ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಶಂಕರನಾರಾಯಣ: ದಿನಾಂಕ  22/09/2021 ರಂದು 12:00  ಗಂಟೆಗೆ  ಪಿರ್ಯಾದಿದಾರರಾದ ರುದ್ರಮ್ಮ ಕೊಠಾರ್ತಿ (68),  ಗಂಡ: ಮಂಜುನಾಥ   ಕೊಠಾರಿ, ವಾಸ:  ಪಂಚಮಿ   ನಿಲಯ  ಮೊಳ್ಳಹಳ್ಳಿ  ಗ್ರಾಮ   & ಅಂಚೆ  ಕುಂದಾಪುರ ತಾಲೂಕು  ಇವರು  ಕುಂದಾಪುರ    ತಾಲೂಕಿನ  ಅಂಪಾರು  ಗ್ರಾಮದ  ಕಂಸಾಡಿ   ಎಂಬಲ್ಲಿ   ಮೊಳ್ಳಹಳ್ಳಿಗೆ ಹೋಗಲು   KA-20-D-9470  ನೇ  ನಂಬ್ರದ  ಆಟೋರಿಕ್ಷಾ     ಹತ್ತುತ್ತಿರುವಾಗ  ಆರೋಪಿಯು  ಯಾವುದೇ   ಮುನ್ಚೂಚನೇ   ನೀಡದೇ   ನಿರ್ಲಕ್ಷತನದಿಂದ ಏಕಾಏಕೀ  ಆಟೋರಿಕ್ಷಾ  ಚಲಾಯಿಸಿದ್ದು   ಪಿರ್ಯಾದಿದಾರರು ಆಯತಪ್ಪಿ  ಆಟೋರಿಕ್ಷಾದಿಂದ  ಕೆಳಗಡೆ  ಬಿದ್ದ  ಪರಿಣಾಮ  ಪಿರ್ಯಾದಿದಾರರ  ಎಡಕಾಲಿಗೆ   ಮೂಳೆ  ಮುರಿತದ   ಗಾಯವಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 90/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿರ್ಯಾದಿದಾರರಾದ ಜಾರ್ಜ್ ಕುಟ್ಟಿ (58), ತಂದೆ:ದಿ. ಡ್ಯಾನಿಯಲ್, ವಾಸ: ಕತಾಡಿಯತ್ತ ಹೌಸ್, ಸುಭಾಷ್‌ನಗರ ಕುರ್ಕಾಲು ಗ್ರಾಮ  ಕಾಪು ಇವರು ಬಿಎಸ್‌ಎನ್ ಎಲ್ ಕಛೇರಿಯಲ್ಲಿ ಉದ್ಯೋಗಿಯಾಗಿದ್ದು, ದಿನಾಂಕ 21/09/2021ರಂದು ಕೆಲಸ ಮುಗಿಸಿ ಕಛೇರಿಯಿಂದ ಮೋಟಾರು ಸೈಕಲ್ ನಂಬ್ರ KA-20-ET-4027 ನೇ ದರಲ್ಲಿ  ಕಾಫು ತಾಲೂಕು ಉಳಿಯಾರಗೋಳಿ ಗ್ರಾಮದ ಪೊಲಿಪು ಜಂಕ್ಷನ್ ದಾಟಿ ಉಡುಪಿ ಮಂಗಳೂರು ರಾಹೆ 66 ರ ಪೂರ್ವ ಬದಿಯ ಸರ್ವಿಸ್ ರಸ್ತೆಯಲ್ಲಿ ತನ್ನ ಮನೆ ಕಡೆಗೆ ಹೋಗುತ್ತಿರುವಾಗ MH-04-EV-3441 ನೇ ಮೋಟಾರು ಸೈಕಲ್ ಸವಾರ ರಫೀಜ್ ತನ್ನ ಮೋಟಾರು ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬಂದು ಪಿರ್ಯಾದಿದಾರರು ಹೋಗುತ್ತಿದ್ದ ಮೋಟಾರು ಸೈಕಲ್‌ ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಡಿಕ್ಕಿ ಹೊಡೆದ ಮೋಟಾರು ಸೈಕಲ್ ಸವಾರ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಗಂಟಿನ ಸಮೀಪ, ಪಾದದ ಸಮೀಪ, ಎಡಕಾಲು ಪಾದದ ಸಮೀಪ,  ತರಚಿದ ಗಾಯವಾಗಿದ್ದು, ಬಲಬದಿ ಕಣ್ಣಿನ ಸಮೀಪ ಗುದ್ದಿದ ನೋವಾಗಿ ಒಳಜಖಂ ಆಗಿದ್ದು, ಡಿಕ್ಕಿ ಹೊಡೆದ ಮೋಟಾರ್ ಸೈಕಲ್‌ ಸವಾರನಿಗೂ  ಸಣ್ಣ ಪುಟ್ಟ ಗಾಯವಾಗಿರುತ್ತದೆ. ಪಿರ್ಯಾದಿದಾರರು ಹಾಗೂ ಡಿಕ್ಕಿ ಹೊಡೆದ ಮೋಟಾರು ಸೈಕಲ್ ಸವಾರ ತನಗಾದ ಗಾಯದ ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 149/2021  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿದಾರರಾದ ಜಯಪ್ರಕಾಶ್ (29), ತಂದೆ: ಪಂಜು ಮೊಗವೀರ, ವಾಸ: ಮನಸ್ವಿ ನಿಲಯ, ನವನಗರ, ಕುಂಭಾಶಿ ಅಂಚೆ, ವಕ್ವಾಡಿ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 21/09/2021 ಅವರ ಮಾವನ KA-20-MC-3129 ನೇ ನಂಬ್ರದ TATA TIAGO ಕಾರಿನಲ್ಲಿ ಪಿರ್ಯಾದಿದಾರರ ಹೆಂಡತಿ ಸುಧಾ(24), ಅವರ ಪರಿಚಯದ ಈಶ್ವರಿ(46)  ಮತ್ತು  ಅವರ ಮೊಮ್ಮಗ ಶಿಕ್ಷಣ್ (6) ಎಂಬುವರನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಸ್ವಂತ ಕೆಲಸದ ನಿಮಿತ್ತ ಮನೆಯಿಂದ ಮಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ ಮಂಗಳೂರು ಏಕಮುಖ ಸಂಚಾರ ರಸ್ತೆಯಲ್ಲಿ ಹೋಗುತ್ತಾ  ಬೆಳಿಗ್ಗೆ 05:50 ಗಂಟೆಯ ವೇಳೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಕಾರ್ಕಳ ಜಂಕ್ಷನ್ ತಲುಪುತ್ತಿದ್ದಂತೆ KA-19-C-1888 ನೇ ನಂಬ್ರದ ಕಂಟೈನರನ್ನು ಅದರ ಚಾಲಕ ಕಿಟ್ಟಣ್ಣ ರೈ ತನ್ನ ಕಂಟೈನರನ್ನು ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾರೂಕತೆಯಿಂದ  ಚಲಾಯಿಸಿಕೊಂಡು ಬಂದು ಕಾರ್ಕಳ ಕಡೆಗೆ ಹೋಗಲು ಒಮ್ಮೆಲೇ ತನ್ನ ಕಂಟೈನರನ್ನು ತಿರುಗಿಸಿ ಜಂಕ್ಷನ್‌‌ನಲ್ಲಿ ಹೋಗುತ್ತಿದ್ದ ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಎದುರು ಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಪಿರ್ಯಾದಿದಾರರ ಮೂಗಿಗೆ, ಮೈಕೈಗೆ ತರಚಿದ ಗಾಯ, ಅವರ ಹೆಂಡತಿ ಸುಧಾರವರ ಹಣೆಗೆ ರಕ್ತಗಾಯ, ಈಶ್ವರಿಯವರ ಹೊಟ್ಟೆಗೆ, ಎದೆಗೆ ಮತ್ತು ಎಡಕಾಲಿಗೆ ಒಳನೋವು ಹಾಗೂ ಶಿಕ್ಷಣ್ ನ ಎಡಕಾಲಿನ ಮೊಣಗಂಟಿಗೆ ಮತ್ತು ಪಾದದಗಂಟಿಗೆ ಒಳನೋವು ಉಂಟಾಗಿರುತ್ತದೆ. ಗಾಯಾಳುಗಳಿಗೆ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಗಾಯಾಳು ಸುಧಾ ಅವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬ್ರಹ್ಮಾವರದ ಮಹೇಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಕಂಟೈನರ್ ಕಡೆಯವರು ಮೊದಲು ಚಿಕಿತ್ಸೆಯ ಖರ್ಚುವೆಚ್ಛವನ್ನು ನೀಡುವುದಾಗಿ ಹೇಳಿ ನಂತರ ನಿರಾಕರಿಸಿದ್ದರಿಂದ ದೂರು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 96/2021 ಕಲಂ: 279,  337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ದೀಪಕ (35),  ತಂದೆ:  ದಿ. ಮಾಧವ  ಪೂಜಾರಿ,  ವಾಸ: ಮಿಲ್  ರೋಡ್  ಪಕ್ಕಿಬೆಟ್ಟು  ಕಲ್ಯಾಣಪುರ  ಅಂಚೆ  ಮತ್ತು  ಗ್ರಾಮ  ಉಡುಪಿ ತಾಲೂಕು  ದಿನಾಂಕ 23/09/2021  ರಂದು   ಎಂದಿನಂತೆ  ಮೂಡುಬಿದ್ರೆಯಲ್ಲಿ  ಬ್ಯಾಂಕ ಆಪ್  ಇಂಡಿಯಾದಲ್ಲಿ  ಕೆಲಸ ಮುಗಿಸಿ  ತನ್ನ  KA-20- EV- 2139   ನೇ  ಮೋಟಾರು ಸೈಕಲಿನಲ್ಲಿ  ಮೂಡುಬಿದ್ರೆಯಿಂದ  ಮನೆ  ಕಡೆಗೆ  ಸವಾರಿ  ಮಾಡಿಕೊಂಡು  ಬರುತ್ತಿರುವಾಗ  19:30 ಗಂಟೆಗೆ   ಉಡುಪಿ  ತಾಲೂಕು ಪುತ್ತೂರು  ಗ್ರಾಮದ  ಕರಾವಳಿ  ಜಂಕ್ಷನ್ನ ಬಳಿ  ಇರುವ   ಲಕ್ಷ್ಮೀ  ಸಭಾ ಭವನದ  ಹಾಲ್ ನ ಮುಂಭಾಗ  ರಾಷ್ಟ್ರೀಯ  ಹೆದ್ದಾರಿ  66  ತಲುಪುವಾಗ  ಅಂಬಾಗಿಲು ಕಡೆಯಿಂದ  ಕರಾವಳಿ  ಜಂಕ್ಷನ್  ಕಡೆಗೆ  KA-19- MD-2877 ನೇ ಕಾರು ಚಾಲಕ  ಶರತ್  ಆರ್  ಶೆಟ್ಟಿ ತನ್ನ ಕಾರನ್ನು  ದುಡುಕುತನ  ಮತ್ತು  ನಿರ್ಲಕ್ಯತನದಿಂದ  ಚಲಾಯಿಸಿಕೊಂಡು ಬಂದು  ರಸ್ತೆ ವಿಭಾಜಕದ ಮೇಲೆ    ಕಾರನ್ನು  ಚಲಾಯಿಸಿ  ಪಲ್ಟಿಯಾಗಿ  ಪಿರ್ಯಾದಿದಾರರ  ಮೋಟಾರು  ಸೈಕಲಿಗೆ   ಡಿಕ್ಕಿ  ಹೊಡೆದ  ಪರೀಣಾಮ  ಪಿರ್ಯಾದಿದಾರರು  ಮೋಟಾರು  ಸೈಕಲ್  ಸಮೇತ  ರಸ್ತೆಗೆ  ಬಿದ್ದ  ಪರಿಣಾಮ  ಬಲಕೈಯ   ಮೋಳೆ  ಮುರಿತ  ಉಂಟಾಗಿ  ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ದಾಖಲಾಗಿ  ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

 • ಶಂಕರನಾರಾಯಣ: ದಿನಾಂಕ 23/09/2021  ರಂದು  ಬೆಳಿಗ್ಗೆ  10:00 ಗಂಟೆಯಿಂದ 18:00 ಗಂಟೆಯ ಮಧ್ಯದ  ಅವಧಿಯಲ್ಲಿ ಪಿರ್ಯಾದಿದಾರರಾದ ಅಶೋಕ  ಸಿ. (36), ತಂದೆ:ಸದಾಶಿವ  ಕುಲಾಲ್ , ವಾಸ: ಚೋರಾಡಿ  ಹಾಡಿಮನೆ ಆವರ್ಸೆ ಗ್ರಾಮ  ಬ್ರಹ್ಮಾವರ ತಾಲೂಕು ಇವರ ಚಿಕ್ಕಪ್ಪ  ನಾರಾಯಣ  ಕುಲಾಲ್  (66) ಇವರು  ಕಾಯಿಲೆಯಿಂದ  ಮನನೊಂದು ಕುಂದಾಪುರ  ತಾಲೂಕಿನ   ಶಂಕರನಾರಾಯಣ  ಗ್ರಾಮದ ಹಾಲಾಡಿ  ಸೇತುವೆಯ  ಬಳಿ   ವರಾಹಿ  ನದಿಗೆ   ಹಾರಿ  ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 35/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 24-09-2021 10:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080