ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾಧ ಸದಾಶಿವ ಆಚಾರ್ಯ, (52) ತಂದೆ:ದಿ. ಸಾಂಬ್ರಾಯ ಆಚಾರ್ಯ, ವಾಸ: ಮನೆ ನಂಬ್ರ 3-182, ದೇವುಬೆಟ್ಟು ಕುತ್ಯಾರು  ಅಂಚೆ ಮತ್ತು  ಗ್ರಾಮ, ಕಾಪು ಇವರು ದಿನಾಂಕ 23/10/2022 ರಂದು ಸಂಜೆ ಮನೆಯಿಂದ ಶಿರ್ವ ಪೇಟೆ ಕಡೆಗೆ ಹೋಗುವರೇ  ಹೋಂಡಾ ಆಕ್ಟಿವಾ  ದ್ವಿ ಚಕ್ರ ವಾಹನ ನಂಬ್ರ KA-20 EW-3756ನೇದನ್ನು ಸವಾರಿ ಮಾಡಿಕೊಂಡು ಬರುತ್ತಿರುವಾಗ ಕುತ್ಯಾರು ನವೀನ್‌ಶೆಟ್ಟಿರವರ ಮನೆಯ ತಿರುವಿನಲ್ಲಿ ಸಂಜೆ 5:30 ಗಂಟೆ ಸುಮಾರಿಗೆ ತಲುಪುವಾಗ ಶಿರ್ವ ಕಡೆಯಿಂದ ಕುತ್ಯಾರು ಕಡೆಗೆ ಓರ್ವ ಟೆಂಪೋ ಚಾಲಕನು ಟೆಂಪೋವನ್ನು ಅತೀ ವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದ್ಚಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸಮೇತ ಇವರು ಸಾರ್ವಜನಿಕ ರಸ್ತೆಗೆ ಬಿದ್ದಿದ್ದು, ಬಲ ಕೋಲು ಕೈಗೆ ಒಳ ನೋವು , ಬೆನ್ನಿನ ಬಲಭಾಗ ಮತ್ತು ಬಲಕಾಲಿಗೆ ತರಚಿದ ಗಾಯವಾಗಿರುತ್ತದೆ. ಡಿಕ್ಕಿ ಹೊಡೆದ  ಟೆಂಪೋ  ಸ್ವಲ್ಪ  ಮುಂದಕ್ಕೆ ಹೋಗಿ  ಸೂರ್ಯ ಚೈತನ್ಯ  ಶಾಲೆಯ  ಎದುರು ಮಗುಚಿ  ಬಿದ್ದಿದ್ದು, ಟೆಂಪೋದ ನಂಬ್ರ ನೋಡಲಾಗಿ KA-19 AD-6406 ನೇ ಆಗಿದ್ದು, ಅದರ ಚಾಲಕನ ಹೆಸರು ಕೇಳಲಾಗಿ   ಕಲಂದರ್‌ ಶಾ ಎಂಬುದಾಗಿ ತಿಳಿಯಿತು. ನಂತರ ವಿಚಾರಿಸಲಾಗಿ ಆತನು ಕುತ್ಯಾರು ಉಜೂರು ಬಳಿ ಇನ್ನೊಂದು ದ್ವಿಚಕ್ರ ವಾಹನ ರಫೀಕ್ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ ಜುಪೀಟರ್ ವಾಹನ ನಂ KA-19 ES-6894ನೇದಕ್ಕೆ  ಅಫಘಾತಪಡಿಸಿದ್ದು ಇದರಿಂದ ಆತನಿಗೂ ತರಚಿದ ಗಾಯವಾಗಿರುವುದಾಗಿ ತಿಳಿಯಿತು. ಸದಾಶಿವ ಆಚಾರ್ಯ ರವರು ದಿನಾಂಕ 23/10/2022 ರಂದು ತನಗಾದ ನೋವಿನ ಬಗ್ಗೆ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ತೆರಳಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಈ ದಿನ ಬರುವಂತೆ ತಿಳಿಸಿರುತ್ತಾರೆ.     ಆದ್ದರಿಂದ ಈ ಅಫಘಾತಗಳಿಗೆ ಕಲಂದರ್‌ಶಾ  KA 19AD 6406 ನೇ ವಾಹನವನ್ನು  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದೇ ಕಾರಣ ಆಗಿರುವುದಾಗಿದೆ, ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 79/22 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಕಳವು ಪ್ರಕರಣ

  • ಬ್ರಹ್ಮಾವರ: ದಿನಾಂಕ 22/10/2022 ರಂದು ಪಿರ್ಯಾದಿದಾರರಾದ ಆರ್ ಎಸ್ ಉದಯ್ ಕುಮಾರ್ ತಂದೆ ಶ್ರೀನಿವಾಸ ಜೋಯಿಸ್ ಶ್ರೀ ದುರ್ಗಾ ಹೇರಾಡಿ ರಂಗನಕೆರೆ ಬಾರ್ಕೂರು ಬ್ರಹ್ಮಾವರ ಇವರು ಬೆಂಗಳೂರಿನಲ್ಲಿದ್ದು, ಿವರ ಹೆಂಡತಿ ಮತ್ತು ಮಗ ಗರಡಿಮಜಲಿನ ಅವರ ಅಕ್ಕನ ಮನೆಗೆ ಹೋಗಿದ್ದಾಗ, ತಮ್ಮನಾದ ದಯಾನಂದನು ರಾತ್ರಿ ಸುಮಾರು 9:00 ಗಂಟೆ ಸಮಯಕ್ಕೆ ಆರ್ ಎಸ್ ಉದಯ್ ಕುಮಾರ್ ರವರ ಮನೆಯಲ್ಲಿ ಊಟ ಮಾಡಿಕೊಂಡು ಎದುರಿನ ಬಾಗಿಲಿಗೆ ಬೀಗ ಹಾಕಿ ಹೋಗಿ ಅವನ ಸೈಕಲ್ ಶಾಪಿನ ರೂಮಿನಲ್ಲಿ ಮಲಗಿಕೊಂಡಿದ್ದು, ದಿನಾಂಕ 23/10/2022 ರಂದು ಬೆಳಿಗ್ಗೆ ಸುಮಾರು 5:10 ಗಂಟೆ ಸಮಯಕ್ಕೆ ಆರ್ ಎಸ್ ಉದಯ್ ಕುಮಾರ್ ರವರು ಮನೆಗೆ ಬಂದು ಬೀಗ ತೆಗೆಯಲು ಹೋದಾಗ ಬಾಗಿಲು ಸ್ವಲ್ಪ ತೆರೆದೇ ಇದ್ದು, ಅನುಮಾನಗೊಂಡ ಆರ್ ಎಸ್ ಉದಯ್ ಕುಮಾರ್  ರವರು ಮನೆಯ ಒಳಗೆ ಹೋಗಿ ನೋಡುವಾಗ, ಬೆಡ್‌ರೂಮಿನಲ್ಲಿರುವ ಬೀರುವು ತೆರೆದುಕೊಂಡಿದ್ದು, ಅದರೊಳಗಿದ್ದ ಬಟ್ಟೆಯನ್ನೆಲ್ಲಾ ಎಳೆದು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಹಾಕಿದ್ದು, ಬೀರುವಿನಲ್ಲಿಟ್ಟಿದ್ದ ತಲಾ 1 ½ ಪವನ್ನಿನ 2 ಚಿನ್ನದ ರೋಪ್ ಚೈನುಗಳು, ಹಸಿರು ಬಣ್ಣದ ಹರಳುಗಳಿರುವ ¾ ಪವನ್ನಿನ ಪದಕ ಒಂದು, ಒಂದು ಪವನ್ನಿನ ಮುತ್ತಿನ ಜುಮಕಿ ಬೆಂಟೋಲೆ-ಒಂದು ಜೊತೆ, ಒಂದೂವರೆ ಪವನ್ನಿನ ಬಳೆ-1 ಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಗಿದೆ. ಕಳುವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ರೂಪಾಯಿ 1,50,000 ಆಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 176/2022 ಕಲಂ : 457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೊಲ್ಲೂರು: ಪಿರ್ಯಾದಿದಾರರಾದ ಕುಮಾರ್ (48) ತಂದೆ:  ದಿ: ಚಂದ್ರ ಶೆಟ್ಟಿ ವಾಸ: ಅರಕಲಗೂಡು ಹಾಸನ ರವರು ತನ್ನ ಹೆಂಡತಿ ಮಕ್ಕಳು ಹಾಗೂ ಕುಟುಂಬದೊಂದಿಗೆ ದಿನಾಂಕ 21/10/2022 ರಂದು ಹಾಸನದ ಅರಕಗೂಡಿನಿಂದ ದೇವಸ್ಥಾನಗಳಿಗೆ ತೀರ್ಥಯಾತ್ರಗೋಸ್ಕರ  ಹೊರಟು ದಿನಾಂಕ 23/10/2022 ರಂದು ರಾತ್ರಿ 10:00 ಗಂಟೆಗೆ ಕೊಲ್ಲೂರಿಗೆ  ಬಂದು  ಲಲಿತಾಂಬಿಕ ವಸತಿ ಗೃಹ ಕೊಠಡಿ ಪಡೆದುಕೊಂಡಿದ್ದು ಆ ಸಮಯ  ಕುಮಾರ್ ರವರ ಮಗ  ಪ್ರಶಾಂತನು ಶೌಚಾಲಯಕ್ಕೆ ಹೋಗುವುದಾಗಿ ತಿಳಿಸಿ ರೂಮ್ ನ ಕೀಯನ್ನು  ಪಡೆದುಕೊಂಡು ರೂಮ್ ನ ಕೀಯನ್ನು ತಗೆಯುವ ಸಮಯದಲ್ಲಿ ತಲೆ ಸುತ್ತು ಬಂದು  ರೂಮಿನ ಹೊರಗಡೆ ಕೆಳಗೆ ಬಿದ್ದವನನ್ನು  ಕೂಡಲೇ 108 ಅಂಬುಲೇನ್ಸ್ ನಲ್ಲಿ ಸಂಬಂಧಿಕರೊಂದಿಗೆ  ಕುಂದಾಪುರ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಬಂದಾಗ ಸಮಯ ಸುಮಾರು ರಾತ್ರಿ 11:15 ಗಂಟೆಗೆ ವೈದ್ಯರು  ಪರೀಕ್ಷಿಸಿ ಚಿಕಿತ್ಸೆಗೆ  ಕರೆ ತರುವ ದಾರಿಯಲ್ಲಿ  ಮೃತ ಪಟ್ಟಿರುತ್ತಾರೆ ಎಂದು  ದೃಢೀಕರಿಸಿರುತ್ತಾರೆ.  ಮೃತರು ಹೃದಯಘಾತ ತೊಂದರಗಳಿಂದ  ಮೃತಪಟ್ಟಿರುವ ಸಾಧ್ಯತೆ ಇರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 15/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-10-2022 06:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080