಂಬ್ರ 81/3, ಬೀಜಾಡಿ ಗ್ರಾಮ ಕುಂದಾಪುರ ತಾಲೂಕು ಉಡುಪಿ ಇತನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆ ಬಗ್ಗೆ ಠಾಣಾ ಸಿಬ್ಬಂದಿಯವರ ಮುಖೇನ ಶ್ರೀ ಮಾತಾ  ಆಸ್ಪತ್ರೆ ಕುಂದಾಪುರದ  ವೈದ್ಯಾಧಿಕಾರಿಯವರ  ಮುಂದೆ ಹಾಜರುಪಡಿಸಿದ್ದು, ಇತನನ್ನು  ಪರೀಕ್ಷಿಸಿದ ವೈದ್ಯರು ಇವರು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ ದಿನಾಂಕ 25/01/2023 ರಂದು ವರದಿ ನೀಡಿರುವುದಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 09/2023 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾಧ ಜಯಪಾಲ ಹೆಗ್ಡೆ (40) ಸಂಜೀವ ಹೆಗ್ಡೆ ವಾಸ: ಲಕ್ಷ್ಮೀ ನಿವಾಸ ಸೆಳಂಜೆ ಗ್ರಾಮ ಹೆಬ್ರಿ ತಾಲೂಕು ಉಡುಪಿ ಇವರ ತಮ್ಮನಾದ ರಾಘವೇಂದ್ರ ಹೆಗ್ಡೆ (34) ಇವರು ಮಂಗಳೂರಿನ ಮಹಾನಗರ ಪಾಲಿಕೆಯಲ್ಲಿ ಒಪ್ಪಂದದ ಮೇರೆಗೆ ಕಾರಿನ ಬಾಡಿಗೆ ಕೆಲಸ ಮಾಡಿಕೊಂಡಿದ್ದು ರಜಾ ದಿನಗಳಲ್ಲಿ ಬೇರೆ ಬಾಡಿಗೆ ಮಾಡಿಕೊಂಡಿರುತ್ತಾರೆ, ಅವರಿಗೆ ನಿದ್ದೆ ಬಾರದೆ ಇದ್ದು ಕೆಲವೊಂದು ಬಾರಿ ಮಾನಸಿಕ ಖಿನ್ನತೆಗೆ ಒಳಗಾಗಿರುತ್ತಾರೆ,  ಪಿರ್ಯಾದಿದಾರರಿಗೆ ದಿನಾಂಕ 25/01/2023 ರಂದು ಬೆಳಿಗ್ಗೆ 08:45 ಗಂಟೆಗೆ  ಯಾರೋ ಪೋನ್ ಕರೆ ಮಾಡಿ ನಿಮ್ಮ ತಮ್ಮ ರಾಘವೇಂದ್ರ ಹೆಗ್ಡೆ ಇಂದ್ರಾಳಿ ಲಕ್ಷ್ಮೀನಗರದ ಬಳಿ ಇರುವ ರೈಲ್ವೇ ಹಳಿಯಲ್ಲಿ ರೈಲು ಅಪಘಾತವಾಗಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು ಸ್ಥಳಕ್ಕೆ ಬಂದ ನೋಡಿದಾಗ ಅದು ಅವರ ತಮ್ಮನ ಮೃತ ದೇಹವೆಂದು ಖಚಿತ ಪಡಿಸಿದ್ದು ಸ್ಥಳಿಯರಲ್ಲಿ ವಿಚಾರಿಸಲಾಗಿ  ಸದ್ರಿ ಘಟನೆಯು ದಿನಾಂಕ 25/01/2023 ರಂದು ಬೆಳಿಗ್ಗೆ ಸುಮಾರು 06:20 ಗಂಟೆಗೆ  ಸಂಭವಿಸಿರಹುದು ಎಂದು ತಿಳಿಸಿರುತ್ತಾರೆ, ಪಿರ್ಯಾದಿದಾರರ ತಮ್ಮನಾದ ರಾಘವೆಂದ್ರ ಹೆಗ್ಡೆ ರವರು ದಿನಾಂಕ 25/01/2023 ರಂದು ಸುಮಾರು 06:20 ಗಂಟೆಗೆ ರೈಲು ಅಪಘಾತದಿಂದಲೋ ಅಥವಾ ಬೇರೆ ಯಾವುದೋ ರೀತಿಯಲ್ಲಿ ಮೃತಪಟ್ಟಿರಬುಹುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 03/2023 ಕಲಂ: 174(3)(iv) ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಶಶಿಕಾಂತ  ದೇವಾಡಿಗ (27) ತಂದೆ: ಸುಬ್ಬ ದೇವಾಡಿಗ ವಾಸ: ಬಸವನ ಕೆರೆ, ಪಡುವರಿ ಗ್ರಾಮ, ಬೈಂದೂರು ಇವರ ಮಾವನಾದ ರಾಮ ದೇವಾಡಿಗ  (70) ರವರು ದಿನಾಂಕ 21/01/2023 ರಂದು ಬೆಳಿಗ್ಗೆ 9:00 ಗಂಟೆಗೆ ನಾಗೂರಿನ ತನ್ನ ಹೆಂಡತಿ ಮನೆಯಿಂದ  ಗದ್ದೆಗೆ ಕ್ರಿಮಿನಾಶಕ ಸಿಂಪಡಿಸುವರೆ ನಡೆದುಕೊಂಡು ಹೋಗುತ್ತಿರುವಾಗ  ಗೇರು ಮರದ  ಕೊಂಬೆ ತುಂಡಾಗಿ  ತಲೆಯ ಮೇಲೆ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಅವರ ಮಗ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ  ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ ಮೇರೆಗೆ  ರಾಮದೇವಾಡಿಗ ರವರನ್ನು  ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ  ಒಳರೋಗಿಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದು  ನಿನ್ನೆ ದಿನಾಂಕ 24/01/2023  ರಂದು  ರಾಮ ದೇವಾಡಿಗ ರವರು ಚಿಕಿತ್ಸೆ  ಸ್ಪಂದಿಸದೇ ಇರುವ ಕಾರಣ ವೈದ್ಯರು  ರಾಮ ದೇವಾಡಿಗ ರವರನ್ನು ಮನೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದು ಶಶಿಕಾಂತ  ದೇವಾಡಿಗ ರವರು ಮತ್ತು ಮನೆಯವರು  ರಾಮ ದೇವಾಡಿಗರನ್ನು ಕೆಎಂ ಸಿ ಆಸ್ಪತ್ರೆಯಿಂದ  ಬಿಡುಗಡೆಗೊಳಿಸಿ  ಉಡುಪಿ ಜಿಲ್ಲಾ ಆಸ್ಪತ್ರೆಗೆ  ಸಂಜೆ  5;30  ಗಂಟೆಗೆ ಕರೆ ತಂದು ಒಳ ರೋಗಿಯಾಗಿ ದಾಖಲಿಸಿದ್ದು  ರಾಮ ದೇವಾಡಿಗ ರವರು ಚಿಕಿತ್ಸೆಯಲ್ಲಿರುತ್ತಾ ದಿನಾಂಕ 25/01/2023  ರಂದು ಮಧ್ಯಾಹ್ನ  12;00 ಗಂಟೆಗೆ  ಚಿಕಿತ್ಸೆ  ಫಲಕಾರಿಯಾಗದೇ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 05/2023 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-01-2023 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080