ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ : ಪಿರ್ಯಾದಿದಾರರಾದ ಅಲ್ಫ್ರೆಡ್ ಅನಿಲ್ ಡಿಸೋಜ (49), ತಂದೆ:ಸಿಲ್ವೆಸ್ಟರ್ ಡಿಸೋಜ,ವಾಸ: ಅನಿಕಾ ವಿಲ್ಲಾ, ಶುಭಮಂಗಳ ಆಯಿಲ್ ಮಿಲ್ ಎದುರು, ಸಾಣೂರು ಗ್ರಾಮ ಮತ್ತು ಅಂಚೆ,ಕಾರ್ಕಳ ತಾಲೂಕು ಇವರ ಅಣ್ಣನ ಮಗ ಜಾನ್ ಐಸನ್ ಡಿಸೋಜ (23) ರವರು ದಿನಾಂಕ 22/12/2021 ರಂದು 16:45 ಗಂಟೆಗೆ ಎಂದಿನಂತೆ ವಾಕಿಂಗ್ ಮಾಡುತ್ತಿದ್ದಾಗ ಪುಲ್ಕೇರಿ ಬೈಪಾಸ್‌ನಿಂದ ಪಡುಬಿದ್ರೆ ಕಡೆಗೆ ಯಾವುದೋ ವಾಹನವನ್ನು ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಸಾಣೂರು ಗ್ರಾಮದ ವಿಶಾಲ್ ಗ್ಯಾರೇಜ್ ಬಳಿ ಜಾನ್ ಐಸನ್ ಡಿಸೋಜರವರಿಗೆ ಡಿಕ್ಕಿ ಹೊಡೆದ ಪರಿಣಾಮ ಜಾನ್ ಐಸನ್ ಡಿಸೋಜರವರ ಎಡಹಣೆಗೆ, ಮೂಗಿಗೆ, ಎಡಕೆನ್ನೆಗೆ ಗಾಯಗಳಾಗಿದ್ದು ಮುಖದ ಮೂಳೆ  ಮುರಿತವಾಗಿದ್ದಲ್ಲದೇ ಹಲ್ಲುಗಳು ಮುರಿತವಾಗಿರುತ್ತದೆ ಡಿಕ್ಕಿ ಹೊಡೆದ ವಾಹನವನ್ನು ಅದರ ಚಾಲಕನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 164/2021 ಕಲಂ: 279, 338 ಐಪಿಸಿ ಮತ್ತು  134 (A&B) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಸಚಿದಾನಂದ ಭಟ್‌ (48), ತಂದೆ: ದಿ: ಕೃಷ್ಣ ಭಟ್‌, ವಾಸ: 3-44, ಆಸರೆ , ಕುಚ್ಚಿಕಾಡು, ಕಟಪಾಡಿ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಅಣ್ಣ ಶಿವಾನಂದ ಭಟ್‌ (53) ರವರು ಕಳೆದ ಕಳೆದ ಎರಡು ವರ್ಷದ ಹಿಂದೆ ಬಂಟಕಲ್‌ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕರಾಗಿದ್ದು, ದೇವಸ್ಥಾನಕ್ಕೆ ಸಂಬಂಧಿಸಿದ ಛತ್ರದಲ್ಲಿ ಒಬ್ಬರೇ ವಾಸವಾಗಿದ್ದು, ಅವಿವಾಹಿತರಾಗಿರುತ್ತಾರೆ. ದಿನಾಂಕ 20/12/2021 ರಂದು ರಾತ್ರಿ ಬಂಟಕಲ್‌ ಎಂಬಲ್ಲಿರುವ ತನ್ನ ಮನೆಗೆ ಹೋಗಿ  ಮಲಗಿದವರು 23/12/2021 ರಂದು ಸಂಜೆ 7:00  ಗಂಟೆಯ ನಡುವಿನ ಅವಧಿಯಲ್ಲಿ ಹೃದಯಘಾತದಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 24/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ಮಿಥುನ ದೇವಾಡಿಗ (32), ತಂದೆ: ಮಂಜು ದೇವಾಡಿಗ, ವಾಸ: ಭಾವನಾ ನಿಲಯ ತ್ರಾಸಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 23/12/2021 ರಂದು ವ್ಯವಹಾರದ ಬಗ್ಗೆ ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ಕಲ್ಲಾಣಿ ಶಾಲೆ ಹಿಂಭಾಗವಿರುವ ರುಕ್ಕು ಪೂಜಾರ್ತಿರವರ ಮನೆಯ ಬಳಿ ನಡೆದುಕೊಂಡು ಹೋಗುತ್ತಿರುವಾಗ 17:00 ಗಂಟೆಗೆ ಅವರ ಮನೆಯ ಬಳಿ ಇರುವ ಸೌಪರ್ಣಿಕ ಹೊಳೆಯ ದಡದಲ್ಲಿ ಸುಮಾರು 35 ರಿಂದ 40 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಇದ್ದು ಮೃತ ದೇಹದ ಮೈಮೇಲೆ ಅಲ್ಲಲ್ಲಿ ಜಲಚರಗಳು  ತಿಂದಿರುವುದು ಕಂಡು ಬಂದಿದ್ದು ಅಲ್ಲದೇ ಮೃತ ದೇಹದ ಮೈ ಮೇಲೆ ಚರ್ಮ ಸುಲಿದಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 34/2021 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ನಾಗವೇಣಿ (30),  ಗಂಡ: ಸುಬ್ರಹ್ಮಣ್ಯ, ವಾಸ: ಕರ್ಕಿ, ಹೊನ್ನಾವರ ತಾಲೂಕು, ಉತ್ತರ ಕನ್ನಡ ಜಿಲ್ಲೆ,  ಪ್ರಸ್ತುತ: ಮಲೆಜುಮಾದಿ ದೇವಸ್ಥಾನದ ಬಳಿ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರು ಉಡುಪಿ ಕಡಿಯಾಳಿ ಫರ್ನಿಚರ್‌ ಅಂಗಡಿಯಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 23/12/2021 ರಂದು ಕಡೆಯಾಳಿಯಲ್ಲಿ ಕೆಲಸ ಮುಗಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಮನೆ ಕಡೆಗೆ ನಡೆದುಕೊಂಡು ಹೋಗುತ್ತಾ 18:40 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಎಂ.ಜಿ.ಎಂ ಕಾಲೇಜು ಬಳಿ ತಲುಪಿದಾಗ ಹಿಂದಿನಿಂದ ಒಂದು ಹೊಂಡಾ ಆ್ಯಕ್ಟೀವಾ ಡಿಯೊ ಸ್ಕೂಟರ್‌ನಲ್ಲಿ ಇಬ್ಬರು ಅಪರಿಚಿತರು  ಬಂದು ಪಿರ್ಯಾದಿದಾರರ ಕೈಯಲ್ಲಿದ್ದ ನೊಕಿಯಾ 7.1 ಮೊಬೈಲ್‌ ನ್ನು ಸುಲಿಗೆ ಮಾಡಿಕೊಂಡು ಮಣಿಪಾಲ ಕಡೆಗೆ ಹೋಗಿದ್ದು,  ಸುಲಿಗೆಯಾದ ಮೊಬೈಲ್‌ನ ಮೌಲ್ಯ ರೂಪಾಯಿ 4,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 189/2021 ಕಲಂ: 392 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-12-2021 09:24 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080