ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ಪ್ರವೀಣ್ ಶೆಟ್ಟಿ (39), ತಂದೆ: ವಾಸು ಶೆಟ್ಟಿ, ವಾಸ: # 1-58ಎ, ಪಾದೆಬೆಟ್ಟು ಕೆರಮ, ಪಾದೆಬೆಟ್ಟು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ದೊಡ್ಡಮ್ಮನ ಮಗಳ ಗಂಡ ಸುನಿಲ್ ಎಂಬುವವರು ದಿನಾಂಕ 24/12/2021 ರಂದು ಬೆಳಿಗ್ಗೆ ಪಿರ್ಯಾದಿದಾರರ KA-19-ES-6384 ನೇ ನಂಬ್ರದ ಮ್ಯಾಸ್ಟ್ರೋ ಸ್ಕೂಟಿಯಲ್ಲಿ ಪಡುಬಿದ್ರಿ ಪೇಟೆಗೆಂದು ಮನೆಯಿಂದ ಹೊರಟು ಸುರೇಶ್ ಗ್ಯಾರೇಜ್ ಬಳಿಯಿಂದ ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ- ಮಂಗಳೂರು ಏಕಮುಖ ಸಂಚಾರ ರಸ್ತೆಯಲ್ಲಿ ಬರುತ್ತಾ 09:10 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಪೇಟೆಯ ಆಪ್ನಾ ಮಾರ್ಟ್‌ ಎದುರು ತಲುಪುತ್ತಿದ್ದಂತೆ, KA-03-MG-3884 ನೇ ನಂಬ್ರದ ಕಾರು ಚಾಲಕ ರಜನೀಶ್ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿ ಸುನಿಲ್ ರವರು ಚಲಾಯಿಸುತ್ತಿದ್ದ ಸ್ಕೂಟಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸುನಿಲ್ ರವರು ಕಾರಿನ ಎದುರು ಗಾಜಿನಮೇಲೆ ಬಿದ್ದು ಬಳಿಕ ರಸ್ತೆಗೆ ಬಿದ್ದಿರುತ್ತಾರೆ. ಅಪಘಾತದಿಂದ ಸುನಿಲ್‌‌ ರವರ ಮುಖಕ್ಕೆ, ಕೈಕಾಲುಗಳಿಗೆ ಗಾಯಗಳಾಗಿದ್ದು, ಅವರಿಗೆ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಕೊಡಿಸಿ, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 120/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ಪಿರ್ಯಾದಿದಾರರಾದ ಸೂರಜ್ (19), ತಂದೆ: ಶಿವಾನಂದ, ವಾಸ: ಭಕ್ರೆ, ಮುದ್ರಾಡಿ ಗ್ರಾಮ, ಹೆಬ್ರಿ ತಾಲೂಕು ಇವರು ದಿನಾಂಕ 23/12/2021 ರಂದು ಸಂಜೆ 4:45 ಗಂಟೆಗೆ ಅವರು ಕೆಲಸ ಮಾಡುವ ಬನಶಂಕರಿ ಹಾರ್ಡ್ ವೇರ್ ಶಾಪ್‌ನ ಎದುರುಗಡೆ ನಿಂತಿರುವಾಗ ಹೆಬ್ರಿ ಕಡೆಯಿಂದ ಶಿವಪುರ ಕಡೆಗೆ KA-20-MB-2073 ನೇ ಓಮ್ನಿ ಕಾರನ್ನು ಅದರ ಚಾಲಕ ಹಿರಿಯಣ್ಣ ಕೆ.ಟಿ ಎಂಬುವವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹೆಬ್ರಿ ಗ್ರಾಮದ ಕನ್ಯಾನ ಬನಶಂಕರಿ ವರ್ಕ್‌ಶಾಪ್‌ ಎದುರು ಹೆಬ್ರಿ - ಉಡುಪಿ ರಸ್ತೆಯ ಎದುರು ನಿಂತಿದ್ದ ಚಂದ್ರಶೇಖರ ಆಚಾರಿ ಎಂಬುವವರ ಮಗ ಶ್ರೀರಸ್ತು (6) ಎಂಬುವವನಿಗೆ ಡಿಕ್ಕಿ ಹೊಡೆದ ಪರಿಣಾಮ ಶ್ರೀರಸ್ತು ರವರ ತಲೆಗೆ, ಸೊಂಟಕ್ಕೆ ರಕ್ತಗಾಯವಾಗಿದ್ದು ಹಾಗೂ ಎಡ ಭುಜಕ್ಕೆ ಮೂಳೆಮುರಿತ ವಾಗಿರುತ್ತದೆ. ಗಾಯಳು ಶ್ರೀರಸ್ತು ರವರನ್ನು ಚಿಕಿತ್ಸೆಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 74/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಜುಗಾರಿ ಪ್ರಕರಣ

 • ಕುಂದಾಪುರ: ದಿನಾಂಕ ದಿನಾಂಕ 24/12/2021 ರಂದು ನಿರಂಜನ ಗೌಡ ಬಿ.ಎಸ್‌, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರಿಗೆ ಹಟ್ಟಿಯಂಗಡಿ ಗ್ರಾಮದ ಹಟ್ಟಿಯಂಗಡಿ ಕ್ರಾಸ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ 7 ಜನರು ಸೇರಿ ಹಣವನ್ನು ಪಣವಾಗಿರಿಸಿಕೊಂಡು ಅಕ್ರಮ ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ದಾಳಿ ನಡೆಸಿ, ಅಕ್ರಮ ಇಸ್ಪೀಟು ಜುಗಾರಿ ಆಟದಲ್ಲಿ ನಿರತರಾಗಿದ್ದ 1) ರಾಘವೇಂದ್ರ, (38), ತಂದೆ: ಮಹಾಲಿಂಗ ಪೂಜಾರಿ, ವಾಸ:  ಹಟ್ಟಿಕುದ್ರು, ಬಸ್ರೂರು,  2) ಸುರೇಂದ್ರ (27),ತಂದೆ: ಸೋಮ ಶೇಖರ, ವಾಸ:  ಗುಡ್ಡೆಯಂಗಡಿ ಕನ್ಯಾನ, 3) ನಾಗರಾಜ್ ಪೂಜಾರಿ(45), ತಂದೆ: ಮಹಾಲಿಂಗ ಪೂಜಾರಿ,  ವಾಸ:  ಸಸಿಹಿತ್ಲು,  ಹಟ್ಟಿಯಂಗಡಿ ಗ್ರಾಮ,  4) ಸಧಾನಂದ (28), ತಂದೆ: ರಮೇಶ್,  ವಾಸ:  ಕರ್ಕೀ ಗುಡ್ಡೆ, ಹಟ್ಟಿಯಂಗಡಿ,   5) ಪ್ರಕಾಶ್ (40), ತಂದೆ: ಶೀನಾ ಪೂಜಾರಿ,ವಾಸ: ಹಟ್ಟಿಕುದ್ರು ಬಸ್ರೂರು ಗ್ರಾಮ , 6) ಸುರೇಶ್ ಪೂಜಾರಿ(49), ತಂದೆ: ಮಾಣಿ ಪೂಜಾರಿ,  ವಾಸ:  ಸಸಿಹಿತ್ಲು  ಹಟ್ಟಿಯಂಗಡಿ ಗ್ರಾಮ ಕುಂದಾಪುರ ತಾಲೂಕು, 7) ರತ್ನಾಕರ (32), ತಂದೆ: ಶೀನಾದೇವಾಡಿಗ,  ವಾಸ:  ಕೋಟೆ ಬಾಗಿಲು ಇವರನ್ನು ದಸ್ತಗಿರಿ ಮಾಡಿ, ಅವರು ಅಕ್ರಮ ಇಸ್ಪೀಟು ಜುಗಾರಿ ಆಟಕ್ಕೆ ಬಳಸಿದ 1) ಹಳೆ ದಿನಪತ್ರಿಕೆ ಹಾಳೆ - 1, 2) ಇಸ್ಪೀಟು ಎಲೆಗಳು - 52 ಮತ್ತು 3) ನಗದು ಹಣ ರೂಪಾಯಿ 1600/- ಅನ್ನು ಸ್ವಾಧೀನಪಡಿಸಿಕೊಂರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2021 ಕಲಂ : 87  KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.   

ಕಳವು ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಕೆ.ಆರ್ ತಂತ್ರಿ , ಸಹಾಯಕ ಇಂಜಿನಿಯರ್, ಆಕಾಶವಾಣಿ, ಬ್ರಹ್ಮಾವರ, ವಾರಂಬಳ್ಳಿ ಗ್ರಾಮ, ಉಡುಪಿ ತಾಲೂಕು ಇವರು ಆಕಾಶವಾಣಿ ಕೇಂದ್ರದಲ್ಲಿ ಅಸಿಸ್ಟೆಂಟ್‌ ಇಂಜಿನಿಯರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದು, ದಿನಾಂಕ 15/12/2021 ರಂದು ಬೆಳಿಗ್ಗೆ ವಾರಂಬಳ್ಳಿ ಗ್ರಾಮದ ಆಕಾಶವಾಣಿ ಕೇಂದ್ರದ ಏರಿಯಲ್ ಪೀಲ್ಡ್‌‌‌‌‌ನಲ್ಲಿ ಸಂಚರಿಸಿ ನೋಡಿದಾಗ ಟ್ರಾನ್ಸ್‌‌ಮೀಟರ್‌‌‌ಗೆ ಆಳವಡಿಸಿದ್ದ ತಾಮ್ರದ ಪಟ್ಟಿಗಳು ಯಥಾಸ್ಥಿತಿಯಲ್ಲಿರುವುದು ಕಂಡು ಬಂದಿರುತ್ತದೆ. ನಂತರ ಪಿರ್ಯಾದಿದಾರರು ದಿನಾಂಕ 22/12/2021 ರಂದು ಆಕಾಶವಾಣಿ ಕೇಂದ್ರದ ಏರಿಯಲ್ ಪೀಲ್ಡ್ ನಲ್ಲಿ ನೋಡಿದಾಗ ಟ್ರಾನ್ಸ್‌‌‌‌ಮೀಟರ್‌‌‌ಗೆ ಆಳವಡಿಸಿದ್ದ 50 ಅಡಿ ಉದ್ದದ (8 SWG * 2 inches width) ತಾಮ್ರದ ಪಟ್ಟಿಗಳು ಕಳ್ಳತನವಾಗಿರುವುದು ಕಂಡು ಬಂದಿದ್ದು, ತಾಮ್ರದ ಪಟ್ಟಿಗಳ ತೂಕ   40 ಕೆಜಿ ಇದ್ದು ಅದರ ಮೌಲ್ಯ ಸುಮಾರು ರೂಪಾಯಿ 20,000/- ಆಗಿರುತ್ತದೆ. ದಿನಾಂಕ 15/12/2021 ರಿಂದ ದಿನಾಂಕ 22/12/2021 ರ  ಮಧ್ಯಾಧವಧಿಯಲ್ಲಿ   ಕಳ್ಳತನವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 209/2021  ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಾಣೆ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಮಾರುತಿ ಆರ್. (36), ತಂದೆ: ರಾಮಪ್ಪ,ಹಾಲಿವಾಸ: ವೆಂಕಪ್ಪ ಅಮೀನ್ ಕಂಪೌಂಡ್,ಹಾರಾಡಿ ಗ್ರಾಮ, ಸಾಲಿಕೇರಿ ಅಂಚೆ, ಬ್ರಹ್ಮಾವರ ತಾಲೂಕು ಹಾಗೂ ಅವರ ಹೆಂಡತಿ ಆಶಾ ಆರ್. (30) , ಮಗ ಮನೀಶಾ (6) ಎಂಬುವವರು ಸುಮಾರು 6 ತಿಂಗಳಿನಿಂದ ಬ್ರಹ್ಮಾವರ ತಾಲೂಕು,ಹಾರಾಡಿ ಗ್ರಾಮದ “ವೆಂಕಪ್ಪ ಅಮೀನ್ ಕಂಪೌಂಡ್ ಎಂಬಲ್ಲಿ ಪ್ರಸಾದ್‌ ರವರ ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡಿದ್ದು, ದಿನಾಂಕ 09/11/2021 ರಂದು ಬೆಳಿಗ್ಗೆ 07:00 ಗಂಟೆಗೆ ಪಿರ್ಯಾದಿದಾರರು ತರಕಾರಿ ವ್ಯಾಪಾರದ ನಿಮಿತ್ತ ಮನೆಯಿಂದ ಹೋಗಿ ವಾಪಾಸ್ಸು ಸಂಜೆ 7:30 ಗಂಟೆಗೆ ಮನೆಗೆ ಬಂದಾಗ ಅವರ ಹೆಂಡಿತಿ ಮತ್ತು ಮಗ ಮನೆಯಲ್ಲಿ ಇಲ್ಲದೇ ಕಾಣೆಯಾಗಿರುತ್ತಾರೆ. ಕಾಣೆಯಾದ ಬಗ್ಗೆ ಪಿರ್ಯಾದಿದಾರರು ಅಕ್ಕ ಪಕ್ಕ ಹುಡುಕಾಡಿದ್ದು ಅಲ್ಲದೇ ಊರಿಗೆ ಹೋಗಿರಬಹುದೆಂದು ಅಲ್ಲಿಗೆ ಹೋಗಿ ಆಕೆಯ ಮನೆಯಲ್ಲಿ, ಸಂಬಂಧಿಕರ ಮನೆಗಳಲ್ಲಿ ಹುಡುಕಿಕೊಂಡು ಹೋಗಿದ್ದು ಎಲ್ಲಿಯೂ ಪತ್ತೆಯಾಗಿರುವುದಿಲ್ಲ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 208/2021 ಕಲಂ: ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಶಿರ್ವಾ: ಪಿರ್ಯಾದಿದಾರರಾದ ಸಚಿದಾನಂದ ಭಟ್‌ (48), ತಂದೆ: ದಿ: ಕೃಷ್ಣ ಭಟ್‌, ವಾಸ: 3-44, ಆಸರೆ , ಕುಚ್ಚಿಕಾಡು, ಕಟಪಾಡಿ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಅಣ್ಣ ಶಿವಾನಂದ ಭಟ್‌ (53) ರವರು ಕಳೆದ ಕಳೆದ ಎರಡು ವರ್ಷದ ಹಿಂದೆ ಬಂಟಕಲ್‌ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕರಾಗಿದ್ದು, ದೇವಸ್ಥಾನಕ್ಕೆ ಸಂಬಂಧಿಸಿದ ಛತ್ರದಲ್ಲಿ ಒಬ್ಬರೇ ವಾಸವಾಗಿದ್ದು, ಅವಿವಾಹಿತರಾಗಿರುತ್ತಾರೆ.  ಅವರು ಕುಡಿತದ ಚಟವನ್ನು ಹೊಂದಿದ್ದು, ದಿನಾಂಕ 22/12/2021 ರಂದು ರಾತ್ರಿ ಬಂಟಕಲ್‌ ಎಂಬಲ್ಲಿರುವ ತನ್ನ ಮನೆಗೆ ಹೋಗಿ  ಮಲಗಿದವರು 23/12/2021 ರಂದು ಸಂಜೆ 7:00 ಗಂಟೆಯ ನಡುವಿನ ಅವಧಿಯಲ್ಲಿ ಹೃದಯಘಾತದಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಮೃತಪಟ್ಟಿರುವುದಾಗಿದೆ.  ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 24/2021 ಕಲಂ: 174  CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-12-2021 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080