ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಪಡುಬಿದ್ರಿ: ಪಿರ್ಯಾದಿ ಮಂಜುನಾಥ ದೇವೇಂದ್ರಪ್ಪ ಆಡಿನ, ಪ್ರಾಯ: 20 ವರ್ಷ, ತಂದೆ: ದೇವಪ್ಪ ಆಡಿನ, ವಾಸ: ಚಿಕನಾಳ ಹಳ್ಳಿ, ಚಿಕನಾಳ ಗ್ರಾಮ, ಇವರ ತಂದೆ ದೇವೇಂದ್ರಪ್ಪ @ ದೇವಪ್ಪ ಆಡಿನ (45) ಎಂಬುವರು ಸುಮಾರು 05 ವರ್ಷಗಳಿಂದ ಬಡಾ ಎರ್ಮಾಳಿನಲ್ಲಿ ಸರೋಜಿನಿ ಶೆಟ್ಟಿ ಎಂಬುವರ ಬಾಬ್ತು ರೂಮಿನಲ್ಲಿ ಬಾಡಿಗೆಗೆ  ವಾಸವಾಗಿ, ಕೂಲಿ ಕೆಲಸ ಮಾಡಿಕೊಂಡಿದ್ದು, ನಿನ್ನೆ ದಿನ ದಿನಾಂಕ: 23.11.2022 ರಂದು ರಾತ್ರಿ ಊಟಕ್ಕೆಂದು ಅವರ ಜೊತೆ ಕೆಲಸ ಮಾಡುವ ಮಹಾಂತೇಶ, ಷಣ್ಮುಖ ಎಂಬುವರ ಜೊತೆ ಊಟಕ್ಕೆಂದು ಹೋಗಿ ಸಮಯ ಸುಮಾರು 20:30 ಗಂಟೆಯ ವೇಳೆಗೆ ಕಾಪು ತಾಲೂಕು ಬಡಾ ಎರ್ಮಾಳು ಗ್ರಾಮದ ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುವ ಏಕಮುಖ ರಸ್ತೆಯ ಪಶ್ಚಿಮ ಬದಿಯಲ್ಲಿ ಕಲ್ಯಾಣಿ ಬಾರ್‌‌ಕಡೆಯಿಂದ ಪಡುಬಿದ್ರಿ ಕಡೆಗೆ ನಡೆದುಕೊಂಡು ಬರುತ್ತಿರುವಾಗ KA-20-EJ--9421 ನೇ ನಂಬ್ರದ ಮೋಟಾರ್‌ಸೈಕಲ್ ಸವಾರ ಅಶ್ರಫ್ ಮೊಹಮ್ಮದ್ ಸುಲೈಮಾನ್ ಎಂಬುವರು ತನ್ನ ಮೋಟಾರ್‌ಸೈಕಲ್ಲಿನ ಹಿಂಬದಿಯಲ್ಲಿ ಮಹಮ್ಮದ್ ಜುಬೇರ್ ಅಲಿ ಎಂಬುವನನ್ನು ಕುಳ್ಳಿರಿಸಿಕೊಂಡು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ದೇವಪ್ಪ ಆಡಿನ ರವರಿಗೆ ಡಿಕ್ಕಿ ಹೊಡೆದು, ಮೋಟಾರ್‌‌ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಸದ್ರಿ  ಅಪಘಾತದಿಂದ ದೇವಪ್ಪ ಆಡಿನ ರವರ ತಲೆಗೆ, ಎದೆಗೆ, ಎಡಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ನಂತರ ಗಾಯಾಳು ದೇವಪ್ಪ ಆಡಿನ ರವರನ್ನು ಚಿಕಿತ್ಸೆಯ ಬಗ್ಗೆ ಉಡುಪಿಯ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ನಂತರ ಅಲ್ಲಿನ ವೈದ್ಯಾಧಿಕಾರಿಯವರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆತಂದು ಒಳರೋಗಿಯಾಗಿ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದ ದೇವಪ್ಪ ಅಡಿನ ರವರು ಚಿಕಿತ್ಸೆಗೆ ಸ್ಪಂದಿಸದೇ ಈ ದಿನ ದಿನಾಂಕ: 24.11.2022 ರಂದು ರಾತ್ರಿ 00:30 ಗಂಟೆಗೆ ಮೃತಪಟ್ಟಿರುವುದಾಗಿದೆ. ಅಪಘಾತವುಂಟು ಮಾಡಿದ ಬೈಕ್ ಸವಾರ ಅಶ್ರಫ್ ಮೊಹಮ್ಮದ್ ಸುಲೈಮಾನ್ ಮತ್ತು ಸಹ ಸವಾರ ಮಹಮ್ಮದ್ ಜುಬೇರ್ ಅಲಿ ಎಂಬುವರಿಗೆ ಸಾಧಾರಣ ಸ್ವರೂಪದ ಗಾಯಗಳಾಗಿದ್ದು, ಚಿಕಿತ್ಸೆಯ ಬಗ್ಗೆ ಉಡುಪಿಯ ಹೈಟೆಕ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ. ಅಪರಾಧ ಕ್ರಮಾಂಕ: 150/2022 ಕಲಂ: 279, 337, 304(A) ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾಪು: ಪಿರ್ಯಾದಿ ಶ್ರೀಮತಿ ಲತಾ ಪ್ರಾಯ : 43 ವರ್ಷ  ಗಂಡ: ಸುಧಾಕರ ಪಾಲನ್ ವಾಸ : ಗಣೇಶ್ ಬೇಕರಿ, ಬಬ್ಬರ್ಯಗುಜ್ಜ ಕೊರಂಗ್ರಪಾಡಿ, ಅಲೆವೂರ್ ಗ್ರಾಮ ಇವರು ದಿನಾಂಕ:23/11/2022 ರಂದು ಚಿಕ್ಕಪ್ಪ ಮೊಹನ ಅಂಚನ್ ಪ್ರಾಯ : 42 ವರ್ಷ ರವರ  ಅವರು  ಸವಾರಿಕೊಂಡಿದ್ದ ಕೆ.ಎ-20- ಇ.ಎಪ್.-2923 ನೇ ಮೋಟಾರು ಸೈಕಲ್‌ನಲ್ಲಿ  ಹಿಂಬದಿ ಸವಾರನಾಗಿ ಕುಳಿತು  ಕಲ್ಲಾಪು ಜಂಕ್ಷನ್‌ ಬಳಿ  ಕಟಪಾಡಿಯ ಒಳ ರಸ್ತೆಯಿಂದ ಕಟಪಾಡಿಯ  ಕೆನರಾ ಬ್ಯಾಂಕ್‌ ಸಮೀಪವಿರುವ ಜಂಕ್ಷನ್‌ ಬಳಿ ತಲುಪುತ್ತಿದ್ದಂತೆ ಸಂಜೆ 5:45 ಗಂಟೆಗೆ ರಾಜೇಶ್‌ ಪೂಜಾರಿ ರವರು  ತನ್ನ  ಕೆ.ಎ-20-ಇ.ಜೆಡ್-‌ 6731 ನೇ ಸ್ಕೂಟರ್‌ ನ್ನು ಇಂದಿರಾನಗರ ಕಡೆಯಿಂದ ಒಳರಸ್ತೆಯಾಗಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರು ಸೈಕಲ್‌ಗೆ ಎಡ ಬದಿಯಿಂದ ಡಿಕ್ಕಿ ಹೊಡೆದಿದ್ದು.  ಕೂಡಲೇ ಮೊಹನ ಅಂಚನ್‌ರವರು ಮೋಟಾರ್‌ ಸೈಕಲ್ಲಿನ  ಬ್ರೇಕ್‌  ಹಾಕಿ ಮೋಟಾರ್‌ ಸೈಕಲ್‌ ಕೆಳಗೆ ಬೀಳದಂತೆ ಬಲಬದಿಯ ಕಾಲನ್ನು ನೆಲಕ್ಕೆ ಊರಿದ ಪರಿಣಾಮ  ಮೋಹನ್‌ ಅಂಚನ್‌ ರವರ ಬಲಬದಿಯ ಕಾಲಿನ ಮೂಳೆ ಮುರಿತವಾಗಿದ್ದು. ಅವರನ್ನು ಒಂದು ವಾಹನದಲ್ಲಿ ಉಡುಪಿಯ ಆದಶ೯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಮೊಹನ ಅಂಚನ್‌ರವರನ್ನು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ:  128/2022 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿ ವಿನೋದ್ ಸುವರ್ಣ ಪ್ರಾಯ 44 ವರ್ಷ ತಂದೆ ವಿಠಲ ಕುಂದರ್  ವಾಸ  ತೊಟ್ಟಂ  ತೆಂಕನಿಡಿಯೂರು  ಗ್ರಾಮ ಇವರು IND-KA-02-4457 ನಂಬ್ರದ  ಶ್ರೀ  ಪರಮೇಶ್ವರ  ಎಂಬ  ಹೆಸರಿನ   ಮೀನುಗಾರಿಕೆ  ಬೋಟ್  ಹೊಂದಿದ್ದು  ಸದ್ರಿ   ಬೋಟಿನಲ್ಲಿ  ತಾಂಡೆಲನಾಗಿ  ಅಲಗಸ್ವಾಮಿ  ಸೇಂತೂರು ಮತ್ತು  ಇತರರು   ಮೀನುಗಾರಿಕೆ  ಕೆಲಸ   ಮಾಡಿಕೊಂಡಿರುತ್ತಾರೆ, ಮೀನುಗಾರಿಕೆಗೆ  ಹೋಗುವ  ಬಗ್ಗೆ  ಒರ್ವ  ವ್ಯಕ್ತಿ ಯ ಅವಶ್ಯಕತೆ  ಇದ್ದ   ಕಾರಣ  ಬೋಟಿನ  ತಾಂಡೆಲ  ಮಲ್ಪೆ  ಬಂದ ರಿನಲ್ಲಿ  ಮೀನುಗಾರಿಕೆ  ಕೆಲಸ  ಮಾಡಿಕೊಂಡಿದ್ದ   ಅಪರಿಚಿತ   ಒರ್ವ ವ್ಯಕ್ತಿಯನ್ನು  ಕರೆದುಕೊಂಡು   ಪಿರ್ಯಾದಿದಾರರ ಬೋಟಿನಲ್ಲಿ  ಮೀನುಗಾರಿಕೆಯ ಬಗ್ಗೆ ಅರಬ್ಬಿ ಸಮುದ್ರಕ್ಕೆ ಮಲ್ಪೆ  ಬಂದರಿನಿಂದ ದಿನಾಂಕ 31-10-2022  ರಂದು  ಬೆಳಿಗ್ಗೆ 10-00 ಗಂಟೆಗೆ  ಹೊರಟು ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದು ದಿನಾಂಕ 03-11-2022  ರಂದು  ಮೀನುಗಾರಿಕೆ   ಮಾಡುತ್ತಿರುವ  ಸಮಯ ಸಂಜೆ ಸುಮಾರು 6:00 ಗಂಟೆಗೆ ಅಪರಿಚಿತ ವ್ಯಕ್ತಿ ಪ್ರಾಯ ಸುಮಾರು 40-45  ವರ್ಷ  ಈತನು ಬೋಟಿನಿಂದ  ಆಕಸ್ಮಿಕವಾಗಿ  ಕಾಲುಜಾರಿ ಸಮುದ್ರ ದ  ನೀರಿಗೆ  ಬಿದ್ದು   ನೀರಿನಲ್ಲಿ  ಮುಳುಗಿ ಮೃತ ಪಟ್ಟ  ಬಗ್ಗೆ  ಮೀನುಗಾರಿಕ ಬೋಟಿನ ತಾಂಡೇಲ  ಪಿರ್ಯಾದಿದಾರರಿಗೆ   ಮಾಹಿತಿ ನೀಡಿರುತ್ತಾರೆ, ದಿನಾಂಕ 04-11-2022 ರಂದು  ಸದ್ರಿ ಅಪರಿಚಿತ  ವ್ಯಕ್ತಿಯ  ಮೃತ ದೇಹವನ್ನು    ಬೋಟಿನಲ್ಲಿ  ತೆಗೆದುಕೊಂಡು  ಮಲ್ಪೆ   ಬಾಪು ತೋಟ ದಕ್ಕೆ  ತೆಗೆದುಕೊಂಡು  ಬಂದ  ಬಗ್ಗೆ ಮಾಹಿತಿ  ತಿಳಿದು  ಪಿರ್ಯಾದಿದಾರರು  ಹೋಗಿ  ನೋಡಲಾಗಿ   ಸದ್ರಿ  ಮೃತ ದೇಹದ  ಬಾಯಿಯಲ್ಲಿ ಬಿಳಿ  ಬಣ್ಣದ  ನೊರೆ  ಬರುತ್ತಿದ್ದು ,  ಹಣೆಯ ಮೇಲೆ ಗಾಯ ಆಗಿರುತ್ತದೆ.  ಮೃತನು  ಕಪ್ಪು  ಬಣ್ಣದ  ತುಂಬು ತೋಳಿನ ಶರ್ಟ್  , ಮತ್ತು  ಕಪ್ಪು ಬಣ್ಣ ದ  ಒಳ ಚಡ್ಡಿ ಧ ರಿಸಿದ್ದು  ಮೃತರ ಕೈಯಲ್ಲಿ  ಚಂದ್ರ ರಾಥೋಡ್ ಹೆಸರಿನ ಅಚ್ಚೆ ಹಾಗೂ  ಕೃಷ್ಣ ದೇವರ ಚಿತ್ರದ  ಅಚ್ಚೆ ಇರುತ್ತದೆ .  ಸದ್ರಿ  ಮೃತ ದೇಹವನ್ನು  ಉಡುಪಿ ಜಿಲ್ಲಾ ಆಸ್ಪತ್ರೆಯ  ಶವ ಗಾರದಲ್ಲಿ   ಇಡಲಾಗಿದೆ . ಸದ್ರಿ  ಅಪರಿಚಿತ  ವ್ಯಕ್ತಿಯ  ವಾರಿಸುದಾರರ   ಪತ್ತೆ  ಬಗ್ಗೆ ಪಿರ್ಯಾದಿದಾರರು ಎಲ್ಲಾ ಕಡೆ ಪ್ರಯತ್ನಿಸಿ ಈ ದಿನ ಠಾಣೆಗೆ ಬಂದು ದೂರು ನೀಡಿದಾಗಿರುತ್ತದೆ. ಈ ಬಗ್ಗೆ ಮಲ್ಪೆ  ಠಾಣಾ ಯುಡಿಆರ್ ನಂಬ್ರ 69  /2022 . ಕಲಂ- 174   ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 24-11-2022 06:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080