ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 23/11/2021  ರಂದು  ಮಧ್ಯಾಹ್ನ 12:10 ಗಂಟೆಗೆ, ಕುಂದಾಪುರ ತಾಲೂಕಿನ ಕುಂಭಾಶಿ ಗ್ರಾಮದ  ಆನೆಗುಡ್ಡೆ  ಸ್ವಾಗತ ಗೋಪುರದ ಬಳಿ ಪೂರ್ವ ಬದಿಯ  NH 66  ರಸ್ತೆಯಲ್ಲಿ ಆಪಾದಿತ ಎಮ್‌‌‌. ಎಸ್‌‌‌. ಜಯರಾಜ್‌ ಎಂಬುವವರು KA-20-B-4886  ಮಾರುತಿ Omni  ವ್ಯಾನ್‌‌‌ನ್ನು ಕುಂದಾಪುರ ಕಡೆಯಿಂದ  ತೆಕ್ಕಟ್ಟೆ ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಪೂರ್ವ  ಬದಿಯ   NH 66   ರಸ್ತೆಯ ಬದಿಯಲ್ಲಿ  ರಸ್ತೆ ದಾಟಲು ಪಿರ್ಯಾದಿದಾರರಾದ ಎಂ.ಎಸ್‌‌‌. ಗಣಪತಿ  (67), ತಂದೆ: ದಿ. ಸುಬ್ಬಣ್ಣಯ್ಯ,ವಾಸ: ನಂಬ್ರ 220, ಕುದ್ರುಕೆರೆ ಬೆಟ್ಟು ರಸ್ತೆ, ಮಾರ್ಕೋಡು, ಕೊಟೇಶ್ವರ ಗ್ರಾಮ, ಕುಂದಾಪುರ ಇವರು KA-20-EH-1743 Honda Activa ಸ್ಕೂಟರ್‌‌ನಲ್ಲಿ ಅವರ ಪತ್ನಿ ಸರೋಜಾಳನ್ನು ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ನಿಲ್ಲಿಸಿಕೊಂಡಿದ್ದ ಸ್ಕೂಟರ್‌‌ಗೆ ಡಿಕ್ಕಿ  ಹೊಡೆದು ಬಳಿಕ ಆಪಾದಿತನಿಗೆ  Omni  ವ್ಯಾನ್‌‌‌ನ ಹತೋಟಿ  ತಪ್ಪಿ ರಸ್ತೆಯ ಬಲಬದಿಗೆ ಚಲಾಯಿಸಿ ತೆಕ್ಕಟ್ಟೆ ಕಡೆಯಿಂದ ಬಂದು ಓಪನ್‌ ‌ಡಿವೈಡರ್‌ ‌ಬಳಿ “ಯೂ ಟರ್ನ್‌”  ತೆಗೆದುಕೊಳ್ಳಲು ಅಶೋಕ ಕುಲಾಲ ಎಂಬುವವರು ನಿಲ್ಲಿಸಿಕೊಂಡಿದ್ದ KA-20-MD-0860ನೇ ಕಾರಿಗೆ  ಡಿಕ್ಕಿ ಹೊಡೆದಿರುವುದಾಗಿದೆ. ಈ  ಅಪಘಾತದಿಂದ ಪಿರ್ಯಾದಿದಾರರಾದ ಎಂ.ಎಸ್‌‌‌. ಗಣಪತಿ  ಹಾಗೂ ಸರೋಜರವರು ಗಾಯಗೊಂಡು ಕೊಟೇಶ್ವರ  ಎನ್‌. ಆರ್‌ಆಚಾರ್ಯ  ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ  ದಾಖಲಾಗಿರುತ್ತಾರೆ . ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 96/2021 ಕಲಂ:  279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ  22/11/2021 ರಂದು ಬ್ರಹ್ಮಾವರದ ಶ್ಯಾಮಿಲಿ ಶನಾಯ ಹಾಲ್ ನಲ್ಲಿ ನಡೆದ ಆರಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿದ ಪಿರ್ಯಾದಿದಾರರಾದ ಜಯಕರ (42), ತಂದೆ:ನಾರಾಯಣ ನಾಯ್ಕ, ವಾಸ:ಮರತೂರು ಮೊಳಹಳ್ಳಿ ಗ್ರಾಮ ಮತ್ತು ಅಂಚೆ ಕುಂದಾಪುರ ತಾಲೂಕು ಇವರು ಹಾಗೂ ಅವರ ಮಾವ ಭದ್ರ ಮೋಗವೀರ ರವರು ಮಾತ್ರೆ ತರಲೆಂದು ಕುಂದಾಪುರ-ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯನ್ನು ದಾಟಿ ಉಡುಪಿ –ಕುಂದಾಪುರ ರಸ್ತೆ ಬಳಿ ಅಂದರೆ ವಾರಂಬಳ್ಳಿ ಗ್ರಾಮದಲ್ಲಿರುವ ಮಹೇಶ ಆಸ್ಪತ್ರೆಯ ಆಟೋ ನಿಲ್ದಾಣದ ಎದುರು ರಸ್ತೆಯ ಅಂಚಿನಲ್ಲಿ ನಿಂತಿದ್ದಾಗ ಸಂಜೆ 7:30 ಗಂಟೆಗೆ ಆರೋಪಿ ನಜೀರ್ ಅಹಮ್ಮದ್ ತನ್ನ KA-20-MB-0759 ಮಾರುತಿ ಓಮಿನಿ ಕಾರನ್ನು ಬ್ರಹ್ಮಾವರ ಕಡೆಯಿಂದ ಚಲಾಯಿಸಿಕೊಂಡು ಬಂದು ಮಹೇಶ ಆಸ್ಪತ್ರೆಯ “U” Turn ನಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದು ಭದ್ರ ಮೊಗವೀರರವರ ಬಲಭಾಗದ ಸೊಂಟಕ್ಕೆ ಡಿಕ್ಕಿ ಹೊಡೆದಿದ್ದು ಈ ಅಪಘಾತದ ಪರಿಣಾಮ ಭದ್ರ ಮೊಗವೀರವರು ರಸ್ತೆಗೆ ಬಿದ್ದು ಅವರ ತಲೆಯ ಹಿಂಬಾಗ ರಕ್ತಗಾಯವಾಗಿದ್ದು ಹಾಗೂ ಸೊಂಟಕ್ಕೆ ಒಳಜಖಂ ಆಗಿರುತ್ತದೆ, ಗಾಯಾಳುವನ್ನು ಮಹೇಶ ಆಸ್ಪತ್ರೆಗೆ ಕರೆದುಕೊಂಡು ಹೊಗಿ ಅಲ್ಲಿಂದ  ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಕೆ.ಎಮ್‌ಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 189/2021 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ದಿನಾಂಕ  23/11/2021 ರಂದು ಶಂಕರ ಖಾರ್ವಿ ಎಂಬುವವರು KA-20-EA-8942 ನೇ ಮೋಟಾರ್ ಸೈಕಲ್ ನಲ್ಲಿ ಸೀತಾ ಎಂಬುವವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮರವಂತೆ ಸಾಧನ ಮಾರ್ಗದ ಕಡೆಯಿಂದ ಎನ್‌.ಹೆಚ್‌-66 ರ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಮಧ್ಯಾಹ್ನ 2:00 ಗಂಟೆಗೆ ಜಕ್ಕನಕಟ್ಟೆ ಎಂಬಲ್ಲಿಗೆ ತಲುಪುವಾಗ ಎದುರಿನಿಂದ ಹಸುವೊಂದು ಅಡ್ಡ ಬಂದಿದ್ದು, ಹಸುವನ್ನು ತಪ್ಪಿಸುವ ಸಲುವಾಗಿ ಮೋಟಾರ್ ಸೈಕಲ್‌ಸವಾರ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಸಹಸವಾರರಾದ ಸೀತಾ ರವರು ರಸ್ತೆಗೆ ಬಿದ್ದು, ತಲೆಗೆ ತೀವೃ ಗಾಯಗೊಂಡು ರಕ್ತಸ್ರಾವವಾಗಿ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 108/2021  ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಶೋಭಾ ದೇವಾಡಿಗ (62), ಗಂಡ: ದಿವಂಗತ. ರಾಧಾಕೃಷ್ಣ ದೇವಾಡಿಗ, ವಾಸ: ಅಂಬಾ ಬೇಕರಿ ಬಳಿ, ಜೋಡುರಸ್ತೆ, ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 23/11/2021 ರಂದು 17:45 ಗಂಟೆಗೆ ಮನೆಯಿಂದ ವಾಕಿಂಗ್ ಮಾಡುವ ಸಲುವಾಗಿ ಹಿರ್ಗಾನ ಗೊರಟ್ಟಿ ಚರ್ಚ್ ಕಡೆಗೆ ಹೊರಟು ಹಿರ್ಗಾನ ಚರ್ಚ್ ತಲುಪಿ ವಾಪಾಸು ಮನೆ ಕಡೆಗೆ ರಸ್ತೆಯ ಎಡಬದಿಯಲ್ಲಿ ಪೈಪ್ ಲೈನ್ ಕೆಲಸ ನಡೆಯುತಿದ್ದ ಕಾರಣ ಪಿರ್ಯಾದಿದಾರರ ಬಲಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವ ಸಮಯ 18:45 ಗಂಟೆಗೆ ಶಕ್ತಿ ನಗರ ಕ್ರಾಸ್ ಬಳಿ ತಲುಪುವಾಗ ಎದುರಿನಿಂದ KA-19-EM-8074 ನೇ ನೊಂದಣಿ ಸಂಖ್ಯೆಯ ಹಿರೋ ಕಂಪನಿಯ ದ್ವಿ ಚಕ್ರ ವಾಹನದ ಸವಾರ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಡಾಂಬರು ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರ ಬಲಗೈನ ಮಣಿಗಂಟಿಗೆ ಮೂಳೆ ಮುರಿತ ಹಾಗೂ ಬಲಕಾಲಿನ ಮೊಣಕಾಲಿಗೆ ಗುದ್ದಿದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 154/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಸುಂದರ ಆಚಾರ್ಯ (54), ತಂದೆ: ದಿ. ಶಂಕರ ಆಚಾರ್ಯ , ವಾಸ: ನಂಬ್ರ: 3/20, ಸುಮಂತ ನಿಲಯ, ಮಟಪಾಡಿ ರಸ್ತೆ, ಚಾಂತಾರು ಗ್ರಾಮ, ಬ್ರಹ್ಮಾವರ ತಾಲೂಕು ಇವರು HONDA CD 110 Dream ಮೋಟಾರ್‌ಸೈಕಲ್‌ ನಂಬ್ರ KA-20-EV-6599 (Chassis No: ME4JC892FLG005917, Engine No: JC89EG0012459) ನೇದರ ಆರ್‌.ಸಿ ಮಾಲಕರಾಗಿದ್ದು  ಮೋಟಾರ್‌ಸೈಕಲ್‌ನ್ನು ದಿನಾಂಕ 23/11/2021 ರಂದು 14:15 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕೆ.ಎಂ ಮಾರ್ಗದಲ್ಲಿರುವ ರಾಧಾ ಮೆಡಿಕಲ್‌ಎದುರು ರಸ್ತೆ ಬದಿಯಲ್ಲಿ ಕೀ ಸಮೇತ ನಿಲ್ಲಿಸಿ, ಮೆಡಿಕಲ್‌ ಒಳಗೆ ಹೋಗಿ ಕೆಲಸ ಮುಗಿಸಿ ವಾಪಾಸು 14:35 ಗಂಟೆಗೆ ವಾಪಾಸು ಬಂದು ನೋಡಿದಾಗ ಬೈಕ್‌ ಇಟ್ಟ ಜಾಗದಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್‌ಸೈಕಲ್‌ನ ಅಂದಾಜು ಮೌಲ್ಯ ರೂಪಾಯಿ 80,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 170/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾಪು: ಪಿರ್ಯಾದಿದಾರರಾದ ನೆಲ್ಸನ್ ಲೋಬೋ (36), ತಂದೆ : ಜಾನ್  ಬಿ.  ಲೋಬೋ,  ವಾಸ : 4/20 ಬೊಳ್ಜೆ ಉದ್ಯಾವರ  ಗ್ರಾಮ ಉಡುಪಿ  ತಾಲೂಕು ಮತ್ತು ಜಿಲ್ಲೆ ಇವರ ತಂದೆ ಜಾನ್  ಬಿ.  ಲೋಬೋ  (80) ರವರು  ದಿನಾಂಕ 23/11/2021 ರಂದು ಮಧ್ಯಾಹ್ನ 2:30  ಗಂಟೆಗೆ ಮನೆಯಲ್ಲಿ  ಊಟ ಮಾಡಿಕೊಂಡು ತೋಟದ ಕಡೆ ಕೃಷಿ ಕೆಲಸದ ಬಗ್ಗೆ  ಹೋಗಿದ್ದು, ಅವರಿಗೆ ಮೊದಲಿನಿಂದಲೂ  ದೃಷ್ಟಿ ದೋಷವಿದ್ದು, ಸಂಜೆಯಾದರೂ ಮನೆಗೆ ವಾಪಾಸ್ಸು  ಮನೆಗೆ ಬಾರದೆ ಇದ್ದು, ಪಿರ್ಯಾದಿದಾರರು ಅವರ ತಾಯಿಯ  ಹತ್ತಿರ ತಂದೆ ಬರಲಿಲ್ಲವೆಂದು ತಿಳಿಸಿ ತೋಟದ ಕಡೆ ತಂದೆಯನ್ನು ಹುಡುಕುತ್ತಾ ಹೋದಾಗ ಪಿರ್ಯಾದಿದಾರರ ತೋಟದಲ್ಲಿರುವ ಆವರಣ ಇಲ್ಲದ ಕೆರೆಯ ಬಳಿ ಅವರ ತಂದೆಯ ಚಪ್ಪಲಿ ಹಾಗೂ ಹಾರೆ ಇರುವುದನ್ನು ಕಂಡು  ಕೆರೆಯ ಸಮೀಪ ಹೋಗಿ ನೋಡುವಾಗ  ಪಿರ್ಯಾದಿದಾರರ ತಂದೆ ನೀರಿನಲ್ಲಿ  ತೇಲುತ್ತಿದ್ದು ಪಿರ್ಯಾದಿದಾರರು ಬೊಬ್ಬೆ ಹಾಕಿ ಹತ್ತಿರದ ಮನೆಯವರನ್ನು ಕರೆದು ಪಿರ್ಯಾದಿದಾರರು ಅವರ  ತಂದೆಯನ್ನು ದಡದ ಮೇಲೆ ತಂದು ನೋಡುವಾಗ ಮಾತನಾಡದೇ ಇದ್ದು ಅವರು ಮೃತ ಪಟ್ಟಿರುವುದಾಗಿ ತಿಳಿಯಿತು. ಪಿರ್ಯಾದಿದಾರರ ತಂದೆಯವರೂ ಅವರ  ತೋಟದಲ್ಲಿರುವ ಕೆರೆಯ ದಂಡೆಯಲ್ಲಿ ಕೃಷಿ ಕೆಲಸದಲ್ಲಿರುವಾಗ ಆಕಸ್ಮಿಕವಾಗಿ ಆಯಾ ತಪ್ಪಿ ಕೆರೆಯ ನೀರಿಗೆ ಬಿದ್ದು  ದಿನಾಂಕ 23/11/2021 ಮಧ್ಯಾನ್ಹ 2:30 ಗಂಟೆಯಿಂದ  ಸಂಜೆ 6:00 ಗಂಟೆಯ ನಡುವಿನ ಅವಧಿಯಲ್ಲಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 42/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 23/11/2021 ರಂದು ಪಿರ್ಯಾದಿದಾರರಾದ ಅನಂತ (50), ತಂದೆ: ದಿ. ಬಸವ ಮಡಿವಾಳ, ವಾಸ: ಮುದ್ದು ಸ್ವಾಮಿ ದೇವಸ್ಥಾನದ ಹತ್ತಿರ,” ಮಂಜುನಾಥ’ , 33 ನೇ ಶಿರೂರು ಗ್ರಾಮ, ಬ್ರಹ್ಮಾವರ ತಾಲೂಕು ಹಾಗೂ ಅವರ ಪರಿಚಯದ ಬಿಲ್ಲಾಡಿ ಗ್ರಾಮದ ಅರಾಡಿ ವಾಸಿಯಾದ ಚಂದ್ರ (32) ಎಂಬುವವರು ಉದಯ್ ಎಂಬುವರು ಹೆಗ್ಗುಂಜೆ ಗ್ರಾಮದ ಮೈರ್‌ಕೋಮೆ ಸೂರ್ಯ ಪ್ರಕಾಶ್ ರವರ ಮನೆಯ ತೋಟದ ಕೆಲಸಕ್ಕೆಂದು ಹೇಳಿ ಕರೆದುಕೊಂಡು ಹೋಗಿ ಬಿಟ್ಟಿದ್ದು , ಅಲ್ಲಿ ಅವರ ಮನೆಯ ತೋಟದಲ್ಲಿರುವ ಅಡಿಕೆ ಗಿಡಗಳಿಗೆ ಪುಡಿ ಗೊಬ್ಬರವನ್ನು ಸೇರಿಸುತ್ತಿರುವಾಗ ಮಧ್ಯಾಹ್ನ 3:00 ಗಂಟೆಯ ಸುಮಾರಿಗೆ ಚಂದ್ರ ರವರಿಗೆ ಫೀಡ್ಸ್ ( ಮೂರ್ಛೆ ರೋಗ) ಬಂದತ್ತಾಗಿ ಅಡಿಕೆ ಗಿಡದ ಹೊಂಡಕ್ಕೆ ಬಿದ್ದರು. ಕೂಡಲೇ ಚಂದ್ರ ರವರನ್ನು ಎತ್ತಿ ಸೂರ್ಯ ಪ್ರಕಾಶ್ ರವರ ಮನೆಯ ಅಂಗಳಕ್ಕೆ ತಂದು ಉಪಚರಿಸಿ, ಈ ಬಗ್ಗೆ ಉದಯ್ ರವರಿಗೆ ತಿಳಿಸಿದಾಗ ಚಂದ್ರ ಅವರಿಗೆ ಫೀಡ್ಸ್ ಖಾಯಿಲೆ ಇರಬಹುದು, ಅವರಿಗೆ ಮೊದಲಿನಿಂದಲೂ ಹೀಗೆ ಆಗುತ್ತಿದೆ, ಸ್ವಲ್ಪ ಹೊತ್ತಿನ ನಂತರ  ಸರಿ ಹೋಗುತ್ತದೆ ಎಂದು ತಿಳಿಸಿದರು. ಆದರೇ ಚಂದ್ರ ಎದುರುಸಿರು ಬಿಡುತ್ತಿದ್ದು ಮಾತನಾಡುತ್ತಿರಲಿಲ್ಲ  ಬಳಿಕ ಮನೆಯ ಮಾಲಿಕ ಸೂರ್ಯ ಪ್ರಕಾಶ್ ರವರು ಬಿಲ್ಲಾಡಿಯ ಡಾ. ಜೀವನ್‌ ಎಂಬುವವರಿಗೆ ಫೋನ್ ತಿಳಿಸಿದಾಗ ಅವರು ಸಂಜೆ 5:30 ಗಂಟೆಗೆ ಬಂದು ಚಂದ್ರ ರವರನ್ನು ಪರೀಕ್ಷಿಸಿ ಈಗಾಗಲೇ ಮೃತ ಪಟ್ಟಿರುವ ಬಗ್ಗೆ ತಿಳಿಸಿರುತ್ತಾರೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 68/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ದಿನಾಂಕ 07/11/2021 ರಂದು ಬೈಂದೂರು ಪೊಲೀಸ್ ಠಾಣೆ ಪ್ರಕರಣದಲ್ಲಿ ಆಪಾದಿತ ಮಹಮ್ಮದ್ ಸಿಯಾಬ್ ಎಂಬಾತನನ್ನು ಪವನ್ ನಾಯಕ್, ಪೊಲೀಸ್ ಉಪನಿರೀಕ್ಷಕರು, ಬೈಂದೂರು ಪೊಲೀಸ್ ಠಾಣೆ ಇವರು ವಶಕ್ಕೆ ಪಡೆದಿದ್ದು, ವ್ಯಕ್ತಿಯನ್ನು ವಿಚಾರಿಸಲಾಗಿ ಆತನು ಅಮಲಿನಲ್ಲಿದ್ದು ಆತನ ಹೆಸರು ಕೇಳಿದಾಗ ತೊದಲುತ್ತಾ ಮಹಮ್ಮದ್ ಸಿಯಾಬ್ (20), ತಂದೆ: ಮಹಮ್ಮದ್ ರಫೀಕ್, ವಾಸ: ಮುಬಾರಕ್ ಮಂಜಿಲ್ ಚಾತನಕೆರೆ ನಾವುಂದ ಗ್ರಾಮ ಬೈಂದೂರು ತಾಲೂಕು ಎಂಬುದಾಗಿ ತಿಳಿಸಿದ್ದು ಆತನು ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಅನುಮಾನ ಇದ್ದು ಅತನನ್ನು ಪ್ರೊಫೆಸರ್ ಅಂಡ್ ಹೆಡ್  ಕೆಎಂಸಿ ಪೊರೆನ್ಸಿಕ್ ವಿಭಾಗರವರಿಂದ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು  ಗಾಂಜಾ ಸೇವಿಸಿರುವ ಬಗ್ಗೆ ವೈಧ್ಯರು ದೃಢಪತ್ರ ನೀಡಿರುತ್ತಾರೆ.  ಈ ಬಗ್ಗೆ ಬೈಂಧೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 187/2021 ಕಲಂ: 27(B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಗುರುರಾಜ ಹೆಬ್ಬಾರ್ (52), ತಂದೆ: ದಿ. ನಾರಾಯಣ ಹೆಬ್ಬಾರ್, ವಾಸ: ಮೂಡುಮನೆ, ಹಂಗ್ಳೂರು ಗ್ರಾಮ, ಕುಂದಾಪುರ ತಾಲೂಕು ಇವರ ತಾಯಿ ಶ್ರೀಮತಿ ಸುಲೋಚನಾ ಹೆಬ್ಬಾರ್ ರವರ ತಂದೆ: ದಿ. ಎಚ್ ಶೇಷಗಿರಿರಾವ್ ರವರಿಗೆ ಸೇರಿದ ಕುಂದಾಪುರ ತಾಲೂಕು ಹಂಗಳೂರು ಗ್ರಾಮ  ಹಾಗೂ ಕೋಟೇಶ್ವರ  ಗ್ರಾಮದಲ್ಲಿರುವ, ಕುಂದಾಪುರ ಉಪನೋಂದಣಾಧಿಕಾರಿಯವರ ಕಛೇರಿಯ ದಸ್ತಾವೇಜು ನಂ 581/1954 ರ ವಿಭಾಗ ಪತ್ರದಲ್ಲಿ ನಮೂದಿಸಿದ ಒಟ್ಟು  4.36 ಎಕ್ರೆ  ಸ್ಥಿರಾಸ್ಥಿಗಳನ್ನು  ಆಪಾದಿತರಾದ 1) ಎಚ್ ಸತ್ಯನಾರಾಯಣ ರಾವ್, ತಂದೆ: ದಿ. ಎಚ್ ಶೇಷಗಿರಿ ರಾವ್, 2) ಶ್ರೀ ಪ್ರಕಾಶ್ ಹತ್ವಾರ್, ತಂದೆ: ಎಚ್ ಸತ್ಯನಾರಾಯಣ ರಾವ್, 3) ಆಶಾ ರಾವ್, ತಂದೆ: ಎಚ್ ಸತ್ಯನಾರಾಯಣ ರಾವ್, 4) ವೆಂಕಟೇಶ್ ಹತ್ವಾರ್, ತಂದೆ: ಎಚ್ ಸತ್ಯನಾರಾಯಣ ರಾವ್, ವಾಸ: ಹತ್ವಾರ್ ಮನೆ, ಕೋಡಿ ರಸ್ತೆ, ಹಂಗಳೂರು ಗ್ರಾಮ, ಕುಂದಾಪುರ ತಾಲೂಕು ಇವರು ಸಮಾನ ಉದ್ದೇಶದಿಂದ ಅಪರಾಧಿಕ ಒಳಸಂಚು ರೂಪಿಸಿ ದಿನಾಂಕ 03/06/2014, ಮತ್ತು 10/12/2020 ರಂದು ನಕಲಿ ದಸ್ತಾವೇಜು ತಯಾರಿಸಿ, ಸಾರ್ವಜನಿಕ ನೌಕರರಿಗೆ ಸುಳ್ಳು ಮಾಹಿತಿ ನೀಡಿ, ಸ್ಥಿರಾಸ್ತಿಗಳ ಹಕ್ಕುದಾರರಾದ ಪಿರ್ಯಾದುದಾರರಿಗೆ ಆಸ್ತಿಗಳನ್ನು ನೀಡದೇ ವಂಚನೆ ಮಾಡಿದ್ದು, ಸುಳ್ಳು ಕ್ರಯ ದಸ್ತಾವೇಜುಗಳನ್ನು ತಯಾರಿಸಿ ಅಕ್ರಮ ಲಾಭ ಪಡೆಯುವ ಕೃತ್ಯ ಮಾಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 126/2021  ಕಲಂ: 406, 417, 420, 120 b, 465, 468, 471, 177 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 23/11/2021 ರಂದು ಪಿರ್ಯಾದಿದಾರರಾದ ಸಂಪಾ (38), ಗಂಡ: ಮಾರ್ಷಲ್, ವಾಸ: ದರ್ಖಾಸು ಮನೆ, ಇಂದಿರಾನಗರ, ಸಾಣೂರು ಗ್ರಾಮ, ಕಾರ್ಕಳ ತಾಲೂಕು ಇವರು 17:00 ಗಂಟೆಗೆ ತನ್ನ ಮನೆಯ ಜಗುಲಿಯಲ್ಲಿ ಕುಳಿತುಕೊಂಡಿದ್ದಾಗ ಅಪಾದಿತ ಉಮೇಶ, ವಾಸ: ಇಂದಿರಾನಗರ, ಸಾಣೂರು ಗ್ರಾಮ, ಕಾರ್ಕಳ ತಾಲೂಕು ಎಂಬಾತ ಕೈಯಲ್ಲಿ ಹಿಡಿಸೂಡಿ  ಹಿಡಿದುಕೊಂಡು ಪಿರ್ಯಾದಿದಾರರ ಅಂಗಳಕ್ಕೆ  ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರ  ಜಾಗದಲ್ಲಿದ್ದ  ಸಾಗುವಾನಿ ಮರವನ್ನು  ಕಡಿಯಬೇಕೆಂದು ಹೇಳಿದಾಗ ಪಿರ್ಯಾದಿದಾರರು ಒಪ್ಪದ ಕಾರಣ ಅವಾಚ್ಯ ಶಬ್ದಗಳಿಂದ ಬೈದು ಹತ್ತಿರ ಬಂದಿದ್ದು ತಪ್ಪಿಸಿಕೊಳ್ಳಲು ಆತನನ್ನು ದೂಡಿದಾಗ ನೆಲಕ್ಕೆ ಬಿದ್ದ ಅಪಾದಿತನು ಎದ್ದು ವಾಪಾಸು ಮನೆಗೆ ಹೋಗಿ ತನ್ನ ಮನೆಯಿಂದ ಕೊಡಲಿಯನ್ನು ಹಿಡಿದುಕೊಂಡು ಬಂದು ಕೊಡಲಿಯಿಂದ ಹೊಡೆದಾಗ ಕೊಡಲಿಯ ಹಿಂಬದಿ ತಗುಲಿ ಪಿರ್ಯಾದಿದಾರರ ಬಲಕಿವಿಯ ಹಿಂಬದಿ  ಮತ್ತು ಬಲಭುಜದಲ್ಲಿ ಊದಿದ ಒಳಜಖಂ ಆಗಿದ್ದು ಗಲಾಟೆ ಕೇಳಿ ಹತ್ತಿರದ ಮನೆಯಲ್ಲಿರುವ ನಾದಿನಿ ಆಶಾ ಮತ್ತು ನಾದಿನಿಯ ತಮ್ಮ ಜಾರ್ಜ್ ಹೊಡೆಯದಂತೆ ತಡೆದು ಪಿರ್ಯಾದಿದಾರರನ್ನು ಬಿಡಿಸಿದರು. ಆಗ ಅಪಾದಿತನು ಅವಾಚ್ಯ ಶಬ್ದಗಳಿಂದ ಬೈದು   ಜೀವ ಬೆದರಿಕೆ  ಹಾಕಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 153/2021 ಕಲಂ: 447,  354, 324,  504, 506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 24-11-2021 10:08 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080