ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಸಾಗರ್ ಎಸ್ ಪಿ (27), ತಂದೆ: ಶೇಖರ್ ಎಮ್  ಪೂಜಾರಿ, ವಾಸ: ಮನೆ ನಂ 2-137/17, ಕುಕ್ಕೆಶ್ರೀ ಹೌಸ್, ಗುರುನಗರ, ರಕ್ತೇಶ್ವರಿ ದೇವಸ್ಥಾನದ ಹತ್ತಿರ, ಗ್ರಾಮ,ಮೇರಿಹಿಲ್ ಮಂಗಳೂರು ಕೊಂಚಾಡಿ ಪೋಸ್ಟ್, ಮಂಗಳೂರು ಇವರು  ದಿನಾಂಕ 21/12/2022 ರಂದು ಮಧ್ಯಾಹ್ನದ ವೇಳೆಗೆ ತನ್ನ ತಂದೆಯ KA-19-ED-1937 ನೇ ಸ್ಪ್ಲೈಂಡರ್‌ಪ್ರೋ ಮೋಟಾರ್ ಸೈಕಲ್ ನಲ್ಲಿ ತನ್ನ ಸ್ನೇಹಿತ ಅವಿಶ್ ಕ್ರಾಸ್ತಾರವರನ್ನು ಭೇಟಿ ಮಾಡಿ ಬಂಟಕಲ್ ನಿಂದ ಪಂಜಿಮಾರು ಮಾರ್ಗವಾಗಿ ಶಿರ್ವ ಕಡೆಗೆ ಬರುತ್ತಿರುವಾಗ ಶಿರ್ವ  ಗ್ರಾಮದ ಪಂಜಿಮಾರು ಎಂಬಲ್ಲಿರುವ  ಲಕ್ಷ್ಮೀ ಜ್ಯುವೆಲ್ಲರ್ಸ್ ಅಂಗಡಿ ಮಾಲಿಕರ ಮನೆಯ  ಬಳಿ ಹಾದು ಹೋಗಿರುವ  ಸಾರ್ವಜನಿಕ  ಡಾಮಾರು ರಸ್ತೆಯಲ್ಲಿ  ಸಂಜೆ 04:15 ಗಂಟೆಗೆ ತಲುಪುವಾಗ ಹಿಂದುಗಡೆಯಿಂದ ಬಂಟಕಲ್‌ನಿಂದ  ಶಿರ್ವ ಕಡೆಗೆ KA-20-N-9516ನೇ ಕಾರಿನ ಚಾಲಕ ಸಚಿನ್ ಪಯ್ಯಾಡಿರವರು ತನ್ನ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಬೊನೆಟ್‌ಗೆ ಬಿದ್ದು ನಂತರ  ರಸ್ತೆಗೆ ಅಂಗಾತನೆ ಬಿದ್ದು ರಸ್ತೆಯಲ್ಲಿ ಎಳೆದೊಯ್ದದ ಪರಿಣಾಮ  ಪಿರ್ಯಾದಿದಾರರ ಹಿಂದುಗಡೆ ಭುಜದಿಂದ  ಕಾಲಿನವರೆಗೆ ಚರ್ಮ ಜಾರಿ ಹೋಗಿದ್ದು ಬಲಕೈಯ ಅಂಗೈ ಮೇಲೆ ಕಾರಿನ  ಚಕ್ರವು ಹರಿದು  ಬಲ ಕೈ ಅಂಗೈ  ನುಜ್ಜಾಗಿ ತೀವ್ರ ತರಹದ  ಜಖಂ ಆಗಿರುತ್ತದೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 90/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಶಿರ್ವಾ: ಪಿರ್ಯಾದಿದಾರರಾದ ಸದಾನಂದ ಶೆಟ್ಟಿ (68), ತಂದೆ: ದಿ: ಮಾಲಿಂಗ ಶೆಟ್ಟಿ, ವಾಸ:ಮನೆ ನಂ. 6-108, ಪುನಾರು ಮೇಲ್ಮನೆ, ಬೆಳ್ಮಣ್‌ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 22/12/2022 ರಂದು ತನ್ನ  ದ್ವಿ ಚಕ್ರ  ವಾಹನ  ನಂಬ್ರ KA-20-EN-9417 ನೇ  ಹೋಂಡಾ  ಆಕ್ಟಿವಾದಲ್ಲಿ ಶಿರ್ವ ಸೈಂಟ್‌ಮೆರೀಸ್‌ ಸರ್ಕಲ್‌  ಬಳಿ  ಪ್ರಕಾಶ್‌ ಟ್ರೇಡರ್ಸ್‌ ಅಂಗಡಿಗೆ  ಹೋಗಲು ಶಿರ್ವಾ  ಸೈಂಟ್‌ಮೆರೀಸ್‌ ಸರ್ಕಲ್‌ ಬಳಿ  ಬಲಕ್ಕೆ ಇಂಡಿಕೇಟರ್‌ ಹಾಕಿ  ತಿರುಗಿಸುವ ಸಮಯ ಸಂಜೆ  5:00  ಗಂಟೆಗೆ ಕಟಪಾಡಿ-ಶಿರ್ವಾ ಕಡೆಗೆ  ಹಾದು  ಹೋಗಿರುವ ಸಾರ್ವಜನಿಕ  ಡಾಮಾರು  ರಸ್ತೆಯಲ್ಲಿ ಶಿರ್ವ  ಸ್ಟೋರ್ಸ್ ಎಂಬ ಅಂಗಡಿಯ ಎದುರು ಸಾರ್ವಜನಿಕ  ರಸ್ತೆಯಲ್ಲಿ ಕಟಪಾಡಿ  ಕಡೆಯಿಂದ  ಶಿರ್ವ ಕಡೆಗೆ ಟಿಪ್ಪರ್‌ಲಾರಿ ಚಾಲಕನು ತಾನು ಚಲಾಯಿಸಿಕೊಂಡು  ಬರುತ್ತಿದ್ದ ಟಿಪ್ಪರ್‌ಲಾರಿ  ನಂಬ್ರ KA-20-B-9596 ನೇಯದನ್ನು  ಅತೀ  ವೇಗ  ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿದಾರರು  ಸವಾರಿ ಮಾಡಿಕೊಂಡು  ಹೋಗುತ್ತಿದ್ದ KA-20-EN-9417 ನೇ  ದ್ವಿ ಚಕ್ರ ವಾಹನಕ್ಕೆ ಹಿಂಬದಿ  ಎಡ  ಬದಿಗೆ  ಡಿಕ್ಕಿ ಹೊಡೆದ  ಪರಿಣಾಮ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದ  ಪರಿಣಾಮ ಎಡಕಾಲಿನ  ಪಾದದ ಮೇಲ್ಗಡೆ  ಹಾಗೂ ಎಡ ಕೈಯ ಮಣಿಗಂಟಿನ ಬಳಿ ತರಚಿದ  ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 91/2022 ಕಲಂ: 279, 337,  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಎನ್ ಆರ್ ಹೆಗ್ಡೆ (81), ತಂದೆ; ದಿ; ಬಾಬಣ್ಣ ಹೆಗ್ಡೆ, ವಾಸ; ನಂಬ್ರ 603,ಪ್ಲಾಮಾ  ಐಕಾನ್, ಕುಲಶೇಖರ, ಮಂಗಳೂರು ಇವರು ದಿನಾಂಕ 23/12/2022 ರಂದು ಮದ್ಯಾಹ್ನ 3:15 ಗಂಟೆಗೆ KA-01-N-7853 ನೇ ಮಾರುತಿ 800 ಕಾರನ್ನು ನಾರಾವಿಯಿಂದ ಕಾರ್ಕಳ ಕಡೆಗೆ ಚಲಾಯಿಸಿಕೊಂಡು ಪ್ರಯಾಣಿಕರಾಗಿ ಮಗ ಸಂದೀಪ್, ಸೊಸೆ ಪೂಜಾ ಹೆಗ್ಡೆ(42), ಜಯಂತಿ ಹೆಗ್ಡೆ(45) ಹಾಗೂ ಮೊಮ್ಮಗಳು ಧ್ರುವಿ(25) ಎಂಬುವವರೊಂದಿಗೆ ಹೊರಟು ಕಾರ್ಕಳ ತಾಲೂಕು ಮಿಯ್ಯಾರ್ ಗ್ರಾಮದ ಮಿಯ್ಯಾರ್ ಸೇತುವೆ ಬಳಿ ತಲುಪಿದಾಗ ಸಮಯ ಸುಮಾರು ಮಧ್ಯಾಹ್ನ 3:40 ಗಂಟೆಗೆ ಬಜಗೋಳಿ ಕಡೆಯಿಂದ ಕಾರ್ಕಳ ಕಡೆಗೆ KA-17-C-2688 ನೇ ನಂಬ್ರದ ಬಸ್ಸಿನ ಚಾಲಕ ಕುಂಚೂರು ರಮೇಶ್ ತನ್ನ ಬಸ್ಸನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರ್ಕಳದಿಂದ ಬಜಗೋಳಿ ಕಡೆಗೆ ಬರುತ್ತಿದ್ದ MH-02-EE-2088 ನೇ ನಂಬ್ರದ ಕಾರಿಗೆ ಡಿಕ್ಕಿ ಹೊಡೆದು ನಂತರ ಪಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರಿನಲ್ಲಿ  ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರ ಸೊಸೆ ಪೂಜಾ ಹೆಗ್ಡೆ, ಜಯಂತಿ ಹೆಗ್ಡೆ ಎಂಬವರಿಗೆ ತಲೆಗೆ ಗಾಯವಾಗಿದ್ದು, ಹಾಗೂ ಮೊಮ್ಮಗಳು ಧ್ರುವಿಗೆ ಬೆನ್ನಿಗೆ ಗುದ್ದಿದಂತಾಗಿರುತ್ತದೆ. ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಕಾರ್ಕಳದ ಗಾಜ್ರಿಯಾ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಬಸ್ಸು ಅಪಘಾತವೆಸಗಿದ ಇನ್ನೊಂದು ಕಾರಿನ ನಂಬ್ರ ನೋಡಲಾಗಿ  MH-02-EE-2088 ಆಗಿದ್ದು ಟೋಯೋಟಾ ಕಂಪೆನಿಯದ್ದಾಗಿದ್ದು  ಅವರಿಗೆ ಯಾವುದೇ ಗಾಯವಾಗಿರುವುದಿಲ್ಲ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 156/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಮಣಿಪಾಲ: ಪಿರ್ಯಾದಿದಾರರಾದ ಸುಭಾಷ್ ( 22), ತಂದೆ: ದುರ್ಗಪ್ಪ, ವಾಸ: ರೂಂ ನಂ: 310, ಹೈ ಪಾಯಿಂಟ್ ರೆಸಿಡೆನ್ಸಿ  ಸರಳಬೆಟ್ಟು  ಹೆರ್ಗಾ ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು  ದಿನಾಂಕ 22/12/2022 ರಂದು ಮೋಟಾರ್ ಸೈಕಲ್ ನಲ್ಲಿ ಸಾರ್ವಜನಿಕ ರಸ್ತೆಯಾದ ಈಶ್ವರನಗರದ 4 ನೇ ಕ್ರಾಸ್ ರಸ್ತೆಯಲ್ಲಿ ಹೊಗುತ್ತಿರುವಾಗ ಬೆಳಿಗ್ಗೆ 09:00  ಗಂಟೆಗೆ ಆಚಾರ್ಯ ಲೇ ಔಟ್ ಜಂಕ್ಷನ್ ತಲುಪುವಾಗ ಪಿರ್ಯಾದಿದಾರರ ಎದುರಿನಿಂದ ಹನುಮಂತ ಮಾದರ ತನ್ನ KA-26-ED-5047 ನೇ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ಹೋಗುವಾಗ ಆರೋಪಿ ಸುನೀಲ್ ಕುಮಾರ್ ಎನ್ ಎಸ್ ತನ್ನ KA-03-NG-0133 ನೇ ಕಾರನ್ನು ಯಶ್ ಪ್ರಭಾ ಕಟ್ಟಡ ಬಳಿ ಇರುವ ಒಳ ರಸ್ತೆಯಿಂದ ಅತೀ ವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಎದರುನಿಂದ ಹನುಮಂತ ಮಾದರ ಸವಾರಿ ಮಾಡುತ್ತಿದ್ದ KA-26-ED-5047 ನೇ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸಮೇತ ಹನುಮಂತ ಮಾದರ ರಸ್ತೆಗೆ ಬಿದ್ದಿದ್ದು ಆತನ ಹೊಟ್ಟೆಗೆ ಗಾಯ ಮತ್ತು ಎಡ ಭುಜಕ್ಕೆ ಒಳ ನೋವು ಉಂಟಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 223/2022, ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

 

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಬಿ ಶಿವಾನಂದ (62), ತಂದೆ:- ದಿ. ಬಿ ಪರಮೇಶ್ವರ ,ವಾಸ:-ಆಶಿಯಾನ್ ಫ್ಲಾಟ್  ನಂ 202 ,ಕಲ್ಸಂಕ ಗುಂಡಿಬೈಲು ,ಶಿವಳ್ಳಿ ಗ್ರಾಮ , ಉಡುಪಿ ತಾಲೂಕು ಇವರ ತಮ್ಮ ದಿನೇಶ್  (43) ಇವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 23/12/2022 ರಂದು ಬೆಳಿಗ್ಗೆ 08:00 ಗಂಟೆಯಿಂದ ಸಾಯಂಕಲ  21:00 ಗಂಟೆ ನಡುವಿನ ಸಮಯದಲ್ಲಿ ಉಡುಪಿ ತಾಲೂಕು 76 ಬಡಗಬೆಟ್ಟು  ಗ್ರಾಮದ ಜಗನ್ನಾಥ ಶೆಟ್ಟಿ ಕಾಂಪೌಂಡ್  ಎಂಬ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕೋಣೆಯ ಪಕ್ಕಾಸಿಗೆ ನೈಲನ್ ಹಗ್ಗವನ್ನು ಕಟ್ಟಿ, ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 49/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಹಿರಿಯಡ್ಕ:  ದಿನಾಂಕ 23/12/2022  ರಂದು ಅನಿಲ್ ಬಿ ಮಾದರ, ಪೊಲೀಸ್‌ ಉಪನಿರೀಕ್ಷಕರು, ಹಿರಿಯಡ್ಕ ಪೊಲೀಸ್ ಠಾಣೆ ಇವರಿಗೆ  ಉಡುಪಿ ತಾಲೂಕು ಬೊಮ್ಮರಬೆಟ್ಟು ಗ್ರಾಮದ ಹಿರಿಡಯ್ಕ ಸಂತೆ ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ  ಒಬ್ಬ  ವ್ಯಕ್ತಿ ಮಟ್ಕ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ ದೊರೆತ ಮೇರೆಗೆ  ದಾಳಿ ನಡೆಸಿ ಮಟ್ಕಾ ಜುಗಾರಿ ಆಟಕ್ಕೆ ನಡೆಸುತ್ತಿದ್ದ  ಪ್ರಶಾಂತ್‌ಕುಲಾಲ (27), ತಂದೆ: ಕೃಷ್ಣ ಕುಲಾಲ, ವಾಸ: ಮೂಡು ತಂಗಾಣ ಮನೆ ಕುಕ್ಕೆಹಳ್ಳಿ ಅಂಚೆ ಮತ್ತು ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಎಂಬಾತನನ್ನು ವಶಕ್ಕೆ ಪಡೆದು ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ರೂಪಾಯಿ 3,100/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ- 1,  ಬಾಲ್‌ ಪೆನ್‌  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 87/2022 ಕಲಂ : 78 (I)(III) KP ACT   ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  •  

    ಬ್ರಹ್ಮಾವರ: ಪಿರ್ಯಾದಿದಾರರಾದ ಉಮಾಶಂಕರ ಶೆಟ್ಟಿ (46), ತಂದೆ: ದಿವಂಗತ ನಾರಾಯಣ ಶೆಟ್ಟಿ, ವಾಸ: ನಡುಪಾಲು ಮನೆ ಮೂಡೂರು  ಚೇರ್ಕಾಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರು  ಹೈನುಗಾರಿಕೆ ಹಾಗೂ ಹಸುಗಳ ಹಾಲಿನಿಂದ ತುಪ್ಪ ತಯಾರಿಸಿ ವ್ಯಾಪಾರ ಮಾಡುತ್ತಿರುವುದಾಗಿದೆ. ಅವರ ಪರಿಚಯದ ಅರೋಪಿ ಜೀವನ ಶೆಟ್ಟಿ ಯಾನೆ ಚಿಕ್ಕ ಶೆಟ್ಟಿ ಪಿರ್ಯಾದಿದಾರರ ಹತ್ತಿರ ತನ್ನ ಸ್ನೇಹಿತ‌ ಅರುಣ್‌ ಶೆಟ್ಟಿಗೆ ನೀಡಲು ಎಂದು ಹೇಳಿ ತುಪ್ಪ ಖರೀದಿ ಮಾಡಿದ್ದು, ನಂತರ ತುಪ್ಪದ ಒಟ್ಟು ರೂಪಾಯಿ 5,600/ ಹಣದಲ್ಲಿ ಪಿರ್ಯಾದಿದಾರರಿಗೆ ರೂಪಾಯಿ  5000/- ವನ್ನು ಮಾತ್ರ ನೀಡಿರುತ್ತಾನೆ. ಈ ಬಗ್ಗೆ  ಆರೋಪಿಯ ಹತ್ತಿರ ಉಳಿದ ರೂಪಾಯಿ 500/-ನ್ನು ಕೇಳಿದಾಗ  ಆರೋಪಿಯು ಆತನ  ಸ್ನೇಹಿತ ನೀಡಿರುವುದೇ ರೂಪಾಯಿ 5000/- ಎಂದು ಹೇಳಿರುತ್ತಾನೆ. ನಂತರ  ಪಿರ್ಯಾದಿದಾರರು ಆರೋಪಿಯ ಸ್ನೇಹಿತನ ತಾಯಿಯ ಹತ್ತಿರ ಅವರ ಮಗ ನೀಡಿರುವ ಹಣದ ಬಗ್ಗೆ  ವಿಚಾರಿಸಿರುತ್ತಾರೆ.  ಅದಕ್ಕೆ ಆರೋಪಿಯು ಕೋಪಗೊಂಡು ದಿನಾಂಕ 23/12/2022 ರಂದು ಬೆಳಿಗ್ಗೆ 8:20 ಗಂಟೆಗೆ ಪಿರ್ಯಾದಿದಾರರ ಮನೆಯ ಸಿಟ್‌ ಔಟ್‌ಗೆ  ಆಕ್ರಮವಾಗಿ ಬಂದು ಏಕಾಏಕಿ ಪಿರ್ಯಾದಿದಾರರ  ಎಡ ಹುಬ್ಬಿನ  ಬಳಿ ಕೈಯಿಂದ ಹೊಡೆದು ಹಲ್ಲೆ ಮಾಡಿ,  ಅವಾಚ್ಯ ವಾಗಿ ಬೈದಿರುತ್ತಾನೆ,  ಅಲ್ಲದೇ ತಪ್ಪಿಸಲು ಬಂದು  ಪಿರ್ಯಾದಿದಾರರ ಹೆಂಡತಿ ಸವಿತಾ ರವರನ್ನು  ಕೈಯಿಂದ ದೂಡಿ ಬೆದರಿಕೆ  ಹಾಕಿ ಹೋಗಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 217/2022 ಕಲಂ : 447, 323, 504, 506, 354(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಪಡುಬಿದ್ರಿ: ಪಿರ್ಯಾದಿದಾರರಾದ ಮುಮ್ತಾಜ್ (28), ಗಂಡ: ಇಮ್ರಾನ್, ವಾಸ: #2-58, ಅಬ್ದುಲ್  ಹಮೀದ್ ಕಂಪೌಂಡ್, ಪೊಲ್ಯ ರಸ್ತೆ, ಉಚ್ಚಿಲ ಅಂಚೆ. ಬಡಾ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ಕಾಪು ತಾಲೂಕು ಬಡಾ ಗ್ರಾಮ ಪೊಲ್ಯ ರಸ್ತೆಯ ಅಬ್ದುಲ್ ಹಮೀದ್ ಕಂಪೌಂಡ್ ನಿವಾಸಿಯಾಗಿದ್ದು, ಪಿರ್ಯಾದಿದಾರರ ಗಂಡ ಇಮ್ರಾನ್ ಹಾಗೂ  ಹಸನ್ ರವರು ಸಹೋದರ ಸಬಂಧಿಗಳಾಗಿದ್ದು, ಎರಡೂ ಕುಟುಂಬಗಳ ನಡುವೆ ಈ ಮೊದಲಿನಿಂದಲೂ ಜಾಗದ ವಿಚಾರದಲ್ಲಿ ತಕರಾರು ಇದ್ದು, ಹಲವಾರು ಬಾರಿ ಜಗಳವಾಗಿದ್ದು, ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರುಗಳೂ ಸಹ ದಾಖಲಾಗಿರುತ್ತದೆ. ನಂತರದ ದಿನಗಳಲ್ಲೂ ಸಣ್ಣಪುಟ್ಟ ವಿಷಯಕ್ಕೆ ಜಗಳವಾಗುತ್ತಿದ್ದು, ದಿನಾಂಕ 22/12/2022 ರಂದು 14:00 ಗಂಟೆಗೆ 1 ನೇ ಆರೋಪಿ ಹಸನ್ ರಿಕ್ಷಾದಲ್ಲಿ ಬಂದಾಗ ಪಿರ್ಯಾದಿದಾರರ ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿರುವುದನ್ನು ಕಂಡು ಬೈದಿರುತ್ತಾರೆ. ನಂತರ ಪಿರ್ಯಾದಿದಾರರು ಅವರ ಜಾಗದ ಗಡಿ ಗುರುತಾಗಿ ಕಲ್ಲುಗಳನ್ನು ಇಟ್ಟು, ಸಂಜೆ ಕಾರ್ಯಕ್ರಮದ ನಿಮಿತ್ತ ಅವರ ಮನೆಯವರ ಜೊತೆ ಉಡುಪಿಗೆ ಹೋದವರು, ರಾತ್ರಿ 21:45 ಗಂಟೆಗೆ ಅವರ ಬಾವನ ಜೊತೆ ಬೈಕಿನಲ್ಲಿ ಬಂದಿರುತ್ತಾರೆ. ಆ ಸಮಯ ಆರೋಪಿಗಳಾದ 1] ಹಸನ್, 2] ಸಾಬಿರಾ, 3] ಅಲ್ಫಾಜ್, 4] ಹರ್ಷದ್, ವಾಸ:  #2-46/2,  ಹಮೀದ್ ಕಂಪೌಂಡ್, ಪೊಲ್ಯ ರಸ್ತೆ, ಉಚ್ಚಿಲ ಅಂಚೆ. ಬಡಾ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ಪಿರ್ಯಾದಿದಾರರ ಜಾಗಕ್ಕೆ ಅಕ್ರಮವಾಗಿ ಬಂದು, ಕಲ್ಲು ಇಟ್ಟಿದ್ದು ಏಕೆ ಎಂದು ಹೇಳಿ, ಆರೋಪಿಗಳಾದ ಹರ್ಷದ್ ಮತ್ತು ಸಾಬಿರಾ ಕೈಯಿಂದ ಪಿರ್ಯಾದಿದಾರರ ಮುಖಕ್ಕೆ, ಮೈಕೈಗೆ ಹೊಡೆದಾಗ ಪಿರ್ಯಾದಿದಾರರು ಕೆಳಗೆ ಬಿದ್ದ ಸಮಯ, ಹರ್ಷದ್ ನು ಕಾಲಿನಿಂದ ಪಿರ್ಯಾದಿದಾರರ ಎದಗೆ ತುಳಿದಿರುತ್ತಾನೆ. ಸಾಬಿರಾ ಪಿರ್ಯಾದಿದಾರರಿಗೆ ಬೈದು, ಕೂದಲು ಎಳೆದು, ಕುತ್ತಿಗೆಗೆ ಒತ್ತಿ ಹಿಡಿದಾಗ, ಪಿರ್ಯಾದಿದಾರರು ಸಾಬಿರಾಳ ಕೈಗೆ ಕಚ್ಚಿರುತ್ತಾರೆ. ಆ ಸಮಯ ಅಲ್ಲಿಗೆ ಬಂದ ಪಿರ್ಯಾದಿದಾರರ ಬಾವ ಶಫಿನ್‌ನಿಗೆ ಅಲ್ಫಾಜ್ ಹಾಗೂ ಹರ್ಷದ್ ಕೈಯಿಂದ ಹೊಡೆದು ಹಲ್ಲೆ ನಡೆಸಿದ್ದು, ಹಸನ್ ನು ಕಲ್ಲನ್ನು ಎತ್ತಿಕೊಂಡು ಬಂದು ಹಾಕುವುದಾಗಿ ಹಾಗೂ ಅಲ್ಫಾಜನು ಮಕ್ಕಳನ್ನು ರಿಕ್ಷಾದ ಅಡಿಗೆ ಹಾಕಿ ಕೊಲ್ಲುವುದಾಗಿ ಬೆದರಿಕೆ ಹಾಕಿರುತ್ತಾರೆ. ಹಲ್ಲೆಯಿಂದ ಪಿರ್ಯಾದಿದಾರರ ಮೈ ಕೈಗೆ ನೋವುಂಟಾಗಿದ್ದು, ಚಿಕಿತ್ಸೆಯ ಬಗ್ಗೆ ಉಡುಪಿಯ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 163/2022 ಕಲಂ: 447, 506, 504, 323 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಸಾಬಿರಾ (45), ಗಂಡ: ಹಸನ್, ವಾಸ: #2-46/2, ಅಬ್ದುಲ್  ಹಮೀದ್ ಕಂಪೌಂಡ್, ಪೊಲ್ಯ ರಸ್ತೆ, ಉಚ್ಚಿಲ ಅಂಚೆ. ಬಡಾ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಕಾಪು ತಾಲೂಕು ಬಡಾ ಗ್ರಾಮ ಪೊಲ್ಯ ರಸ್ತೆಯ ಅಬ್ದುಲ್ ಹಮೀದ್ ಕಂಪೌಂಡ್ ನಿವಾಸಿಯಾಗಿದ್ದು, ಪಿರ್ಯಾದಿದಾರರ ಗಂಡ ಹಸನ್ ಹಾಗೂ  ಇಮ್ರಾನ್ ರವರು ಸಹೋದರ ಸಬಂಧಿಗಳಾಗಿದ್ದು, ಎರಡೂ ಕುಟುಂಬಗಳ ನಡುವೆ ಈ ಮೊದಲಿನಿಂದಲೂ ಜಾಗದ ವಿಚಾರದಲ್ಲಿ ತಕರಾರು ಇದ್ದು, ಹಲವಾರು ಬಾರಿ ಜಗಳವಾಗಿದ್ದು, ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರುಗಳೂ ಸಹ ದಾಖಲಾಗಿರುತ್ತದೆ. ನಂತರದ ದಿನಗಳಲ್ಲೂ ಸಣ್ಣಪುಟ್ಟ ವಿಷಯಕ್ಕೆ ಜಗಳವಾಗುತ್ತಿದ್ದು, ದಿನಾಂಕ 22/12/2022 ರಂದು ರಾತ್ರಿ 21:45 ಗಂಟೆಗೆ ಆರೋಪಿಗಳಾದ ಇಮ್ರಾನ್ ಮತ್ತು ಶಫಿನ್ ರವರು ಪಿರ್ಯಾದಿದಾರರ ಮನೆಗೆ ಹೋಗುವ ರಸ್ತೆಗೆ ಕಲ್ಲು ಇಟ್ಟಿದ್ದು, ಆ ಕಲ್ಲನ್ನು ಪಿರ್ಯಾದಿದಾರರ ಮಗ ಹರ್ಷದ್ ನು ತೆಗೆದು ಬದಿಗೆ ಇಡುವ ಸಮಯದಲ್ಲಿ ಶಫಿನ್ ನು ಕೈಯಿಂದ ಹೊಡೆದು ಕಾಲಿನಿಂದ ತುಳಿದಿರುತ್ತಾನೆ. ನಂತರ ಆರೋಪಿ 1] ಇಮ್ರಾನ್, 3] ಮುಮ್ತಾಜ್  ರಸ್ತೆಗೆ ಪುನಃ ಕಲ್ಲನ್ನು ಇಡುವ ಸಮಯ ಹರ್ಷದನು ಕಲ್ಲು ಏಕೆ ಇಡುತ್ತೀರಿ ಎಂದು ಕೇಳಿದ್ದಕ್ಕೆ, ಆರೋಪಿಗಳೆಲ್ಲರೂ ಸೇರಿ ಹರ್ಷದ್‌ನಿಗೆ ಕೈಯಿಂದ ಹೊಡೆದುದಲ್ಲದೇ, ಅಲ್ಲಿಗೆ ಬಂದ ಆತನ ಅಣ್ಣ ಅಲ್ಫಾಝ್ ಗೆ ಕೈಯಿಂದ ಹೊಡೆದು, ನಂತರ ಶಫಿನ್‌‌ನು ಮರದ ತುಂಡಿನಿಂದ ಅಲ್ಫಾಝ್‌‌ನಿಗೆ ಬೆನ್ನಿಗೆ, ಕಾಲಿಗೆ ಹೊಡೆದಿರುತ್ತಾರೆ. ಆ ಸಮಯ ಗಲಾಟೆ ಬಿಡಿಸಲು ಹೋದ ಪಿರ್ಯಾದಿದಾರರಿಗೆ ಆರೋಪಿತರಾದ 2] ಶಫೀನ್, 3] ಮುಮ್ತಾಜ್  ಇವರು ಕೈಗಳಿಂದ ಹೊಡೆದು, ಕಾಲಿನಿಂದ ತುಳಿದು, ಎಡಕೈಗೆ ಕಚ್ಚಿ ಗಾಯ ಮಾಡಿದ್ದಲ್ಲದೇ, ಕುತ್ತಿಯನ್ನು ಒತ್ತಿ ಹಿಡಿದಿರುತ್ತಾರೆ. ನಂತರ ಆರೋಪಿಗಳೆಲ್ಲರೂ ಪಿರ್ಯಾದಿದಾರರಿಗೆ ಬೈದು, ಕೊಲ್ಲುವುದಾಗಿ ಬೆದರಿಕೆ ಹಾಕಿರುತ್ತಾರೆ.  ಹಲ್ಲೆಯಿಂದ ಪಿರ್ಯಾದಿದಾರರ ಕುತ್ತಿಗೆಗೆ ಮೈ ಕೈಗೆ ನೋವುಂಟಾಗಿ, ಎಡಕೈ ಹಸ್ತಕ್ಕೆ ಗಾಯವಾಗಿರುವುದಲ್ಲದೇ, ಅಲ್ಫಾಝನಿಗೂ ಗಾಯವಾಗಿರುತ್ತದೆ. ಗಾಯಾಳುಗಳು ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ.    ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 164/2022,  ಕಲಂ: 504, 506, 323, 324 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-12-2022 10:24 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080