ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 23/01/2022 ರಂದು ಸಂಜೆ 7:00 ಗಂಟೆಗೆ ಕುಂದಾಪುರ ತಾಲೂಕಿನ,  ಕರ್ಕುಂಜಿ ಗ್ರಾಮದ ನೇರಳಕಟ್ಟೆಯ ಆಜ್ರಿ ರಸ್ತೆಯಲ್ಲಿ, ಆಪಾದಿತ ಶೈಥಿಲ್ಯಾ  KA-20-ED-0813ನೇ  TVS MAX  ಬೈಕಿನಲ್ಲಿ   ತಂದೆ ಮಂಜುನಾಥ ಆಚಾರಿಯವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು  ಕಮಲಶಿಲೆಯಿಂದ  ಕಟ್‌ಬೇಲ್ತೂರಿಗೆ  ಆಜ್ರಿ- ನೇರಳಕಟ್ಟೆ  ರಸ್ತೆಯಲ್ಲಿ  ಅತೀವೇಗ ಹಾಗೂ  ನಿರ್ಲಕ್ಷ್ಯತನದಿಂದ  ಸವಾರಿ ಮಾಡಿಸಿಕೊಂಡು ಬಂದು, ಆಗಲವಾದ ರಸ್ತೆಯಿಂದ ನೇರಳಕಟ್ಟೆ ರಸ್ತೆಗೆ ತಿರುಗಿಸಿ ಒಮ್ಮೆಲೆ ಬ್ರೇಕ್‌ ಹಾಕಿದ ಪರಿಣಾಮ ಬೈಕ್‌ ಸ್ಕಿಡ್‌ ಆಗಿ  ರಸ್ತೆಗೆ ಬಿದ್ದು ಪಿರ್ಯಾದಿದಾರರಾದ ಮಂಜುನಾಥ  ಆಚಾರಿ (50), ತಂದೆ:  ನಾಗಪ್ಪ ಆಚಾರಿ, ವಾಸ: ಶ್ರೀ ಭದ್ರಮಹಾಕಾಳಿ ದೇವಸ್ಥಾನ ರಸ್ತೆ, ಕಟ್‌ ಬೇಲ್ತೂರು ಗ್ರಾಮ, ಕುಂದಾಪುರ ಇವರ ಎಡಭುಜಕ್ಕೆ ಒಳನೋವು ಹಾಗೂ ಹಣೆ, ಕೈಕಾಲುಗಳಿಗೆ  ತರಚಿದ ಗಾಯ, ಆಪಾದಿತನಿಗೆ ಎಡಕಾಲಿನ ಮುಂಗಾಲು ಗಂಟಿಗೆ ಹಾಗೂ ಬಲಭುಜಕ್ಕೆ ಒಳನೋವಾಗಿ,   ಪಿರ್ಯಾದಿದಾರರು ಕುಂದಾಪುರ  ಚಿನ್ಮಯಿ   ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿರುತ್ತಾರೆ ಹಾಗೂ ಆಪಾದಿತನು ಹೊರ ರೋಗಿಯಾಗಿ  ಚಿಕಿತ್ಸೆ ಪಡೆದಿರುತ್ತಾನೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ದಿನಾಂಕ 24/01/2022 ರಂದು ಪಿರ್ಯಾದಿದಾರರಾದ ರೆನಿ ಜೊಸೆಫ್ (18), ತಂದೆ: ಜಾಯ್ ಥೋಮಸ್, ವಾಸ: ನೆಲಮಹಡಿ, ಬಾಯ್ಸ್ ಹಾಸ್ಟೆಲ್, ಇಂದಿರಾ ನಗರ, 80 ನೇ ಬಡಗಬೆಟ್ಟು ಗ್ರಾಮ, ಉಡುಪಿ ತಾಲೂಕು ಇವರು ಸ್ನೇಹಿತರೊಂದಿಗೆ ಆಗುಂಬೆಗೆ ಅವರವರ ಮೋಟಾರು ಸೈಕಲಿನಲ್ಲಿ ಹೊರಟಿದ್ದು, ಪಿರ್ಯಾದಿದಾರರು ಬಾಡಿಗೆಗೆ ಪಡೆದ KA-20-ES-0117ನೇ WEGO ಸ್ಕೂಟಿಯಲ್ಲಿ ತನ್ನ ಸ್ನೇಹಿತ ಫೆಬಿನ್ ಸವಾರನಾಗಿ ಪಿರ್ಯಾದಿದಾರರು ಸಹ ಸವಾರರಾಗಿ ಆಗುಂಬೆಗೆ ಹೋಗಿ ವಾಪಾಸ್ಸು ಮಣಿಪಾಲಕ್ಕೆ ರಾಷ್ಟ್ರೀಯ ಹೆದ್ದಾರಿ 169 ಎ ರಲ್ಲಿ ಬೊಮ್ಮರಬೆಟ್ಟು ಗ್ರಾಮದ ಪುತ್ತಿಗೆ ಎಂಬಲ್ಲಿ ಬರುತ್ತಿದ್ದಾಗ ಸಂಜೆ 4:30 ಗಂಟೆಯ ವೇಳೆಗೆ ಎದುರಿನಿಂದ ಅಂದರೆ ಹಿರಿಯಡ್ಕ ಕಡೆಯಿಂದ ಲಾರಿ ನಂಬ್ರ KA-20-AA-3260 ನೇದನ್ನು ಅದ ಚಾಲಕ ಶೀನ ಶೆಟ್ಟಿ ಎಂಬುವವರು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಎದುರಿನಿಂದ ಹೋಗುತ್ತಿದ್ದ ವಾಹನವನ್ನು ಹಿಂದಿಕ್ಕುವ ಭರದಲ್ಲಿ ರಸ್ತೆಯ ತೀರಾ ಬಲಭಾಗಕ್ಕೆ ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡಿದ್ದ ಸ್ಕೂಟಿಗೆ ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯ ಸವಾರ ಹಾಗೂ ಪಿರ್ಯಾದಿದಾರರು ಸ್ಕೂಟಿ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ರಕ್ತಗಾಯವಾಗಿದ್ದು, ಬಲಕೆನ್ನೆಗೆ, ಕೈಗೆ ತರಚಿದ ಗಾಯವಾಗಿರುತ್ತದೆ. ಸವಾರ ಪೆಬಿನ್ ರವರಿಗೆ ತಲೆಗೆ ರಕ್ತಗಾಯವಾಗಿದ್ದು, ಗಾಯಗೊಂಡ ಪಿರ್ಯಾದಿದಾರರು ಹಾಗೂ ಪೆಬಿನ್ ರವರು ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 01/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 24/01/2022 ರಂದು KA-19-MH-1242 ನೇ ಕಾರು  ಚಾಲಕ  ರಾಧಕೃಷ್ಣ   ತನ್ನ  ಕಾರನ್ನು  ಅಂಬಲಪಾಡಿ  ಕಡೆಯಿಂದ  ಬಲಾಯಿಪಾದೆ  ಕಡೆಗೆ  ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಚಲಾಯಿಸಿಕೊಂಡು  ಬಂದು 15:45 ಗಂಟೆಗೆ ಬಲಾಯಿಪಾದೆ  ಬಳಿ  ಇರುವ  ಸಾಗರ ಎಎಂ  ಕಾರ್  ವರ್ಕ್ಸ್ ಎದುರು ದುಡುಕುತನ  ಮತ್ತು ನಿರ್ಲಕ್ಷ್ಯತನದಿಂದ  ತೀರಾ  ಎಡ ಬದಿಗೆ  ಚಲಾಯಿಸಿ ರಾಷ್ಟ್ರೀಯ  ಹೆದ್ದಾರಿ  ಬದಿಯ ಮಣ್ಣು  ರಸ್ತೆಯಲ್ಲಿ  ನಿಲ್ಲಿಸಿದ್ದ KA-20-AB-0189  ನೇ  ಇನ್ಸುಲೇಟರ್  ಬುಲೇರೋ ಪಿಕಪ್  ವಾಹನದ  ಹಿಂಬಾಗಕ್ಕೆ  ಡಿಕ್ಕಿ ಹೊಡೆದ  ಪರಿಣಾಮ KA-19-MH-1242 ನೇ ಕಾರಿನ  ಮುಂಬಾಗ ಮತ್ತು  KA-20-AB-0189  ನೇ  ಇನ್ಸುಲೇಟರ್  ಬುಲೇರೋ ಪಿಕಪ್  ವಾಹನದ ಹಿಂಬಾಗ  ಜಖಂಗೊಂಡು  KA-19-MH  1242 ನೇ ಕಾರು  ಚಾಲಕ  ರಾಧಕೃಷ್ಣ   ರ ವರ  ತಲೆಗೆ  ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 07/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ  

  • ಕಾರ್ಕಳ: ದಿನಾಂಕ 24/01/2022 ರಂದು ಬೆಳಿಗ್ಗೆ  11:00 ಗಂಟೆಗೆ  ಮನೆಯಲ್ಲಿರುವಾಗ ಪರಿಚಯಸ್ಥ ರಾದ  ಯಶವಂತರವರು ಕರೆ ಮಾಡಿ ತನ್ನ ಅಂಗಡಿಯ ಎದುರಿನ ಹಾಡಿಯಲ್ಲಿ ಕೆಟ್ಟ ವಾಸನೆ ಬರುತಿದ್ದು ಹೋಗಿ ನೋಡಿದಾಗ ಯಾರೋ ಒಬ್ಬ ಗಂಡಸು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿರುವುದಾಗಿ ತಿಳಿಸಿದ್ದು ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಿದಾಗ ಕುಕ್ಕುಂದೂರು ಗ್ರಾಮದ ನೆಲ್ಲಿಗುಡ್ಡೆ ವಿವೇಕಾನಂದ ನಗರದ ಸಾರ್ವಜನಿಕ ಹಾಡಿಯಲ್ಲಿ  ಸುಮಾರು 45 ರಿಂದ 50 ವರ್ಷ ಪ್ರಾಯದ ಗಂಡಸು  ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿರುತ್ತಾರೆ. ಯಾರೋ ಅಪರಿಚಿತ ವ್ಯಕ್ತಿ ಯಾವುದೋ  ಕಾರಣದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾದ ಗಣೇಶ್ ನಾಯ್ಕ (43), ತಂದೆ: ಕೂಸ ನಾಯ್ಕ, ವಾಸ: ಕರ್ಜೆ, ಕಂಪ, ಹೊಸೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ಗಾರೆ ಕೆಲಸಕ್ಕೆಂದು ದಿನಾಂಕ 24/01/2022 ರಂದು  ಬ್ರಹ್ಮಾವರ  ತಾಲೂಕು ಚೇರ್ಕಾಡಿ ಗ್ರಾಮದ ನಿಲ್ಸಕಲ್‌ ಎಂಬಲ್ಲಿರುವ ರಮಾನಂದ ಠಾಕೂರ್ ರವರ ಮನೆಗೆ ಹೋಗಿದ್ದಾಗ, ಅವರ ಮನೆಯ  ತರಕಾರಿ ಗದ್ದೆಯ ಕೃಷಿ ಕೆಲಸ ಮಾಡಲು ಬಂದಿದ್ದ ಪಾಂಡು ನಾಯ್ಕ (55) ಎಂಬುವವರು ಗದ್ದೆಯಲ್ಲಿ ಕೆಲಸ ಮುಗಿಸಿಕೊಂಡು  ಮಧ್ಯಾಹ್ನ  2:30 ಗಂಟೆಯ ಸಮಯಕ್ಕೆ ಕೈ-ಕಾಲು ತೊಳೆಯಲು ಅಲ್ಲೇ ಹತ್ತಿರ ಇರುವ ಸರಕಾರಿ ಮದಗಕ್ಕೆ  ಇಳಿದಾಗ ಕಾಲು ಜಾರಿ ಮದಗದಲ್ಲಿ ಆಕಸ್ಮಿಕವಾಗಿ ಬಿದ್ದು, ಮದಗದ ಕೆಸರಿನಿಂದ ಮೇಲಕ್ಕೆ ಬರಲಾಗದೆ, ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 04/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ನಾಗೇಶ್ ಶೇರಿಗಾರ್ (52), ತಂದೆ: ವಾಸುದೇವ ಶೇರಿಗಾರ್, ವಾಸ: ವಾಸುಪದ್ಮನಿಲಯ, ನೇರಂಬಳ್ಳಿ, ಹಂಗಳೂರು ಗ್ರಾಮ, ಕುಂದಾಪುರ ತಾಲೂಕು ಇವರು ಕುಂದಾಪುರದ ಹರಿಪ್ರಸಾದ್ ಲಾಡ್ಜ್ ನ  ಮ್ಯಾನೇಜರ್ ಆಗಿದ್ದು ದಿನಾಂಕ 22/01/-2022 ರಂದು 18:40 ಗಂಟೆಗೆ ಶೋಭರಾಜ್ (22) ರವರು ಲಾಡ್ಜ್ ಗೆ ಬಂದು ರೂಮ್ ಬಾಡಿಗೆಗೆ ಕೇಳಿದ್ದು ಅದರಂತೆ ವ್ಯಕ್ತಿಗೆ ರೂಮ್ ನೀಡಿರುತ್ತಾರೆ. ದಿನಾಂಕ 24/01/2022 ರಂದು 12:00 ಗಂಟೆಗೆ ಆತನಿಗೆ ನೀಡಲಾಗಿದ್ದ ಕೊಠಡಿಯ ಬಳಿ ಹೋಗಿ ಕರೆಯಲಾಗಿ ಯಾವುದೇ ಉತ್ತರ ಬಾರದೇ ಇದ್ದು  ಬಾಗಿಲು ಒಡೆದು ನೋಡಲಾಗಿ ಶೋಭರಾಜನ ಮೃತದೇಹವು  ರೂಮಿನ ಸೀಲಿಂಗ್ ಫ್ಯಾನ್ ಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡುಬಂದಿರುತ್ತದೆ. ಶೋಭರಾಜನು ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ  22/01/2022 ರಂದು 18:40 ಗಂಟೆಯಿಂದ ದಿನಾಂಕ 24/01/2022 ರಂದು 12:00 ಗಂಟೆಯ ನಡುವಿನ ಅವಧಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 01/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಶಶಿಕಲಾ (52), ಗಂಡ: ನೇಮು ಪೂಜಾರಿ, ವಾಸ: ಗಾಂದ್ಯೊಟ್ಟು ಹೊಸ ಮನೆ, ಹೊಸ್ಮಾರು ಅಸಂಚೆ, ಈದು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ವಾಸ್ತವ್ಯದ ಮನೆಯ ಎದುರುಗಡೆ ಹೊರಗಡೆ ಕಟ್ಟಿ ಹಾಕಿದ್ದ 4 ಜೆರ್ಸಿ ದನ ಹಾಗೂ 1 ಹೆಣ್ಣು ಕರುವಿನ ಪೈಕಿ, ಕೆಂಪು ಬಣ್ಣದ ಜರ್ಸಿ ದನ-1, ಹಣೆಯ ಮೇಲೆ ಬಿಳಿ ಬಣ್ಣದ ಬೊಟ್ಟು ಇರುವ ದನ-1 ಹಾಗೂ ಕಂದು ಬಣ್ಣದ ದನ-1, ಸೇರಿ ಒಟ್ಟು 3 ಜೆರ್ಸಿ ದನಗಳನ್ನು ಯಾರೋ ಕಳ್ಳರು ದಿನಾಂಕ 23/01/2022 ರಂದು ರಾತ್ರಿ 9:00 ಗಂಟೆಯಿಂದ ದಿನಾಂಕ 24/01/2022 ರಂದು ಬೆಳಗ್ಗಿನ ಜಾವ 6:15 ಗಂಟೆಯ ಮಧ್ಯೆ ಅವುಗಳಿಗೆ ಕಟ್ಟಿದ ಹಗ್ಗವನ್ನು ಬಿಚ್ಚಿ ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಜೆರ್ಸಿ ದನಗಳ ಮೌಲ್ಯ ಒಟ್ಟು 45,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಮಟ್ಕಾ ಜುಗಾರಿ ಪ್ರಕರಣ

  • ಉಡುಪಿ: ದಿನಾಂಕ 24/01/2022 ರಂದು ಪ್ರಮೋದ್‌ ಕುಮಾರ್‌.ಪಿ, ಪೊಲೀಸ್‌ ನಿರೀಕ್ಷಕರು, ಉಡುಪಿ ನಗರ ಪೊಲೀಸ್‌ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ ಚಿಟ್ಪಾಡಿ ಬೀಡಿನಗುಡ್ಡೆ ಜಂಕ್ಷನ್ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ ಮಾಹಿತಿ ದೊರೆತ ಮೇರೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ದೀಕ್ಷೀತ್ ಪೂಜಾರಿ (26) ತಂದೆ: ದಿ. ಜಯಕರ ಪೂಜಾರಿ,  ವಾಸ : ಹನುಮಂತ ನಗರದ ಸಹೋದರ ಯುವಕ ಮಂಡಲ ಬಳಿ, ಪುತ್ತೂರು ಗ್ರಾಮ, ಉಡುಪಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಕಮೀಷನ್ ಹಣಕೋಸ್ಕರ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿದ್ದು, ತಾನು ಸಂಗ್ರಹಿಸುತ್ತಿದ್ದ ಹಣವನ್ನು 2ನೇ ಆಪಾದಿತ ದಿನೇಶ್ ಎಂಬವರಿಗೆ, ಅವರಿಂದ ಆಪಾದಿತರಾದ 3) ಶ್ರೀಮತಿ ಗ್ರೇಟ್ಟಾ ಬಾಯಿ ಗಂಡ: ಲಿಯೋ, 4) ಲಿಯೋ, ಉಡುಪಿ ಇವರಿಗೆ ಕೊಡುತ್ತಿರುವುದಾಗಿ ತಿಳಿಸಿದ್ದು, ಆಪಾದಿತನ  ವಶದಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ರೂಪಾಯಿ 1,400/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ- 1, ಬಾಲ್ ಪೆನ್ ಮತ್ತು 3 ಮೊಬೈಲ್ ಪೋನ್ ಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2022 ಕಲಂ: 78 (i) (iii) Karnataka Police (Amendment)  ACT-2021  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 24/01/2022 ರಂದು ಪ್ರಮೋದ್‌ ಕುಮಾರ್‌.ಪಿ, ಪೊಲೀಸ್‌ ನಿರೀಕ್ಷಕರು, ಉಡುಪಿ ನಗರ ಪೊಲೀಸ್‌ ಠಾಣೆ  ಇವರಿಗೆ ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ ಚಿಟ್ಪಾಡಿಯ ಐಟಿಐ ಕಾಲೇಜು ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ ಮಾಹಿತಿ ದೊರೆತ ಮೇರೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಅಶೋಕ ಪಡಿಯಾರ್ (59) ತಂದೆ: ದಿ. ಶ್ರೀನಿವಾಸ ಪಡಿಯಾರ, ವಾಸ : 2-ಬಿ-58 ಇಂದಿರಾ ನಗರ 3ನೇ ಕ್ರಾಸ್, ಕುಕ್ಕಿಕಟ್ಟೆ ಅಂಚೆ, 76 ಬಡಗುಬೆಟ್ಟು ಗ್ರಾಮ, ಉಡುಪಿ ತಾಲೂಕು  ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಕಮೀಷನ್‌ ಹಣಕೋಸ್ಕರ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿದ್ದು, ತಾನು ಸಂಗ್ರಹಿಸುತ್ತಿದ್ದ ಹಣವನ್ನು 2ನೇ ಆಪಾದಿತ ದಿನೇಶ ಎಂಬವರಿಗೆ, ಅವರಿಂದ ಆಪಾದಿತರಾದ 3) ಶ್ರೀಮತಿ ಗ್ರೇಟ್ಟಾ ಬಾಯಿ ಗಂಡ: ಲಿಯೋ, 4) ಲಿಯೋ, ಉಡುಪಿ ಇವರಿಗೆ ಕೊಡುತ್ತಿರುವುದಾಗಿ ತಿಳಿಸಿದ್ದು, ಆಪಾದಿತನ ವಶದಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ರೂಪಾಯಿ 1,200/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ- 1, ಬಾಲ್‌ಪೆನ್‌ ಮತ್ತು 1 ಮೊಬೈಲ್‌ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 12/2022 ಕಲಂ: 78 (i) (iii) Karnataka Police (Amendment)  ACT-2021 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-01-2022 09:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080