ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ:  ಪಿರ್ಯಾದಿದಾರರಾದ ಸಂತೋಷ (40), ತಂದೆ: ಕೃಷ್ಣಪ್ಪ ಪೂಜಾರಿ, ವಾಸ: ನಂ 6-118 ನಾಗಿ ನಿವಾಸ ಹನುಮಂತನಗರ ಪುತ್ತೂರು ಗ್ರಾಮ ಇವರ ತಂದೆ ಕೃಷ್ಣಪ್ಪ ರವರು ದಿನಾಂಕ 23/09/2022 ರಂದು ಬೆಳಿಗ್ಗೆ ವಾಕಿಂಗ್ ಹೋಗಿ ಜನತಾ ವ್ಯಾಯಾಮ ಶಾಲೆಯಲ್ಲಿ ದೇವರಗೆ ಕೈ ಮುಗಿದು ಬರುವಾಗ ಬೆಳಿಗ್ಗೆ 07:00 ಗಂಟೆಗೆ ಅಂಬಾಗಿಲು ಪೆರಂಪಳ್ಳಿ ಕಡೆಯಿಂದ ಬರುವ ಸಾರ್ವಜನಿಕ ರಸ್ತೆ ಬಳಿ ತಲುಪುವಾಗ ಪೆರಂಪಳ್ಳಿ ಕಡೆಯಿಂದ ಬಂದ KA-22-D-8539 ನೇ  ಶಾಲಾ ಬಸ್ಸಿನ ಚಾಲಕ ದಿಲಿಪ್ ಕುಮಾರ್ ತನ್ನ ಬಸ್ಸನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅಂಬಾಗಿಲು ಕಡೆಗೆ ತಿರುಗುವ ತಿರುವಿನಲ್ಲಿ ರಸ್ತೆಯ ತೀರಾ ಬಲ ಬದಿಗೆ ಬಂದು ರಸ್ತೆ ಪಕ್ಕ ನಿಂತಿದ್ದ ಪಿರ್ಯಾದಿದಾರರ ತಂದೆಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ  ತಂದೆ ರಸ್ತೆಗೆ ಬಿದ್ದು, ಹಿಂಬದಿತಲೆಗೆ ರಕ್ತಗಾಯ ಮತ್ತು ಎರಡೂಕಾಲಿನ ಪಾದಗಳಿಗೆ ತರಚಿದ ರಕ್ತಗಾಯ  ಆದವರನ್ನು ಚಿಕಿತ್ಸೆಯ ಬಗ್ಗೆ ಬಾಳಿಗಾ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ  ದಾಖಲಿಸಿರುವುದಾಗಿದೆ.  ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 76/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 22/09/2022 ರಂದು ರಾತ್ರಿ 11:50 ಗಂಟೆಗೆ ಉಡುಪಿ – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಪ್ಪೂರು ಗ್ರಾಮದ ಕೆಜಿ ರೋಡ್‌ ಜಂಕ್ಷನ್‌ನಲ್ಲಿ ಆರೋಪಿ ವಸಂತ ಬಂಟ್ವಾಳ KA-19-B-4848 ನೇ ಗೂಡ್ಸ್‌ ಲಾರಿಯನ್ನು  ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ಜಂಕ್ಷನ್‌ನಲ್ಲಿ ಅಳವಡಿಸಿರುವ Metalic Boom Crash Barrier ಗೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 40 ಮೀಟರ್‌ Metalic Boom Crash Barrier ಸಂಪೂರ್ಣ ಜಖಂಗೋಂಡು, ರೂಪಾಯಿ 1,00,000/- ನಷ್ಟವುಂಟಾಗಿರುತ್ತದೆ. ಅಲ್ಲದೇ ಲಾರಿಯ ಅಡಿಭಾಗ ಜಖಂಗೊಂಡಿದ್ದು, ಯಾವುದೇ ರಕ್ತಗಾಯವಾಗಿರುವುದಿಲ್ಲ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 279/2022 ಕಲಂ : 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 22/09/2022 ರಂದು ಸಂಜೆ  05:15 ಗಂಟೆಗೆ, ಕುಂದಾಪುರ  ತಾಲೂಕಿನ, ಕೊಟೇಶ್ವರ ಗ್ರಾಮದ ಭಾರತ್‌ಪೆಟ್ರೋಲಿಯಂ ಪೆಟ್ರೋಲ್‌ ಬಂಕ್‌ ಬಳಿ NH 66  ರಸ್ತೆಯಲ್ಲಿ, ಆಪಾದಿತ  ಶಶಿಕುಮಾರ್‌ KA-20-B-5592 Tata Ace ಗೂಡ್ಸ್‌ವಾಹನವನ್ನು ತೆಕ್ಕಟ್ಟೆ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಯಾವುದೇ  ಸೂಚನೆ ನೀಡದೇ NH 66  ರಸ್ತೆಯಿಂದ ಸರ್ವಿಸ್‌ ರಸ್ತೆಗೆ ತಿರುಗಿಸಿ. ಅದೇ ದಿಕ್ಕಿನಲ್ಲಿ Tata Ace ಗೂಡ್ಸ್‌ವಾಹನದ ಮುಂಭಾಗದಲ್ಲಿ NH 66  ರಸ್ತೆಯ ಎಡಬದಿಯಲ್ಲಿ ವಿಶ್ವನಾಥ ರವರು KA-20-ER-5872ನೇ  ಸ್ಕೂಟರ್‌‌ನಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಪ್ರತಿಮಾ (37), ಗಂಡ: ವಿಶ್ವನಾಥ, ವಾಸ: ತುಂಗಜ್ಜಿಮನೆ, ಬೀಜಾಡಿ ಗ್ರಾಮ, ಕುಂದಾಪುರ ಇವರು 6 ವರ್ಷದ ಇಂಪನಾಳನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು  ಸವಾರಿ ಮಾಡಿಕೊಂಡು  ಹೋಗುತ್ತಿದ್ದ ಸ್ಕೂಟರ್‌‌ಗೆ  ಅಪಘಾತಪಡಿಸಿದ ಪರಿಣಾಮ ಪ್ರತಿಮಾರವರ ಬಲಕಾಲಿಗೆ ಮೂಳೆ ಮುರಿತವಾದ ಗಾಯ ಹಾಗೂ ಇಂಪನಾಳಿಗೆ ಕೈ ಕಾಲುಗಳಿಗೆ ತರಚಿದ  ಗಾಯವಾಗಿದ್ದು,  ಪ್ರತಿಮಾರವರು ಕೊಟೇಶ್ವರ ಎನ್‌. ಆರ್‌ಆಚಾರ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಇಂಪನಾಳು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 101/2022  ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ರುದ್ರಯ್ಯ ಆಚಾರಿ (79), ತಂದೆ: ನರಸಿಂಹ ಆಚಾರ್ಯ, ವಾಸ: ಹಳ್ಳಾಡಿ ಹರ್ಕಾಡಿ ಗ್ರಾಮ ಕುಂದಾಪುರ ತಾಲೂಕು ಇವರು  ದಿನಾಂಕ  22/09/2022 ರಂದು  ತನ್ನ KA20EW 2784 ನೇ ಸ್ಕೂಟಿಯಲ್ಲಿ  ಹಳ್ಳಾಡಿಯಿಂದ ಗುಡ್ಡಟ್ಟು  ದೇವಸ್ಥಾನಕ್ಕೆ  ಹೋಗುವ ರಸ್ತೆಯಲ್ಲಿ  ಬರುತ್ತಿರುವಾಗ  ಹಳ್ಳಾಡಿ ಗೋಪಾಲಕೃಷ್ಣ ಪಿಳ್ಳೆಯವರ ಮನೆಯ ಬಳಿ   ತಲುವಷ್ಟರಲ್ಲಿ 15:45 ಗಂಟೆಯ ಸಮಯಕ್ಕೆ ಗುಡ್ಡಟ್ಟು ದೇವಸ್ಥಾನದ ಕಡೆಯಿಂದ MH-06-AN-9183 ಕಾರು ಚಾಲಕ ರಂಜಿತ್ ಶೆಟ್ಟಿ ತನ್ನ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ  ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟಿ ಸಮೇತ ರಸ್ತೆಗೆ ಬಿದ್ದ  ಪರಿಣಾಮ ಬಲ ಕಾಲಿನ ತೊಡೆಗೆ ಮೂಳೆ ಮುರಿತವಾಗಿದ್ದು  ಮತ್ತು ಬಲ ಕಾಲಿನ ಮೊಣಗಂಟಿಗೆ  ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 156/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಗಂಡಸು ಕಾಣೆ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಮೂರ್ತಿನಾಯ್ಕ( 32), ತಂದೆ: ಸ್ವಾಮಿ ನಾಯ್ಕ, ವಾಸ: ಕುಂಚೂರು ಕೆರೆತಾಂಡ  ಹರಪ್ಪನ ಹಳ್ಳಿ ಇವರ ತಮ್ಮ ಶಿವಪ್ಪ ನಾಯ್ಕ ( 25) ಇವರು 6 ತಿಂಗಳ ಹಿಂದೆ  ದಾವಣಗೆರೆಯ ಉತ್ಕಟ್ಟಿ ತಾಂಡದ ಆಶಾ ಇವರನ್ನು ಪ್ರೀತಿಸಿ ಮದುವೆ ಆಗಿದ್ದು , ಮದುವೆಯ ನಂತರ  ಹೆಂಡತಿ ಆಶಾರೊಂದಿಗೆ  ಮಲ್ಪೆ ಕೊಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು , ಕಳೆದ 15 ದಿನಗಳಿಂದ ಮಲ್ಪೆ ಬಂದರಿನಲ್ಲಿ ಸುಧೀರ ಸಾಲಿಯಾನ ರವರ ಎಎಎಫ್ ಮೀನು ಪಾರ್ಟಿಯಲ್ಲಿ  ಬಾಕ್ಸ್ ಹೊರುವ ಕೆಲಸ ಮಾಡಿಕೊಂಡಿದ್ದು, ಕೆಲವು ದಿನಗಳಿಂದ ಹೆಂಡತಿಯೊಂದಿಗೆ ವೈಮನಸ್ಸು ಹೊಂದಿದ್ದು ..ಈ ಹಿಂದೆ ಒಂದೆರಡು ಬಾರಿ  ಪಿರ್ಯಾದಿದಾರರು ಹಾಗೂ ಅವರ ಅಣ್ಣಂದಿರು ಗಂಡ -ಹೆಂಡತಿಗೆ ತಿಳುವಳಿಕೆ  ಹೇಳಿದ್ದು ದಿನಾಂಕ  22/09/2022 ರಂದು ರಾತ್ರಿ  ಮಲ್ಪೆ ಬಂದರಿನಲ್ಲಿ  ಎಎಎಫ್ ಮೀನು ಪಾರ್ಟಿಯಲ್ಲಿ ಇತರ ಕೆಲಸಗಾರರೊಂದಿಗೆ ಕೆಲಸ ಮಾಡುತ್ತಿದ್ದನ್ನು ಪಿರ್ಯಾದಿದಾರರು ನೋಡಿದ್ದು.ಪಿರ್ಯಾದಿದಾರರು  ರಾತ್ರಿ ಕೆಲಸ ಮುಗಿಸಿ ತನ್ನ ಮನೆಗೆ ಬಂದಿರುತ್ತಾರೆ. ದಿನಾಂಕ 23/09/2022 ರಂದು ಪಿರ್ಯಾದಿದಾರರ ಅಣ್ಣ ಪಿರ್ಯಾದಿದಾರಿಗೆ ಪೋನ್ ಮಾಡಿ  ಶಿವಪ್ಪ ನಾಯ್ಕ ನ  ಬೈಕ್  ಮಲ್ಪೆ ಪಡುಕೆರೆ ಬ್ರಿಡ್ಜ್  ಮೇಲೆ ಎಡಭಾಗದ ತಡೆಗೋಡೆಯ ಬಳಿ ಬಿದಿದ್ದು. ಶಿವಪ್ಪ ನಾಯ್ಕ ಕಾಣಿಸುತ್ತಿಲ್ಲ ಎಂದು ಯಾರೋ ನನಗೆ ದೂರವಾಣಿ ಮುಖಾಂತರ ಮಾಹಿತಿ ನೀಡಿರುತ್ತಾರೆ. ನೀವು ಕೂಡಲೇ ಅಲ್ಲಿಗೆ ಹೋಗಿ ಪರಿಶೀಲಿಸಿ ಎಂದು ಮಾಹಿತಿ ನೀಡಿದಂತೆ .ಪಿರ್ಯಾದಿದಾರರು  ಮತ್ತು ಪಿರ್ಯಾದಿದಾರರ  ಚಿಕ್ಕಪ್ಪನ ಮಗ ಹೇಮಂತ್ ಇಬ್ಬರು ಕೂಡಿ ಬ್ರಿಡ್ಜ್ ಮೇಲೆ ಬಂದು ಪರಿಶೀಲಿಸಲಾಗಿ ಬ್ರಿಡ್ಜ್ ನ  ಸುಮಾರು ಮಧ್ಯಭಾಗದಲ್ಲಿ ಮಲ್ಪೆಯಿಂದ ಪಡುಕೆರೆಗೆ ಹೋಗುವ ದಿಕ್ಕಿನಲ್ಲಿ ತಡಗೋಡೆಗೆ ಶಿವಪ್ಪನ ಪಲ್ಸರ್ ಬೈಕ್ ಡಿಕ್ಕಿ ಹೊಡೆದುಕೊಂಡು ಬಿದ್ದಿತ್ತು. ಆಗ ಸುಮಾರು ಬೆಳಿಗ್ಗೆ 5:45 ಗಂಟೆ ಆಗಿರುಬಹುದು. ಪಿರ್ಯಾದಿದಾರರು ಮತ್ತು ಹೇಮಂತ್ ಸುತ್ತಮುತ್ತ ಹುಡುಕಾಡಿ  ದಾರಿ ಹೋಕರನ್ನು ಕೇಳಿದರು ಯಾವುದೇ ಮಾಹಿತಿ ಸಿಗಲಿಲ್ಲ ದ್ವಿಚಕ್ರ ವಾಹನದ ಎಡಬದಿಯ ಡೂಮ್ ಲೈಟ್,ಇಂಡಿಕೇಟರ್ , ಎಡಭಾಗದ ಕ್ಲಚ್ ಲಿವರ್  ಎಡಭಾಗದ ತಡೆಗೋಡೆಗೆ ಡಿಕ್ಕಿಯಾಗಿ ಮುರಿದು ಅಲ್ಲಿಯೇ ಬಿದಿದ್ದವು.ಬೈಕಿನ ಕೀ ಬೈಕಿನಲ್ಲಿ ಆನ್ ಕಂಡೀಷನಲ್ಲಿ ಇತ್ತು.   ಶಿವಪ್ಪನಾಯ್ಕನ ಬಲಕಾಲಿನ ಚಪ್ಪಲಿ ಅಲ್ಲಿಯೇ ಬಿದಿತ್ತು. ದ್ವಿ ಚಕ್ರವಾಹನ ಗುದ್ದಿ ದ ಪಿಲ್ಲರ್ ನ ಕೆಳಗಿನ ಮತ್ತು ಮೇಲಿನ ಭಾಗದಲ್ಲಿ ಕೆಂಪು ಬಣ್ಣದ ದ್ರವ ಪದಾರ್ಥ ಕೂಡಾ ಇತ್ತು. ರಾತ್ರಿ ಬಂದಿರುವ ಮಳೆಯಿಂದ ದ್ವಿಚಕ್ರ ವಾಹನ ಸಂಪೂರ್ಣ ನೆನೆದಿತ್ತು. ಬೈಕಿನ ಹಿಂಭಾಗದ ಬ್ಯಾಗ್ ನಲ್ಲಿ ಶಿವಪ್ಪ ನಾಯ್ಕನ ಮೊಬೈಲ್ ಇದ್ದಿರುತ್ತದೆ. . ಪಿರ್ಯಾದಿದಾರರು  ಈ ಘಟನೆಯ ಬಗ್ಗೆ ಅವರ ಸಂಬಂದಿಕರಿಗೆ  ಮಾಹಿತಿ ತಿಳಿಸಿದ್ದು,  ನಂತರ ಪಿರ್ಯಾದಿದಾರರ  ತಂಗಿ ಪಾರಿಯ ಬಳಿ ವಿಷಯ ಸಂಗ್ರಹಿಸಲಾಗಿ ಶಿವಪ್ಪ ನಾಯ್ಕ್ ರಾತ್ರಿ 11:30 ಗಂಟೆಗೆ ಎ.ಎ ಎಫ್ ನಲ್ಲಿ ಕೆಲಸ ಮುಗಿಸಿ ಬೈಕಿನಲ್ಲಿ ಮನೆಗೆ ಹೋದವನು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಆತನ ಹೆಂಡತಿ ಆಶಾಳನ್ನು ಕರೆದುಕೊಂಡು ಹೋಗಿ ಪಾರಿಯ ಮನೆಯಲ್ಲಿ ಬಿಟ್ಟು ನನಗೆ ಯಾವುದೋ ಮೀನಿನ ಕೆಲಸ ಬಂದಿದೆ ನಾನು ಹೋಗುತ್ತಿದ್ದೇನೆ.ಆಶಾ ನಿನ್ನ ಮನೆಯಲ್ಲಿಯೇ ಇರಲಿ ಎಂದು ಹೇಳಿ ಹೊರಗಿನಿಂದಲೇ ಬೈಕ್   ತೆಗೆದುಕೊಂಡು ಹೋಗಿದ್ದನು  ಎಂದು ತಿಳಿಸಿರುತ್ತಾಳೆ.    ಪಿರ್ಯಾದಿದಾರರ ತಮ್ಮ ಶಿವಪ್ಪ ನಾಯ್ಕ  ದಿನಾಂಕ 23/09/ 2022  ಮುಂಜಾನೆ  1:35 ಗಂಟೆಯಿಂದ ಬೆ5:45 ಗಂಟೆಯ ಮಧ್ಯಾವಧಿಯಲ್ಲಿ  ಮಲ್ಪೆ ಪಡುಕೆರೆ ಬ್ರಿಡ್ಜ್ ಮೇಲೆ ಬೈಕ್ ಅಪಘಾತವಾಗಿ ಅಥವಾ ಇನ್ಯಾವುದೋ ಕಾರಣಗಳಿಂದ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 81/2022  ಕಲಂ: ಗಂಡಸು ಕಾಣೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಪ್ರಶಾಂತ ದೇವಾಡಿಗ(32), ತಂದೆ: ರಾಮ ದೇವಾಡಿಗ, ವಾಸ: ಬೆಳ್ಳಾಡಿ, ಹುಣ್ಸೆಡಿ, ಹುಂತಿನ ಮನೆ, ಸೇನಾಪುರ ಅಂಚೆ, ಬಂಟ್ವಾಡಿ ಅಂಚೆ, ಕುಂದಾಪುರ ತಾಲೂಕು ಇವರ  ಸಹೋದರ ಮಾವ ಸೀತಾರಾಮ (49) ಇವರು ಒಂದೂವರೆ ವರ್ಷದಿಂದ ಕುಂದಾಪುರದ  ಸೆಂಚುರಿ ನಾನ್ ವೆಜ್ ಹೋಟೆಲ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುತ್ತಾರೆ. ಸೀತಾರಾಮ ರವರು ಗ್ಯಾಸ್ಟ್ತೀಕ್ ಸಮಸ್ಯೆಯಿಂದ ಬಳಲುತ್ತಿದ್ದು ಔಷಧಿ ಸೇವಿಸುತ್ತಿರುವುದಾಗಿದೆ. ದಿನಾಂಕ 23/09/2022 ರಂದು ಸೀತಾರಾಮರವರು ಹೋಟೆಲಿನಲ್ಲಿ ಕೆಲಸ ಮುಗಿಸಿ ಬೆಳಿಗ್ಗೆ 11:45 ಗಂಟೆಗೆ ಊಟ  ಮಾಡಲು ಹೋಗುತ್ತಿದ್ದಾಗ  ಬಾಯಿಯಿಂದ ಜೋರಾಗಿ ದಮ್ಮು ತೆಗೆಯುತ್ತಿದ್ದುದನ್ನು ಕಂಡು ಹೋಟೆಲ್ ಮಾಲೀಕರು ಅವರನ್ನುಕೂಡಲೇ  ಕುಂದಾಪುರ ದ ಮಂಜುನಾಥ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ 12:10 ಗಂಟೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ.  ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 32/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಕಾರ್ಕಳ: ಕಾರ್ಕಳ ತಾಲೂಕು ನಲ್ಲೂರು  ಗ್ರಾಮದ ನೆಲ್ಲಿಕಾರು ಪೇರಲ್ಕೆ ಶಾಲೆಯ ಬಳಿ ನಿವಾಸಿ ಯಶೋದ ಆಚಾರ್ಯ (60) ಇವರು ಜಿಗುಪ್ಸೆಗೊಂಡು ದಿನಾಂಕ 23/09/2022 ರಂದು  ಬೆಳಿಗ್ಗೆ 09:00 ಗಂಟೆಯಿಂದ ಮದ್ಯಾಹ್ನ 03:00 ಗಂಟೆಯ ಮದ್ಯ ಅವದಿಯಲ್ಲಿ ತಮ್ಮ ವಾಸ್ತವ್ಯದ ಮನೆಯ ಮಲಗುವ ಕೋಣೆಯಲ್ಲಿರುವ ತೆಂಗಿನ ಮರದ ಜಂತಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೆಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 33/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಕೋಟ: ದಿನಾಂಕ 23/09/2022 ರಂದು ಪುಷ್ಪಾ ,  ಪೊಲೀಸ್‌ ಉಪನಿರೀಕ್ಷಕರು (ತನಿಖೆ ), ಕೋಟ ಪೊಲೀಸ್ ಠಾಣೆ ಇವರು ರೌಂಡ್ಸ್‌ಕರ್ತವ್ಯದಲ್ಲಿರುವಾಗ  ಬ್ರಹ್ಮಾವರ ತಾಲೂಕು ಗುಂಡ್ಮಿ ಗ್ರಾಮದ ಸಾಸ್ತಾನ ಜಂಕ್ಷನ್ ನಲ್ಲಿ ಆಫ್ವಾನ್ ಎಂಬಾತ ನಿಂತುಕೊಂಡಿದ್ದು, ಆತನ ಬಾಯಿಯಿಂದ ಅಮಲು ಪದಾರ್ಥ  ಸೇವನೆಯಂತಹ ವಾಸನೆ ಬರುತ್ತಿದ್ದು, ಅವನಲ್ಲಿ ವಿಚಾರಿಸಿದಾಗ ತಾನು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿರುತ್ತಾನೆ. ಅತನನ್ನು ವಶಕ್ಕೆ ತೆಗೆದುಕೊಂಡು ಕುಂದಾಪುರ ಮಾತಾ ಆಸ್ಪತ್ರೆಯ  ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಆಫ್ವಾನ್  ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 155/2022  ಕಲಂ: 27(B)NDPS ACT    ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-09-2022 09:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080