ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಪುರುಷೋತ್ತಮ ಕೆಎಸ್ (49), ತಂದೆ:ಸುಬ್ರಾಯ ಮಕ್ಕಿತ್ತಾಯ, ವಾಸ: ಗುಂಡಿಬೈಲು, ಉಡುಪಿ ಇವರ ದೊಡ್ಡಪ್ಪನ ಮಗಳಾದ  ಜಯಲಕ್ಷ್ಮೀ  ಇವರು ಮಲ್ಪೆ ಯ  ವಢಬಾಂಡೇಶ್ವರ  ದೇವಸ್ಥಾನದ ಬಳಿ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು ದಿನಾಂಕ 16/10/2021 ರಂದು ಮನೆಗೆ ಬೀಗ ಹಾಕಿ ತನ್ನ ಮಗನ ಜೊತೆ ಬೆಂಗಳೂರಿನ ಮಗನ ಮನೆಗೆ ಹೋಗಿದ್ದು,  ದಿನಾಂಕ 23/10/2021 ರಂದು ಜಯಲಕ್ಷ್ಮೀ ಯವರ ತಂಗಿ ಸುಮಿತ್ರ ಪಿರ್ಯಾದಿದಾರರಿಗೆ ಕರೆ ಮಾಡಿ ವಢಬಾಂಡೇಶ್ವರದಲ್ಲಿರುವ ತನ್ನ ಅಕ್ಕ ಜಯಲಕ್ಷ್ಮೀರವರ ಮನೆಯಲ್ಲಿ ಕಳ್ಳತನವಾಗಿರುವುದಾಗಿ ಸಂಬಂಧಿಕರಾದ ಮೀನಾಕ್ಷಿ ಎಂಬುವವರು ತಿಳಿಸಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ವಢಬಾಂಢೇಶ್ವರ ದ ಜಯಲಕ್ಷ್ಮೀ ರವರ ಮನೆಗೆ ಬಂದು ನೋಡಿದಾಗ ಮನೆಯ ಮುಖ್ಯದ್ವಾರದ ಚಿಲಕದ ಸ್ಕ್ರೂ ಅನ್ನು ಯಾರೋ ಕಳ್ಳರು ತೆಗೆದು ಮನೆಯ ಒಳಗೆ ಪ್ರವೇಶಿಸಿರುವುದು ಕಂಡುಬಂದಿದ್ದು , ಪಿರ್ಯಾದಿದಾರರು ಮನೆಯ ಒಳಗಡೆ ಹೋಗಿ  ನೋಡಿದಾಗ ಬೇಡ್ ರೂಮ್ ನ ಕಬ್ಬಿಣದ ಗೊರ್ಡೆಜ್ ಕಪಾಟನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಕಪಾಟಿನ ಬಾಗಿಲನ್ನು ತೆಗೆದು ಕಪಾಟಿನಲ್ಲಿದ್ದ  ಸೀರೆಗಳನ್ನು ನೆಲದಲ್ಲಿ ಹರಡಿದ್ದು ಕಂಡುಬಂದಿದ್ದು ಪಿರ್ಯಾದಿದಾರರು ಜಯಲಕ್ಷ್ಮೀ ಇವರಿಗೆ ಪೋನ್ ಮಾಡಿ ಮಾಹಿತಿ ಕೇಳಲಾಗಿ ಕಪಾಟಿನಲ್ಲಿ  1) ಮುತ್ತಿನ ಸರ -ಅಂದಾಜು 4 ಪಾವನ್, 2) ಒಂದು ಜೊತೆ  ಕೆಂಪು  ಕಲ್ಲು ಬಳೆ-3 ಪಾವನ್, 3) ಎರಡು  ಎಳೆ  ಚಿನ್ನದ  ಸರ -5 ಪಾವನ್, 4) ಒಂದು ಎಳೆ ಚೈನ್  ಅದರಲ್ಲಿ ಡಾಲರ್ ಪೆಂಡೆಂಟ್ -3 ಪಾವನ್ , 5)  ಕಾಸು ಮಾಲೆ ನೆಕ್ಲೇಸ್ -3 ಪಾವನ್, 6)  ನವರತ್ನ ಉಂಗುರ-1 ಪಾವನ್,  7) ತಿರುಪತಿ ದೇವರ ಚಿತ್ರ  ಇರುವ ಉಂಗುರ -0.5 ಪಾವನ್, 8)  ಬೆಳ್ಳಿ  ಯ ಸಾಮಾಗ್ರಿ -2 ಕಿಲೋ, 9) ನಗದು ಹಣ -70,000 ರೂಪಾಯಿ   ಕಪಾಟನ್ನು ಪರೀಶಿಲಿಸಿದಾಗ ಕಪಾಟಿನಲ್ಲಿ ಯಾವುದೇ ಸ್ವತ್ತುಗಳು ಇರದೇ ಇದ್ದು ಕಳವಾದ ಬಂಗಾರದ ಮೌಲ್ಯ 5,61,600/- ರೂಪಾಯಿ ಬೆಳ್ಳಿಯ ಮೌಲ್ಯ  90000/- ರೂಪಾಯಿ, ನಗದು ಹಣ 70,000/- ರೂಪಾಯಿ ಒಟ್ಟು  7,21,600/-  ರೂಪಾಯಿ ಆಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 117/2021 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ದಿವ್ಯಾ ಶೆಟ್ಟಿ (37), ಗಂಡ: ಅಮರನಾಥ್‌ ಶೆಟ್ಟಿ, ವಾಸ: ನಂಬ್ರ: 70, ಮಾತಂಗಿ, ಟೀಚರ್ಸ್‌ಲೇಔಟ್‌, ವಿದ್ಯಾರಣ್ಯಪುರ, ಬೆಂಗಳೂರು ಇವರು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ದಿನಾಂಕ 23/10/2021 ರಂದು ಉಡುಪಿಯ ಸಂತೆಕಟ್ಟೆ ವಿನಾಯಕ ಪ್ಯಾರಡೈಸ್‌ನಲ್ಲಿ ವಾಸವಿರುವ ಪಿರ್ಯಾದಿದಾರರ ಗಂಡನನ್ನು ಕಾಣಲು ಬಂದಿದ್ದು, ರಾತ್ರಿ ಊಟಕ್ಕೆಂದು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕಿದಿಯೂರು ಹೋಟೇಲ್‌ಗೆ ಅವರ ಕಾರು ನಂಬ್ರ KA-50-P-2990 ನೇದರಲ್ಲಿ 20:15 ಗಂಟೆಗೆ ಬಂದು, ಹೋಟೇಲಿನ ಹೊರಭಾಗದಲ್ಲಿ ಪಾರ್ಕಿಂಗ್‌ ಜಾಗದಲ್ಲಿ ಕಾರು ಪಾರ್ಕ್‌ ಮಾಡಿ, ಊಟ ಮುಗಿಸಿ 22:00 ಗಂಟೆಗೆ ವಾಪಾಸು ಬಂದು ನೋಡಲಾಗಿ, ಕಾರಿನ ಮಧ್ಯದ ಸೀಟಿನ ಗ್ಲಾಸ್‌ನ್ನು ಯಾರೋ ಕಳ್ಳರು ಒಡೆದು ಜಖಂಗೊಳಿಸಿ, ಕಾರಿನ ಮಧ್ಯ ಸೀಟಿನಲ್ಲಿರಿಸಿದ್ದ ಡೆಲ್‌ ಕಂಪೆನಿಯ ಲ್ಯಾಪ್‌ಟಾಪ್‌ ಬ್ಯಾಗ್‌ ಸಮೇತ ಹಾಗೂ ಬಟ್ಟೆಗಳಿರುವ ಸೂಟ್‌ಕೇಸ್‌ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಲ್ಯಾಪ್‌ಟಾಪ್‌ನ  ಮೌಲ್ಯ ರೂಪಾಯಿ 1,00,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 155/2021 ಕಲಂ: 427, 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ನಾರಾಯಣ ಮರಾಠಿ  (32), ತಂದೆ: ಪುಟ್ಟಯ್ಯ ಮರಾಠಿ, ವಾಸ:ಗಂಗನಾಡು ದೇವಪ್ಪನಾಡಿ, ಬೈಂದೂರು  ಗ್ರಾಮ ಮತ್ತು ತಾಲೂಕು ಇವರ ತಾಯಿ ದಾರು ಮರಾಠಿ (60) ರವರು ಬೈಂದೂರು ತಾಲೂಕಿನ  ಬೈಂದೂರು ಗ್ರಾಮದ ದೇವಪ್ಪನಾಡಿ ಗಂಗನಾಡು ಎಂಬಲ್ಲಿ ಪಿರ್ಯಾದಾರರ ಜೊತೆಯಲ್ಲಿ ವಾಸ ಮಾಡಿಕೊಂಡಿದ್ದು,  ದಾರು ಮರಾಠಿಯವರು ಸುಮಾರು 15 ವರ್ಷಗಳಿಂದ ಮಾನಸಿಕ ಖಾಯಲೆಯಿಂದ ಬಳಲುತ್ತಿದ್ದು, ಕುಂದಾಪುರ ಮಾತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡುತ್ತಿದ್ದು, ಹಾಗು ಮೆದುಳಿನ  ಮತ್ತು ಕಣ್ಣಿನ ತೊಂದರೆಯಿಂದಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿದ್ದು, ಆದರೂ ಕೂಡಾ ಆಗಾಗ ತಲೆ ನೋವು ಮತ್ತು ಕಣ್ಣಿನ ನೋವು  ಬರುತ್ತಿದ್ದು ಖಾಯಿಲೆ ಗುಣಮುಖವಾಗದೇ ಇದ್ದುದರಿಂದ  ಮನನೊಂದು  ಈ ಹಿಂದೆ ಕೂಡಾ ಸಾಯುವ ಸಲುವಾಗಿ ವಿಷ ತೆಗೆದು ಕೊಂಡು ಉಡುಪಿ ಆದರ್ಶ  ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಬಂದವರು  ಖಾಯಿಲೆ ಗುಣಮುಖವಾಗದ ಕಾರಣದಿಂದ ಮಾನಸಿಕವಾಗಿ ಮನನೊಂದು ಜೀವನದಲ್ಲಿ ಜಿಗುಪ್ಸೆ ಗೊಂಡು ದಿನಾಂಕ  23/10/2021 ರಿಂದ ಬೆಳಿಗ್ಗೆ 09:00 ಗಂಟೆಯಿಂದ ಮದ್ಯಾಹ್ನ 13:00 ಗಂಟೆಯ ಮಧ್ಯಾವಧಿಯಲ್ಲಿ ವಾಸ್ತವ್ಯದ ಮನೆಯ ಬಳಿ ಇರುವ ಕೊಟ್ಟಿಗೆಯಲ್ಲಿ ಸ್ನಾನದ ಕೋಣೆಯ ಮಾಡಿನ ಪಕ್ಕಾಸಿಗೆ ನೈಲಾನ್ ಹಗ್ಗವನ್ನು ಬಿಗಿದು ಕುತ್ತಿಗೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 43/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಕೆ.ಎಸ್ ಪ್ರಮೋದ್ ರಾವ್ (63), ತಂದೆ: ಆರ್ ಕೆ ಸಂಜೀವ ರಾವ್, ವಾಸ: ನಂ 28,2 ನೇ ಅಡ್ಡ ರಸ್ತೆ ,ನ್ಯೂ ಬ್ಯಾಂಕ್ ಕಾಲೋನಿ, ಕೋಣನಕುಂಟೆ,ಸೌಧಾ ಮಿನಿಕಲ್ಯಾಣ ಮಂಟಪದ ಹಿಂದೆ ಬೆಂಗಳೂರು ಇವರ ತಾಯಿ ಶ್ರೀಮತಿ ಸುಶೀಲ ರಾವ್ ಕ್ರಯ ಮಾಡಿದ ಹೆರಂಜಾಲು ಗ್ರಾಮದ ಸರ್ವೆ ನಂಬ್ರ:122/1ಪಿ2 ರಲ್ಲಿ 5.00 ಎಕ್ರೆ ಭೂಮಿಯು ಪಿರ್ಯಾದಿದಾರರ ತಾಯಿ 2003 ನೇ ಇಸವಿಯಲ್ಲಿ ಮೃತರಾದ ನಂತರ ಪಿರ್ಯಾದಿದಾರರು ಹಾಗೂ ಅವರ ಸಹೋದರ –ಸಹೋದರಿಯರ ಹಕ್ಕಿಗೆ ಬಂದಿದ್ದು ಆ ಪ್ರಕಾರ ಆರ್ .ಟಿ.ಸಿ ದಾಖಲಾಗಿದ್ದು 2019 ರ ಇಸವಿ ಡಿಸೆಂಬರ್ ತಿಂಗಳಲ್ಲಿ ಪಿರ್ಯಾದಿದಾರರ ಮೃತ ಸಹೋದರ ಪ್ರಕಾಶ್ ರಾವ್ ಇವರ ಮಗನಾದ ಸಂಜಿತ್ ಪ್ರಕಾಶ ರಾವ್ ರವರು ಹೆರಂಜಾಲು ಗ್ರಾಮದ ಸದ್ರಿ ಜಾಗದಲ್ಲಿ ಇದ್ದ ಬೆಲೆ ಬಾಳೂವ ಸಾಗುವಾನಿ ಮತ್ತು ಬೋಗಿ ಮರಗಳನ್ನು ಅಕ್ರಮವಾಗಿ ಕಡಿದ ವಿಚಾರವಾಗಿ ಅರಣ್ಯ ಇಲಾಖೆಯಲ್ಲಿ ತಕ್ಷೀರು ದಾಖಲಾಗಿದ್ದು ನಂತರ ದಿನಾಂಕ 01/10/2021 ರಂದು ಪಿರ್ಯಾದಿದಾರರಿಗೆ ಹತ್ತಿರದ ನಿವಾಸಿಯೊಬ್ಬರು ಮಾಹಿತಿ ನೀಡಿ ಭೂಮಿಯನ್ನು ಸರ್ವೇಯರ್ ಮೂಲಕ ಅಳತೆ ಮಾಡಿ ಸದ್ರಿ ಭೂಮಿಗೆ ತಾಗಿ ಪಕ್ಕದಲ್ಲಿ ಸಂಜಿತ್ ಪ್ರಕಾಶ ರಾವ್ ರವರಿಗೆ ಸೇರಿದ  ಸರ್ವೆ ನಂಬ್ರ:122/1ಪಿ1 ರಲ್ಲಿ 4.74  ಸೆಂಟ್ಸ್ ಜಾಗ ಬರುವಂತೆ ತೋರಿಸುವ ರೀತಿಯಲ್ಲಿ ಸರ್ವೆ ನಂಬ್ರ:122/1 ರ ಪೋಡಿ ಪ್ರಕ್ರಿಯೆ ಮಾಡಲು ಹೊರಟಿದ್ದು ಆ ಸಮಯ ಪಿರ್ಯಾದಿದಾರರು ಭೂ ದಾಖಲೆಗಳ ಕಚೇರಿಯಲ್ಲಿರುವ ಭೂ ದಾಖಲೆಗಳ ಮಂಜೂರು ನಕಲನ್ನು ದಿನಾಂಕ 21/10/2021ರಂದು ಪಡೆದುಕೊಂಡು ನೋಡಲಾಗಿ ಅದರಲ್ಲಿ ದಿ.ಕೆ ಎಸ್ ಪ್ರಕಾಶ್ ರಾವ್ ಇವರು ಜೀವಂತ ಇರುವಾಗ ದಿನಾಂಕ 18/12/2018 ರಂದು ಅಳತೆಗೆ ದಿನಾಂಕ 01/10/2021ರಂದು ಭೂ ಮಾಪಕರು ಸ್ಥಳಕ್ಕೆ ಬರುವ ನೋಟೀಸು ಕೂಡಾ ಇದ್ದು ನೋಟೀಸ್ ನಲ್ಲಿ ಪಿರ್ಯಾದಿದಾರರದ್ದೆಂದು ತೋರಿಸುವ ಸಹಿ ಇದ್ದು ಪಿರ್ಯಾದಿದಾರರ ಸಹಿ ಹಾಕಿರುವುದಲ್ಲ ಮತ್ತು ಪಿರ್ಯಾದಿದಾರರು ಸಹಿ ಕೂಡಾ ಆ ರೀತಿ ಇರುವುದಿಲ್ಲ , ಸಹಿಯನ್ನು ಆಪಾದಿತನು ಫೋರ್ಜರಿ ಮಾಡಿ ಹಾಕಿ ಸುಳ್ಳು ದಾಖಲೆ ಸೃಷ್ಠಿಸಲು ಎಸಗಿದ ಫೋರ್ಜರಿ ಆಗಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 168/2021 ಕಲಂ: 465, 468 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 24-10-2021 08:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080