ಅಭಿಪ್ರಾಯ / ಸಲಹೆಗಳು

ಗಂಡಸು ಕಾಣೆ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಸುಶೀಲ, (67), ಗಂಡ: ದಿವಂಗತ ರಾಘು ಪೂಜಾರಿ, ವಾಸ: ಕನ್ನಡಿ ಬೆಟ್ಟು, ಸಚ್ಚೇರಿ ಪೇಟೆ ಅಂಚೆ, ಮುಂಡ್ಕೂರು ಗ್ರಾಮ, ಕಾರ್ಕಳ ಇವರ ಮಗ ಸತೀಶ (46) ಈತನು ಮಾನಸಿಕ ತೊಂದರೆಯಿಂದ ಬಳಲುತ್ತಿದ್ದವನು ದಿನಾಂಕ 19/11/2021 ರಂದು ಸಂಜೆ 4:30 ಗಂಟೆಗೆ ಸುಶೀಲ ರವರ ಜೊತೆಯಲ್ಲಿ ಜಗಳ ಮಾಡಿ ಮನೆ ಬಿಟ್ಟು ಹೋದವನು ಸಂಬಂಧಿಕರ ಮನೆಗೂ ಹೋಗದೇ, ಇದುವರೆಗೆ ಮನೆಗೆ ವಾಪಾಸು ಬಾರದೇ ಕಾಣೆಯಾಗಿರುವುದಾಗಿದೆ, ಕಾಣೆಯಾದ ವ್ಯಕ್ತಿಯ ಚಹರೆ ಎತ್ತರ 5 ಅಡಿ 67 ಇಂಚು,ಕಪ್ಪು ಮೈಬಣ್ಣ, ಸಾಧಾರಣ ಶರೀರ, ಕಪ್ಪು ಮೈಬಣ್ಣ, ಬೋಳು ತಲೆ, ಮೇಲಿನ ದವಡೆಯ ಎದುರಿನ ಮೇಲಿನ ಹಲ್ಲು ಅರ್ಧ ತುಂಡಾಗಿರುತ್ತದೆ. ಕನ್ನಡ, ತುಳು, ಹಿಂದಿ ಭಾಷೆ ಮಾತನಾಡುತ್ತಾನೆ. ಬಲ ಕೈಯ್ಯಲ್ಲಿ ಕಪ್ಪುದಾರ ಕಟ್ಟಿದೆ, ಅರ್ಧ ತೋಳಿನ ಬಿಳಿ ಅಂಗಿ, ನೀಲಿ ಬಣ್ಣದ ಬರ್ಮುಡ ಚಡ್ಡಿ ಧರಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 133/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಇಸುಬು (52) ತಂದೆ: ಆದಮ್ ವಾಸ: , ಅರದಾಲು ಮನೆ , ಮುಂಡ್ಕೂರು ಗ್ರಾಮ, ಕಾರ್ಕಳ ಇವರ ಅಣ್ಣ ಅಬೂಬಕ್ಕರ್ (54) ಈತನು ಬಿ.ಪಿ ಶುಗರ್, ಕಿಡ್ನಿ ಕಾಯಿಲೆಯಿಂದ  ಬಳಲುತ್ತಿದ್ದವನು ದಿನಾಂಕ 23/11/2021 ರಂದು 11:30 ಗಂಟೆಗೆ ಮುಂಡ್ಕೂರಿನ ಕೆನರಾಬ್ಯಾಂಕಿಗೆ ಹೋಗಿ ಬರುತ್ತೇನೆ ಎಂದು ಹೋದವನು ಸಂಬಂಧಿಕರ ಮನೆಗೂ ಹೋಗದೇ, ಇದುವರೆಗೆ ಮನೆಗೆ ವಾಪಾಸು ಬಾರದೇ ಕಾಣೆಯಾಗಿರುತ್ತಾನೆ, ಕಾಣೆಯಾದ ವ್ಯಕ್ತಿಯ ಚಹರೆ ಎತ್ತರ 5 ಅಡಿ 6 ಇಂಚು, ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಶರೀರ, ಕಪ್ಪು ಮೈಬಣ್ಣ, ಬೋಳು ತಲೆ, ಕನ್ನಡ, ತುಳು, ಹಿಂದಿ ಭಾಷೆ ಮಾತನಾಡುತ್ತಾನೆ. ಅರ್ಧ ತೋಳಿನ ಗುಲಾಬಿ ಬಣ್ಣದ ಟೀಶರ್ಟ್ ಹಾಗೂ ನೀಲಿ ಗೆರೆಗಳಿರುವ ಲುಂಗಿ ಧರಿಸಿರುತ್ತಾನೆ. ಬಲಕೈ ಉಂಗುರ ಬೆರಳಿನಲ್ಲಿ ಬೆಳ್ಳಿಯ ಉಂಗುರ ಧರಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 134/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಮೊಹಮ್ಮದ್‌ ಅಜ್ಮಲ್‌ (35) ತಂದೆ: ಅಬೂಬಕ್ಕರ್‌  ವಾಸ: ನೆಚ್ಚಿಪಡುಪು ಹೌಸ್‌, ಪರವನಡುಕಂ, ಚೆಮ್‌ನಡ್‌, ಕೇರಳ ರಾಜ್ಯ ಇವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾಸಮುದ್ರ ಮಾರ್ಗ ಬಳಿ ಇರುವ ಸುಲ್ತಾನ್‌ ಡೈಮಂಡ್‌ & ಗೋಲ್ಡ್‌ ಎಂಬ ಜುವೆಲ್ಲರಿ ಅಂಗಡಿಯಲ್ಲಿ ಬ್ರ್ಯಾಂಚ್‌ ಮೇನೆಜರ್‌ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 23/11/2021 ರಂದು 18:15 ಗಂಟೆಯಿಂದ 18:45 ಗಂಟೆ ನಡುವಿನ ಸಮಯದಲ್ಲಿ ಇಬ್ಬರು ಬುರ್ಖಾ ಧರಿಸಿದ ಮಹಿಳೆಯವರು ಸದ್ರಿ ಜುವೆಲ್ಲರಿ ಅಂಗಡಿಗೆ ಬಂದಿದ್ದು, ಸೇಲ್ಸ್‌ ಮೆನ್‌ ಮೊಹಮ್ಮದ್‌ ಮುಬಾರಕ್‌ ರವರಲ್ಲಿ ಚಿನ್ನದ ಬಳೆಗಳನ್ನು ತೋರಿಸುವಂತೆ ಹೇಳಿ, ಬೇರೆ ಬೇರೆ ಬಳೆಗಳನ್ನು ನೋಡುತ್ತಾ ಮೋಸ ಮಾಡುವ ಉದ್ದೇಶದಿಂದ ಮೊಹಮ್ಮದ್‌ ಮುಬಾರಕ್‌ ರವರ ಗಮನವನ್ನು ಬೇರೆಡೆಗೆ ಸೆಳೆದು ಒಟ್ಟು 60 ಗ್ರಾಂ ತೂಕದ 4 ಚಿನ್ನದ ಬಳೆಗಳನ್ನು ಮೋಸದಿಂದ ತೆಗೆದುಕೊಂಡು ಹೋಗಿದ್ದು, ಸದರಿ ಚಿನ್ನದ ಬಳೆಗಳ ಅಂದಾಜು ಮೌಲ್ಯ ರೂಪಾಯಿ 3,00,000/- ಆಗಬಹುದಾಗಿದೆ, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 172/2021ಕಲಂ:417, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾರ್ಕಳ: ಪಿರ್ಯಾದಿದಾರರಾದ ಸುರೇಶ್ ಕುಮಾರ್ ಪಿ, (45), ತಂದೆ: ಕೆ ಬಿ ಪರಸಪ್ಪ, ವಾಸ: ಸಾನಿಧ್ಯ, ಹೆಗ್ಡೆ ಕಾಂಪೌಂಡ್, ದಾನಶಾಲೆ, ಕಾರ್ಕಳ ಇವರ ತಾಯಿ ಶ್ರೀಮತಿ  ಗೌರಮ್ಮ  ಟಿ  (65) ಎಂಬವರು ಎಂದಿನಂತೆ  ದಿನಾಂಕ 24/11/2021 ರಂದು ಬೆಳಿಗ್ಗೆ 09:30 ಗಂಟೆಗೆ ವಾಕಿಂಗ್ ಬಗ್ಗೆ  ಹೋದವರು ವಾಪಾಸು ಬಾರದ ಕಾರಣ ಹುಡುಕಾಡಿದಾಗ ಕಾರ್ಕಳ ಕಸಬಾದ  ಹನುಮಾನ್ ಪೆಟ್ರೋಲ್ ಬಂಕ್  ಹತ್ತಿರ ಅಂಗಡಿಯವರು  ನಾಗರ ಬಾವಿ  ಕೆಡೆಗೆ ಹೋಗಿರುವುದಾಗಿ  ತಿಳಿಸಿದ್ದು ಕೆರೆಯ ಬಳಿ ಹುಡುಕಿ ನೋಡಿದಾಗ ಗೌರಮ್ಮ ರವರು ಕೆರೆಯಲ್ಲಿ ಆಕಸ್ಮಿಕವಾಗಿ ಕಾಲು  ಜಾರಿ ಬಿದ್ದಿದ್ದು  ಕೂಡಲೇ  ಕಾರ್ಕಳ ಸರಕಾರಿ  ಆಸ್ಪತ್ರೆಗೆ  11:00 ಗಂಟೆಗೆ  ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಗೌರಮ್ಮ ರವರು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 42/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಕಾಪು: ಪಿರ್ಯಾದಿದಾರರಾದ ಶ್ರುತಜ ಪಿ. ರಾವ್ (24) ತಂದೆ: ಪಿ. ಪರಮೇಶ್ವರ ರಾವ್ ವಾಸ: ಮನೆ ನಂಬ್ರ 4-12 ಮಟ್ಟು ಗ್ರಾಮ ಕಟಪಾಡಿ ಅಂಚೆ  ಕಾಪು ತಾಲೂಕು ಉಡುಪಿ ಇವರ ತಂದೆ ಪಿ. ಪರಮೇಶ್ವರ  ರಾವ್  (71) ರವರು ಒಬ್ಬರೇ ಮಟ್ಟು ಗ್ರಾಮದ ವಿಳಾಸದ ಮನೆಯಲ್ಲಿ ವಾಸವಾಗಿದ್ದು ಅವರಿಗೆ ಸುಮಾರು 20 ವರ್ಷಗಳಿಂದ ಮೆದುಮೇಹ ಮತ್ತು ರಕ್ತದೊತ್ತಡ ಕಾಯಿಲೆಯಿದ್ದು ಈ ಬಗ್ಗೆ ಚಿಕಿತ್ಸೆ ಕೂಡ ಪಡೆಯುತ್ತಿದ್ದು, ದಿನಾಂಕ 23/11/2021 ರಂದು ಸಂಜೆ 7:00 ಗಂಟೆ ಸಮಯಕ್ಕೆ ಶ್ರುತಜ ಪಿ. ರಾವ್ ರವರು ಅವರ ತಂದೆಯವರಿಗೆ ಫೋನ್ ಕರೆ ಮಾಡಿದ್ದು ಅವರು ಫೋನ್ ಕರೆ ಸ್ವೀಕರಿಸದೇ ಇದ್ದು ಈ ಬಗ್ಗೆ  ಶ್ರುತಜ ಪಿ. ರಾವ್ ರವರು ಅವರ ಸಂಬಂಧಿ ಮೋಹನರಾವ್ ಎಂಬವರಿಗೆ ಫೋನ್ ಮಾಡಿದ್ದು, ಮೋಹನರಾವ್ ರವರು ಶ್ರುತಜ ಪಿ. ರಾವ್ ರವರ ಮನೆಗೆ ಹೋಗಿ ನೋಡುವಾಗ ಮನೆಯ ರೂಮಿನೊಳಗೆ ನೆಲದಲ್ಲಿ ಮಲಗಿದ  ಸ್ಥಿತಿಯಲ್ಲಿದ್ದು, ಕರೆದಾಗ ಪ್ರತಿಕ್ರಿಯೇ ನೀಡದೇ ಇರುವುದರಿಂದ ನೆರೆಕೆರೆಯವರೊಂದಿಗೆ ಬಾಗಿಲು ತೆಗೆದು  ನೋಡುವಾಗ ತಂದೆಯವರು ಮೃತ ಪಟ್ಟಿರುವ ಸ್ಥಿತಿಯಲ್ಲಿದ್ದು, ನಂತರ ಅವರ  ಮೃತ  ಶರೀರವನ್ನು  ಉಡುಪಿ ಶವಾಗಾರದಲ್ಲಿಟ್ಟು ಬಂದಿರುವುದಾಗಿ ತಿಳಿಸಿದಂತೆ ಶ್ರುತಜ ಪಿ. ರಾವ್ ರವರು ದಿನಾಂಕ 24/11/2021  ರಂದು ಊರಿಗೆ ಬಂದು ಉಡುಪಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುವ ತಂದೆಯ ಮೃತ ಶರೀರವನ್ನು ನೋಡಿ ಗುರುತಿಸಿದ್ದು, ಶ್ರುತಜ ಪಿ. ರಾವ್ ರವರ ತಂದೆಯವರಿಗೆ ಸುಮಾರು 71  ವರ್ಷ ಪ್ರಾಯವಾಗಿದ್ದು, ಅವರಿಗೆ  ಮೆದುಮೇಹ ಮತ್ತು ರಕ್ತದೊತ್ತಡ ಕಾಯಿಲೆ ಉಲ್ಬಣಗೊಂಡು ಅಥವಾ ಬೇರೆ ಯಾವುದೋ  ಕಾಯಿಲೆಯಿಂದ ದಿನಾಂಕ 23/11/2021 ರಂದು ಬೆಳಗ್ಗೆ 08:00 ಗಂಟೆಯಿಂದ ಸಂಜೆ 7:00  ಗಂಟೆಯ ನಡುವಿನ ಸಮಯದಲ್ಲಿ ಮೃತ ಪಟ್ಟಿರುವುದಾಗಿದೆ, ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 43/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಕೋಟ: ಪಿರ್ಯಾದಿದಾರರಾಧ ನೇತ್ರಾವತಿ, (40) ತಂದೆ: ದಿ: ಗಿರಿಯ ಆಚಾರ್ಯ, ವಾಸ: ಜಾನುವಾರುಕಟ್ಟೆ, ಬಿಲ್ಲಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರ ತಮ್ಮ ಕೃಷ್ಣಯ್ಯ ಆಚಾರ್ಯ (38) ರವರು ಗೋವಾದಲ್ಲಿ ಕೆಲಸ ಮಾಡಿಕೊಂಡಿದ್ದವನು ದಿನಾಂಕ 23/11/2021 ರಂದು ಸಂಜೆ ಸುಮಾರು 7:30 ಗಂಟೆಯ ಸಮಯಕ್ಕೆ ಮನೆಗೆ ಬಂದವನಿಗೆ ಊಟ ಮಾಡಲು ಹೇಳಿದಾಗ ಬೇಡ ಎಂದು ಹೆಳಿ ಮಲಗಿದವನು ರಾತ್ರಿ ಸುಮಾರು 2:00 ಗಂಟೆಗೆ ಜೋರು ಬೊಬ್ಬೆ ಹಾಕಿ ಹೊಟ್ಟೆ ಉರಿಯುತ್ತಿದೆ ಎಂದು ಹೇಳುತ್ತಿದ್ದನು ನಂತರ ವಿಚಾರಿಸಿದಾಗ ತಾನು ಮನೆಗೆ ಬರುವಾಗ ಅಮಲು ಪದಾರ್ಥದ ಜೊತೆಯಲ್ಲಿ ವಿಷ ಪದಾರ್ಥ ಸೇವಿಸಿರುವುದಾಗಿ ತಿಳಿಸಿರುತ್ತಾನೆ  ಕೂಡಲೇ 108 ಅಂಬುಲೆನ್ಸ ವಾಹನದಲ್ಲಿ  ಚಿಕಿತ್ಸೆಯ ಬಗ್ಗೆ ಉಡುಪಿಯ ಅಜ್ಜರ ಕಾಡು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿ ವೈದ್ಯರು ದಿನಾಂಕ 24/11/2021 ರಂದು ಬೆಳಿಗ್ಗ 06:05 ಗಂಟೆಗೆ ಪರೀಕ್ಷಿಸುತ್ತಿರುವಾಗ  ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 45/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಮಣಿಪಾಲ: ಪಿರ್ಯಾದಿದಾರರಾದ ನಾಗಮಣಿ ಬಿ.ಎಸ್ (22) ತಂದೆ: ಸುಂದರ ವಾಸ: ನರ್ಸಿಂಗ್ ಹಾಸ್ಟೆಲ್   ಹಿಂಭಾಗ, ಮಂಚಿಕುಮೇರಿ, ಶಿವಳ್ಳಿ ಗ್ರಾಮ, ಉಡುಪಿ ಇವರ ತಂದೆ ಸುಂದರ (50) ಇವರು ವಿಪರೀತ  ಮದ್ಯಪಾನ ಸೇವನೆ ಹವ್ಯಾಸವನ್ನು ಉಳ್ಳವರಾಗಿದ್ದರು. ದಿನಾಲೂ ಮದ್ಯಪಾನ ಸೇವಿಸಿ ಹೆಂಡತಿ ಮತ್ತು  ಮಕ್ಕಳೊಂದಿಗೆ ಜಗಳ ಮಾಡುತ್ತಿದ್ದರು. ಹಾಗೂ ತಾನೂ ಆತ್ಮ ಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು. ದಿನಾಂಕ 23/11/2021 ವಿಷರೀತ  ಮದ್ಯಪಾನ ಸೇವಿಸಿ ರಾತ್ರಿ ಮನೆಗೆ ಬಂದು ರಾತ್ರಿ 08:30 ಗಂಟೆಗೆ ಸಾಯಿಯುತ್ತೇನೆ ಎಂದು ರೂಮ್ ಒಳಗೆ ಹೋಗಿ ಬಾಗಿಲಿನ ಲಾಕ್ ಹಾಕಿಕೊಂಡಿದ್ದು, 08:40 ಸಮಯಕ್ಕೆ  ನಾಗಮಣಿ ಬಿ.ಎಸ್ ರವರ ಡ್ಡಮ್ಮನ ಮಗನಾದ ಆದಿತ್ಯ ರವರು ಬಂದು ಸಿಮೆಂಟ್ ಶೀಟ್ ಸರಿಸಿ  ಬಾಗಿಲು ತೆರೆದಾಗ ಸುಂದರ ನೇಣು ಬಿಗಿದು ಆತ್ಮಹತ್ಯೆ ಸ್ಥಿತಿಯಲ್ಲಿ ಕಂಡು ಬಂದಿದ್ದು, ಕೂಡಲೇ ಅವರನ್ನು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು,  ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿದ ವೈದ್ಯರು ಸುಂದರ ಇವರು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 38/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-11-2021 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080