ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಶಂಕರನಾರಾಯಣ: ದಿನಾಂಕ  22/11/2022 ರಂದು   22:30  ಗಂಟೆಗೆ   ಪಿರ್ಯಾದಿದಾರರಾದ ಪ್ರವೀಣ ಹೆಗ್ಡೆ (31), ತಂದೆ: ಸಂಜೀವ ಹೆಗ್ಡೆ, ವಾಸ: ಆಶ್ರಯ  ಕಾಲೋನಿ  ಕ್ರೋಡಾ  ಬೈಲ್ಲೂರು ಅಂಚೆ  ಶಂಕರನಾರಾಯಣ ಗ್ರಾಮ ಕುಂದಾಪುರ  ತಾಲೂಕು  ಇವರು  KA-20-EE-3936 ನೇ ನಂಬ್ರದ ಮೋಟಾರ್   ಸೈಕಲ್‌‌‌‌ನಲ್ಲಿ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ  ಬಡಬಾಳು ಚಿತ್ತೇರಿ ಕ್ರಾಸ  ಬಳಿ  ಸಿದ್ದಾಪುರ  ಕಡೆಯಿಂದ  ಅಂಪಾರು  ಕಡೆಗೆ ಬರುತ್ತಿರುವಾಗ ಅರೋಪಿ KA-20-AB-1095 ನೇ ನಂಬ್ರದ  ಆಟೋರಿಕ್ಷಾವನ್ನು ಅಂಪಾರು  ಕಡೆಯಿಂದ  ಸಿದ್ದಾಪುರ   ಕಡೆಗೆ ಅತೀ ವೇಗ  ಹಾಗೂ   ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಒಮ್ಮಲೇ ತೀರಾ ಬಲಬದಿಗೆ  ಚಲಾಯಿಸಿ  ಮೋಟಾರ್  ಸೈಕಲ್‌ಗೆ  ಡಿಕ್ಕಿ  ಹೊಡೆದ ಪರಿಣಾಮ  ಮೋಟಾರ್ ಸೈಕಲ್‌ ಸವಾರ  ಮೋಟಾರ್  ಸೈಕಲ್  ಸಮೇತ   ರಸ್ತೆಯ ಮೇಲೆ  ಬಿದ್ದಿದ್ದು,  ಇದರ  ಪರಿಣಾಮ  ಮೋಟಾರ್ ಸೈಕಲ್  ಸವಾರನ  ಎಡ ಕೈ  ಕಿರು ಬೆರಳಿಗೆ  ಮೂಳೆ ಮುರಿತದ ಗಾಯವಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 125/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    
 • ಮಣಿಪಾಲ: ಪಿರ್ಯಾದಿದಾರರಾದ ಪಿ ಜೀವಾ (35), ಗಂಡ: ಸೀ ಪಾಂಡು,  ವಾಸ: 4-427 A5  ಶಾಂತಿ ನಗರ, 2 ನೇ ಕ್ರಾಸ್ 80 ‌ಬಡಗಬೆಟ್ಟು ಗ್ರಾಮ ಮಣಿಪಾಲ ಅಂಚೆ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ 23/11/2022 ರಂದು KA-20-EB-6569 ನೇ ಸ್ಕೂಟರ್‌ ನಲ್ಲಿ ಉಡುಪಿ ಕಡೆಯಿಂದ ಮಣಿಪಾಲ ಶಾಂತಿನಗರದ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿವಾಗ ಬೆಳಿಗ್ಗೆ 11:30 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 169(A) ರ ಮಣಿಪಾಲ ಸಿಂಡಿಕೇಟ್‌ ಸರ್ಕಲ್‌ ತಲುಪಿದಾಗ ಆಪಾದಿತ ಅನಿಲ್ ಕುಮಾರ್  ತನ್ನ KA-20-MC-8648 ನೇ ಕಾರನ್ನು ಡಿ ಸಿ ಆಫೀಸ್‌ ಕಡೆಯಿಂದ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್‌ ಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದಿದ್ದು. ಪಿರ್ಯಾದಿದಾರರ ಬಲ ಕೈ, ಎಡ ಕೈ ಕಿರುಬೆರಳು ಮತ್ತು ಮುಖದಲ್ಲಿ ತೀವ್ರ ತರನಾದ ಗಾಯವಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 203/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ 23/11/2022 ರಂದು ಪಿರ್ಯಾದಿದಾರರಾದ ನಿಯಾಸ್‌ ನಜೀರ್‌ ಕೊಯ (24), ತಂದೆ: ಬಾಬು ನಜೀರ್‌ ಕೊಯ, ವಾಸ: ಕೊಯ ಮನ್‌ಜಿಲ್‌, ಮೇಲಡಪು, ಕುಮಜಾಲು ಅಂಚೆ, ಆರೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ಮೋಟಾರ್‌ಸೈಕಲ್‌ನಲ್ಲಿ ಹಾಗೂ ಅವರ ತಂದೆ ಬಾಬು ನಜೀರ್‌ಕೊಯ ರವರು ಅವರ  KA-20-EZ-1938 ನೇ ಹೊಂಡ ಆಕ್ಟಿವಾ ಸ್ಕೂಟರ್‌ ‍ನಲ್ಲಿ ಫೀರ್ಮ ಎಂಬುವವರನ್ನು ಸಹಸವಾರಿಣಿಯನ್ನಾಗಿ ಕುಳ್ಳಿರಿಸಿಕೊಂಡು ಬ್ರಹ್ಮಾವರ ಕಡೆಯಿಂದ ಕುಂಜಾಲು ಮನೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ  ಬೆಳಿಗ್ಗೆ 09:30 ಗಂಟೆಗೆ ಚಾಂತಾರು ಗ್ರಾಮದ ಲಿಟಲ್‌ ರಾಕ್‌ ಶಾಲೆಯ ಹತ್ತಿರ ಇರುವ ರೈಲ್ವೇ ಬ್ರಿಡ್ಜ್‌ ಕೆಳಗಡೆ ರಸ್ತೆಯಲ್ಲಿ ಪಾಸ್‌ ಆಗುತ್ತಿರುವಾಗ  ಎದುರುಗಡೆಯಿಂದ ಕುಂಜಾಲು ಕಡೆಯಿಂದ ಬ್ರಹ್ಮಾವರ ಕಡೆಗೆ ಆರೋಪಿ KA-20-C-5443ನೇ ಬುಲೆರೊ ಪಿಕಪ್‌ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬ್ರಿಡ್ಜ್‌ನ ಕೆಳಭಾಗದ ರಸ್ತೆಯ ಬದಿಯಲ್ಲಿದ್ದ ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬದ ಮೇಲ್‌ ಭಾಗದಲ್ಲಿ ಕಮಾನು ರೀತಿಯಲ್ಲಿದ್ದ  ಕಬ್ಬಿಣದ ರಾಡ್‌ ಮೇಲಿನಿಂದ ಪಿರ್ಯಾದಿದಾರರ ತಂದೆಯ ಮೇಲೆ  ಹಾಗೂ ಅವರು ಸವಾರಿ ಮಾಡುತ್ತಿದ್ದ ಸ್ಕೂಟರ್‌ ಮೇಲೆ ಬಿದ್ದಿರುತ್ತದೆ. ಈ ಅಪಘಾತದಿಂದ ಬಾಬು ನಜೀರ್‌ಕೊಯ ರವರ ಬಲ ಕೈ, ಎದೆಯ ಭಾಗ, ಸೊಂಟ ಹಾಗೂ ಬೆನ್ನಿನ ಹಿಂಭಾಗ ಮೂಳೆ ಮುರಿತದ ಜಖಂ ಆಗಿರುತ್ತದೆ. ಅಲ್ಲದೇ ಸಹಸವಾರಿಣೆ ಫೀರ್ಮ ಅವರಿಗೆ ಎದೆಯ ಭಾಗಕ್ಕೆ ಗುದ್ದಿದ ಒಳನೋವು ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 198/2022 ಕಲಂ : 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಅಮಾಸೆಬೈಲು: ಪಿರ್ಯಾದಿದಾರರಾದ  ರಂಜನ್ (22 ),  ತಂದೆ: ರಾಜು ಪೂಜಾರಿ , ವಾಸ:  ಗುಡ್ಡೆಯಂಗಡಿ ಅರಸಮ್ಮಕಾನ್ ಶೇಡಿಮನೆ ಗ್ರಾಮ ಕುಂದಾಪುರ ತಾಲೂಕು ಇವರ ತಂದೆ  ರಾಜು ಪೂಜಾರಿ (54) ರವರು ತನ್ನ ಹೆಂಡತಿ  ಮಕ್ಕಳೊಂದಿಗೆ ವಾಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರು ಹಾಗೂ ಪಿರ್ಯಾದಿದಾರರ ತಾಯಿ ಮನೆಯಲ್ಲಿಲ್ಲದ ಸಮಯ ಪಿರ್ಯಾದಿದಾರರ  ತಂದೆ ದಿನಾಂಕ 23/11/2022 ರಂದು ಸಂಜೆ 17:30 ಗಂಟೆಯ ಸಮಯಕ್ಕೆ ಮನೆಯ ಒಳಗಡೆ ಜಂತಿಗೆ ಬಟ್ಟೆಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುತ್ತಾರೆ  ರಾಜು ಪೂಜಾರಿ ಯವರಿಗೆ ಅಮಲು ಪದಾರ್ಥ ಸೇವಿಸುವ ಚಟವಿದ್ದು ಇದರಿಂದಾಗಿ 6 ತಿಂಗಳ ಹಿಂದೆ ಲಿವರ್ ಹಾಗೂ ಕರುಳಿನ ಸಮಸ್ಯೆಯಿಂದ ಚಿಕಿತ್ಸೆ ಪಡೆದುಕೊಂಡಿದ್ದು ಆದರೂ ಸಹ  ಸರಿಯಾಗಿ ಗುಣಮುಖವಾಗದೇ ಇದ್ದು ಇದೇ ಕಾರಣಕ್ಕೆ  ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮ ಹತ್ಯೆಮಾಡಿಕೊಂಡಿರುತ್ತಾರೆ . ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 14/2022 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ: ಪಿರ್ಯಾದಿದಾರರಾದ ಶ್ರೀನಿವಾಸ ಕೆ (38), ತಂದೆ: ದುರ್ಗಾ, ವಾಸ: ಹಾಡಿಮನೆ, ನಾಯಕವಾಡಿ, ಗಿಜ್ಜಾಡಿ ಗ್ರಾಮ, ಕುಂದಾಪುರ ತಾಲೂಕು ಇವರ ಅಳಿಯಾ ಸುಜಯ್‌ (20) ರವರು ದಿನಾಂಕ 23/11/2022 ರಂದು ಸಂಗಮೇಶ್ವರ ದೇವಸ್ಥಾನದ ಕಾರ್ತಿಕ ದೀಪೋತ್ಸವದ  ಕಟ್ಟೆಪೂಜೆಯ ಸಿದ್ದತೆ ಮಾಡಲು ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ನಾಯಕವಾಡಿ ಚೆಕ್‌ಪೋಸ್ಟ್‌ಬಳಿ ಇರುವ ವಿಷ್ಣು ಮೇಸ್ತ್‌ರವರ ಮನೆಯ ಎದುರು ಇರುವ ಕಟ್ಟೆಗೆ ಮಾವಿನ ತೋರಣ ಕಟ್ಟಲು ಸಮಯ 14:40 ಗಂಟೆಗೆ  ಕಟ್ಟೆಯ ಬಳಿ ಇರುವ ಮಾವಿನ ಮರದ ಕೊಂಬೆಯನ್ನು ಕಡಿಯುವ ಬಗ್ಗೆ ಮರವನ್ನು ಹತ್ತಿ,  ಮರದ ಕೊಬೆಯನ್ನು ಕಡಿಯುವಾಗ,  ಮರದ ಕೊಂಬೆಯು ಸದ್ರಿ ಮರದ ಬಳಿ ಹಾದು ಹೋದ ಹೈಟೆನ್ಸ್ ನ್ ವಿದ್ಯುತ್‌ ತಂತಿಯ ಮೇಲೆ ಬಿದ್ದಿದ್ದರಿಂದ ಆಕಸ್ಮಿಕವಾಗಿ ವಿಧ್ಯುತ್‌ ಪ್ರವಹಿಸಿ ಮರದ ಕೊಂಬೆಯನ್ನು ಕಡಿಯುತ್ತಿದ್ದ ಸುಜಯ್‌ರವರಿಗೆ ತಗುಲಿದ್ದು, ಕೂಡಲೇ ಸ್ಥಳೀಯರ ಸಹಾಯದಿಂದ ಸುಜಯ ರವರನ್ನು ಮರದಿಂದ ಕೆಳಗೆ ಇಳಿಸಿ  ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈಧ್ಯರು ಪರೀಕ್ಷಿಸಿ  15:15 ಗಂಟೆಗೆ ಸುಜಯ್‌ರವರು ಮೃತಪಟ್ಟಿರುವುದಾಗಿ ದೃಡಪಡಿಸಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ ಠಾಣೆ ಯುಡಿಆರ್‌ ಕ್ರಮಾಂಕ 26/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

 • ಮಲ್ಪೆ: ದಿನಾಂಕ 23/11/2022 ರಂದು ಸುಷ್ಮಾ ಜಿ.ಬಿ, ಪೊಲೀಸ್‌ ಉಪನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ  ಇವರು ಠಾಣೆಯಲ್ಲಿರುವಾಗ  ಬಡನಿಡಿಯೂರು ಗ್ರಾಮದ  ಸನ್ಯಾಸಿಮಠ ಸಾರ್ವಜನಿಕ ಖಾಲಿ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವುದಾಗಿ ಬಂದ ಮಾಹಿತಿಯಂತೆ  ದಾಳಿ ನಡೆಸಿ ಜಗಾರಿ ಆಟ ಆಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಅವರಲ್ಲಿ  1) ಸರೋಜ್  ಜನ್ನಾ, 2) ಸನೋಜಾ ರಾವತ್ ,3) ಗೌತಮ್ ಸಾಹುಕ್ , 4)ರಾಜು ಬಿಸೋಯಿ, 5) ಆಕಾಶ್ , 6) ಬಬ್ಲು ಮೋಹನ್ ,7) ಕೈಲಾಸ್  ಬಿಸ್ಸೋಯಿ, 8) ತ್ರೀನಾದ್ ಬಿಸ್ಸೋಯಿ, 9) ಹಿನ್ನಾ  ಸ್ವಾಮಿ, 10) ಗೋಬ್ರಾ ಪ್ರಧಾನ್ ರವರನ್ನು ವಶಕ್ಕೆ  ಪಡೆದು  ಅವರು ಜುಗಾರಿ ಆಟಕ್ಕೆ ಬಳಸಿದ ಇಸ್ಪೀಟು ಎಲೆಗಳು 52, ಬಿಳಿ ಬಣ್ಣದ  ಸಿಮೆಂಟ್ ಚೀಲ  ಹಾಗೂ  ಜೂಜಾಟಕ್ಕೆ ಬಳಸಿದ ಒಟ್ಟು ಹಣ 3140/- ರೂಪಾಯಿ   ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 102/2022 ಕಲಂ: 87 ಕೆಪಿ ಅ್ಯಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಸತೀಶ್ ವಿ (42), ತಂದೆ: ವಾಸು, ವಿಳಾಸ: ನಂಬ್ರ: 5-70, ಶ್ರೀ ಬಬ್ಬುಸ್ವಾಮಿ ದೇವಸ್ಥಾನದ ಹತ್ತಿರ ಎನ್‌ ಹೆಚ್‌ 66, ಉಡುಪಿ ತಾಲೂಕು ಇವರು ಸಹಕಾರಿ ವ್ಯವಸಾಯ ಬ್ಯಾಂಕ್‌ ಹೆರ್ಗ ಇದರ ಶಾಖಾ ಕಛೇರಿ ಅಂಬಾಗಿಲು ಇಲ್ಲಿಗೆ ಪ್ರತಿ ತಿಂಗಳಂತೆ ದಿನಾಂಕ 21/11/2022 ರಂದು ಬೆಳಿಗ್ಗೆ 11:30 ಗಂಟೆಗೆ ಪಡಿತರ ಅಂಗಡಿಗೆ ಹೋದಾಗ ಈಗ ಸಮಯವಿಲ್ಲ ಸಂಜೆ ಬನ್ನಿ ಎಂದು ಹೇಳಿದಂತೆ ಪಿರ್ಯಾದಿದಾರರು ಸಂಜೆ 4:15 ಗಂಟೆಗೆ ಹೋದಾಗ ಗ್ರಾಹಕರೊಬ್ಬರಿಗೆ ಟೋಕನ್‌ ನೀಡದೇ ಪಡಿತರ ಕೊಟ್ಟಾಗ ಯಾಕೆ ನಂತರ ಬಂದಿರುವವರಿಗೆ ಟೋಕನ್‌ ಇಲ್ಲದೇ ಕೊಡುತ್ತೀರಿ ಅವರು ಸಾಲಿನಲ್ಲಿ ನಿಲ್ಲಬೇಕಿತ್ತಲ್ಲ ಎಂದಾಗ ಆರೋಪಿ 1) ಸಚ್ಚೇಂದ್ರ ನಾಯಕ್ ಇವರು ಒಳಗಿನಿಂದ ಹೊರಗೆ ಬಂದು ಪಿರ್ಯಾದಿದಾರರನ್ನು ಹೊಡೆಯಲು ಬಂದುದಲ್ಲದೇ ಅವಾಚ್ಯವಾಗಿ ಬೈದಿದ್ದು , 2ನೇ ಆರೋಪಿತೆ ಅಶ್ವಿನಿ ಶೆಟ್ಟಿ ಕೂಡಾ ಹೊರಗೆ ಬಂದು ಪಿರ್ಯಾದಿದಾರರ ಕೈಯಲ್ಲಿದ್ದ ರೇಶನ್‌ ಕಾರ್ಡ್‌ ನ್ನು ಕಸಿದುಕೊಂಡು ಮುಖಕ್ಕೆ ಕಾರ್ಡ್‌ ನ್ನು ಎಸೆದು  ಸಾರ್ವಜನಿಕರ ಎದುರು ಹಿಯಾಳಿಸಿ ಬೈದು ಅವಮಾನ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 169/2022 ಕಲಂ: 504,506 ಜೊತೆಗೆ 34 ಐಪಿಸಿ & ಕಲಂ: 3(1)(r) 3(1)(s) SC ST ACT-1989 ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 24-11-2022 10:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080