ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಗಂಗೊಳ್ಳಿ: ದಿನಾಂಕ 21/10/2021 ರಂದು ಪಿರ್ಯಾದಿದಾರರಾದ ಆದಿತ್ಯ ಎನ್‌ ಶೆಟ್ಟಿ(21), ತಂದೆ: ನರಸಿಂಹ ಶೆಟ್ಟಿ, ವಾಸ: ಆಶ್ರಿತಾ ಬೆಳ್ಳಾಡಿ ಸೇನಾಪುರ ಅಂಚೆ ಮತ್ತು ಗ್ರಾಮ ಕುಂದಾಪುರ ತಾಲೂಕು ಇವರು ಆಪಾದಿತ ನರಸಿಂಹ ಶೆಟ್ಟಿ ರವರ ಸ್ಕೂಟರ್‌ ನಂಬ್ರ KA-20-EJ-2295 ನೇದರಲ್ಲಿ ಸಹ ಸವಾರನಾಗಿ ಕುಳಿತುಕೊಂಡು ಮನೆಯಿಂದ ಗುಡ್ಡೆ ಹೋಟೇಲ್‌ ಕಡೆ ರಸ್ತೆಯಲ್ಲಿ ಹೋಗುತ್ತಿರುವಾಗ 11:10 ಗಂಟೆಗೆ ಕುಂದಾಪುರ ತಾಲೂಕು ಸೇನಾಪುರ ಗ್ರಾಮದ ಗುಡ್ಡೆ ಹೋಟೇಲ್‌ ಬಳಿ ತಲುಪುವಾಗ ಆಪಾದಿತ ತನ್ನ ಸ್ಕೂಟರ್‌ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ದನ ಒಂದು ಅಡ್ಡ ಬಂದಿದ್ದು ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿ ಪಿರ್ಯಾದಿದಾರರು ಹಾಗೂ ಸವಾರ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರ ಎರಡೂ ಕೋಲು ಕೈಗಳಿಗೆ ರಕ್ತಗಾಯ, ಬಲಭುಜ ಹಾಗೂ ಎರಡೂ ಮುಂಗಾಲಿಗೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 99/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ : ದಿನಾಂಕ 23/10/2021 ರಂದು ಸಂಜೆ 7:40 ಗಂಟೆಗೆ ಕುಂದಾಪುರ ತಾಲೂಕಿನ, ಹಂಗಳೂರು ಗ್ರಾಮದ ವಿನಾಯಕ್‌ ಟಾಕಿಸ್ ಬಳಿ ಪೂರ್ವ ಬದಿಯ NH 66 ರಸ್ತೆಯಲ್ಲಿ, ಆಪಾದಿತ ಅರುಣ್‌ ಶೆಟ್ಟಿ ಎಂಬುವವರು ನೊಂದಣಿ ನಂಬ್ರವಿಲ್ಲದ ಕೆಂಪು ಬಣ್ಣದ ಹೊಸ HONDA ACTIVA ಸ್ಕೂಟರ್‌ ನ್ನು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು, ಪೂರ್ವ ಬದಿಯ NH 66 ರಸ್ತೆಯನ್ನು ದಾಟುತ್ತ ರಸ್ತೆಯ ಪೂರ್ವ ಅಂಚಿಗೆ ತಲುಪುತ್ತಿದ್ದ ಪಿರ್ಯಾದಿದಾರರಾದ ನಿತೇಶ (30), ತಂದೆ :ವೆಂಕಟೇಶ, ವಾಸ: ಹುಂಚಾರ ಬೆಟ್ಟು, ಬಿಸಿ ರಸ್ತೆ, ವಡೇರಹೋಬಳಿ ಗ್ರಾಮ, ಕುಂದಾಪುರ ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ ನಿತೇಶ್‌ ರವರ ಬಲಕಾಲಿಗೆ ಪಾದದ ಮೇಲೆ ಎಲುಬಿಗೆ ಒಳಜಖಂ ಗಾಯ ಹಾಗೂ ಬಲಕೈ ಮತ್ತು ಹಣೆಗೆ ತರಚಿದ ತರಚಿದ ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 83/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು : ಪಿರ್ಯಾದಿದಾರರಾದ ವೆಂಕಟೇಶ ನಾಯ್ಕ (27) , ತಂದೆ: ಗೋವಿಂದ ನಾಯ್ಕ ,ವಾಸ: ಹೊನ್ನಿಮಡಿಯರ ಮನೆ ,ಗಂಜಿಗೇರಿ , ನೂಜಿ ಗ್ರಾಮ ಮತ್ತು ಪೋಸ್ಟ್ ಬೆಳಕೆ ಭಟ್ಕಳ ತಾಲೂಕು, ಉತ್ತರ ಕನ್ನಡ ಜಿಲ್ಲೆ ಇವರು ದಿನಾಂಕ 23/10/2021 ರಂದು ಅವರ ಕಾರು ನಂಬ್ರ KA-70-0637 ನೇ ಇಕೋ ವಾಹನದರಲ್ಲಿ ಮಧ್ಯಾಹ್ನ 3:30 ಗಂಟೆಗೆ ಗೊರಟೆ ಕ್ರಾಸ್ ನಿಂದ ಕುಂದಾಪುರಕ್ಕೆ ಬಾಡಿಗೆ ಹೋಗಲು ಜನರನ್ನು ಹತ್ತಿಸಿಕೊಂಡು ಹೊರಟು ಶಿರೂರು ಫಾರೆಸ್ಟಗೇಟ್ ಸ್ವಲ್ಪ ಮುಂದೆ ರೈಸ್ ಮಿಲ್ಲ ಹತ್ತಿರ ಬಾಡಿಗೆದಾರರು ಮತ್ತೋಬ್ಬರು ಬರಲು ಇದ್ದು ವಾಹನವನ್ನು ರೈಸ್ ಮಿಲ್ಲ ಹತ್ತಿರ ರಸ್ತೆಯ ಎಡಭಾಗದಲ್ಲಿ ನಿಲ್ಲಿಸಿದ್ದು ಆಗ ಸಮಯ ಮಧ್ಯಾಹ್ನ 3:45 ಗಂಟೆಗೆ ಒಂದು ರಿಕ್ಷಾ ಗೊರಟೆ ಕ್ರಾಸ್ ನಿಂದ ಶಿರೂರು ಹೋಗಲು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ನಿಲ್ಲಿಸಿಕೊಂಡಿದ್ದ ಕಾರಿಗೆ ಹಿಂದಿನಿಂದ ಬಂದು ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರು ಜಖಂ ಆಗಿದ್ದು ಅಲ್ಲದೇ ರಿಕ್ಷಾವೂ ಢಿಕ್ಕಿ ಹೊಡೆದ ಪರಿಣಾಮಕ್ಕೆ ಮಗುಚಿ ಬಿದ್ದಿದ್ದು ಪಿರ್ಯಾದಿದಾರರು ನೋಡಲಾಗಿ ರಿಕ್ಷಾದ ಒಳಗಿದ್ದ ಪ್ರಯಾಣಿಕರಾದ ಒಬ್ಬರಿಗೆ ಎಡಕಾಲಿಗೆ ರಕ್ತ ಗಾಯವಾಗಿದ್ದು ಪಿರ್ಯಾದಿದಾರರು ಕೂಡಲೇ ಅಂಬುಲೆನ್ಸ್ ನಲ್ಲಿ ಕುಂದಾಪುರ ವಿನಯ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ದಾಖಲು ಮಾಡಿದ್ದು ಪಿರ್ಯಾದಿದಾರರ ವಾಹನಕ್ಕೆ ಢಿಕ್ಕಿ ಹೊಡೆದ ರಿಕ್ಷಾ ನಂಬರ್ KA 47-8785 ಆಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 169/2021 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರ ಪ್ರಕರಣ 

  • ಉಡುಪಿ: ಪಿರ್ಯಾದಿದಾರರಾದ ಸ್ಯಾಮುವೆಲ್‌ ಸಾಲಿನ್ಸ್ ಪ್ರಾಯ 47 ವರ್ಷ, ತಂದೆ: ದಿ. ಎಬ್ನೇಜರ್‌ ಸಾಲಿನ್,  ವಾಸ: ಕ್ಲಾಸಿಕ್‌ ಕೇಟರರ್ಸ್, ಬೈಲು ಮನೆ, ಅಂಬಾಡಿ, ಕೋಟೆ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಕ್ಲಾಸಿಕ್‌ ಎಂಟರ್‌ಪ್ರೈಸರ್ಸ್‌ ಎಂಬ ಹೆಸರಿನ IND-KA-01-MM-2938 ರಂತೆ ನೋಂದಾಯಿತವಾದ ಪರ್ಸೀನ್‌ ಬೋಟ್‌ ಮತ್ತು ಅದಕ್ಕೆ ಸಂಬಂಧಿಸಿದ ಉಪಕರಣ/ಸಲಕರಣಾ ವಸ್ತುಗಳ ಮಾಲೀಕರಾಗಿರುತ್ತಾರೆ. ದಿನಾಂಕ: 15/10/2020 ರಂದು ಪಿರ್ಯಾದಿದಾರರಾದ 1 ನೇ ಆರೋಪಿ ಮುಕುಂದ ವಿಠಲ ಅರುಂದೆಕರ ಇವರಿಗೆ ಪರ್ಸೀನ್‌ ಬೋಟ್‌, 650 ಮಾರಿನ ಎರಡು ಜೊತೆ ಬಲೆ, 75 ರಿಂಗ್‌, 1 ಫೈರಿಂಗ್‌ ಡಿಂಗಿ, 700 ಮಾರು ಡ್ರಮ್‌ ರೋಪ್‌, 1 ವೈರ್‌ಲೆಸ್‌, 1 ಫಿಶ್ ಫೈಂಡರ್‌, 1 ಜಿ.ಪಿ.ಎಸ್ ಮತ್ತು ಇನ್ನಿತರ ಸಾಮಾಗ್ರಿಗಳನ್ನು ಮಾರಾಟ ಮಾಡುವ ಬಗ್ಗೆ ರೂಪಾಯಿ 50,00,000/- ಕ್ಕೆ ಕರಾರು ನಡೆದಿರುತ್ತದೆ. 1 ನೇ ಆರೋಪಿಯು ರೂಪಾಯಿ 6 ಲಕ್ಷ ಮುಂಗಡವಾಗಿ ಪಿರ್ಯಾದಿದಾರರಿಗೆ ಜಮಾ ಮಾಡಿರುತ್ತಾರೆ. ಸ್ವತ್ತುಗಳಿಗಾಗಿ ರೂಪಾಯಿ 30,00,000/- ಬನ್ನಂಜೆ ಕೋ-ಅಪರೇಟಿವ್‌ ಸೊಸೈಟಿಯಲ್ಲಿ ಸಾಲ ಇದ್ದು, ಇದನ್ನು 2021 ರ ಮೇ ತಿಂಗಳ ಒಳಗಾಗಿ ಹಂತ ಹಂತವಾಗಿ ಪಾವತಿಸುವುದಾಗಿ 1 ನೇ ಆರೋಪಿ ಒಪ್ಪಿಕೊಂಡಿರುತ್ತಾರೆ. ವ್ಯವಹಾರವು ಉಡುಪಿ ಮತ್ತು ಮಲ್ಪೆಯಲ್ಲಿ ನಡೆದಿರುತ್ತದೆ. ಆದರೆ 1 ನೇ ಆರೋಪಿಯು ಕರಾರಿನ ಷರತ್ತನ್ನು ಉಲ್ಲಂಘಿಸಿ ಪಿರ್ಯಾದಿದಾರರಿಗೆ ಯಾವುದೇ ಹಣ ಸಂದಾಯ /ಪಾವತಿ ಮಾಡದೇ ಇರುತ್ತಾರೆ. ಈ ನಡುವೆ ಆರೋಪಿ ಸಹಕಾರದಿಂದ ಉಳಿದ ಆರೋಪಿಗಳಾದ ಸಜೀರ್‌ ಮಹಮ್ಮದ್‌ ಆಲಿ, ಅತೀಶ್‌ ಮುಲ್ಕಿ ಇತರರು ಸೇರಿ ಪಿರ್ಯಾದಿದಾರರಿಗೆ ಸೇರಿದ ಬೋಟಿನಲ್ಲಿದ್ದ ಸ್ವತ್ತುಗಳನ್ನು ಕಳವು ಮಾಡಿ ಯಾವುದೋ ಲಾರಿಯಲ್ಲಿ ತುಂಬಿಸಿಕೊಂಡು ಹೋಗಿರುತ್ತಾರೆ. ಆರೋಪಿಗಳೆಲ್ಲರೂ ಸಮಾನ ಉದ್ದೇಶದಿಂದ ಪಿರ್ಯಾದಿದಾರರಿಗೆ ಸಂಬಂಧಿಸಿದ ಬೋಟಿನೊಳಗೆ ಅಕ್ರಮವಾಗಿ ಪ್ರವೇಶಿಸಿ ಬೋಟಿನೊಳಗಿದ್ದ ಸ್ವತ್ತುಗಳನ್ನು ಕಳವು ಮಾಡಿ ಅಕ್ರಮವಾಗಿ ಸಾಗಿಸಿದ್ದು ನಂಬಿಕೆ ದ್ರೋಹ ಎಸಗಿ ಕರಾರಿನ ಷರತ್ತನ್ನು ಉಲ್ಲಂಘಿಸಿ ಪಿರ್ಯಾದಿದಾರರಿಗೂ ಮತ್ತು ಸಾಲ ನೀಡಿದ ಬ್ಯಾಂಕಿಗೂ ಹಣ ಪಾವತಿಸದೇ ರೂಪಾಯಿ 44,00,000/- ಹಣ ಮೋಸ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 54/2021 ಕಲಂ : 420,403,406,424,426,447,379 R/W 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 24-10-2021 06:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080